ದೆಹಲಿ ಜುಲೈ 22: ಕನ್ವರ್ ಯಾತ್ರಾ (Kanwar Yatra)ಮಾರ್ಗದಲ್ಲಿ ಆಹಾರ ಮಳಿಗೆಗಳಲ್ಲಿ ಮಾಲೀಕರ ಹೆಸರು ಪ್ರದರ್ಶಿಸಬೇಕು ಎಂಬ ಉತ್ತರ ಪ್ರದೇಶ ಸರ್ಕಾರದ ನಿರ್ದೇಶನದ ಕುರಿತು ವಿವಾದದ ನಡುವೆ ಬಾಲಿವುಡ್ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ನಟ ಸೋನು ಸೂದ್ (Sonu Sood) ಅವರ ಪೋಸ್ಟ್ ವಿರುದ್ಧ ಗುಡುಗಿದ್ದಾರೆ. ಸೋನು ಸೂದ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ, “ಪ್ರತಿ ಅಂಗಡಿಯಲ್ಲಿ ಒಂದೇ ನಾಮ ಫಲಕ ಇರಬೇಕು: ಅದು “ಮಾನವೀಯತೆ” ಆಗಿರಬೇಕು ಎಂದು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ ಕಂಗನಾ, ಒಪ್ಪುವೆ, ಹಲಾಲ್ ಬದಲು ಮಾನವೀಯತೆ ಎಂದು ಹಾಕಬೇಕು ಎಂದಿದ್ದಾರೆ.
ಕನ್ವರ್ ಯಾತ್ರಾ ಮಾರ್ಗದಲ್ಲಿ ಅಂಗಡಿಗಳು ಮತ್ತು ಆಹಾರ ತಿನಿಸು ಮಾರುವ ಗಾಡಿಗಳ ಮೇಲೆ ಮಾಲೀಕರು ಹೆಸರನ್ನು ಬರೆಯಬೇಕು ಎಂದು ಉತ್ತರ ಪ್ರದೇಶ ಸರ್ಕಾರದ ಆದೇಶ ಹೊರಡಿಸಿದ ನಂತರ ಈ ವಿವಾದವುಂಟಾಗಿದೆ.
Agree, Halal should be replaced with “ HUMANITY” https://t.co/EqbGml2Yew
— Kangana Ranaut (@KanganaTeam) July 19, 2024
ಈ ಆದೇಶವನ್ನು ಖಂಡಿಸಿರುವ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಇದು ಭಾರತದಲ್ಲಿ ಮುಸ್ಲಿಮರ ಮೇಲಿನ ದ್ವೇಷವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
Fear on UP’s kanwar routes:
This is The reality of hatred for Indian Muslims ,credit for this visceral hatred goes to political parties /leaders of Hindutva and so called lip servicing Secular parties.
https://t.co/JzYfLp1l2N— Asaduddin Owaisi (@asadowaisi) July 20, 2024
ಮೊಟ್ಟೆಯ ಅಂಗಡಿಯೊಂದರಲ್ಲಿ ಮಾಲೀಕರ ಹೆಸರು ಪ್ರದರ್ಶಿಸಿರುವ ಫೋಟೊವೊಂದನ್ನು ಶೇರ್ ಮಾಡಿ ಟ್ವೀಟ್ ಮಾಡಿರುವ ಓವೈಸಿ”ಯುಪಿಯ ಕನ್ವರ್ ಮಾರ್ಗಗಳಲ್ಲಿ ಭಯ: ಇದು ಭಾರತೀಯ ಮುಸ್ಲಿಮರ ಮೇಲಿನ ದ್ವೇಷವನ್ನು ತೋರಿಸುತ್ತದೆ. ಈ ದ್ವೇಷದ ಶ್ರೇಯಸ್ಸು ರಾಜಕೀಯ ಪಕ್ಷಗಳು / ಹಿಂದುತ್ವದ ನಾಯಕರು ಮತ್ತು ಸೆಕ್ಯುಲರ್ ಪಕ್ಷಗಳು ಎಂದು ಕರೆಯಲ್ಪಡುವವರಿಗೆ ಸಲ್ಲುತ್ತದೆ” ಎಂದಿದ್ದಾರೆ.
ಕನ್ವರ್ ಮಾರ್ಗಗಳಲ್ಲಿನ ಆಹಾರ ಅಂಗಡಿಗಳಿಗೆ ಅವುಗಳ ಮಾಲೀಕರ ವಿವರಗಳನ್ನು ಪ್ರದರ್ಶಿಸಲು ನಿರ್ದೇಶಿಸಿರುವುದು ಸಂವಿಧಾನದ ವಿರುದ್ಧದ ದಾಳಿ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
“ನಮ್ಮ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಜಾತಿ, ಧರ್ಮ, ಭಾಷೆ ಅಥವಾ ಯಾವುದೇ ಆಧಾರದ ಮೇಲೆ ತಾರತಮ್ಯ ಮಾಡಬಾರದು ಎಂದು ಖಾತರಿಪಡಿಸುತ್ತದೆ. ಉತ್ತರ ಪ್ರದೇಶದಲ್ಲಿ ಗಾಡಿಗಳು, ಗೂಡಂಗಡಿಗಳು ಮತ್ತು ಅಂಗಡಿಗಳ ಮಾಲೀಕರ ಹೆಸರಿನ ಫಲಕಗಳನ್ನು ಹಾಕುವ ವಿಭಜಕ ಆದೇಶವು ನಮ್ಮ ಸಂವಿಧಾನ, ನಮ್ಮ ಪ್ರಜಾಪ್ರಭುತ್ವ ಮತ್ತು ನಮ್ಮ ಪಾರಂಪರಿಕ ಪರಂಪರೆಯ ಮೇಲಿನ ದಾಳಿಯಾಗಿದೆ€ ಎಂದು ಪ್ರಿಯಾಂಕಾ ಗಾಂಧಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ಕವಿ, ಸಾಹಿತಿ ಜಾವೇದ್ ಅಖ್ತರ್ ಕೂಡ ಘಟನೆಯ ಕುರಿತು ನಡೆಯುತ್ತಿರುವ ವಿವಾದದ ಬಗ್ಗೆ ಪ್ರತಿಕ್ರಿಯಿಸಿ ಆಡಳಿತವನ್ನು ತೀವ್ರವಾಗಿ ಟೀಕಿಸಿದ್ದಾರೆ.
ಇದನ್ನೂ ಓದಿ: ಸಂಸತ್ನಲ್ಲಿ ಆರ್ಥಿಕ ಸಮೀಕ್ಷೆ ವರದಿ ಮಂಡಿಸಿದ ಸಚಿವೆ ನಿರ್ಮಲಾ ಸೀತಾರಾಮನ್
” ಮುಜಾಫರ್‌ನಗರ ಯುಪಿ ಪೊಲೀಸರು ಮುಂದಿನ ದಿನಗಳಲ್ಲಿ ನಿರ್ದಿಷ್ಟ ಧಾರ್ಮಿಕ ಮೆರವಣಿಗೆಯ ಮಾರ್ಗದಲ್ಲಿ ಎಲ್ಲಾ ಅಂಗಡಿಗಳ ರೆಸ್ಟೋರೆಂಟ್‌ಗಳು ಮತ್ತು ವಾಹನಗಳು ಸಹ ಮಾಲೀಕರ ಹೆಸರನ್ನು ಪ್ರಮುಖವಾಗಿ ಮತ್ತು ಸ್ಪಷ್ಟವಾಗಿ ತೋರಿಸಬೇಕು ಎಂದು ಸೂಚನೆ ನೀಡಿದ್ದಾರೆ. ಏಕೆ? ನಾಜಿ ಜರ್ಮನಿಯಲ್ಲಿ ಅವರು ನಿರ್ದಿಷ್ಟ ಅಂಗಡಿಗಳು ಮತ್ತು ಮನೆಗಳ ಮೇಲೆ ಮಾತ್ರ ಗುರುತು ಹಾಕುತ್ತಿದ್ದರು ಎಂದು ಜಾವೇದ್ ಅಖ್ತರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:49 pm, Mon, 22 July 24