Kolkata doctor rape-murder: ವೈದ್ಯೆಯ ಅತ್ಯಾಚಾರ ಪ್ರಕರಣ: ಆರ್‌ಜಿ ಕರ್ ಮಾಜಿ ಪ್ರಾಂಶುಪಾಲರ ಪಾಲಿಗ್ರಾಫ್ ಪರೀಕ್ಷೆ ನಡೆಸಲಿದೆಯೇ ಸಿಬಿಐ?

ಅಪರಾಧದ ಎರಡು ದಿನಗಳ ನಂತರ ರಾಜೀನಾಮೆ ನೀಡಿದ ಸಂದೀಪ್ ಘೋಷ್ ಅವರನ್ನು ಹಲವು ದಿನಗಳಿಂದ ಸಿಬಿಐ ವಿಚಾರಣೆ ನಡೆಸುತ್ತಿದೆ. ವರದಿಗಳ ಪ್ರಕಾರ, ಹತ್ಯೆಯ ಬಗ್ಗೆ ಕೇಳಿದಾಗ ಅವರ ಮೊದಲ ಪ್ರತಿಕ್ರಿಯೆ ಏನಾಗಿತ್ತು ಎಂದು ಘೋಷ್ ಅವರಲ್ಲಿ ಸಿಬಿಐ ಕೇಳಿದೆ. ಅದೇ ವೇಳೆ ಮೃತದೇಹವನ್ನು ಹಸ್ತಾಂತರಿಸುವ ಮೊದಲು ಸಂತ್ರಸ್ತೆಯ ಪೋಷಕರನ್ನು ಮೂರು ಗಂಟೆಗಳ ಕಾಲ ಕಾಯುವಂತೆ ಏಕೆ ಮಾಡಿದ್ದೀರಿ ಎಂದು ಸಿಬಿಐ ವೈದ್ಯರಲ್ಲಿ ಕೇಳಿದೆ.

Kolkata doctor rape-murder: ವೈದ್ಯೆಯ ಅತ್ಯಾಚಾರ ಪ್ರಕರಣ: ಆರ್‌ಜಿ ಕರ್ ಮಾಜಿ ಪ್ರಾಂಶುಪಾಲರ ಪಾಲಿಗ್ರಾಫ್ ಪರೀಕ್ಷೆ ನಡೆಸಲಿದೆಯೇ ಸಿಬಿಐ?
ಕೊಲ್ಕತ್ತಾ ಪ್ರಕರಣ
Follow us
|

Updated on: Aug 21, 2024 | 12:54 PM

ಕೋಲ್ಕತ್ತಾ ಆಗಸ್ಟ್ 21: ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (RG Kar Medical College and Hospital) ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ (Dr Sandip Ghosh) ಅವರನ್ನು ಪಾಲಿಗ್ರಾಫ್ ಪರೀಕ್ಷೆಗೆ (polygraph test)ಒಳಪಡಿಸಲು ಕೇಂದ್ರೀಯ ತನಿಖಾ ದಳ (CBI) ಚಿಂತನೆ ನಡೆಸುತ್ತಿದೆ. ವಿಚಾರಣೆಯ ಸಮಯದಲ್ಲಿ ಅವರು ನೀಡಿದ ಉತ್ತರಗಳಲ್ಲಿ “ವ್ಯತ್ಯಾಸಗಳನ್ನು” ಕಂಡುಕೊಂಡಿದ್ದರಿಂದ ಸುಳ್ಳು ಪತ್ತೆ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ, ಆಸ್ಪತ್ರೆಯ ಸೆಮಿನಾರ್ ಕೊಠಡಿಯೊಳಗೆ 31 ವರ್ಷದ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. ತನ್ನ 36 ಗಂಟೆಗಳ ಸುದೀರ್ಘ ಶಿಫ್ಟ್ ನಡುವೆ ವಿಶ್ರಾಂತಿ ಪಡೆಯಲು ಆಕೆ ಕೋಣೆಗೆ ಹೋಗಿದ್ದಾಗ ಆಕೆಯ ಮೇಲೆ ಈ ದೌರ್ಜನ್ಯ ನಡೆದಿದೆ. ಮೃತದೇಹದ ಬಳಿ ಬ್ಲೂಟೂತ್ ಹೆಡ್‌ಫೋನ್‌ಗಳು ಪತ್ತೆಯಾದ ನಂತರ ಕೋಲ್ಕತ್ತಾ ಪೊಲೀಸರು ಸಂಜೋಯ್ ರಾಯ್ ಎಂಬ ನಾಗರಿಕ ಸ್ವಯಂಸೇವಕನನ್ನು ಬಂಧಿಸಿದ್ದಾರೆ.

ಅಪರಾಧದ ಎರಡು ದಿನಗಳ ನಂತರ ರಾಜೀನಾಮೆ ನೀಡಿದ ಸಂದೀಪ್ ಘೋಷ್ ಅವರನ್ನು ಹಲವು ದಿನಗಳಿಂದ ಸಿಬಿಐ ವಿಚಾರಣೆ ನಡೆಸುತ್ತಿದೆ. ವರದಿಗಳ ಪ್ರಕಾರ, ಹತ್ಯೆಯ ಬಗ್ಗೆ ಕೇಳಿದಾಗ ಅವರ ಮೊದಲ ಪ್ರತಿಕ್ರಿಯೆ ಏನಾಗಿತ್ತು ಎಂದು ಘೋಷ್ ಅವರಲ್ಲಿ ಸಿಬಿಐ ಕೇಳಿದೆ. ಅದೇ ವೇಳೆ ಮೃತದೇಹವನ್ನು ಹಸ್ತಾಂತರಿಸುವ ಮೊದಲು ಸಂತ್ರಸ್ತೆಯ ಪೋಷಕರನ್ನು ಮೂರು ಗಂಟೆಗಳ ಕಾಲ ಕಾಯುವಂತೆ ಏಕೆ ಮಾಡಿದ್ದೀರಿ ಎಂದು ಸಿಬಿಐ ವೈದ್ಯರಲ್ಲಿ ಕೇಳಿದೆ.

ಪಾಲಿಗ್ರಾಫ್ ಪರೀಕ್ಷೆಯ ಮೂಲಕ ಸಂದೀಪ್ ಘೋಷ್ ಅವರ ಉತ್ತರಗಳನ್ನು ಪರಿಶೀಲಿಸಲು ಅವರು ಬಯಸಿದ್ದರು ಎಂದು ಸಂಸ್ಥೆ ಪಿಟಿಐಗೆ ತಿಳಿಸಿದೆ. ನಾವು ಘೋಷ್ ಅವರ ಉತ್ತರಗಳನ್ನು ಮತ್ತಷ್ಟು ಪರಿಶೀಲಿಸಲು ಬಯಸುತ್ತೇವೆ, ಏಕೆಂದರೆ ನಮ್ಮ ಕೆಲವು ಪ್ರಶ್ನೆಗಳಿಗೆ ಅವರು ನೀಡಿದಉತ್ತರಗಳಲ್ಲಿ ವ್ಯತ್ಯಾಸಗಳಿವೆ. ಆದ್ದರಿಂದ, ನಾವು ಅವರ ಪಾಲಿಗ್ರಾಫ್ ಪರೀಕ್ಷೆಯನ್ನು ನಡೆಸುವ ಆಯ್ಕೆಯ ಬಗ್ಗೆ ಯೋಚಿಸುತ್ತಿದ್ದೇವೆ” ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಹತ್ಯೆಯ ಬಗ್ಗೆ ಮಾಹಿತಿ ಪಡೆದ ನಂತರ ಸಂಸ್ಥೆಯು ವೈದ್ಯರನ್ನು ಸಂಪರ್ಕಿಸಿದ ವ್ಯಕ್ತಿಯ ಹೆಸರನ್ನು ಸಹ ಕೇಳಿದೆ.  ಆರ್‌ಜಿ ಕರ್ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ವೈದ್ಯೆಯ ಶವ ಪತ್ತೆಯಾದ ನಂತರ ಅದರ ಪಕ್ಕದ ಕೊಠಡಿಗಳ ನವೀಕರಣದ ಅಧಿಕಾರದ ಬಗ್ಗೆಯೂ ಅವರನ್ನು ಪ್ರಶ್ನಿಸಲಾಗಿದೆ. ಸಂಜಯ್ ರಾಯ್ ಅವರನ್ನು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲು ಸಂಸ್ಥೆಯು ಇತ್ತೀಚೆಗೆ ಸ್ಥಳೀಯ ನ್ಯಾಯಾಲಯದಿಂದ ಅನುಮತಿ ಪಡೆದಿತ್ತು.

ಇದನ್ನೂ ಓದಿ: ಕೋಲ್ಕತ್ತಾ ಅತ್ಯಾಚಾರ-ಕೊಲೆ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ ಬೇರೆಡೆ ಗಮನ ಸೆಳೆಯುವುದಕ್ಕೆ ಅವಕಾಶ ನೀಡುವುದಿಲ್ಲ ಎಂದ ರಾಹುಲ್ ; ಬಿಜೆಪಿ ಟೀಕೆ

ಸಂದೀಪ್ ಘೋಷ್ ಅವರನ್ನು ಮೊದಲು ಪ್ರಶ್ನಿಸಬೇಕಾಗಿತ್ತು ಎಂದು ಕಲ್ಕತ್ತಾ ಹೈಕೋರ್ಟ್ ಗಮನಿಸಿದ ನಂತರ ಅವರ ವಿಚಾರಣೆ ಪ್ರಾರಂಭವಾಯಿತು.  ಪ್ರಕರಣದ ಎಫ್‌ಐಆರ್ ದಾಖಲಾತಿ ವಿಳಂಬದ ಬಗ್ಗೆ ಮಂಗಳವಾರ ಸುಪ್ರೀಂಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಸಂದೀಪ್ ಘೋಷ್ ಮತ್ತು ಆಸ್ಪತ್ರೆ ಆಡಳಿತವು ಶವ ಪತ್ತೆ ಮಾಡಿದ ನಂತರ ಏನು ಮಾಡುತ್ತಿದೆ ಎಂದು ಹೇಳಿದೆ. ಘೋಷ್ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದನ್ನು ನ್ಯಾಯಾಲಯ ಗಮನಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ