AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

30 ಲಕ್ಷಕ್ಕೂ ಹೆಚ್ಚು ದೀಪಗಳಿಂದ ಕಂಗೊಳಿಸಿದ ಅಯೋಧ್ಯೆ; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ

30 ಲಕ್ಷಕ್ಕೂ ಹೆಚ್ಚು ದೀಪಗಳಿಂದ ಕಂಗೊಳಿಸಿದ ಅಯೋಧ್ಯೆ; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ

ಸುಷ್ಮಾ ಚಕ್ರೆ
|

Updated on: Nov 07, 2026 | 8:01 PM

Share

ಸರಯೂ ನದಿಯ 56 ಪ್ರಮುಖ ಘಾಟ್‌ಗಳ ಉದ್ದಕ್ಕೂ 30 ಲಕ್ಷಕ್ಕೂ ಹೆಚ್ಚು ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ಸಂಪೂರ್ಣ ನಗರಿಯೇ ಜಗಮಗಿಸಿದೆ.  ಈ ಮೂಲಕ ವಿಶ್ವದಾಖಲೆ ನಿರ್ಮಿಸಲಾಗಿದೆ. ದೀಪಾವಳಿ ಹಬ್ಬದ ಮುನ್ನಾದಿನ ನಡೆದ ಈ ಬೃಹತ್ ಆಚರಣೆಯು ಆಧ್ಯಾತ್ಮಿಕ ಭವ್ಯತೆ ಮತ್ತು ಧಾರ್ಮಿಕ ಉತ್ಸಾಹದ ಮಹಾಸಂಗಮವಾಗಿ ಮೂಡಿಬಂದಿದೆ. ಡಾ. ರಾಮ್ ಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಎನ್‌ಸಿಸಿ ಹಾಗೂ ವಿವಿಧ ಎನ್‌ಜಿಒಗಳ ಸುಮಾರು 35,000ಕ್ಕೂ ಹೆಚ್ಚು ಸ್ವಯಂಸೇವಕರು ದೀಪಗಳನ್ನು ಸಾಲಾಗಿ ಜೋಡಿಸಿ, ಎಣ್ಣೆ ಹೊಯ್ದು ಏಕಕಾಲದಲ್ಲಿ ಬೆಳಗಿಸುವ ಬೃಹತ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

ಅಯೋಧ್ಯೆ, ನವೆಂಬರ್ 7: ಶ್ರೀರಾಮನ ನಗರಿ ಅಯೋಧ್ಯೆಯಲ್ಲಿ 10ನೇ ಆವೃತ್ತಿಯ ಭವ್ಯ ದೀಪೋತ್ಸವ ಸಂಭ್ರಮವು ಅತ್ಯಂತ ಅದ್ದೂರಿಯಾಗಿ ನಡೆದಿದ್ದು, ಸರಯೂ ನದಿಯ 56 ಪ್ರಮುಖ ಘಾಟ್‌ಗಳ ಉದ್ದಕ್ಕೂ 30 ಲಕ್ಷಕ್ಕೂ ಹೆಚ್ಚು ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ಸಂಪೂರ್ಣ ನಗರಿಯೇ ಜಗಮಗಿಸಿದೆ.  ಈ ಮೂಲಕ ವಿಶ್ವದಾಖಲೆ ನಿರ್ಮಿಸಲಾಗಿದೆ. ದೀಪಾವಳಿ ಹಬ್ಬದ ಮುನ್ನಾದಿನ ನಡೆದ ಈ ಬೃಹತ್ ಆಚರಣೆಯು ಆಧ್ಯಾತ್ಮಿಕ ಭವ್ಯತೆ ಮತ್ತು ಧಾರ್ಮಿಕ ಉತ್ಸಾಹದ ಮಹಾಸಂಗಮವಾಗಿ ಮೂಡಿಬಂದಿದೆ.

ಡಾ. ರಾಮ್ ಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಎನ್‌ಸಿಸಿ ಹಾಗೂ ವಿವಿಧ ಎನ್‌ಜಿಒಗಳ ಸುಮಾರು 35,000ಕ್ಕೂ ಹೆಚ್ಚು ಸ್ವಯಂಸೇವಕರು ದೀಪಗಳನ್ನು ಸಾಲಾಗಿ ಜೋಡಿಸಿ, ಎಣ್ಣೆ ಹೊಯ್ದು ಏಕಕಾಲದಲ್ಲಿ ಬೆಳಗಿಸುವ ಬೃಹತ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಸರಯೂ ನದಿಯ ತೀರದಲ್ಲಿ 2,151 ವೇದಾಚಾರ್ಯರು ಮತ್ತು ಪೂಜಾರಿಗಳು ಏಕಕಾಲದಲ್ಲಿ ಧಾರ್ಮಿಕ ಶ್ಲೋಕಗಳ ಉಚ್ಚಾರಣೆಯೊಂದಿಗೆ ಭವ್ಯ ‘ಸರಯೂ ಮಹಾ ಆರತಿ’ ನೆರವೇರಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More