ಶಿವ ಸೇನೆಯ ಠಾಕ್ರೆ ಬಣಕ್ಕೆ ಆಘಾತ: ಸಂಜಯ್ ರಾವತ್ ಆಪ್ತ ಶಿಂದೆ ಬಣಕ್ಕೆ ಸೇರ್ಪಡೆ

ಶಿವಸೇನೆಯ ಠಾಕ್ರೆ ಬಣಕ್ಕೆ ಆಘಾತ ಎದುರಾಗಿದೆ, ಸಂಜಯ್ ರಾವತ್ ಆಪ್ತ ಭಾವು ಚೌಧರಿ ಶಿಂದೆ ಬಣಕ್ಕೆ ಸೇರ್ಪಡೆಯಾಗಲಿದ್ದಾರೆ.

ಶಿವ ಸೇನೆಯ ಠಾಕ್ರೆ ಬಣಕ್ಕೆ ಆಘಾತ: ಸಂಜಯ್ ರಾವತ್ ಆಪ್ತ ಶಿಂದೆ ಬಣಕ್ಕೆ ಸೇರ್ಪಡೆ
Uddhav Thackeray
Follow us
TV9 Web
| Updated By: ನಯನಾ ರಾಜೀವ್

Updated on: Dec 22, 2022 | 9:59 AM

ಶಿವಸೇನೆಯ ಠಾಕ್ರೆ ಬಣಕ್ಕೆ ಆಘಾತ ಎದುರಾಗಿದೆ, ಸಂಜಯ್ ರಾವತ್ (Sanjay Raut) ಆಪ್ತ ಭಾವು ಚೌಧರಿ ಶಿಂದೆ ಬಣಕ್ಕೆ ಸೇರ್ಪಡೆಯಾಗಲಿದ್ದಾರೆ. ಇದು ಏಕನಾಥ್ ಶಿಂದೆ ಬಣಕ್ಕೆ ದೊಡ್ಡ ಹೊಡೆತ ಎಂದೇ ಹೇಳಬಹುದು, ಇಂದು ನಾಗ್ಪುರದಲ್ಲಿ ಚೌಧರಿ ಶಿಂದೆ ಬಣ ಸೇರಲಿದ್ದಾರೆ. ಭಾವು ಚೌಧರಿಯವರನ್ನು ಸಂಜಯ್ ರಾವತ್ ಅವರ ನೆರಳು ಎಂದೇ ಕರೆಯಲಾಗುತ್ತಿತ್ತು, ಭಾವು ಅವರು ನಾಸಿಕ್​ನ ಉಸ್ತುವಾರಿ ವಹಿಸಿದ್ದರು. ಸಂಜಯ್ ರಾವತ್ ಅವರು ಜೈಲಿಗೆ ಹೋಗಿ ಬಂದಾಗಲೂ ಭಾವು ಜತೆಲಿದ್ದರು. ಆದರೆ ಇಂದು ಅವರು ಶಿಂದೆ ಬಣಕ್ಕೆ ಸೇರಿಕೊಳ್ಳಲಿದ್ದಾರೆ.

ಚೌಧರಿಯವರು ಶಿಂದೆ ಬಣಕ್ಕೆ ಸೇರಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾದ ಬಳಿಕ, ಅವರನ್ನು ಶಿವಸೇನೆಯಂದ ಉಚ್ಛಾಟಿಸಲಾಗಿದೆ ಎಂದು ಸಂಜಯ್ ರಾವತ್ ತಿಳಿಸಿದ್ದಾರೆ. ಶಿವಸೇನೆಯ ನಾಸಿಕ್ ಜಿಲ್ಲಾ ಸಂಪರ್ಕ ಮುಖ್ಯಸ್ಥ ಹುದ್ದೆಯಿಂದ ಅವರನ್ನು ವಜಾಗೊಳಿಸಲಾಗುತ್ತಿದೆ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಆದೇಶದ ಮೇರೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಥಾಣೆಯಲ್ಲಿ ಶಿಂಧೆ ಬಣ ಸೇರಿದ 66 ಮಾಜಿ ಕೌನ್ಸಿಲರ್​​ಗಳು; ಠಾಕ್ರೆ ಬಣದಲ್ಲಿ ಉಳಿದಿರುವುದು ಒಬ್ಬರೇ

ಇದಕ್ಕೂ ಮೊದಲು, ಡಿಸೆಂಬರ್ 15-16 ರಂದು ನಾಸಿಕ್‌ನಲ್ಲಿಯೇ, ಉದ್ಧವ್ ಠಾಕ್ರೆ ಬಣದ 11 ಮಾಜಿ ಕೌನ್ಸಿಲರ್‌ಗಳು ಏಕನಾಥ್ ಶಿಂಧೆ ಬಣವನ್ನು ಸೇರಿದ್ದರು. ಉದ್ಧವ್ ಬಣದಿಂದ ಅಜಯ್ ಬೋರಾಸ್ತೆ, ಸೂರ್ಯಕಾಂತ್ ಲವಟೆ, ಸುವರ್ಣ ಮಾತಾಳೆ, ಆರ್ ಡಿ ಧೋಂಗ್ಡೆ, ಜ್ಯೋತಿ ಖೋಲೆ, ಸುದಮ್ ಡೆಮ್ಸೆ, ಜಯಶ್ರೀ ಖರ್ಜುಲ್, ಪ್ರತಾಪ್ ಮೆಹ್ರೋಲಿಯಾ, ಚಂದ್ರಕಾಂತ್ ಖಾಡೆ, ಪೂನಂ ಮೋಗ್ರೆ ಮತ್ತು ರಾಜು ಲವಟೆ ಶಿಂಧೆ ಬಣ ಸೇರಿದರು. ಇವರೊಂದಿಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್‌ಎಸ್) ಸಚಿನ್ ಭೋಸಲೆ ಕೂಡ ಶಿಂಧೆ ಬಣ ಸೇರಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ