Chintan Shivir ಬಿಜೆಪಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಗಾಂಧೀಜಿ ಹಂತಕರನ್ನು ವೈಭವೀಕರಿಸುತ್ತಿದೆ: ಸೋನಿಯಾ ಗಾಂಧಿ
ಬಿಜೆಪಿ ಪಕ್ಷವು ಒಂದು ನಿರ್ದಿಷ್ಟ ವರ್ಗಕ್ಕೆ ಸೇರಿದ ಜನರನ್ನು ಗುರಿಯಾಗಿಸಿಕೊಂಡು ಮಹಾತ್ಮ ಗಾಂಧಿಯವರ ಹಂತಕರನ್ನು ವೈಭವೀಕರಿಸುತ್ತಿದೆ ಎಂದು ಸೋನಿಯಾ ಹೇಳಿದ್ದಾರೆ
ಉದಯಪುರ: ಉದಯಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಚಿಂತನ್ ಶಿವಿರ್‌ನಲ್ಲಿ(Chintan Shivir) ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi), ಅಲ್ಪಸಂಖ್ಯಾತರ ಮೇಲಿನ ಇತ್ತೀಚಿನ ಹಿಂಸಾಚಾರದ ಬಗ್ಗೆ ಬಿಜೆಪಿಯನ್ನು(BJP) ತರಾಟೆಗೆ ತೆಗೆದುಕೊಂಡರು. ಬಿಜೆಪಿ ಪಕ್ಷವು ಒಂದು ನಿರ್ದಿಷ್ಟ ವರ್ಗಕ್ಕೆ ಸೇರಿದ ಜನರನ್ನು ಗುರಿಯಾಗಿಸಿಕೊಂಡು ಮಹಾತ್ಮ ಗಾಂಧಿಯವರ ಹಂತಕರನ್ನು ವೈಭವೀಕರಿಸುತ್ತಿದೆ ಎಂದು ಸೋನಿಯಾ ಹೇಳಿದ್ದಾರೆ. ‘ ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ಎಂಬ ತಮ್ಮ ಘೋಷವಾಕ್ಯದ ಮೂಲಕ ಪ್ರಧಾನಿ ಮೋದಿ ಮತ್ತು ಅವರ ಸಹೋದ್ಯೋಗಿಗಳು ನಿಜವಾಗಿಯೂ ಏನನ್ನು ಅರ್ಥೈಸುತ್ತಾರೆ ಎಂಬುದು ಸ್ಪಷ್ಟವಾಗಿದೆ. ಇದರರ್ಥ ದೇಶವನ್ನು ಶಾಶ್ವತ ಧ್ರುವೀಕರಣದ ಸ್ಥಿತಿಯಲ್ಲಿ ಇರಿಸುವುದು, ನಿರಂತರ ಭಯ ಮತ್ತು ಅಭದ್ರತೆಯ ಸ್ಥಿತಿಯಲ್ಲಿ ಬದುಕಲು ಜನರನ್ನು ಒತ್ತಾಯಿಸುವುದು, ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿರುವ ಅಲ್ಪಸಂಖ್ಯಾತರನ್ನು ಕ್ರೂರವಾಗಿ ಗುರಿಯಾಗಿಸುವುದು ಮತ್ತು ಬಲಿಪಶು ಮಾಡುವುದು ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.
LIVE: Congress President Smt. Sonia Gandhi ji’s address at ‘Nav Sankalp Chintan Shivir’ in Udaipur, Rajasthan https://t.co/5qm9tq5I3v
ಇದನ್ನೂ ಓದಿ— Rahul Gandhi (@RahulGandhi) May 13, 2022
ಬಿಜೆಪಿ, ಆರೆಸ್ಸೆಸ್ ಮತ್ತು ಅದರ ಅಂಗಸಂಸ್ಥೆಗಳ ನೀತಿಗಳ ಪರಿಣಾಮವಾಗಿ ದೇಶವು ಎದುರಿಸುತ್ತಿರುವ ಹಲವಾರು ಸವಾಲುಗಳನ್ನು ನಮ್ಮ ನಡುವೆ ಚರ್ಚಿಸಲು ನವ ಸಂಕಲ್ಪ ಚಿಂತನ್ ಶಿವಿರ್ ನಮಗೆ ಅವಕಾಶವನ್ನು ನೀಡುತ್ತದೆ. ನಮ್ಮ ಮುಂದಿರುವ ಅನೇಕ ಕಾರ್ಯಗಳ ಬಗ್ಗೆ ಚರ್ಚಿಸಲು ಇದು ಒಂದು ಸಂದರ್ಭವಾಗಿದೆ. ಇದು ರಾಷ್ಟ್ರೀಯ ವಿಷಯಗಳ ಬಗ್ಗೆ ಚಿಂತನೆ ಮತ್ತು ನಮ್ಮ ಪಕ್ಷದ ಸಾಂಸ್ಥಿಕ ರಚನೆಯ ಬಗ್ಗೆ ಆತ್ಮಚಿಂತನೆಯಾಗಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
ಶಿವಿರ್‌ನಲ್ಲಿ ಬಹಿರಂಗವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಂತೆ ನಾನು ಪಕ್ಷದವರಲ್ಲಿ ಒತ್ತಾಯಿಸುತ್ತೇನೆ. ಬಲವಾದ ಪಕ್ಷ ಮತ್ತು ಏಕತೆಯ ಒಂದು ಸಂದೇಶವು ದೇಶಕ್ಕೆ ಹೋಗಬೇಕು. ನಾವು ವೈಯಕ್ತಿಕ ಮಹತ್ವಾಕಾಂಕ್ಷೆಗಳಿಗಿಂತ ಸಂಘಟನೆಯನ್ನು ಇಟ್ಟುಕೊಳ್ಳಬೇಕು, ಪಕ್ಷ ನಮಗೆ ಸಾಕಷ್ಟು ನೀಡಿದೆ ಮತ್ತು ಮರುಪಾವತಿ ಮಾಡುವ ಸಮಯ ಬಂದಿದೆ. ಸಂಘಟನೆಯಲ್ಲಿ ಬದಲಾವಣೆಗಳು ಇಂದಿನ ಅಗತ್ಯ, ನಾವು ನಮ್ಮ ಕೆಲಸದ ವಿಧಾನವನ್ನು ಬದಲಾಯಿಸಬೇಕಾಗಿದೆ. ರಾಷ್ಟ್ರೀಯ ವಿಷಯಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ನಾವು ಈ ಸಮಯವನ್ನು ತೆಗೆದುಕೊಳ್ಳಬೇಕು ಎಂದು ಸೋನಿಯಾ ಗಾಂಧಿ ಪಕ್ಷದ ಸದಸ್ಯರಿಗೆ ಹೇಳಿದ್ದಾರೆ.
ಹೊಸ ಮುಖಗಳನ್ನು ನಾಯಕತ್ವದ ಮಟ್ಟಕ್ಕೆ ತರಲು ಆಮೂಲಾಗ್ರ ಆಲೋಚನೆಯನ್ನು ಕಾಂಗ್ರೆಸ್ ಉನ್ನತ ನಾಯಕರು ಸಕ್ರಿಯವಾಗಿ ಪರಿಗಣಿಸುತ್ತಿದ್ದಾರೆ. ರಾಜ್ಯಸಭಾ ಸದಸ್ಯರ ಅವಧಿಯ ಮಿತಿಯನ್ನು ಹಾಕುವುದರ ಜೊತೆಗೆ ಸಂಘಟನೆಯಲ್ಲಿ ಎಲ್ಲಾ ಹಂತಗಳಲ್ಲಿ ಸ್ಥಾನಗಳನ್ನು ಅಲಂಕರಿಸಲು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ನಾಯಕರಿಗೆ ವಯಸ್ಸಿನ ಮಿತಿಯನ್ನು ವಿಧಿಸಲು ಪಕ್ಷವು ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನು ಇಂಗ್ಲಿಷ್ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ
ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:04 pm, Fri, 13 May 22