Bhagat Singh Birth Anniversary: ಸ್ವಾತಂತ್ರ್ಯ ಕಾಲದಲ್ಲಿ ಭಗತ್ ಸಿಂಗ್ ತ್ಯಾಗ, ಅಚಲವಾದ ಸಮರ್ಪಣೆ ತಲೆಮಾರುಗಳಿಗೆ ಸ್ಫೂರ್ತಿ : ಪ್ರಧಾನಿ ಮೋದಿ
ಇಂದು (ಸೆ.28) ಭಾರತದ ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನ. ಈ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಗತ್ ಸಿಂಗ್ ಜನ್ಮದಿನವನ್ನು ಸ್ಮರಿಸಿದರು. ಮೋದಿ ಅವರು X ( ಹಿಂದಿನ ಟ್ವಿಟರ್)ನಲ್ಲಿ ಭಗತ್ ಸಿಂಗ್ ಅವರ ಜನ್ಮದಿನ ಸವಿಸ್ಮರಣೆಯ ಶುಭಾಶಯಗಳನ್ನು ತಿಳಿಸಿದ್ದರು. ಈ ಬಗ್ಗೆ ಒಂದು ವಿಡಿಯೋವನ್ನು ಕೂಡ ಪಧಾನಿ ಮೋದಿ ಹಂಚಿಕೊಂಡಿದ್ದಾರೆ.
ದೆಹಲಿ, ಸೆ.28: ಇಂದು (ಸೆ.28) ಭಾರತದ ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್ (Bhagat Singh) ಅವರ ಜನ್ಮದಿನ. ಈ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಭಗತ್ ಸಿಂಗ್ ಜನ್ಮದಿನವನ್ನು ಸ್ಮರಿಸಿದರು. ಮೋದಿ ಅವರು X ( ಹಿಂದಿನ ಟ್ವಿಟರ್)ನಲ್ಲಿ ಭಗತ್ ಸಿಂಗ್ ಅವರ ಜನ್ಮದಿನ ಸವಿಸ್ಮರಣೆಯ ಶುಭಾಶಯಗಳನ್ನು ತಿಳಿಸಿದ್ದರು. ಈ ಬಗ್ಗೆ ಒಂದು ವಿಡಿಯೋವನ್ನು ಕೂಡ ಪಧಾನಿ ಮೋದಿ ಹಂಚಿಕೊಂಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರು ಧೈರ್ಯದ ದಾರಿದೀಪ. ಶಹೀದ್ ಭಗತ್ ಸಿಂಗ್ ಅವರ ಜನ್ಮದ ದಿನವನ್ನು ನೆನಪಿಸಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಸ್ವಾತಂತ್ರ್ಯ ಕಾಲದಲ್ಲಿ ಅವರ ತ್ಯಾಗ ಮತ್ತು ಅಚಲವಾದ ಸಮರ್ಪಣೆ ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತದೆ. ಧೈರ್ಯದ ದಾರಿದೀಪ, ಅವರು ನ್ಯಾಯ ಮತ್ತು ಸ್ವಾತಂತ್ರ್ಯಕ್ಕಾಗಿ ಭಾರತದಲ್ಲಿ ಬ್ರಿಟಷರ ವಿರುದ್ಧ ನಿರಂತರ ಹೋರಾಟದ ಮಾಡಿರುವುದು ಶಾಶ್ವತವಾಗಿ ಇರುತ್ತಾರೆ ಎಂದರು.
ಇನ್ನು ಭಗತ್ ಸಿಂಗ್ ಅವರ ಜನ್ಮದಿನವನ್ನು ದೆಹಲಿಯ ಸಿಎಂ ಅರವಿಂದ್ ಕ್ರೇಜಿವಾಲ್ ಕೂಡ ಸ್ಮರಿಸಿದರು. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಶಹೀದ್-ಎ-ಆಜಮ್ ಸರ್ದಾರ್ ಭಗತ್ ಸಿಂಗ್ ಅವರ ಜನ್ಮದಿನದ ನಮನಗಳು. ನಾವೆಲ್ಲರೂ ಒಟ್ಟಾಗಿ ಭಗತ್ ಸಿಂಗ್ ಅವರ ಕನಸಿನ ಭಾರತವನ್ನು ನಿರ್ಮಿಸೋಣ, ಭಾರತವನ್ನು ವಿಶ್ವದ ನಂಬರ್ 1 ದೇಶವನ್ನಾಗಿ ಮಾಡೋಣ ಎಂದು Xನಲ್ಲಿ ತಿಳಿಸಿದ್ದಾರೆ.
ಭಗತ್ ಸಿಂಗ್ ಅವರ ಜನ್ಮದಿನವನ್ನು ಸ್ಮರಿಸಿಕೊಂಡ ಪಂಜಾಬ್ ಸಿಎಂ ಭಗವಂತ್ ಮಾನ್, ನಾನು ಭಾವನೆಗಳ ಪುಸ್ತಕ..ನನ್ನ ಮಾತುಗಳು ಉಕ್ಕಿನಿಂದ ಮಾಡಲ್ಪಟ್ಟಿದೆ, ದೇಶಭಕ್ತಿ ನನ್ನ ದೇಹ ಮತ್ತು ಉದ್ದೇಶ ಕ್ರಾಂತಿಕಾರಿ ಎಂಬ ಭಗತ್ ಸಿಂಗ್ ಅವರ ಸಂದೇಶವನ್ನು ಸ್ಮರಿಸಿಕೊಂಡರು.
ಇನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಈ ಸಂದರ್ಭದಲ್ಲಿ ಭಗತ್ ಸಿಂಗ್ ಅವರನ್ನು ನೆನೆಪಿಸಿಕೊಂಡು Xನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ಭಾರತ ಮಾತೆಯ ನಿಜವಾದ ಪುತ್ರ ಮತ್ತು ಅಮರ ಕ್ರಾಂತಿಕಾರಿ ಸರ್ದಾರ್ ಭಗತ್ ಸಿಂಗ್ ಅವರ ಜನ್ಮದಿನದಂದು ನಾನು ಅವರನ್ನು ಸ್ಮರಿಸುತ್ತೇನೆ ಮತ್ತು ನಮಸ್ಕರಿಸುತ್ತೇನೆ. ತನ್ನ ಪ್ರಾಣವನ್ನು ಲೆಕ್ಕಿಸದೆ, ಭಾರತವನ್ನು ಸ್ವತಂತ್ರಗೊಳಿಸಲು ತನ್ನ ಜೀವನದುದ್ದಕ್ಕೂ ಹೋರಾಡಿದನು. ದೇಶಕ್ಕಾಗಿ ಅವರ ಸಮರ್ಪಣೆ, ತ್ಯಾಗ ಭಾರತದ ಪ್ರತಿ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ.
ಇದನ್ನೂ ಓದಿ:ಕ್ರಾಂತಿಕಾರಿ ಭಗತ್ ಸಿಂಗ್ರ ವಿಚಾರ, ಆದರ್ಶ, ಸಿದ್ದಾಂತ ಇಂದಿಗೂ ಜೀವಂತ
ಭಗತ್ ಸಿಂಗ್ ಅವರು 28 ಸೆಪ್ಟೆಂಬರ್ 1907 ರಂದು ಭಾರತದ ಪಂಜಾಬ್‌ನ ಬಂಗಾದಲ್ಲಿ ಸಿಖ್ ಕುಟುಂಬದಲ್ಲಿ ಜನಿಸಿದರು. 23ನೇ ವಯಸ್ಸಿನಲ್ಲಿ, ಅವರು 23 ಮಾರ್ಚ್ 1931 ರಂದು ಲಾಹೋರ್ ಪಿತೂರಿ ಪ್ರಕರಣದಲ್ಲಿ ಬ್ರಿಟಿಷ್ ಸರ್ಕಾರದಿಂದ ಮರಣದಂಡನೆಗೆ ಗುರಿಯಾದರು. 12ನೇ ವಯಸ್ಸಿನಲ್ಲಿ, ಅವರು ಜಲಿಯನ್ವಾಲಾಬಾಗ್ ಹತ್ಯಾಕಾಂಡವನ್ನು ನೋಡಿದ ಕ್ರಾಂತಿಕಾರಿ. ಅಲ್ಲಿಂದ ಅವರು ಭಾರತವನ್ನು ಬ್ರಿಟಿಷರಿಂದ ಮುಕ್ತಗೊಳಿಸುವ ಪ್ರತಿಜ್ಞೆ ಮಾಡಿದರು. ಇದರ ಜತೆಗೆ ಭಗತ್ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್‌ನ ಸದಸ್ಯರಾಗಿದ್ದರು.
ಲಾಲಾ ಲಜಪತ್ ರಾಯ್ ಅವರನ್ನು ಕ್ರೂರವಾಗಿ ಹತ್ಯೆ ಮಾಡಿದ ನಂತರ ಭಗತ್ ಸಿಂಗ್ ಅವರು ಕೂಡ ಲಾಲಾ ಲಜಪತ್ ರಾಯ್ ಅವರು ಕ್ರಾಂತಿಕಾರಿ ಹಾದಿಯಲ್ಲೇ ಸಾಗಿದರು. ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರು ಜಾನ್ ಪಿ. ಸೌಂಡರ್ಸ್ (ಜೇಮ್ಸ್ ಎ. ಸ್ಕಾಟ್ ಎಂದು ತಪ್ಪಾಗಿ ಭಾವಿಸಲಾಗಿದೆ) ಲಾಲಾ ಅವರ ಸಾವಿಗೆ ಕಾರಣವಾದ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡುತ್ತಾರೆ.
ಬ್ರಿಟಿಷ್ ಅಧಿಕಾರಿಯ ಸಾವಿಗೆ ಈ ಮೂರು ಕಾರಣ ಎಂದು ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರನ್ನು ಮಾರ್ಚ್ 23, 1931 ರಂದು ರಹಸ್ಯವಾಗಿ ಗಲ್ಲಿಗೇರಿಸಲಾಯಿತು. ಇನ್ನು ವಿಚಾರಣೆಗೂ ಮುನ್ನವೇ ಅವರನ್ನು ಗಲ್ಲಿಗೇರಿಸಲಾಗಿದೆ. ಇದರಿಂದ ಇಡೀ ದೇಶವೇ ಈ ಘಟನೆಯಿಂದ ಬೆಚ್ಚಿಬೀಳಿಸಿತು. ಇದರಿಂದ ಭಾರತದಲ್ಲಿ ಮತ್ತಷ್ಟು ಸ್ವಾತಂತ್ರ್ಯ ಕಿಚ್ಚು ಹೆಚ್ಚಾಗಿತ್ತು. ಇವರ ಸಾವಿಗೆ ಅನೇಕರ ಹೃದಯ ಮಿಡಿಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ