Bharat Bandh: ಭಾರತ್ ಬಂದ್: ಪಾಟ್ನಾದಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್

ಮುಜಾಫರ್‌ಪುರದಲ್ಲಿ, ಪ್ರತಿಭಟನಾಕಾರರು ಭಾರತ್ ಬಂದ್‌ಗೆ ಬೆಂಬಲವಾಗಿ ಮುತ್ತಿಗೆ ಹಾಕಿದ್ದಾರೆ. ಜೆಹಾನಾಬಾದ್‌ನಲ್ಲಿ, ರಾಷ್ಟ್ರೀಯ ಹೆದ್ದಾರಿ-83 ನಲ್ಲಿ ಸಂಚಾರವನ್ನು ತಡೆಯಲು ಪ್ರಯತ್ನಿಸಿದಾಗ ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದರು .ಮಾಧೇಪುರ ಮತ್ತು ಮುಜಾಫರ್‌ಪುರದಲ್ಲಿಯೂ ಪ್ರತಿಭಟನಾಕಾರರು ಹಲವಾರು ಸ್ಥಳಗಳಲ್ಲಿ ಸಂಚಾರವನ್ನು ತಡೆಯಲು ಪ್ರಯತ್ನಿಸಿದರು ಆದರೆ ಭದ್ರತಾ ಪಡೆಗಳು ತಕ್ಷಣವೇ ಅವರನ್ನು ಚದುರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

Bharat Bandh: ಭಾರತ್ ಬಂದ್: ಪಾಟ್ನಾದಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್
ಪಾಟ್ನಾದಲ್ಲಿ ಪೊಲೀಸ್ ಲಾಠಿ ಪ್ರಹಾರ
Follow us
|

Updated on:Aug 21, 2024 | 1:28 PM

ಪಾಟ್ನಾ ಆಗಸ್ಟ್ 21: ಬಿಹಾರದ (Bihar) ರಾಜಧಾನಿ ಪಾಟ್ನಾದಲ್ಲಿ (Patna) ಬುಧವಾರ ಸಮುದಾಯ ಆಧಾರಿತ ಮೀಸಲಾತಿಗಾಗಿ ಕೆಲವು ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‌ಗೆ (Bharat Bandh) ಬೆಂಬಲವಾಗಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಂತೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಎಸ್‌ಸಿ-ಎಸ್‌ಟಿ ಮೀಸಲಾತಿ ವಿಚಾರದಲ್ಲಿ ಸುಪ್ರೀಂಕೋರ್ಟ್‌ನ ತೀರ್ಪಿನ ವಿರುದ್ಧ ದೇಶಾದ್ಯಂತ 21 ಸಂಘಟನೆಗಳು ಇಂದು(ಬುಧವಾರ) ಭಾರತ್ ಬಂದ್‌ಗೆ ಕರೆ ನೀಡಿವೆ. ಮುಜಾಫರ್‌ಪುರ, ಜೆಹಾನಾಬಾದ್ ಮತ್ತು ಮಾಧೇಪುರ ಸೇರಿದಂತೆ ರಾಜ್ಯದ ಇತರ ಭಾಗಗಳಲ್ಲಿಯೂ ಪ್ರತಿಭಟನಾಕಾರರು ಮತ್ತು ಪೊಲೀಸರೊಂದಿಗೆ ಸಂಘರ್ಷವೇರ್ಪಟ್ಟಿದೆ.

ಮುಜಾಫರ್‌ಪುರದಲ್ಲಿ, ಪ್ರತಿಭಟನಾಕಾರರು ಭಾರತ್ ಬಂದ್‌ಗೆ ಬೆಂಬಲವಾಗಿ ಮುತ್ತಿಗೆ ಹಾಕಿದ್ದಾರೆ. ಜೆಹಾನಾಬಾದ್‌ನಲ್ಲಿ, ರಾಷ್ಟ್ರೀಯ ಹೆದ್ದಾರಿ-83 ನಲ್ಲಿ ಸಂಚಾರವನ್ನು ತಡೆಯಲು ಪ್ರಯತ್ನಿಸಿದಾಗ ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಿಹಾರದಲ್ಲಿ ಪೊಲೀಸರ ಲಾಠಿ ಚಾರ್ಜ್

“ಉಂತಾ ಚೌಕ್ ಬಳಿ NH-83 ನಲ್ಲಿ ಸಂಚಾರಕ್ಕೆ ಅಡ್ಡಿಪಡಿಸಲು ಯತ್ನಿಸಿದ ಐದು ಪ್ರತಿಭಟನಾಕಾರರನ್ನು ಬಂಧಿಸಲಾಯಿತು. ಅವರನ್ನು ಸ್ಥಳದಿಂದ ತೆರವು ಮಾಡಲಾಗಿದ್ದು, ಸಂಚಾರ ಸಹಜ ಸ್ಥಿತಿಗೆ ಬಂದಿದೆ” ಎಂದು ಟೌನ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಹುಲಾಸ್ ಬೈತಾ ತಿಳಿಸಿದ್ದಾರೆ.

ಮಾಧೇಪುರ ಮತ್ತು ಮುಜಾಫರ್‌ಪುರದಲ್ಲಿಯೂ ಪ್ರತಿಭಟನಾಕಾರರು ಹಲವಾರು ಸ್ಥಳಗಳಲ್ಲಿ ಸಂಚಾರವನ್ನು ತಡೆಯಲು ಪ್ರಯತ್ನಿಸಿದರು ಆದರೆ ಭದ್ರತಾ ಪಡೆಗಳು ತಕ್ಷಣವೇ ಅವರನ್ನು ಚದುರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿಭಟನೆಗಳ ಮಧ್ಯೆ, ಬಿಹಾರ ಪೊಲೀಸ್, ಬಿಹಾರ ವಿಶೇಷ ಸಶಸ್ತ್ರ ಪೊಲೀಸ್ ಮತ್ತು ಇತರ ಘಟಕಗಳಲ್ಲಿ ಕಾನ್‌ಸ್ಟೆಬಲ್‌ಗಳ ಹುದ್ದೆಗೆ ರಾಜ್ಯವು ಹಲವಾರು ಜಿಲ್ಲೆಗಳಲ್ಲಿ ನೇಮಕಾತಿ ಪರೀಕ್ಷೆಗಳನ್ನು ನಡೆಸುತ್ತಿದೆ. ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷಾರ್ಥಿಗಳನ್ನು ಸುಗಮವಾಗಿ ಸಾಗಿಸುವಂತೆ ರಾಜ್ಯ ಸರ್ಕಾರ ಈ ಹಿಂದೆ ಪೊಲೀಸರಿಗೆ ಸೂಚನೆ ನೀಡಿತ್ತು.

ಇದನ್ನೂ ಓದಿ:Kolkata doctor rape-murder: ವೈದ್ಯೆಯ ಅತ್ಯಾಚಾರ ಪ್ರಕರಣ: ಆರ್‌ಜಿ ಕರ್ ಮಾಜಿ ಪ್ರಾಂಶುಪಾಲರ ಪಾಲಿಗ್ರಾಫ್ ಪರೀಕ್ಷೆ ನಡೆಸಲಿದೆಯೇ ಸಿಬಿಐ?

ರಾಷ್ಟ್ರೀಯ ಜನತಾ ದಳ ಮತ್ತು ಇಂಡಿಯಾ ಬ್ಲಾಕ್‌ನ ಇತರ ಮಿತ್ರಪಕ್ಷಗಳು ಬಂದ್‌ಗೆ ತಮ್ಮ ಬೆಂಬಲವನ್ನು ನೀಡಿವೆ.

ಬಂದ್ ಶಾಂತಿಯುತವಾಗಿ ನಡೆಸುವಂತೆ ರಾಜಸ್ಥಾನ ಸಚಿವ ಮನವಿ

ರಾಜಸ್ಥಾನದ ಕಾನೂನು ಸಚಿವ ಜೋಗರಾಮ್ ಪಟೇಲ್ ಅವರು ಶಾಂತಿಯುತ ರೀತಿಯಲ್ಲಿ ‘ಭಾರತ್ ಬಂದ್’ ನಡೆಸುವಂತೆ ಜನರಿಗೆ ಮನವಿ ಮಾಡಿದ್ದು ದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳನ್ನು ರಾಜಸ್ಥಾನ ಸರ್ಕಾರ ಅನುಸರಿಸುತ್ತದೆ ಎಂದು ಹೇಳಿದ್ದಾರೆ. ಬಂದ್‌ಗೆ ಬೆಂಬಲವಾಗಿ ಜೈಪುರದಲ್ಲಿ ಹೆಚ್ಚಿನ ಮಾರುಕಟ್ಟೆಗಳು ಮತ್ತು ವ್ಯಾಪಾರಗಳು ಮುಚ್ಚಲ್ಪಟ್ಟಿವೆ

ಫಿರೋಜಾಬಾದ್‌ನಲ್ಲಿ ಭಾರತ್ ಬಂದ್‌ನ ಬೆಂಬಲಿಗರು ಡಾ ಬಿಆರ್ ಅಂಬೇಡ್ಕರ್ ಪರವಾಗಿ “ಜೈ ಭೀಮ್ ಜೈ ಭೀಮ್” ಘೋಷಣೆ ಕೂಗಿದ್ದಾರೆ. ಸೂರ್ಯ ಮತ್ತು ಚಂದ್ರ ಇರುವವರೆಗೂ ಬಾಬಾ ನಿಮ್ಮ ಹೆಸರು ಉಳಿಯುತ್ತದೆ. ಬಾಬಾ ಸಾಹೇಬ್ ಅಮರ ಎಂದು ಪ್ರತಿಭಟನೆಕಾರರು ಘೋಷಣೆ ಕೂಗಿದ್ದಾರೆ.

ಬಹುಜನ ಸಮಾಜ ಪಕ್ಷದ ಪ್ರತಿಭಟನಾಕಾರರು ಆಗ್ರಾದ ಟೆಡಿ ಬಾಗಿಯಾ ಪ್ರದೇಶದಿಂದ ಅಲಿಗಢ ರಸ್ತೆಗೆ ಆಗ್ರಾ ನಗರದ ಕಡೆಗೆ ಮೆರವಣಿಗೆ ನಡೆಸಿ ರಸ್ತೆ ಸಂಚಾರಕ್ಕೆ ತಡೆಯೊಡ್ಡಿದ್ದಾರೆ. ಬಂದ್‌ಗೆ ಕರೆ ನೀಡಿರುವುದು ಪ್ರಯಾಗ್‌ರಾಜ್ ಮತ್ತು ಇತರ ನೆರೆಯ ಜಿಲ್ಲೆಗಳಲ್ಲಿ ಕನಿಷ್ಠ ಪರಿಣಾಮ ಬೀರಿದೆ.

ಬಿಎಸ್‌ಪಿ ಮತ್ತು ದಲಿತ ಸಂಘಟನೆಗಳು ಮಧ್ಯಾಹ್ನ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಜ್ಞಾಪಕ ಪತ್ರವನ್ನು ನೀಡಲಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:20 pm, Wed, 21 August 24