Viral News: ಮಂಟಪದಲ್ಲೇ ಮದುಮಗನ ಬಂಧನ; ವರನ ತಮ್ಮನನ್ನು ವರಿಸಿದ ವಧು!

ವರನನ್ನು ಸ್ಥಳೀಯ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯಿಂದಾಗಿ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಆಗ ಆ ವಧುವಿನ ಮುಂದಿನ ಭವಿಷ್ಯ ಹಾಳಾಗಬಾರದು ಎಂದು ಆ ವರನ ತಮ್ಮ ಮುಂದೆ ಬಂದು, ತಾನೇ ಮದುವೆಯಾಗಲು ಸಿದ್ಧ ಎಂದಿದ್ದಾನೆ.

Viral News: ಮಂಟಪದಲ್ಲೇ ಮದುಮಗನ ಬಂಧನ; ವರನ ತಮ್ಮನನ್ನು ವರಿಸಿದ ವಧು!
ಮದುವೆImage Credit source: iStock
Follow us
ಸುಷ್ಮಾ ಚಕ್ರೆ
|

Updated on: Sep 15, 2023 | 5:59 PM

ಅಲಿಗಢ: ಮದುವೆ ಮಂಟಪದಲ್ಲಿ ಇನ್ನೇನು ಮದುವೆಗೆ ಮುಹೂರ್ತ ಸಮೀಪಿಸುತ್ತಿರುವಾಗಲೇ ಸಿನಿಮೀಯ ರೀತಿಯಲ್ಲಿ ಅಲ್ಲಿಗೆ ಬಂದ ಪೊಲೀಸರು ಕಳ್ಳತನದ ಆರೋಪದಲ್ಲಿ ವರನನ್ನು ಬಂಧಿಸಿದ್ದಾರೆ. ಇದರಿಂದ ಎರಡೂ ಕುಟುಂಬಸ್ಥರು ಆಘಾತಗೊಂಡಿದ್ದಾರೆ. ಆದರೆ, ಕೊನೆಗೆ ಇದಕ್ಕೆ ಪರಿಹಾರ ಕಂಡುಕೊಂಡ ಕುಟುಂಬಸ್ಥರು ಆ ವರನ ತಮ್ಮನ ಜೊತೆಯಲ್ಲಿ ಅದೇ ಮಂಟಪದಲ್ಲಿ ವಧುವಿಗೆ ಮದುವೆ ಮಾಡಿಸಿದ್ದಾರೆ.

ಈ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿರುವ ಅಲಿಗಢದ ಒಂದು ಸಣ್ಣ ಪಟ್ಟಣದಲ್ಲಿ ನಡೆದಿದೆ. ಸಂತೋಷ ಮತ್ತು ಸಂಭ್ರಮದಿಂದ ತುಂಬಿರಬೇಕಿದ್ದ ಮದುವೆ ಮಂಟಪದಲ್ಲಿ ಆಶ್ಚರ್ಯ, ಗಾಬರಿ ತುಂಬಿತ್ತು. ವಿವಾಹ ಸಮಾರಂಭವು ಭರದಿಂದ ಸಾಗುತ್ತಿರುವಾಗ ಕಳ್ಳತನವೊಂದಕ್ಕೆ ಸಂಬಂಧಿಸಿದಂತೆ ವರನನ್ನು ಪೊಲೀಸರು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಮುತ್ತು ಕೊಡಲು ಬಂದ ಯುವಕನ ತುಟಿ ಕಚ್ಚಿದ ನಾಗರಹಾವು!

ವರನನ್ನು ಸ್ಥಳೀಯ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯಿಂದಾಗಿ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಆಗ ಆ ವಧುವಿನ ಮುಂದಿನ ಭವಿಷ್ಯ ಹಾಳಾಗಬಾರದು ಎಂದು ಆ ವರನ ತಮ್ಮ ಮುಂದೆ ಬಂದು, ತಾನೇ ಮದುವೆಯಾಗಲು ಸಿದ್ಧ ಎಂದಿದ್ದಾನೆ. ಆಗ ಹಿರಿಯರು ಈ ಮದುವೆಗೆ ಒಪ್ಪಿ, ಅದೇ ಮುಹೂರ್ತದಲ್ಲಿ ಮದುವೆ ಮಾಡಿಸಿದ್ದಾರೆ.

ಮದುವೆಯಾಗಬೇಕಿದ್ದ ವರ ಅಂಗಡಿಯೊಂದರಲ್ಲಿ ಮದ್ಯದ ಬಾಟಲಿಗಳು ಹಾಗೂ ಮೊಬೈಲ್​ಗಳನ್ನು ಕದ್ದ ಆರೋಪದಲ್ಲಿ ಸಿಕ್ಕಿಹಾಕಿಕೊಂಡಿದ್ದ. ಪೊಲೀಸರ ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ