Bihar Floor Test: ಬಿಹಾರ ವಿಧಾನಸಭೆ: ವಿಶ್ವಾಸಮತ ಗೆದ್ದ ಜೆಡಿಯು-ಬಿಜೆಪಿ ಮೈತ್ರಿಕೂಟ
Nitish Kumar Floor Test: ಇಂದು ಬಿಹಾರದಲ್ಲಿ ಎನ್‌ಡಿಎ ಸರ್ಕಾರದ ವಿಶ್ವಾಸಮತ ಪರೀಕ್ಷೆ ನಡೆದಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಬಹುಮತ ಪಡೆದಿದ್ದಾರೆ. 9ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾದ ಬಳಿಕ ಬಹುಮತ ಸಾಬೀತು ಪಡಿಸುವರೇ ಎಂಬುದೇ ದೊಡ್ಡ ಪ್ರಶ್ನೆಯಾಗಿತ್ತು ಅದಕ್ಕೀಗ ಉತ್ತರ ದೊರೆತಿದೆ. ಬಿಹಾರ ವಿಧಾನಸಭೆಯ ಒಟ್ಟು ಸ್ಥಾನಗಳ ಸಂಖ್ಯೆ 243. ಈ ಪೈಕಿ ಪಕ್ಷದಲ್ಲಿ ಒಟ್ಟು 128 ಶಾಸಕರಿದ್ದಾರೆ.
ಬಿಹಾರದಲ್ಲಿ ಬಿಜೆಪಿಯು ಹಾಗೂ ಬಿಜೆಪಿ ಮೈತ್ರಿಕೂಟ ಸರ್ಕಾರ ಸದನದಲ್ಲಿ ಇಂದು ವಿಶ್ವಾಸಮತ ಗೆದ್ದಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್(Nitish Kumar) ಬಹುಮತ ಸಾಬೀತುಪಡಿಸಿದ್ದಾರೆ. 129 ಶಾಸಕರು ನಿತೀಶ್ ಕುಮಾರ್ ಅವರನ್ನು ಬೆಂಬಲಿಸಿದ್ದಾರೆ. ಒಟ್ಟು 243 ಸದಸ್ಯಬಲದ ಬಿಹಾರದಲ್ಲಿ ಬಹುಮತಕ್ಕೆ 122 ಸದಸ್ಯರ ಅಗತ್ಯವಿತ್ತು, ಬಿಜೆಪಿ -ಜೆಡಿಯು ಮೈತ್ರಿಕೂಟ 128 ಸದಸ್ಯರನ್ನು ಹೊಂದಿದೆ. ಬಿಜೆಪಿಯ 78 ಶಾಸಕರಿದ್ದು ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳ 45 ಶಾಸಕರನ್ನು ಹೊಂದಿದೆ. ಜಿತಿನ್ ರಾಮ್ ಮಾಂಜಿ ಹಿಂದೂಸ್ತಾನ್ ಅವಾಮ್ ಮೋರ್ಚಾ 4 ಸ್ಥಾನಗಳನ್ನು ಹೊಂದಿತ್ತು.
ಇನ್ನುಳಿದಂತೆ ಒಬ್ಬ ಪಕ್ಷೇತರ ಈ ಮೈತ್ರಿಕೂಟವನ್ನು ಬೆಂಬಲಿಸಿದ್ದರು. ವಿರೋಧಿ ಕೂಟವಾಗಿರುವ ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೆಸ್ 114 ಸ್ಥಾನಗಳನ್ನು ಹೊಂದಿದ್ದವು.
ಬಿಜೆಪಿ ಜೊತೆಗೂಡಿ ನೂತನ ಸರ್ಕಾರ ರಚಿಸಲಿರುವ ನಿತೀಶ್ ಕುಮಾರ್ ಅವರು ವಿಶ್ವಾಸಮತ ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿದ್ದಾರೆ ಎಂದು ಜೆಡಿಯು ವಿಶ್ವಾಸ ವ್ಯಕ್ತಪಡಿಸಿಸಿತ್ತು. ಭಾನುವಾರ ನಡೆದ ಜೆಡಿಯು ಶಾಸಕಾಂಗ ಪಕ್ಷದ ಸಭೆಗೆ ಇಬ್ಬರು-ಮೂರು ಶಾಸಕರು ಹಾಜರಾಗಿರಲಿಲ್ಲ.
ನಿತೀಶ್ ಕುಮಾರ್ ಮಾತು
#WATCH | Bihar CM Nitish Kumar addresses the State Assembly ahead of the Floor Test of his government today.
“We worked for every section of the society…” pic.twitter.com/QnPx1lFRt5
— ANI (@ANI) February 12, 2024
ಮೂವರು ಶಾಸಕರಾದ ಸುದರ್ಶನ್ ಕುಮಾರ್ ಸಿಂಗ್, ಬಿಮಾ ಭಾರತಿ ಮತ್ತು ದಿಲೀಪ್ ರಾಯ್ ಅವರು ಜೆಡಿಯು ಸಭೆಗಳಿಗೆ ಹಾಜರಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಶಾಸಕರು ಜೆಡಿಯು ತಲೆಬಿಸಿ ಹೆಚ್ಚಿಸಿದ್ದಾರೆ. ಈ ಶಾಸಕರು ವಿಧಾನಸಭೆಯಿಂದ ದೂರ ಉಳಿದರೆ ಮತ್ತು ಜಿತನ್ ರಾಮ್ ಮಾಂಜಿ ಪಕ್ಷದ ಎಚ್‌ಎಎಂನ ಶಾಸಕರು ಯು-ಟರ್ನ್ ತೆಗೆದುಕೊಂಡರೆ, ಬಿಜೆಪಿ-ಜೆಡಿಯು ಸಮ್ಮಿಶ್ರ ಸರ್ಕಾರಕ್ಕೆ ತೊಂದರೆಯಾಗುತ್ತದೆ ಎಂದು ಹೇಳಲಾಗಿತ್ತು.
ಮತ್ತಷ್ಟು ಓದಿ: Lalan Singh Resigns: ಜೆಡಿಯು ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಲಲನ್ ಸಿಂಗ್ ರಾಜೀನಾಮೆ, ಪಕ್ಷದ ಜವಾಬ್ದಾರಿ ನಿತೀಶ್ ಹೆಗಲಿಗೆ
ಆದರೆ, ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ವಿಜಯ್ ಕುಮಾರ್ ಚೌಧರಿ ಅವರು ವಿಶ್ವಾಸಮತ ಪರೀಕ್ಷೆಯ ಸಮಯದಲ್ಲಿ ಎಲ್ಲಾ ಪಕ್ಷದ ಶಾಸಕರು ವಿಧಾನಸಭೆಯಲ್ಲಿ ಹಾಜರಿರುತ್ತಾರೆ ಎಂದು ಹೇಳಿದ್ದರು.
ವಿಶ್ವಾಸ ಮತಯಾಚನೆಗೂ ಮುನ್ನ ಸ್ಪೀಕರ್ ಹುದ್ದೆ ಕಳೆದುಕೊಂಡ ಆರ್‌ಜೆಡಿಯ ಅವಧ್ ಬಿಹಾರಿ ಬಿಹಾರದಲ್ಲಿ ಇಂದು ನಿತೀಶ್ ಕುಮಾರ್(Nitish Kumar) ನೇತೃತ್ವದ ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರದ ವಿಶ್ವಾಸಮತ ಯಾಚನೆ ಮುಗಿದಿದೆ. ಅದಕ್ಕೂ ಮುನ್ನ ರಾಷ್ಟ್ರೀಯ ಜನತಾ ದಳದ ಸ್ಪೀಕರ್ ಅವಧ್ ಬಿಹಾರಿ ಚೌಧರಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಯಿತು. ಬಿಹಾರ ವಿಧಾನಸಭಾ ಸ್ಪೀಕರ್ ಅವಧ್ ಬಿಹಾರಿ ಚೌಧರಿ ಅವರನ್ನು ಪದಚ್ಯುತಗೊಳಿಸಲಾಗಿದೆ. ಅವಧ್ ಬಿಹಾರಿ ಚೌಧರಿ ಅವರನ್ನು ಪದಚ್ಯುತಗೊಳಿಸಿರುವುದು ಮಹಾಮೈತ್ರಿಕೂಟಕ್ಕೆ ಹೊಡೆತವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:42 pm, Mon, 12 February 24