Sign In

By signing in or creating an account, you agree with Associated Broadcasting Company's Terms & Conditions and Privacy Policy.

Bell’s Palsy: ಮಾತೇ ಬರುತ್ತಿಲ್ಲ, ಮಹಾರಾಷ್ಟ್ರ ಸಚಿವ ಧನಂಜಯ್​ಗೆ ಬೆಲ್ ಪಾಲ್ಸಿ ಕಾಯಿಲೆ, ಇದೆಷ್ಟು ಅಪಾಯಕಾರಿ?

ಮಹಾರಾಷ್ಟ್ರ ಸಚಿವ ಧನಂಜಯ್ ಮುಂಡೆ ಅವರು ಬೆಲ್ ಪಾಲ್ಸಿ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಕಾಯಿಲೆಯಿಂದಾಗಿ ಅವರು ಮಾತನಾಡಲು ಕಷ್ಟ ಪಡುತ್ತಿದ್ದಾರೆ. ಇದು ನರಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದ್ದು, ಮುಖದ ಮೇಲೆ ಪಾರ್ಶ್ವವಾಯು ಉಂಟಾಗುತ್ತದೆ. ಈ ಕಾಯಿಲೆ ಬಂದವರ ಮುಖದ ಸ್ನಾಯುಗಳು ದುರ್ಬಲವಾಗುತ್ತದೆ. ಇದು ಇದ್ದಕ್ಕಿದ್ದಂತೆ ಸಂಭವಿಸುತ್ತದೆ. ಸಾಮಾನ್ಯವಾಗಿ ದೇಹದ ಒಂದು ಭಾಗದಲ್ಲಿ ಕಂಡುಬರುತ್ತದೆ.

Bell’s Palsy: ಮಾತೇ ಬರುತ್ತಿಲ್ಲ, ಮಹಾರಾಷ್ಟ್ರ ಸಚಿವ ಧನಂಜಯ್​ಗೆ ಬೆಲ್ ಪಾಲ್ಸಿ ಕಾಯಿಲೆ, ಇದೆಷ್ಟು ಅಪಾಯಕಾರಿ?
ಧನಂಜಯ್ ಮುಂಡೆ Image Credit source: Mathrubhumi English
Follow us
ನಯನಾ ರಾಜೀವ್
|

Updated on:Feb 21, 2025 | 11:36 AM

ಮಹಾರಾಷ್ಟ್ರ, ಫೆಬ್ರವರಿ 21:  ಮಹಾರಾಷ್ಟ್ರ ಸಚಿವ ಧನಂಜಯ್ ಮುಂಡೆ ಅವರು ಬೆಲ್ ಪಾಲ್ಸಿ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಕಾಯಿಲೆಯಿಂದಾಗಿ ಅವರು ಮಾತನಾಡಲು ಕಷ್ಟ ಪಡುತ್ತಿದ್ದಾರೆ. ಇದು ನರಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದ್ದು, ಮುಖದ ಮೇಲೆ ಪಾರ್ಶ್ವವಾಯು ಉಂಟಾಗುತ್ತದೆ. ಈ ಕಾಯಿಲೆ ಬಂದವರ ಮುಖದ ಸ್ನಾಯುಗಳು ದುರ್ಬಲವಾಗುತ್ತದೆ. ಇದು ಇದ್ದಕ್ಕಿದ್ದಂತೆ ಸಂಭವಿಸುತ್ತದೆ. ಸಾಮಾನ್ಯವಾಗಿ ದೇಹದ ಒಂದು ಭಾಗದಲ್ಲಿ ಕಂಡುಬರುತ್ತದೆ.

ಧನಂಜಯ್ ಮುಂಡೆ ಅವರು ಸಾಮಾಜಿಕ ಮಾಧ್ಯಮದ ಮೂಲಕ ಜನರಿಗೆ ಎರಡು ನಿಮಿಷಗಳಿಗಿಂತ ಹೆಚ್ಚು ಕಾಲ ಸರಿಯಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ, ಇದರಿಂದಾಗಿ ಅವರು ಸಂಪುಟ ಸಭೆಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅಡ್ಡಿಯಾಗುತ್ತದೆ ಎಂದು ಹೇಳಿದ್ದಾರೆ.

ಬೆಲ್ ಪಾಲ್ಸಿ ಒಂದು ತಾತ್ಕಾಲಿಕ ಆದರೆ ಅಪಾಯಕಾರಿ ಸ್ಥಿತಿಯಾಗಿದ್ದು, ಇದು ಮುಖ ಜೋಲು ಬೀಳುವಂತೆ ಮಾಡುತ್ತದೆ ಮತ್ತು ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಕಷ್ಟವಾಗುತ್ತದೆ.

ಬೆಲ್ ಪಾಲ್ಸಿ ಎಂದರೇನು? ಬೆಲ್ ಪಾಲ್ಸಿ ಎಂದರೆ ಮುಖದ ಸ್ನಾಯುಗಳಲ್ಲಿ ಹಠಾತ್ ದೌರ್ಬಲ್ಯ, ಇದು ಹೆಚ್ಚಾಗಿ ಮುಖದ ಒಂದು ಬದಿಗೆ ಪರಿಣಾಮ ಬೀರುತ್ತದೆ. ಇದು ಸ್ನಾಯು ಚಲನೆಯನ್ನು ನಿಯಂತ್ರಿಸುವ ಮುಖದ ನರಗಳ ಉರಿಯೂತದಿಂದ ಉಂಟಾಗುತ್ತದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂರೋಲಾಜಿಕಲ್ ಡಿಸಾರ್ಡರ್ಸ್ ಆ್ಯಂಡ್ ಸ್ಟ್ರೋಕ್ (NINDS) ಪ್ರಕಾರ, ಬೆಲ್‌ ಪಾಲ್ಸಿ ಅಮೆರಿಕದಲ್ಲಿ ಪ್ರತಿ ವರ್ಷ ಸುಮಾರು 40,000 ಜನರ ಮೇಲೆ ಪರಿಣಾಮ ಬೀರುತ್ತದೆ. ಬೆಲ್ ಪಾಲ್ಸಿಗೆ ನಿಖರವಾದ ಕಾರಣ ಇನ್ನೂ ತಿಳಿದಿಲ್ಲ, ಆದರೆ ಇದು ವೈರಲ್ ಸೋಂಕುಗಳು, ದುರ್ಬಲ ರೋಗನಿರೋಧಕ ಶಕ್ತಿ, ನರಮಂಡಲದ ಸಮಸ್ಯೆಗಳಿಂದ ಹಿಡಿದು ಯಾವುದಾದರೂ ಕಾರಣದಿಂದ ಉಂಟಾಗಬಹುದು. ಮಧುಮೇಹ ರೋಗಿಗಳು ಮತ್ತು ಆಸ್ತಮಾ ರೋಗಿಗಳು ಸಹ ಬೆಲ್ ಪಾಲ್ಸಿಯಿಂದ ಬಳಲಬಹುದು.

ಹದಿನೈದು ದಿನಗಳ ಹಿಂದೆ ತಮ್ಮ ಎರಡೂ ಕಣ್ಣುಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಗಿ ಹೇಳಿದ್ದಾರೆ, ಡಾ. ಟಿ.ಪಿ. ಲಹಾನೆ ಅವರ ಮಾರ್ಗದರ್ಶನದಲ್ಲಿ ಶಸ್ತ್ರಚಿಕಿತ್ಸೆ ಪಡೆದೆ, ಸುಮಾರು ಹತ್ತು ದಿನಗಳ ಕಾಲ, ಅವರು ನನ್ನ ಕಣ್ಣುಗಳನ್ನು, ವಿಶೇಷವಾಗಿ ಬಲವಾದ ಬೆಳಕು, ಧೂಳು ಮತ್ತು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಸಲಹೆ ನೀಡಿದರು ಇದರ ನಡುವೆ ಬೆಲ್ ಪಾಲ್ಸಿ ಕಾಯಿಲೆ ಇರುವುದು ತಿಳಿದುಬಂದಿದೆ ಎಂದು ಧನಂಜಯ್ ಹೇಳಿದ್ದಾರೆ.

ಮತ್ತಷ್ಟು ಓದಿ: ವಿಚ್ಛೇದಿತ ಪೋಷಕರ ಮಕ್ಕಳಿಗೆ ಪಾರ್ಶ್ವವಾಯು ಅಪಾಯ ಹೆಚ್ಚು

ಸಾಮಾನ್ಯ ಲಕ್ಷಣಗಳು 1.ಮುಖ ಜೋತು ಬೀಳುವುದು– ಇದು ಸಾಮಾನ್ಯವಾಗಿ ಮುಖದ ಒಂದು ಬದಿಯಲ್ಲಿರುವ ಸ್ನಾಯುಗಳಲ್ಲಿನ ದೌರ್ಬಲ್ಯವನ್ನು ಸೂಚಿಸುತ್ತದ. ಉದಾಹರಣೆಗೆ ಕಣ್ಣು ಮುಚ್ಚುವಲ್ಲಿ ತೊಂದರೆ ಮತ್ತು ಒಂದು ಬದಿಯಲ್ಲಿ ಬಾಯಿ ಜೋತು ಬೀಳುವುದು.

2. ಬಾಯಿಯಲ್ಲಿ ಊತ – ನೀವು ನಗುವಾಗ ಅಥವಾ ಮಾತನಾಡುವಾಗ, ಮುಖದ ಒಂದು ಬದಿ ಊದಿಕೊಳ್ಳುವುದರಿಂದ ಅದು ಬೃಹದಾಕಾರವಾಗಿ ಕಾಣುತ್ತದೆ.

3. ಒಂದು ಕಣ್ಣು ತೆರೆಯುವಲ್ಲಿ ತೊಂದರೆ– ಇದರಲ್ಲಿ ರೋಗಿಯ ಕಣ್ಣು ಸಂಪೂರ್ಣವಾಗಿ ಮುಚ್ಚಲು ಸಾಧ್ಯವಾಗುವುದಿಲ್ಲ, ವಿಶೇಷವಾಗಿ ಒಂದು ಕಣ್ಣನ್ನು ತೆರೆಯುವಾಗ ಅಥವಾ ಮುಚ್ಚುವಾಗ ತೊಂದರೆ ಅನುಭವಿಸುತ್ತಾರೆ.

4. ಮಾತನಾಡುವಲ್ಲಿ ಸಮಸ್ಯೆ– ಇದು ಮುಖದ ಸ್ನಾಯುಗಳನ್ನು ಸರಿಯಾಗಿ ಚಲಿಸಲು ಅಸಮರ್ಥತೆಯನ್ನು ಒಳಗೊಂಡಿರುತ್ತದೆ, ಇದು ಭಾಷೆಯ ಸ್ಪಷ್ಟತೆಯ ಮೇಲೆ ಪರಿಣಾಮ ಬೀರುತ್ತದೆ.

5. ರುಚಿಯಲ್ಲಿ ಬದಲಾವಣೆ– ಕೆಲವೊಮ್ಮೆ ರುಚಿಯಲ್ಲಿ ಬದಲಾವಣೆಯೂ ಕಂಡುಬರಬಹುದು, ವಿಶೇಷವಾಗಿ ಈ ಕಾಯಿಲೆಯಿಂದ ಪ್ರಭಾವಿತವಾಗಿರುವ ಭಾಗದಲ್ಲಿ.

6. ಕಣ್ಣೀರು ಅಥವಾ ಒಣಗಿದ ಕಣ್ಣುಗಳು– ರೋಗಿಯ ಕಣ್ಣುಗಳಲ್ಲಿ ನೀರು ಉತ್ಪತ್ತಿಯಾಗದೆ ಇರುವುದರಿಂದ ಕಣ್ಣು ತೇವವಾಗದೆ ಕಣ್ಣು ಮುಚ್ಚಲು, ತೆರೆಯಲು ಕಷ್ಟವಾಗುತ್ತದೆ.

7. ಶ್ರವಣ ಸಮಸ್ಯೆ – ಕೆಲವು ರೋಗಿಗಳು ಹೈಪರಾಕ್ಯುಸಿಸ್ ಎಂಬ ಸ್ಥಿತಿಯನ್ನು ಸಹ ಅಭಿವೃದ್ಧಿಪಡಿಸುತ್ತಾರೆ, ಇದರಲ್ಲಿ ಒಂದು ಕಿವಿ ಕೇಳಿಸುವುದಿಲ್ಲ.

ಸೂಚನೆ-ಇದು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಇಂಥಾ ಯಾವುದೇ ಲಕ್ಷಣಗಳು ಕಂಡುಬಂದರೆ ವೈದ್ಯರ ಬಳಿ ಹೋಗಿ ಸೂಕ್ತ ಚಿಕಿತ್ಸೆ ಪಡೆಯಿರಿ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:30 am, Fri, 21 February 25