PM Modi Speech: ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ಕೋಚಿಂಗ್ ಕ್ಲಾಸ್; ಪ್ರಧಾನಿ ಮೋದಿ ಮಾಡಿದ ಪ್ರಮುಖ ಘೋಷಣೆಗಳಿವು

ದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಅನೇಕ ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಯುವಜನರಿಗೆ ಉಚಿತ ಆನ್‌ಲೈನ್ ಕೋಚಿಂಗ್ (ತರಬೇತಿ) ನೀಡುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇದು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

PM Modi Speech: ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ಕೋಚಿಂಗ್ ಕ್ಲಾಸ್; ಪ್ರಧಾನಿ ಮೋದಿ ಮಾಡಿದ ಪ್ರಮುಖ ಘೋಷಣೆಗಳಿವು
Pm Modi Speech In Independence Day
Image Credit source: PTI

Updated on: Aug 15, 2026 | 11:03 AM

ಮುಖ್ಯಾಂಶಗಳು

  • ಯುವಜನರಿಗಾಗಿ ಪ್ರಧಾನಿ ಮೋದಿಯವರ ಬೃಹತ್ ಯೋಜನೆ
  • 1 ಕೋಟಿ ಯುವಕರಿಗೆ ಎಐ ತರಬೇತಿ
  • ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಯುವಜನರಿಗೆ ಉಚಿತ ಆನ್‌ಲೈನ್ ಕೋಚಿಂಗ್

ನವದೆಹಲಿ, ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆಯ (Independence Day) ಸಂದರ್ಭದಲ್ಲಿ ಕೆಂಪು ಕೋಟೆಯ (Red Fort) ಬುರುಜಿನಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹಲವು ಘೋಷಣೆಗಳನ್ನು ಮಾಡಿದ್ದಾರೆ. ಖಾಸಗಿ ಕೋಚಿಂಗ್ ಸೆಂಟರ್‌ಗಳಿಗೆ ತೆರಳುವುದು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ಹೊರೆಯಾಗಿದೆ ಎಂಬುದನ್ನು ಒಪ್ಪಿಕೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಆನ್‌ಲೈನ್ ತರಬೇತಿ (ಕೋಚಿಂಗ್) ನೀಡಲಾಗುವುದು ಎಂದು ಘೋಷಿಸಿದ್ದಾರೆ.

ಪ್ರಧಾನಿ ಮೋದಿ ಘೋಷಿಸಿದ ಪ್ರಮುಖ ಯೋಜನೆಗಳು:

ಎಐ (AI) ಯುವ ಕೌಶಲ್ಯ ತರಬೇತಿ: ಮುಂಬರುವ ವರ್ಷದಲ್ಲಿ ರಾಷ್ಟ್ರವ್ಯಾಪಿ ಮಿಷನ್ ಮೋಡ್ ಮೂಲಕ 1 ಕೋಟಿ ಯುವಕರಿಗೆ ಕೃತಕ ಬುದ್ಧಿಮತ್ತೆ (AI) ತರಬೇತಿ.

ಇದನ್ನೂ ಓದಿ: Saptadhara: ಸಪ್ತಧಾರಾ; ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿ ಮೋದಿ ಘೋಷಿಸಿದ ‘ವಿಕಸಿತ ಭಾರತ’ದ 7 ಸುಧಾರಣೆಗಳಿವು

ಉಚಿತ ಆನ್‌ಲೈನ್ ಕೋಚಿಂಗ್: ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಯುವಜನರಿಗೆ ಉಚಿತ ಆನ್‌ಲೈನ್ ಕೋಚಿಂಗ್ (ತರಬೇತಿ) ಸೌಲಭ್ಯ.

ನಾಗರಿಕ ರಕ್ಷಣಾ ಸುಧಾರಣೆ: ಬದಲಾಗುತ್ತಿರುವ ಭದ್ರತಾ ಅಗತ್ಯಗಳನ್ನು ಎದುರಿಸಲು ಆಧುನಿಕ ತರಬೇತಿ ಮತ್ತು ಸುಧಾರಿತ ಸಾಮರ್ಥ್ಯ ನಿರ್ಮಾಣ.

ಕ್ರೀಡಾ ಪ್ರತಿಭಾ ಶೋಧ: ಗ್ರಾಮೀಣ ಮತ್ತು ನಗರ ಪ್ರದೇಶಗಳ 5ರಿಂದ 15 ವರ್ಷದೊಳಗಿನ ಮಕ್ಕಳನ್ನು ಗುರಿಯಾಗಿಸಿಕೊಂಡು ದೇಶವ್ಯಾಪಿ ಪ್ರಚಾರ ಅಭಿಯಾನ.

ಇದನ್ನೂ ಓದಿ: PM Modi Speech: ‘ಭಾರತ ಬೇರೆ ದೇಶಗಳ ಮೇಲೆ ಅವಲಂಬಿತವಾಗಬಾರದು’; ಕೆಂಪುಕೋಟೆಯಲ್ಲಿ ಮೋದಿಯಿಂದ ಆತ್ಮನಿರ್ಭರದ ಘೋಷಣೆ

ಸೆಮಿಕಂಡಕ್ಟರ್: ಮುಂಬರುವ 1ರಿಂದ 2 ವರ್ಷಗಳಲ್ಲಿ 7ರಿಂದ 8 ಹೊಸ ಉತ್ಪಾದನಾ ಘಟಕಗಳ (ಪ್ಲಾಂಟ್‌ಗಳು) ಕಾರ್ಯಾಚರಣೆ.

ಅಣುಶಕ್ತಿ: 2047ರ ವೇಳೆಗೆ 100 ಗಿಗಾವ್ಯಾಟ್ (GW) ಸಾಮರ್ಥ್ಯ ಸಾಧನೆಯ ಗುರಿ ಹಾಗೂ ಮುಂಬರುವ 6ರಿಂದ 7 ವರ್ಷಗಳಲ್ಲಿ 5 ಹೊಸ ರಿಯಾಕ್ಟರ್‌ಗಳ ಕಾರ್ಯಾಚರಣೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:44 am, Sat, 15 August 26

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us