ಧ್ವನಿ ಬದಲಿಸುವ ಆ್ಯಪ್​ ಮೂಲಕ ಮಹಿಳಾ ಪ್ರೊಫೆಸರ್ ಎಂದು ಹೇಳಿ ಕರೆಸಿಕೊಂಡು 7 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ

|

Updated on: May 26, 2024 | 12:19 PM

ಶಿಕ್ಷಕಿಯಂತೆ ಧ್ವನಿ ಬದಲಾಯಿಸಿಕೊಂಡು ವಿದ್ಯಾರ್ಥಿನಿಯರನ್ನು ಕರೆಸಿಕೊಂಡು ಅತ್ಯಾಚಾರವೆಸಗುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತ ಆ್ಯಪ್​ ಮೂಲಕ ಮಹಿಳೆಯರಂತೆ ಧ್ವನಿ ಬದಲಾಯಿಸಿಕೊಂಡು ವಿದ್ಯಾರ್ಥಿನಿಯರ ಬಳಿ ಮಾತನಾಡುತ್ತಿದ್ದ.

ಧ್ವನಿ ಬದಲಿಸುವ ಆ್ಯಪ್​ ಮೂಲಕ ಮಹಿಳಾ ಪ್ರೊಫೆಸರ್ ಎಂದು ಹೇಳಿ ಕರೆಸಿಕೊಂಡು 7 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ
Follow us on

ವ್ಯಕ್ತಿಯೊಬ್ಬ ಆ್ಯಪ್​ ಮೂಲಕ ಧ್ವನಿ ಬದಲಾಯಿಸಿಕೊಂಡು ಮಹಿಳಾ ಪ್ರೊಫೆಸರ್​ ಎಂದು ಹೇಳಿ ಕರೆಸಿಕೊಂಡು 7 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಹಿಳಾ ಪ್ರೊಫೆಸರ್​ನಂತೆ ಕರೆ ಮಾಡಿ ವಿದ್ಯಾರ್ಥಿ ವೇತನ ಕೊಡಿಸುತ್ತೇನೆಂದು ಹೇಳಿ ಕರೆಸಿಕೊಂಡು ಅತ್ಯಾಚಾರವೆಸಗಿದ್ದಾನೆ.

ಈ ಪ್ರಕರಣದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇದುವರೆಗೆ ನಾಲ್ಕು ವಿದ್ಯಾರ್ಥಿನಿಯರು ದೂರು ನೀಡಿದ್ದಾರೆ.
ಇತರ ಮೂವರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಈ ಪ್ರಕರಣದಲ್ಲಿ ಅವರ ವಿರುದ್ಧ ಪೋಕ್ಸೊ ಕಾಯ್ದೆಯನ್ನೂ ಹಾಕಲಾಗಿದೆ. ಮೇ 24 ರಂದು ಪ್ರಜಾಪತಿಯ ರಿಮಾಂಡ್ ಮುಗಿದ ನಂತರ, ಪೊಲೀಸರು ಮತ್ತೆ ಆತನನ್ನು ಕಸ್ಟಡಿಗೆ ಕೋರಿದ್ದಾರೆ.

ಎಸ್​​ಸಿಎಸ್​ಟಿ ವಿದ್ಯಾರ್ಥಿ ವೇತನಕ್ಕೆ ಅರ್ಹರಾದ ಬಾಲಕಿಯರಿಗೆ ಆರೋಪಿ ಬೃಜೇಶ್​ ಪ್ರಜಾಪತಿ ಬಲೆ ಬೀಸುತ್ತಿದ್ದ ಎಂದು ಹೇಳಲಾಗಿದೆ. ಧ್ವನಿ ಬದಲಾವಣೆ ಆ್ಯಪ್ ಬಳಸಿಕೊಂಡು ಅರ್ಚನಾ ಮೇಡಂ ಎಂದು ಪರಿಚಯಿಸಿಕೊಳ್ಳುತ್ತಿದ್ದ. ಸ್ಕಾಲರ್​ಶಿಪ್​ ಅರ್ಜಿಗಳ ಸಮಸ್ಯೆ ಬಗೆಹರಿಸುವ ಸಲುವಾಗಿ ತನ್ನನ್ನು ಭೇಟಿಯಾಗುವಂತೆ ಹೇಳುತ್ತಿದ್ದ, ಬಾಲಕಿಯರ ಮೇಲೆ ಅತ್ಯಾಚಾರವೆಸಗಿ ಅವರ ಮೊಬೈಲ್​ಗಳನ್ನು ಕಸಿದುಕೊಂಡು ನೆರವಿಗಾಗಿ ಯಾರಿಗೂ ಕರೆ ಮಾಡದಂತೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮತ್ತಷ್ಟು ಓದಿ: ಮಂಡ್ಯ: ವಿಕಲಚೇತನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಮುಸ್ಲಿಂ ಯುವಕನಿಂದ ಮತಾಂತರಕ್ಕೆ ಒತ್ತಾಯ

ಆರೋಪಿಯಿಂದ 16 ಫೋನ್​ಗಳನ್ನು ವಶಪಡಿಸಿಕೊಳ್ಳಲಾಗಿದೆ, ಕೇವಲ ನಾಲ್ಕು ಮಂದಿಯಿಂದ ಮಾತ್ರ ಅಧಿಕೃತ ದೂರು ಬಂದಿದೆ. ನಿರುದ್ಯೋಗಿಯಾಗಿರುವ ಪ್ರಜಾಪತಿ ಈ ದಂಧೆ ಈ ವರ್ಷದ ಏಪ್ರಿಲ್​ನಿಂದ ಆರಂಭಿಸಿದ್ದಾನೆ. ಈತನ ವಿರುದ್ಧ ದೂರು ನೀಡಲು ವಿದ್ಯಾರ್ಥಿನಿಯರು ಹೆದರಿದ್ದರು. ಮೇ 16ರಂದು ಕಾಲೇಜು ವಿದ್ಯಾರ್ಥಿನಿಯೊಬ್ಬಳು ಧೈರ್ಯದಿಂದ ಮಜೂಲಿ ಠಾಣೆಗೆ ಬಂದು ದೂರು ದಾಖಲಿಸಿದ್ದಳು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ