ಬಿಎಸ್ಪಿಯ ಉತ್ತರಾಧಿಕಾರಿ ಸ್ಥಾನದಿಂದ ಕೆಳಗಿಳಿದ ಬಳಿಕ ಆಕಾಶ್ ಆನಂದ್ ಮೊದಲ ಪ್ರತಿಕ್ರಿಯೆ ಏನು?
ಬಿಎಸ್ಪಿಯ ಉತ್ತರಾಧಿಕಾರಿ ಹುದ್ದೆಯಿಂದ ಕೆಳಗಿಳಿದ ಬಳಿಕ ಮಾಯಾವತಿ ಸೋದರಳಿಯ ಆಕಾಶ್ ಆನಂದ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬಹುಜನ ಸಮಾಜವಾದಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ಉತ್ತರಾಧಿಕಾರಿ ಹುದ್ದೆಯಿಂದ ಕೆಳಗಿಳಿದ ಬಳಿಕ ಮಾಯಾವತಿ(Mayawati) ಸೋದರಳಿಯ ಆಕಾಶ್ ಆನಂದ್(Akash Anand) ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ಕೊನೆಯ ಉಸಿರು ಇರುವವರೆಗೂ ಭೀಮ್ ಮಿಷನ್ ಮತ್ತು ಅವರ ಸಮಾಜಕ್ಕಾಗಿ ಹೋರಾಟ ಮಾಡುತ್ತೇನೆ ಎಂದು ಹೇಳಿದರು. ಬಿಎಸ್ಪಿ ನಾಯಕಿ ಮತ್ತು ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರ ನಿರ್ಧಾರದ ನಂತರ ಆಕಾಶ್ ಆನಂದ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಮಾಯಾವತಿ, ನೀವು ಇಡೀ ಬಹುಜನ ಸಮುದಾಯಕ್ಕೆ ಮಾದರಿಯಾಗಿದ್ದೀರಿ, ಕೋಟಿಗಟ್ಟಲೆ ದೇಶವಾಸಿಗಳು ನಿಮ್ಮನ್ನು ಆರಾಧಿಸುತ್ತಾರೆ. ನಿಮ್ಮ ಹೋರಾಟಗಳಿಂದಾಗಿಯೇ ಇಂದು ನಮ್ಮ ಸಮಾಜಕ್ಕೆ ಇಷ್ಟೊಂದು ರಾಜಕೀಯ ಶಕ್ತಿ ಸಿಕ್ಕಿದ್ದು ಬಹುಜನ ಸಮಾಜ ಗೌರವದಿಂದ ಬದುಕಲು ಕಲಿತುಕೊಂಡಿದೆ ಎಂದು ಬರೆದಿದ್ದಾರೆ. ಭೀಮ್ ಮಿಷನ್ ಮತ್ತು ನನ್ನ ಸಮಾಜಕ್ಕಾಗಿ ನಾನು ನನ್ನ ಕೊನೆಯ ಉಸಿರು ಇರುವವರೆಗೂ ಹೋರಾಡುತ್ತೇನೆ ಎಂದರು.
ಮತ್ತಷ್ಟು ಓದಿ: ಬಿಎಸ್ಪಿ ಉತ್ತರಾಧಿಕಾರಿ ಸ್ಥಾನದಿಂದ ಸೋದರಳಿಯ ಆಕಾಶ್ ಆನಂದ್ರನ್ನು ಕೆಳಗಿಳಿಸಿದ ಮಾಯಾವತಿ
ಸೀತಾಪುರದಲ್ಲಿ ಉದ್ರೇಕಕಾರಿ ಭಾಷಣ ಮಾಡಿದ್ದ ಹಿನ್ನೆಲೆಯಲ್ಲಿ ಮಾಯಾವತಿ ಆಕಾಶ್ ಆನಂದ್ ವಿರುದ್ಧ ಈ ರೀತಿಯ ಕ್ರಮ ಕೈಗೊಂಡಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಲಕ್ನೋದಲ್ಲಿ ನಡೆದ ಪದಾಧಿಕಾರಿಗಳ ಸಮ್ಮೇಳನದಲ್ಲಿ ಮಾಯಾವತಿ ಅವರು ಆಕಾಶ್ ಆನಂದ್ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದ್ದರು.
ಔಪಚಾರಿಕ ಘೋಷಣೆಯನ್ನು ನಾಲ್ಕು ತಿಂಗಳ ಹಿಂದೆ ಮಾಡಲಾಗಿದ್ದರೂ, ಆಕಾಶ್ ಸುಮಾರು ಏಳು ವರ್ಷಗಳಿಂದ ಅತ್ತೆಯ ಮಾರ್ಗದರ್ಶನದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಶಿಷ್ಯವೃತ್ತಿ ಹೊಂದಿದ್ದರು ಎಂದು ವರದಿ ಸೇರಿಸಲಾಗಿದೆ.
ಬಿಎಸ್‌ಪಿ ನಾಯಕಿ ಮಾಯಾವತಿ ಅವರ ಕಿರಿಯ ಸಹೋದರ ಆನಂದ್ ಕುಮಾರ್ ಅವರ ಪುತ್ರ ಆಕಾಶ್ ಆನಂದ್ ಲಂಡನ್‌ನ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.
ಹಲವಾರು ವರ್ಷಗಳಿಂದ ಪಕ್ಷದ ವ್ಯವಹಾರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ, ಯುವಕರೊಂದಿಗೆ ಸಂಪರ್ಕ ಸಾಧಿಸುವ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ