AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯಾವಂತ ಅಭ್ಯರ್ಥಿಗೆ ಮತ ಹಾಕಿ ಎಂದಿದ್ದಕ್ಕೆ ಅನ್​ಅಕಾಡೆಮಿಯ ಶಿಕ್ಷಕ ಅಮಾನತು, ಕೇಜ್ರಿವಾಲ್ ಹೇಳಿದ್ದೇನು?

ವಿದ್ಯಾವಂತ ಅಭ್ಯರ್ಥಿಗೆ ಮತ ಹಾಕಿ ಎಂದು ಹೇಳಿದ್ದ ಅನ್​ಅಕಾಡಮಿಯ ಶಿಕ್ಷಕರೊಬ್ಬರನ್ನು ಅಮಾನತುಗೊಳಿಸಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದು, ಈ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿದ್ದಾರೆ. ಶಿಕ್ಷಕ ಕರಣ್ ಸಾಂಗ್ವಾನ್ ವಿದ್ಯಾವಂತ ಅಭ್ಯರ್ಥಿಗಳಿಗೆ ಮತ ನೀಡುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದರು.

ವಿದ್ಯಾವಂತ ಅಭ್ಯರ್ಥಿಗೆ ಮತ ಹಾಕಿ ಎಂದಿದ್ದಕ್ಕೆ ಅನ್​ಅಕಾಡೆಮಿಯ ಶಿಕ್ಷಕ ಅಮಾನತು, ಕೇಜ್ರಿವಾಲ್ ಹೇಳಿದ್ದೇನು?
ಅರವಿಂದ್ ಕೇಜ್ರಿವಾಲ್Image Credit source: India Today
ನಯನಾ ರಾಜೀವ್
|

Updated on:Aug 18, 2023 | 11:19 AM

Share

ವಿದ್ಯಾವಂತ ಅಭ್ಯರ್ಥಿಗೆ ಮತ ಹಾಕಿ ಎಂದು ಹೇಳಿದ್ದ ಅನ್​ಅಕಾಡಮಿಯ ಶಿಕ್ಷಕರೊಬ್ಬರನ್ನು ಅಮಾನತುಗೊಳಿಸಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದು, ಈ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal) ಪ್ರತಿಕ್ರಿಯೆ ನೀಡಿದ್ದಾರೆ. ಶಿಕ್ಷಕ ಕರಣ್ ಸಾಂಗ್ವಾನ್ ವಿದ್ಯಾವಂತ ಅಭ್ಯರ್ಥಿಗಳಿಗೆ ಮತ ನೀಡುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದರು. ನಂತರ ಅಕಾಡೆಮಿ ಅವರನ್ನು ವಜಾಗೊಳಿಸಿತು. ತರಗತಿಯು ವೈಯಕ್ತಿಕ ಅಭಿಪ್ರಾಯಗಳು ಮತ್ತು ದೃಷ್ಟಿಕೋನಗಳನ್ನು ಹಂಚಿಕೊಳ್ಳುವ ಸ್ಥಳವಲ್ಲ ಎನ್ನುವ ಕಾರಣವನ್ನು ಕೊಟ್ಟಿತ್ತು.

ಅನ್​ಅಕಾಡೆಮಿಯು ಶಿಕ್ಷಣ ಮತ್ತು ಕಲಿಕೆಯ ಕ್ಷೇತ್ರದಲ್ಲಿ ಕೆಲಸ ಮಾಡುವ ಆನ್‌ಲೈನ್ ವೇದಿಕೆಯಾಗಿದೆ. ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ವಿದ್ಯಾವಂತರಿಗೆ ಮತ ನೀಡುವಂತೆ ಮನವಿ ಮಾಡುವುದು ಅಪರಾಧವೇ? ಯಾರಾದರೂ ಅನಕ್ಷರಸ್ಥರಾಗಿದ್ದರೆ, ನಾನು ಅವರನ್ನು ವೈಯಕ್ತಿಕವಾಗಿ ಗೌರವಿಸುತ್ತೇನೆ, ಆದರೆ ಜನಪ್ರತಿನಿಧಿಗಳು ಅನಕ್ಷರಸ್ಥರಾಗಿರಲು ಸಾಧ್ಯವಿಲ್ಲ. ಇದು ವಿಜ್ಞಾನ ಮತ್ತು ತಂತ್ರಜ್ಞಾನದ ಯುಗ. ಅನಕ್ಷರಸ್ಥ ಸಾರ್ವಜನಿಕ ಪ್ರತಿನಿಧಿಗಳು 21 ನೇ ಶತಮಾನದ ಆಧುನಿಕ ಭಾರತವನ್ನು ಎಂದಿಗೂ ನಿರ್ಮಿಸಲು ಸಾಧ್ಯವಿಲ್ಲ.

ಅರವಿಂದ್ ಕೇಜ್ರಿವಾಲ್ ಟ್ವೀಟ್​

ಅನ್​ಅಕಾಡೆಮಿಯ ಸಹ-ಸಂಸ್ಥಾಪಕರು ಏನು ಹೇಳಿದರು?

ಕರಣ್ ಸಾಂಗ್ವಾನ್ ಅವರು ಒಪ್ಪಂದವನ್ನು ಉಲ್ಲಂಘಿಸಿದ್ದಾರೆ ಹಾಗಾಗಿ ಅವರನ್ನು ವಜಾಗೊಳಿಸಲಾಗಿದೆ ಎಂದು ಅನಾಕಾಡೆಮಿಯ ಸಹ-ಸಂಸ್ಥಾಪಕ ರೋಮನ್ ಸೈನಿ ಹೇಳಿದ್ದಾರೆ. ನಮ್ಮದು ಗುಣಮಟ್ಟದ ಶಿಕ್ಷಣವನ್ನು ನೀಡಲು ಬದ್ಧವಾಗಿರುವ ಶಿಕ್ಷಣ ವೇದಿಕೆಯಾಗಿದೆ. ನಾವು ನಮ್ಮೆಲ್ಲಾ ಶಿಕ್ಷಕರಿಗೆ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದೇವೆ. ತರಗತಿಯು ವೈಯಕ್ತಿಕ ಅಭಿಪ್ರಾಯಗಳು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸ್ಥಳವಲ್ಲ ಏಕೆಂದರೆ ಅವುಗಳು ತಪ್ಪು ರೀತಿಯಲ್ಲಿ ಪ್ರಭಾವ ಬೀರಬಹುದು. ಪ್ರಸ್ತುತ ಪರಿಸ್ಥಿತಿಯಲ್ಲಿ, ಕರಣ್ ಸಾಂಗ್ವಾನ್ ಅವರು ನಮ್ಮ ಅಕಾಡೆಮಿಯ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಈ ಕ್ರಮ ಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಮತ್ತಷ್ಟು ಓದಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ಶುರು; ಡಿಕೆ ಶಿವಕುಮಾರ್ ಪಟ್ಟಿಯಲ್ಲಿ ಯಾರಿಗೆಲ್ಲ ಸ್ಥಾನ? ಇಲ್ಲಿದೆ ವಿವರ

ಕರಣ್ ಸಾಂಗ್ವಾನ್ ಪ್ರತಿಕ್ರಿಯೆ

ಕರಣ್ ಸಾಂಗ್ವಾನ್ ಅವರು ಆಗಸ್ಟ್ 19 ರಂದು ಈ ವಿವಾದದ ಬಗ್ಗೆ ಮಾಹಿತಿಯನ್ನು ಪೋಸ್ಟ್ ಮಾಡುವುದಾಗಿ ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ನಾನು ವಿವಾದದಲ್ಲಿ ಸಿಲುಕಿರುವ ವಿಡಿಯೋ ವೈರಲ್ ಆಗುತ್ತಿದೆ ಮತ್ತು ಆ ವಿವಾದದಿಂದ ನನ್ನ ಅನೇಕ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಜೊತೆಗೆ ನಾನೂ ಕೂಡ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:17 am, Fri, 18 August 23

ಬಿಹಾರ್​ನಲ್ಲಿ ಸೋಲು ಖಚಿತ ಅನ್ನೋದು ರಾಹುಲ್​ಗೆ ಮನವರಿಕೆಯಾಗಿದೆ: ಮೋಹನ್
ಬಿಹಾರ್​ನಲ್ಲಿ ಸೋಲು ಖಚಿತ ಅನ್ನೋದು ರಾಹುಲ್​ಗೆ ಮನವರಿಕೆಯಾಗಿದೆ: ಮೋಹನ್
ರಜತ್​ಗೆ ಮಹಿಳೆಯಿಂದ ಕೊಲೆ ಬೆದರಿಕೆ: ಪಾಠ ಕಲಿಸಲು ಕಾನೂನಿನ ಕ್ರಮ
ರಜತ್​ಗೆ ಮಹಿಳೆಯಿಂದ ಕೊಲೆ ಬೆದರಿಕೆ: ಪಾಠ ಕಲಿಸಲು ಕಾನೂನಿನ ಕ್ರಮ
ಆಗಸ್ಟ್ 15ರಂದು ಕೃಷ್ಣ ಭೈರೇಗೌಡ ಹಾಸನದಲ್ಲಿ ಧ್ವಜಾರೋಹಣ ಮಾಡಲಿದ್ದಾರೆ
ಆಗಸ್ಟ್ 15ರಂದು ಕೃಷ್ಣ ಭೈರೇಗೌಡ ಹಾಸನದಲ್ಲಿ ಧ್ವಜಾರೋಹಣ ಮಾಡಲಿದ್ದಾರೆ
ದರ್ಶನ್ ಫ್ಯಾನ್ಸ್ ಅಶ್ಲೀಲ ಸಂದೇಶ ಹಾಕುವಂಥವರಲ್ಲ: ರಜತ್
ದರ್ಶನ್ ಫ್ಯಾನ್ಸ್ ಅಶ್ಲೀಲ ಸಂದೇಶ ಹಾಕುವಂಥವರಲ್ಲ: ರಜತ್
ಕಾಂಗ್ರೆಸ್ ಪಕ್ಷಕ್ಕೆ ಬೂತ್ ಲೆವೆಲ್ ಆಫೀಸರ್​ಗಳು ಸಿಗಲೇ ಇಲ್ಲವೇ? ಶಾಸಕ
ಕಾಂಗ್ರೆಸ್ ಪಕ್ಷಕ್ಕೆ ಬೂತ್ ಲೆವೆಲ್ ಆಫೀಸರ್​ಗಳು ಸಿಗಲೇ ಇಲ್ಲವೇ? ಶಾಸಕ
ಧರ್ಮಸ್ಥಳದಲ್ಲಿ ಗಲಾಟೆ, ಬಿಗ್​ಬಾಸ್ ರಜತ್ ವಿವರಿಸಿದ್ದು ಹೀಗೆ
ಧರ್ಮಸ್ಥಳದಲ್ಲಿ ಗಲಾಟೆ, ಬಿಗ್​ಬಾಸ್ ರಜತ್ ವಿವರಿಸಿದ್ದು ಹೀಗೆ
ಚುನಾವಣಾ ಅಕ್ರಮ ನಾಳೆ ರಾಹುಲ್ ಗಾಂಧಿ ಬಿಚ್ಚಿಡಲಿದ್ದಾರೆ: ರಾಮಲಿಂಗಾರೆಡ್ಡಿ
ಚುನಾವಣಾ ಅಕ್ರಮ ನಾಳೆ ರಾಹುಲ್ ಗಾಂಧಿ ಬಿಚ್ಚಿಡಲಿದ್ದಾರೆ: ರಾಮಲಿಂಗಾರೆಡ್ಡಿ
ಮನೆಯಲ್ಲಿಯೇ ನೈಸರ್ಗಿಕವಾಗಿ ಎದೆ ಹಾಲು ಹೆಚ್ಚಿಸಲು ಏನು ಮಾಡಬೇಕು?
ಮನೆಯಲ್ಲಿಯೇ ನೈಸರ್ಗಿಕವಾಗಿ ಎದೆ ಹಾಲು ಹೆಚ್ಚಿಸಲು ಏನು ಮಾಡಬೇಕು?
ಮಡೆನೂರು ಮನು ಜೊತೆ ರಾಜಿ ಮಾಡಿಕೊಂಡ ಸಂತ್ರಸ್ತೆ; ಅತ್ಯಾಚಾರ ಕೇಸ್ ಅಂತ್ಯ
ಮಡೆನೂರು ಮನು ಜೊತೆ ರಾಜಿ ಮಾಡಿಕೊಂಡ ಸಂತ್ರಸ್ತೆ; ಅತ್ಯಾಚಾರ ಕೇಸ್ ಅಂತ್ಯ
ರಾಷ್ಟ್ರೀಯ ಅಧ್ಯಕ್ಷರ ನಂತರ ಬಿಜೆಪಿ ರಾಜ್ಯಾಧ್ಯಕ್ಷರ ಘೋಷಣೆಯಾಗಬಹುದು: ಅಶೋಕ
ರಾಷ್ಟ್ರೀಯ ಅಧ್ಯಕ್ಷರ ನಂತರ ಬಿಜೆಪಿ ರಾಜ್ಯಾಧ್ಯಕ್ಷರ ಘೋಷಣೆಯಾಗಬಹುದು: ಅಶೋಕ