ಇಂದಿರಾಗಾಂಧಿ ಸ್ವರ್ಗದಿಂದ ಇಳಿದು ಬಂದರೂ 370ನೇ ವಿಧಿ ಮರುಸ್ಥಾಪಿಸಲು ಸಾಧ್ಯವಿಲ್ಲ; ಅಮಿತ್ ಶಾ

ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರುಸ್ಥಾಪಿಸಲು ಕರೆ ನೀಡುವ ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಸರ್ಕಾರದ ನಿರ್ಣಯಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅದು ಎಂದಿಗೂ ಸಾಧ್ಯವಿಲ್ಲ ಎಂದು ದೃಢವಾಗಿ ಪ್ರತಿಪಾದಿಸಿದ್ದಾರೆ.

ಇಂದಿರಾಗಾಂಧಿ ಸ್ವರ್ಗದಿಂದ ಇಳಿದು ಬಂದರೂ 370ನೇ ವಿಧಿ ಮರುಸ್ಥಾಪಿಸಲು ಸಾಧ್ಯವಿಲ್ಲ; ಅಮಿತ್ ಶಾ
ಅಮಿತ್ ಶಾ
Follow us
ಸುಷ್ಮಾ ಚಕ್ರೆ
|

Updated on: Nov 13, 2024 | 8:31 PM

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಸರ್ಕಾರವು ಈ ಹಿಂದೆ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದಕ್ಕೆ ಖಂಡನೆ ವ್ಯಕ್ತಪಡಿಸಿದೆ. 370ನೇ ವಿಧಿಯನ್ನು ಮರುಸ್ಥಾಪಿಸಲು ವಿಧಾನಸಭೆಯಲ್ಲಿ ನಿರ್ಣಯವನ್ನು ಮಂಡಿಸಿದ ಕೆಲವೇ ದಿನಗಳ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಇಂದಿರಾ ಗಾಂಧಿಯೇ ಸ್ವರ್ಗದಿಂದ ಕೆಳಗಿಳಿದು ಬಂದರೂ ಈ 370ನೇ ವಿಧಿಯನ್ನು ಯಾವುದೇ ಕಾರಣಕ್ಕೂ ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ, “ಇಂದಿರಾ ಗಾಂಧಿ ಸ್ವರ್ಗದಿಂದ ಹಿಂತಿರುಗಿದರೂ, 370ನೇ ವಿಧಿಯನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ” ಎಂದು ಹೇಳಿದರು.

ಶ್ರೀನಗರದ ಲಾಲ್ ಚೌಕ್‌ಗೆ ಭೇಟಿ ನೀಡಿದಾಗ ನನಗೆ ಭಯವಾಯಿತು ಎಂಬ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸುಶೀಲ್‌ಕುಮಾರ್ ಶಿಂಧೆ ಅವರ ಟೀಕೆಗೆ ಪ್ರತಿಕ್ರಿಯಿಸಿದ ಅಮಿತ್ ಶಾ, “ಶಿಂಧೆಯವರೇ, ನಿಮ್ಮ ಮೊಮ್ಮಕ್ಕಳೊಂದಿಗೆ ಈಗ ಕಾಶ್ಮೀರಕ್ಕೆ ಹೋಗಿ, ನಿಮಗೆ ಯಾವುದೇ ತೊಂದರೆಯಾಗುವುದಿಲ್ಲ” ಎಂದು ಹೇಳಿದರು.

ಇದನ್ನೂ ಓದಿ: ಸಿಐಎಸ್​ಎಫ್​ನ ಮೊದಲ ಸಂಪೂರ್ಣ ಮಹಿಳಾ ಬೆಟಾಲಿಯನ್ ರಚನೆಗೆ ಸರ್ಕಾರ ಅನುಮೋದನೆ; ಅಮಿತ್ ಶಾ ಘೋಷಣೆ

“ಸೋನಿಯಾ ಗಾಂಧಿ -ಮನಮೋಹನ್ ಸಿಂಗ್ ಆಡಳಿತದ 10 ವರ್ಷಗಳ ಅವಧಿಯಲ್ಲಿ ಭಯೋತ್ಪಾದಕರು ಪಾಕಿಸ್ತಾನದಿಂದ ಮುಕ್ತವಾಗಿ ಬಂದು ಇಲ್ಲಿ ಬಾಂಬ್ ಸ್ಫೋಟಗಳನ್ನು ಪ್ರಚೋದಿಸುತ್ತಿದ್ದರು” ಎಂದು ಅಮಿತ್ ಶಾ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಮತ್ತೊಂದು ರ್ಯಾಲಿಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದರು. ಅಲ್ಲಿ ಅವರು “ರಾಹುಲ್ ಗಾಂಧಿಯವರ ನಾಲ್ಕನೇ ತಲೆಮಾರಿನವರು ಸಹ ಕಾಶ್ಮೀರದಲ್ಲಿ 370ನೇ ವಿಧಿಯನ್ನು ಪುನಃಸ್ಥಾಪಿಸಲು ಸಾಧ್ಯವಾಗುವುದಿಲ್ಲ” ಎಂದು ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚನ್ನಪಟ್ಟಣದಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆದಿದೆ: ಚಲುವರಾಯಸ್ವಾಮಿ
ಚನ್ನಪಟ್ಟಣದಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆದಿದೆ: ಚಲುವರಾಯಸ್ವಾಮಿ
ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಅಂತ ನೆಹರೂ ಅರಿತಿದ್ದರು: ಡಿಕೆಶಿ
ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಅಂತ ನೆಹರೂ ಅರಿತಿದ್ದರು: ಡಿಕೆಶಿ
ಬಿಬಿಎಂಪಿ ಶಾಲಾಮಕ್ಕಳೊಂದಿಗೆ ಮಕ್ಕಳ ದಿನಾಚರಣೆ ಆಚರಿಸಿದ ಡಿಕೆ ಶಿವಕುಮಾರ್
ಬಿಬಿಎಂಪಿ ಶಾಲಾಮಕ್ಕಳೊಂದಿಗೆ ಮಕ್ಕಳ ದಿನಾಚರಣೆ ಆಚರಿಸಿದ ಡಿಕೆ ಶಿವಕುಮಾರ್
ಜನರ ಭಾವನೆಗಳಿಗೆ ವಿರುದ್ಧವಾಗಿ ಸಿದ್ದರಾಮಯ್ಯ ಮಾತಾಡುತ್ತಾರೆ: ಸೋಮಣ್ಣ
ಜನರ ಭಾವನೆಗಳಿಗೆ ವಿರುದ್ಧವಾಗಿ ಸಿದ್ದರಾಮಯ್ಯ ಮಾತಾಡುತ್ತಾರೆ: ಸೋಮಣ್ಣ
"ನಾನಾಗಿದ್ದರೆ ಸಿದ್ದರಾಮಯ್ಯ ಕಪಾಳಕ್ಕೆ ಹೊಡೆಯುತ್ತಿದ್ದೆ": ಸ್ವಾಮೀಜಿ
ರೈತರಿಗೆ ನೀಡಿದ ನೋಟೀಸ್ ವಾಪಸ್ಸು ಪಡೆಯುವುದರಿಂದ ಏನೂ ಅಗಲ್ಲ: ಯತ್ನಾಳ್
ರೈತರಿಗೆ ನೀಡಿದ ನೋಟೀಸ್ ವಾಪಸ್ಸು ಪಡೆಯುವುದರಿಂದ ಏನೂ ಅಗಲ್ಲ: ಯತ್ನಾಳ್
ಸಚಿವರ ಆಪ್ತ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಪುನೀತ್ ಪೊಲೀಸ್ ವಶಕ್ಕೆ
ಸಚಿವರ ಆಪ್ತ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಪುನೀತ್ ಪೊಲೀಸ್ ವಶಕ್ಕೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ