AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬದರಿನಾಥದ ಬಳಿ ಹಿಮಪಾತ; ಯಾವುದೇ ಪ್ರಾಣಹಾನಿಯಿಲ್ಲ

ಬದರಿನಾಥಕ್ಕೆ ಹಿಮಪಾತ ಅಪ್ಪಳಿಸಿದೆ. ಸ್ಥಳೀಯರು ಹೇಳುವ ಪ್ರಕಾರ ಕುಬೇರ್ ಭಂಡಾರ್ ಹಿಮನದಿಯ ಒಂದು ಭಾಗವು ದೊಡ್ಡ ಶಬ್ದದೊಂದಿಗೆ ಕುಸಿದಿದೆ. ಇದು ಈ ಪ್ರದೇಶದಲ್ಲಿ ಬಹಳ ಸಾಮಾನ್ಯ ನೈಸರ್ಗಿಕ ವಿದ್ಯಮಾನವಾಗಿದೆ. ಹಿಮನದಿ ಹರಿಯುವ ಶಬ್ದ ಮತ್ತು ದೃಶ್ಯವು ಅಲ್ಲಿದ್ದ ಭಕ್ತರನ್ನು ರೋಮಾಂಚನಗೊಳಿಸಿದೆ. ಇದು ಆತಂಕವನ್ನೂ ಸೃಷ್ಟಿಸಿದೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬದರಿನಾಥದ ಬಳಿ ಹಿಮಪಾತ; ಯಾವುದೇ ಪ್ರಾಣಹಾನಿಯಿಲ್ಲ
Avalanche
ಸುಷ್ಮಾ ಚಕ್ರೆ
|

Updated on:Oct 17, 2025 | 8:03 PM

Share

ಡೆಹ್ರಾಡೂನ್, ಅಕ್ಟೋಬರ್ 17: ಉತ್ತರಾಖಂಡದ ಚಮೋಲಿ ಜಿಲ್ಲೆಯ ಬದರಿನಾಥ ಬಳಿಯ ಕುಬೇರ್ ಭಂಡಾರ್ ಹಿಮನದಿಯಲ್ಲಿ ಭಾರಿ ಹಿಮಪಾತ (Avalanche) ಸಂಭವಿಸಿದೆ. ಇದು ಕಾಂಚನಜುಂಗಾ ನದಿಯ ಮೇಲ್ಭಾಗವನ್ನು ತಲುಪಿದೆ. ಆದರೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಈ ಬಗ್ಗೆ ವಿವರಗಳನ್ನು ನೀಡಿರುವ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದ ಕಿಶೋರ್ ಜೋಶಿ, ಬದರಿನಾಥ ರಾಷ್ಟ್ರೀಯ ಹೆದ್ದಾರಿಯಿಂದ ನೂರಾರು ಮೀಟರ್ ಎತ್ತರದಲ್ಲಿ ಹಿಮಪಾತ ಸಂಭವಿಸಿದೆ ಎಂದು ವರದಿಯಾಗಿದೆ. ಇದು ಈ ಪ್ರದೇಶದಲ್ಲಿ ಬಹಳ ಸಾಮಾನ್ಯ ನೈಸರ್ಗಿಕ ವಿದ್ಯಮಾನವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಉತ್ತರಾಖಂಡದ ಹಿಮಪಾತ; ಕೊನೆಯ ಶವ ಪತ್ತೆಯಾಗುವ ಮೂಲಕ ಸಾವಿನ ಸಂಖ್ಯೆ 8ಕ್ಕೆ ಏರಿಕೆ

ಕುಬೇರ್ ಭಂಡಾರ್ ಹಿಮನದಿಯ ಒಂದು ಭಾಗವು ದೊಡ್ಡ ಶಬ್ದದೊಂದಿಗೆ ಕುಸಿದಿದೆ ಎಂದು ಸ್ಥಳೀಯರು ತಿಳಸಿದ್ದಾರೆ. ಕಾಂಚನಜುಂಗಾದ ಬಲ ಮತ್ತು ಎಡ ಬದಿಗಳಲ್ಲಿ ಹಿಮನದಿ ಕರಗುವಿಕೆಯ ಘಟನೆಗಳು ಆಗಾಗ ಸಂಭವಿಸುತ್ತವೆ. ಪ್ರವಾಸಿಗರು ಸಹ ಅವುಗಳನ್ನು ವೀಕ್ಷಿಸುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:02 pm, Fri, 17 October 25

ದೇವಾಲಯಗಳ ಮೇಲೆ ನಿಧಿಗಳ್ಳರ ಕಣ್ಣು
ದೇವಾಲಯಗಳ ಮೇಲೆ ನಿಧಿಗಳ್ಳರ ಕಣ್ಣು
ಡಿಕೆಶಿ ಬಳಿ ದೆಹಲಿಗೆ ಬನ್ನಿ ಎಂದಿದ್ದರೂ ರಾಹುಲ್ ಗಾಂಧಿ ಸಿಗೋದು ಅನುಮಾನ!
ಡಿಕೆಶಿ ಬಳಿ ದೆಹಲಿಗೆ ಬನ್ನಿ ಎಂದಿದ್ದರೂ ರಾಹುಲ್ ಗಾಂಧಿ ಸಿಗೋದು ಅನುಮಾನ!
ಗವಿ ಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಸ್ಪರ್ಶ: ಇದರ ವಿಶೇಷ ಏನು ಗೊತ್ತೇ?
ಗವಿ ಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಸ್ಪರ್ಶ: ಇದರ ವಿಶೇಷ ಏನು ಗೊತ್ತೇ?
ಎಂಟ್ರಿ ಕೊಟ್ಟಿದ್ದು ವಧು, ಆದ್ರೆ ಎಲ್ಲರೂ ನೋಡಿದ್ದು ಫೋಟೊಗ್ರಾಫರ್​ನ
ಎಂಟ್ರಿ ಕೊಟ್ಟಿದ್ದು ವಧು, ಆದ್ರೆ ಎಲ್ಲರೂ ನೋಡಿದ್ದು ಫೋಟೊಗ್ರಾಫರ್​ನ
ಬಿಗ್​​ಬಾಸ್ ಮನೆಗೆ ಸಂಕ್ರಾಂತಿ ಅತಿಥಿಗಳು: ಪುಟ್ಟಿ ಹಾಡಿಗೆ ಅಶ್ವಿನಿ ಫಿದಾ
ಬಿಗ್​​ಬಾಸ್ ಮನೆಗೆ ಸಂಕ್ರಾಂತಿ ಅತಿಥಿಗಳು: ಪುಟ್ಟಿ ಹಾಡಿಗೆ ಅಶ್ವಿನಿ ಫಿದಾ
ಏನೂ ಮಾಡ್ಬೇಡಿ... ವಿರಾಟ್ ಕೊಹ್ಲಿಯ ಕಾಳಜಿ ವಿಡಿಯೋ ವೈರಲ್
ಏನೂ ಮಾಡ್ಬೇಡಿ... ವಿರಾಟ್ ಕೊಹ್ಲಿಯ ಕಾಳಜಿ ವಿಡಿಯೋ ವೈರಲ್
ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ನೃತ್ಯ
ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ನೃತ್ಯ
ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ
ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ
ನಾನಾ... ಹೌದು ನೀನೇ... ಅರ್ಧಶತಕ ಪೂರೈಸಲು ಬಿಡದ ಅಭಿಷೇಕ್ ನಾಯರ್!
ನಾನಾ... ಹೌದು ನೀನೇ... ಅರ್ಧಶತಕ ಪೂರೈಸಲು ಬಿಡದ ಅಭಿಷೇಕ್ ನಾಯರ್!
ಮುಚ್ಚಿದ್ದ ತರಕಾರಿ ಗಾಡಿಯಿಂದ ಒಂದು ಈರುಳ್ಳಿ ತೆಗೆದುಕೊಂಡು ಹಣವಿಟ್ಟ ಯುವಕರು
ಮುಚ್ಚಿದ್ದ ತರಕಾರಿ ಗಾಡಿಯಿಂದ ಒಂದು ಈರುಳ್ಳಿ ತೆಗೆದುಕೊಂಡು ಹಣವಿಟ್ಟ ಯುವಕರು