AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪಘಾತ ಪರಿಹಾರ ಪಡೆಯಲು, ಉದ್ಯೋಗಿಯ ಸ್ಯಾಲರಿ ಸ್ಲಿಪ್ ಸಾಕು: ಬಾಂಬೆ ಹೈಕೋರ್ಟ್

ಅಪಘಾತದ ಪರಿಹಾರ ಪಡೆಯಲು ಉದ್ಯೋಗಿಯ ಸ್ಯಾಲರಿ ಸ್ಲಿಪ್ (Salary Slip) ಸಾಕು ಯಾವುದೇ ಪ್ರಮಾಣಪತ್ರ ಬೇಕಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. 26 ವರ್ಷದ ವ್ಯಕ್ತಿಯೊಬ್ಬ ಅಪಘಾತದಲ್ಲಿ ಮೃತಪಟ್ಟಿದ್ದು, ಮೋಟಾರ್ ಆಕ್ಸಿಡೆಂಟ್ ಕ್ಲೇಮ್ ಟ್ರಿಬ್ಯುನಲ್ MACT ಪ್ರಕಾರ ವಿಮಾ ಕಂಪನಿಯು ವ್ಯಕ್ತಿಯ ಕುಟುಂಬಕ್ಕೆ 40.22 ಲಕ್ಷ ರೂ. ನೀಡಬೇಕಿದೆ. ಆದರೆ ಇದಕ್ಕೆ ವಿಮಾ ಕಂಪನಿ ಆಕ್ಷೇಪ ವ್ಯಕ್ತಪಡಿಸಿದೆ.

ಅಪಘಾತ ಪರಿಹಾರ ಪಡೆಯಲು, ಉದ್ಯೋಗಿಯ ಸ್ಯಾಲರಿ ಸ್ಲಿಪ್ ಸಾಕು: ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್
Follow us
TV9 Web
| Updated By: ನಯನಾ ರಾಜೀವ್

Updated on: May 09, 2022 | 11:34 AM

ಮುಂಬೈ: ಅಪಘಾತದ ಪರಿಹಾರ ಪಡೆಯಲು ಉದ್ಯೋಗಿಯ ಸ್ಯಾಲರಿ ಸ್ಲಿಪ್ (Salary Slip) ಸಾಕು ಯಾವುದೇ ಪ್ರಮಾಣಪತ್ರ ಬೇಕಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. 26 ವರ್ಷದ ವ್ಯಕ್ತಿಯೊಬ್ಬ ಅಪಘಾತದಲ್ಲಿ ಮೃತಪಟ್ಟಿದ್ದು, ಮೋಟಾರ್ ಆಕ್ಸಿಡೆಂಟ್ ಕ್ಲೇಮ್ ಟ್ರಿಬ್ಯುನಲ್ MACT ಪ್ರಕಾರ ವಿಮಾ ಕಂಪನಿಯು ವ್ಯಕ್ತಿಯ ಕುಟುಂಬಕ್ಕೆ 40.22 ಲಕ್ಷ ರೂ. ನೀಡಬೇಕಿದೆ. ಆದರೆ ಇದಕ್ಕೆ ವಿಮಾ ಕಂಪನಿ ಆಕ್ಷೇಪ ವ್ಯಕ್ತಪಡಿಸಿದೆ. ಕೇವಲ ಸ್ಯಾಲರಿ ಸ್ಲಿಪ್ ಇಟ್ಟುಕೊಂಡು ಅಷ್ಟೊಂದು ಮೊತ್ತವನ್ನು ನೀಡಲು ಸಾಧ್ಯವಿಲ್ಲ, ಪ್ರಮಾಣಪತ್ರ ಬೇಕೇ ಬೇಕು ಎಂದು ಹೇಳಿದೆ.

ಆದರೆ ಕೋರ್ಟ್ ಈ ಕುರಿತು ತೀರ್ಪು ನೀಡಿದ್ದು, ಒಬ್ಬ ವ್ಯಕ್ತಿಯು ಪಡೆಯುವ ಸಂಬಳವನ್ನು ಸಾಬೀತುಪಡಿಸಲು ಸಂಬಂಧಿತ ಅಧಿಕಾರಿಗಳು ನೀಡಿದ ಪ್ರಮಾಣಪತ್ರದ ಅನುಪಸ್ಥಿತಿಯಲ್ಲಿ ಸಂಬಳದ ಪುರಾವೆಯಾಗಿ ವೃತ್ತಿಪರ ತೆರಿಗೆಯ ಪ್ರಮಾಣಿತ ಕಡಿತವನ್ನು ತೋರಿಸುವ ಸ್ಯಾಲರಿ ಸ್ಲಿಪ್ ಸಾಕು ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.

ತಾಯಿ ಪರ ವಾದ ಮಂಡಿಸಿದ ವಕೀಲ ಬಲಿರಾಮ್ ಕಾಂಬಳೆ, ಸಂಬಳದ ಚೀಟಿಯ ಹೊರತಾಗಿ ಎಂಎಸಿಟಿಗೆ ನಮೂನೆ 16 ಅನ್ನು ಸಹ ಒದಗಿಸಲಾಗಿದೆ ಹಾಗಾಗಿ ಸಾಕ್ಷ್ಯ ಕಾಯಿದೆಯಲ್ಲಿ ಅಗತ್ಯವಿರುವ ಪ್ರಮಾಣಪತ್ರವನ್ನು ಸಲ್ಲಿಸಲಾಗಿಲ್ಲ. ನಮ್ಮಿಂದ ಯಾವುದೇ ತಪ್ಪಾಗಿಲ್ಲ ಎಂದಿದ್ದಾರೆ.

ಮೂಲ ವೇತನ(ಬೆಸಿಕ್ ಸ್ಯಾಲರಿ) ಸ್ಯಾಲರಿ ಸ್ಲಿಪ್ ನಲ್ಲಿ ಮೂಲ ವೇತನ ಎನ್ನುವುದು ತುಂಬಾ ಮಹತ್ವಪೂರ್ಣವಾಗಿರುವ ಅಂಶ. ಸಂಬಳದ ಒಟ್ಟು ಮೊತ್ತದಲ್ಲಿ ಅತಿ ಹೆಚ್ಚಿನ ಪ್ರಮಾಣವನ್ನು ಮೂಲ ವೇತನದ ರೂಪದಲ್ಲಿ ಉದ್ಯೋಗಿಗಳು ಪಡೆಯುತ್ತಾರೆ. ಇದು ಕಂಪನಿಯ ನೀತಿ ಹಾಗೂ ವ್ಯಕ್ತಿಗಳ ವೇತನದ ಆಧಾರದ ಮೇಲೆ ಶೇಕಡಾವಾರು ಬದಲಾಗುತ್ತದೆ. ಮೂಲ ವೇತನದ ಮೇಲೆ ತೆರಿಗೆ ವಿಧಿಸಲಾಗುತ್ತದೆ ಎಂಬುದನ್ನು ಉದ್ಯೋಗಿಗಳು ಗಮನಿಸಬೇಕಾಗುತ್ತದೆ.

ಐಟಿ ರಿಟರ್ನ್ ಫಾರ್ಮ್ ನಂ.16 ರ ಆಧಾರದ ಮೇಲೆ ಆದಾಯವನ್ನು ಲೆಕ್ಕಾಚಾರ ಮಾಡುವಲ್ಲಿ ನ್ಯಾಯಮಂಡಳಿಯು ಸಂಪೂರ್ಣವಾಗಿ ಸಮರ್ಥವಾಗಿದೆ. ಆಕ್ಷೇಪಾರ್ಹ ಆದೇಶದಲ್ಲಿ ಯಾವುದೇ ಕಾನೂನು ದೌರ್ಬಲ್ಯ ಕಂಡುಬರದ ಕಾರಣ, ಮೇಲ್ಮನವಿಯು ವಜಾಗೊಳಿಸಲಾಗಿದೆ ಎಂದು ತೀರ್ಪು ನೀಡಿದೆ.

ಉದ್ಯೋಗಿಯ ಸಂಬಳವನ್ನು ಚಿತ್ರಿಸುವ ಐಟಿ ರಿಟರ್ನ್, ಅವನ ಗಳಿಕೆಯ ನಿರ್ಣಾಯಕ ಪುರಾವೆಯಾಗಿದೆ ಮತ್ತು ತಿಂಗಳಿಗೆ ರೂ.200/- ರಷ್ಟು ವೃತ್ತಿಪರ ತೆರಿಗೆಯನ್ನು ಕಡಿತಗೊಳಿಸುವುದರ ಮೂಲಕ ರೂ.2,400/- ಬರುತ್ತದೆ. ಯಾವುದೇ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದ ನಂತರ ಸ್ಯಾಲರಿ ಡಿಫರೆನ್ಸ್ ಮತ್ತು ಸ್ಯಾಲರಿ ಸ್ಲಿಪ್ ಬಗ್ಗೆ ತಪ್ಪದೆ ತಿಳಿದುಕೊಳ್ಳಬೇಕಾಗುತ್ತದೆ. ಸ್ಯಾಲರಿ ಸ್ಲಿಪ್ ಮೂಲ ವೇತನ, ಭತ್ಯೆ, ವೈದ್ಯಕೀಯ ಭತ್ಯೆ, ಪಿಎಫ್ ಮೊತ್ತ, ತೆರಿಗೆ ಕಡಿತ ಇತ್ಯಾದಿ ಅಂಶಗಳನ್ನು ಒಳಗೊಂಡಿದ್ದರೆ, ಸ್ಯಾಲರಿ ಡಿಫರೆನ್ಸ್ ಒಟ್ಟು ಸಂಬಳ, ನಿವ್ವಳ ಸಂಬಳ, ಟೇಕ್ ಹೋಮ್ ಸಂಬಳ, ಸಿಟಿಸಿ(ನೇರ ಲಾಭ, ಪರೋಕ್ಷ ಲಾಭ, ಉಳಿತಾಯ ಕೊಡುಗೆ) ಇತ್ಯಾದಿ ಅಂಶಗಳನ್ನು ಒಳಗೊಂಡಿರುತ್ತದೆ. ಒಟ್ಟು ಆದಾಯ ಮತ್ತು ನಿವ್ವಳ ಆದಾಯಗಳ ಬಗ್ಗೆ ವ್ಯತ್ಯಾಸ ಪರಿಹರಿಸಿಕೊಂಡರೆ ತೆರಿಗೆ ಪಾವತಿಗೂ ಅನುಕೂಲವಾಗುತ್ತದೆ.

ಸ್ಯಾಲರಿ ಡಿಫರೆನ್ಸ್ : ಒಟ್ಟು ಆದಾಯ (Gross Income) ಒಬ್ಬ ಉದ್ಯೋಗಿಯೂ ತಿಂಗಳ ಅವಧಿಗೆ ಪಡೆಯುವ ಸಂಪೂರ್ಣ ವೇತನ ಅಥವಾ ಆದಾಯವನ್ನು ಒಟ್ಟು ಆದಾಯ ಎನ್ನುತ್ತಾರೆ. ಇದರಲ್ಲಿ ಯಾವುದೇ ರೀತಿಯ ಕಡಿತ ಇರುವುದಿಲ್ಲ. ಉದಾಹರಣೆ ವಿನೋದ ಎಂಬ ವ್ಯಕ್ತಿಯೂ ತಿಂಗಳಿಗೆ 50,000 ರೂ. ಒಟ್ಟು ಆದಾಯ ಗಳಿಸುತ್ತಿದ್ದಾರೆ ಎಂದುಕೊಳ್ಳೋಣ. ಅದು ಆತನ ಒಟ್ಟು ಆದಾಯವಾಗಿರುತ್ತದೆ. ಮೂಲ ವೇತನ, ಎಚ್ಆರ್ಎ, ಭತ್ಯೆ, ವೈದ್ಯಕೀಯ ಭತ್ಯೆ, ವಿಶೇಷ ಭತ್ಯೆ, ಪಿಎಫ್ ಮೊತ್ತ, ತೆರಿಗೆ ಕಡಿತ ಇತ್ಯಾದಿ ಅಂಶಗಳನ್ನು ಒಳಗೊಂಡಿರುತ್ತದೆ. ಯುಎಸ್ ಡಾಲರ್ ಜಿಗಿತ, ರೂಪಾಯಿ

ಮೌಲ್ಯ ಸಾರ್ವಕಾಲಿಕ ಕುಸಿತ -ನಿವ್ವಳ ಆದಾಯ/ಟೇಕ್ ಹೋಮ್ ಸ್ಯಾಲರಿ (Net Income) ತೆರಿಗೆ ಹಾಗೂ ಇನ್ನಿತರ ಕಡಿತದ ನಂತರ ಕೈಗೆ ಸಿಗುವ ಆದಾಯವೇ ನಿವ್ವಳ ಆದಾಯ. ನಿವ್ವಳ ಆದಾಯ ಯಾವಾಗಲೂ ಒಟ್ಟು ಆದಾಯಕ್ಕಿಂತ ಶೇ. 18-20ರಷ್ಟು ಕಡಿಮೆ ಇರುತ್ತದೆ. ಟಿಡಿಎಸ್ ಕಡಿತ ಮತ್ತು ಕಂಪನಿ ಪಾಲಿಸಿಗಳ ಅನ್ವಯ ಕಡಿತವಾಗಿ ಕೈಗೆ ಸೇರುವ ಮೊತ್ತವೇ ನಿವ್ವಳ ಆದಾಯ. ನಿವ್ವಳ ಆದಾಯ= ಒಟ್ಟು ಆದಾಯ-ಆದಾಯ ತೆರಿಗೆ-ಪಿಎಫ್-ವೃತ್ತಿಪರ ತೆರಿಗೆ

– ಸಿಟಿಸಿ(Cost to Company) ಕಾಸ್ಟ್ ಟು ಕಂಪನಿ (ಸಿಟಿಸಿ)ಅಂದರೆ ಏನು? ಸಿಬ್ಬಂದಿಗೆ ಕಂಪನಿ ಕೊಡಮಾಡುವ ಮೊತ್ತವನ್ನು ಕಾಸ್ಟ್ ಟು ಕಂಪನಿ ಎಂದು ಕರೆಯಬಹುದು. ಇದು ಬೋನಸ್ ಮತ್ತಿತರ ಸಂಗತಿಗಳನ್ನು ಒಳಗೊಂಡಿರುತ್ತದೆ. ಭವಿಷ್ಯ ನಿಧಿ ಸಹ ಸಿಟಿಸಿ ಗೆ ಸೇರ್ಪಡೆಯಾಗಿರುತ್ತದೆ. ಹಾಗಾಗಿ ನಿಮಗೆ ಕಂಪನಿ ವೇತನದ ಆಫರ್ ನೀಡಿದ ಮೊತ್ತಕ್ಕಿಂತ ಶೇ. 10-20 ರಷ್ಟು ಕಡಿಮೆ ಹಣ ಕೈ ಸೇರುತ್ತದೆ.

ಅಂದರೆ ಪಿಎಫ್ ಮತ್ತಿತರ ಮೊತ್ತವನ್ನು ಕಡಿತ ಮಾಡಿಕೊಳ್ಳಲಾಗುತ್ತದೆ. ಅಪಾಯಿಂಟ್ ಮೆಂಟ್ ಲೆಟರ್ ನಲ್ಲಿ ಇರುವ ಮೊತ್ತಕ್ಕೂ ಪಾವತಿಯಾದ ಮೊತ್ತಕ್ಕೂ ಏನೋ ವ್ಯತ್ಯಾಸವಾದಂತೆ ಅನಿಸುತ್ತದೆ. ಸಿಟಿಸಿ ಮೂಲ ವೇತನ,  ವೈದ್ಯಕೀಯ ಭತ್ಯೆ, ಇಪಿಎಫ್ ಕೊಡುಗೆ, ಗ್ರ್ಯಾಚುಯಿಟಿ, ವಿಶೇಷ ಭತ್ಯೆ ಹೊಂದಿರುತ್ತದೆ. ಸಿಟಿಸಿ= ನೇರ ಲಾಭ+ಪರೋಕ್ಷ ಲಾಭ+ಉಳಿತಾಯ ಕೊಡುಗೆಗಳು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ