Big News: ವಿಪಕ್ಷಗಳ ವಿರೋಧದ ನಡುವೆಯೇ ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆ; ರಾಜ್ಯಸಭೆಯಲ್ಲಿ ಕೋಲಾಹಲ

Uniform Civil Code Bill: ರಾಜ್ಯಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಮಂಡಿಸಲು ಮುಂದಾದ ಬಿಜೆಪಿ ಸಂಸದ ಕಿರೋಡಿ ಲಾಲ್ ಮೀನಾ ಅವರಿಗೆ ವಿರೋಧ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

Big News: ವಿಪಕ್ಷಗಳ ವಿರೋಧದ ನಡುವೆಯೇ ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆ; ರಾಜ್ಯಸಭೆಯಲ್ಲಿ ಕೋಲಾಹಲ
ರಾಜ್ಯಸಭಾ ಅಧಿವೇಶನ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Dec 09, 2022 | 4:54 PM

ನವದೆಹಲಿ: ವಿರೋಧ ಪಕ್ಷಗಳ ವಿರೋಧದ ನಡುವೆಯೂ ರಾಜ್ಯಸಭೆಯಲ್ಲಿ (Rajya Sabha Session) ಬಿಜೆಪಿಯ ಕಿರೋಡಿ ಲಾಲ್ ಮೀನಾ (Kirodi Lal Meena) ಏಕರೂಪ ನಾಗರಿಕ ಸಂಹಿತೆ ಮಸೂದೆ, 2020 ಅನ್ನು ಖಾಸಗಿ ಸದಸ್ಯ ವಿಧೇಯಕವಾಗಿ ಮಂಡಿಸಿದ್ದರಿಂದ ಇಂದು ರಾಜ್ಯಸಭೆಯಲ್ಲಿ ಭಾರೀ ಕೋಲಾಹಲ ಉಂಟಾಯಿತು. ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು (Uniform Civil Code Bill) ಮಂಡಿಸಲು ಮುಂದಾದ ಬಿಜೆಪಿ ಸಂಸದ ಕಿರೋಡಿ ಲಾಲ್ ಮೀನಾ ಅವರಿಗೆ ವಿರೋಧ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಆದರೂ ಸುಮ್ಮನಾಗದ ಕಿರೋಡಿ ಲಾಲ್ ಮೀನಾ ಏಕರೂಪ ನಾಗರಿಕ ಸಂಹಿತೆಯನ್ನು ಸಿದ್ಧಪಡಿಸಲು ಸಮಿತಿಗೆ ಅವಕಾಶ ನೀಡುವ ವಿವಾದಾತ್ಮಕ ಖಾಸಗಿ ಸದಸ್ಯರ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದರು.

ಇದನ್ನು ಕಾಂಗ್ರೆಸ್, ಸಿಪಿಐ, ಸಿಪಿಐಎಂ, ಟಿಎಂಸಿ ಪಕ್ಷಗಳ ಸದಸ್ಯರು ವಿರೋಧಿಸಿ, ರಾಜ್ಯಸಭೆಯಲ್ಲಿ ಪ್ರತಿಭಟನೆ ನಡೆಸಿದರು. ಈ ಮಸೂದೆ ಭಾರತದಲ್ಲಿ ಜಾರಿಯಲ್ಲಿರುವ ಸಾಮಾಜಿಕ ರಚನೆ ಮತ್ತು ವಿವಿಧತೆಯಲ್ಲಿ ಏಕತೆಯನ್ನು ನಾಶ ಪಡಿಸುತ್ತದೆ ಎಂದು ಅವರು ಹೇಳಿದರು. ಈ ಮಸೂದೆಯ ಪರವಾಗಿ 63 ಮತಗಳು ಹಾಗೂ ಈ ಮಸೂದೆಯ ವಿರುದ್ಧ 23 ಮತಗಳನ್ನು ಚಲಾಯಿಸಲಾಯಿತು.

ಇದನ್ನೂ ಓದಿ: ಇದು ನಮ್ಮ ಹೆಮ್ಮೆ! ರಾಜ್ಯಸಭೆಯಲ್ಲಿ ವೆಂಕಯ್ಯನಾಯ್ಡುಗೆ ಬೀಳ್ಕೊಡುಗೆ : ಕನ್ನಡದಲ್ಲಿ ಭಾಷಣ ಮಾಡಿ, ಶುಭ ಹಾರೈಸಿದ ಸಚಿವ ಪ್ರಲ್ಹಾದ ಜೋಶಿ

ಈ ಮಸೂದೆಯನ್ನು ವಿರೋಧಿಸಲು ಮೂರು ನಿರ್ಣಯಗಳನ್ನು ಮಂಡಿಸಲಾಯಿತು. ಇದು ದೇಶವನ್ನು ವಿಘಟಿಸುತ್ತದೆ ಮತ್ತು ಅದರ ವೈವಿಧ್ಯಮಯ ಸಂಸ್ಕೃತಿಯನ್ನು ಘಾಸಿಗೊಳಿಸುತ್ತದೆ ಎಂದು ವಿಪಕ್ಷಗಳು ಹೇಳಿದವು. ಹಲವಾರು ಪಕ್ಷಗಳ ತೀವ್ರ ವಿರೋಧದ ನಂತರ, ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಸಂವಿಧಾನದ ನಿರ್ದೇಶನ ತತ್ವಗಳ ಅಡಿಯಲ್ಲಿ ಸಮಸ್ಯೆಯನ್ನು ಎತ್ತುವುದು ಸದಸ್ಯರ ಕಾನೂನುಬದ್ಧ ಹಕ್ಕು ಎಂದು ವಾದಿಸಿದರು. ಸದನದಲ್ಲಿ ಈ ವಿಷಯ ಚರ್ಚೆಯಾಗಲಿ. ಈ ಹಂತದಲ್ಲಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುವುದು, ಮಸೂದೆಯನ್ನು ಟೀಕಿಸಲು ಪ್ರಯತ್ನಿಸುವುದು ಅನಪೇಕ್ಷಿತವಾಗಿದೆ ಎಂದು ಅವರು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:52 pm, Fri, 9 December 22