AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರದ ಬಾಬಾ ಸಿದ್ಧೇಶ್ವರನಾಥ ದೇವಸ್ಥಾನದಲ್ಲಿ ಕಾಲ್ತುಳಿತ; 7 ಮಂದಿಯನ್ನು ಬಲಿ ಪಡೆದ ವಿಡಿಯೋ ವೈರಲ್

ಕನ್ವಾರಿಯಾಗಳ ನಡುವಿನ ವಿವಾದವು ಕಾಲ್ತುಳಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಇದರಿಂದಾಗಿ 7 ಜನರು ಸಾವನ್ನಪ್ಪಿದ್ದಾರೆ ಮತ್ತು 16 ಮಂದಿ ಗಾಯಗೊಂಡಿದ್ದಾರೆ. ಆದರೆ, ಕಾಲ್ತುಳಿತಕ್ಕೆ ನಿಖರವಾದ ಕಾರಣದ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ.

ಬಿಹಾರದ ಬಾಬಾ ಸಿದ್ಧೇಶ್ವರನಾಥ ದೇವಸ್ಥಾನದಲ್ಲಿ ಕಾಲ್ತುಳಿತ; 7 ಮಂದಿಯನ್ನು ಬಲಿ ಪಡೆದ ವಿಡಿಯೋ ವೈರಲ್
ಬಾಬಾ ಸಿದ್ಧೇಶ್ವರನಾಥ ದೇವಸ್ಥಾನದಲ್ಲಿ ಕಾಲ್ತುಳಿತ
ಸುಷ್ಮಾ ಚಕ್ರೆ
|

Updated on: Aug 13, 2024 | 3:17 PM

Share

ಜೆಹನಾಬಾದ್: ಬಿಹಾರದ ಜೆಹಾನಾಬಾದ್ ಜಿಲ್ಲೆಯಲ್ಲಿರುವ ಸಿದ್ಧೇಶ್ವರನಾಥ ದೇವಸ್ಥಾನದಲ್ಲಿ ಕಾಲ್ತುಳಿತ ಉಂಟಾಗಿ 7 ಜನರು ಮೃತಪಟ್ಟಿದ್ದಾರೆ. ಈ ದೇವಸ್ಥಾನದಲ್ಲಿ ಆ ದಿನ ನಿಖರವಾಗಿ ಏನಾಯಿತು ಎಂಬುದನ್ನು ತೋರಿಸುವ ವೀಡಿಯೊ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕಾಲ್ತುಳಿತದಿಂದ 7 ಜನರು ಸಾವನ್ನಪ್ಪಿದ್ದು, 16 ಜನರಿಗೆ ಗಾಯಗಳಾಗಿದೆ. ಬಾಬಾ ಸಿದ್ಧೇಶ್ವರನಾಥ ದೇವಸ್ಥಾನದಲ್ಲಿ ಕಿರಿದಾದ ಹಾದಿಯಿಂದ ಜನರು ಹೊರಬರಲು ಹೆಣಗಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಅವರು ಕಿರುಚುತ್ತಿದ್ದಾರೆ ಮತ್ತು ವೈರಲ್ ವೀಡಿಯೊದಲ್ಲಿ ತಮ್ಮ ಜೊತೆಗೆ ಬಂದವರನ್ನು ಆತಂಕದಿಂದ ಹುಡುಕುತ್ತಿದ್ದಾರೆ.

ಇದಕ್ಕೂ ಮುನ್ನ ಆಗಸ್ಟ್ 11 ರಂದು ಬಾಬಾ ಸಿದ್ಧೇಶ್ವರ ನಾಥ ದೇವಸ್ಥಾನದಲ್ಲಿ ಕಾಲ್ತುಳಿತದಲ್ಲಿ 6 ಮಹಿಳೆಯರು ಸೇರಿದಂತೆ 7 ಜನರು ಸಾವನ್ನಪ್ಪಿದ್ದರು ಮತ್ತು 16 ಮಂದಿ ಗಾಯಗೊಂಡಿದ್ದರು. ಭಾನುವಾರ ರಾತ್ರಿ 11.30 ರ ಸುಮಾರಿಗೆ ದೇವಸ್ಥಾನದಲ್ಲಿ ಕಾಲ್ತುಳಿತ ಸಂಭವಿಸಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಲಂಕೃತಾ ಪಾಂಡೆ ಅವರು ಸಾವುನೋವುಗಳು ಮತ್ತು ಗಾಯಗಳನ್ನು ಖಚಿತಪಡಿಸಿದ್ದಾರೆ. ದೇವಾಲಯದ ಭದ್ರತಾ ಸಿಬ್ಬಂದಿ ತ್ವರಿತವಾಗಿ ಪರಿಸ್ಥಿತಿಯನ್ನು ಹತೋಟಿಗೆ ತಂದರು ಎನ್ನಲಾಗಿದೆ.

ಇದನ್ನೂ ಓದಿ: 10 ಹುದ್ದೆಗೆ ನೂರಾರು ಯುವಕರ ನೂಕುನುಗ್ಗಲು; ಇಂಟರ್​ವ್ಯೂ ವೇಳೆ ಕಾಲ್ತುಳಿತದ ವಿಡಿಯೋ ವೈರಲ್

“ಭಾನುವಾರ ರಾತ್ರಿ 11.30ರ ಸುಮಾರಿಗೆ ಜೆಹಾನಾಬಾದ್‌ನ ಬರಾಬರ್ ಪಹಾಡಿ ಪ್ರದೇಶದ ಬಾಬಾ ಸಿದ್ದೇಶ್ವರ ನಾಥ ದೇವಾಲಯದಲ್ಲಿ ಕಾಲ್ತುಳಿತದಲ್ಲಿ 7 ಜನರು ಸಾವನ್ನಪ್ಪಿದ್ದಾರೆ ಮತ್ತು 16 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಆರು ಮಹಿಳೆಯರು ಸೇರಿದ್ದಾರೆ” ಎಂದು ಅವರು ಹೇಳಿದರು.

ಮೃತರನ್ನು ಪ್ಯಾರೆ ಪಾಸ್ವಾನ್ (30), ನಿಶಾ ದೇವಿ (30), ಪುನಮ್ ದೇವಿ (30), ನಿಶಾ ಕುಮಾರಿ (21), ಮತ್ತು ಸುಶೀಲಾ ದೇವಿ (64) ಎಂದು ಗುರುತಿಸಲಾಗಿದೆ. ಒಬ್ಬ ಮಹಿಳೆಯ ಗುರುತು ಇನ್ನೂ ತಿಳಿದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಹಾರ: ಸಿದ್ದೇಶ್ವರನಾಥ ಮಂದಿರದಲ್ಲಿ ಕಾಲ್ತುಳಿತ, 7 ಭಕ್ತರ ಸಾವು

ಈ ಘಟನೆಯ ಬಗ್ಗೆ ಇಹರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಮುಳುಗಿಸಿದ ಕೊಳಚೆ ನೀರು
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಮುಳುಗಿಸಿದ ಕೊಳಚೆ ನೀರು
ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು?
ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು?
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್
ಕೆನಡಾದಲ್ಲಿ ಭಾರತೀಯ ಯುವಕರ ಬಳಿ ಸಹಾಯ ಕೇಳಿದ ಯುವತಿ
ಕೆನಡಾದಲ್ಲಿ ಭಾರತೀಯ ಯುವಕರ ಬಳಿ ಸಹಾಯ ಕೇಳಿದ ಯುವತಿ
ಟ್ರಕ್​ಗೆ ಡಿಕ್ಕಿಯಾಗಿ KSRTC ಬಸ್ ನುಜ್ಜುಗುಜ್ಜು: ತಪ್ಪಿದ ಭಾರೀ ಅನಾಹುತ
ಟ್ರಕ್​ಗೆ ಡಿಕ್ಕಿಯಾಗಿ KSRTC ಬಸ್ ನುಜ್ಜುಗುಜ್ಜು: ತಪ್ಪಿದ ಭಾರೀ ಅನಾಹುತ
ದಿಲೀಪ್ ರಾಜ್​ ನಿಧನ ಹೊಂದಿ ತಿಂಗಳು ಕಳೆದರೂ ಕಡಿಮೆ ಆಗಿಲ್ಲ ಕಣ್ಣೀರು
ದಿಲೀಪ್ ರಾಜ್​ ನಿಧನ ಹೊಂದಿ ತಿಂಗಳು ಕಳೆದರೂ ಕಡಿಮೆ ಆಗಿಲ್ಲ ಕಣ್ಣೀರು