ನೋಡನೋಡುತ್ತಿದ್ದಂತೆ ಕಾರಿನಡಿ ಸಿಲುಕಿದ ಬಿಜೆಪಿ ನಾಯಕನ 6 ವರ್ಷದ ಮಗ

ಛತ್ತೀಸ್‌ಗಢದ ಬಿಜೆಪಿ ನಾಯಕನ 6 ವರ್ಷದ ಮಗ ಅಂಬಿಕಾಪುರದಲ್ಲಿ ತನ್ನ ಚಿಕ್ಕಮ್ಮನ ಮನೆಯ ಹೊರಗೆ ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಕಾರಿನಡಿ ಸಿಲುಕಿ ನಜ್ಜುಗುಜ್ಜಾಗಿ ಸಾವನ್ನಪ್ಪಿದ್ದಾನೆ. ಈ ಘಟನೆಯ ನಂತರ ಕಾಲೋನಿಯ ಜನರು ಮತ್ತು ಬಿಜೆಪಿ ನಾಯಕನ ಕುಟುಂಬಸ್ಥರು ಕಾರಿನ ಚಾಲಕನನ್ನು ಹಿಡಿದು ಥಳಿಸಿದ್ದಾರೆ.

ನೋಡನೋಡುತ್ತಿದ್ದಂತೆ ಕಾರಿನಡಿ ಸಿಲುಕಿದ ಬಿಜೆಪಿ ನಾಯಕನ 6 ವರ್ಷದ ಮಗ
ಕಾರಿನಡಿ ಸಿಲುಕಿದ ಬಿಜೆಪಿ ನಾಯಕನ 6 ವರ್ಷದ ಮಗ
Follow us
|

Updated on: Oct 18, 2024 | 5:12 PM

ನವದೆಹಲಿ: ಛತ್ತೀಸ್‌ಗಢದ ಬಿಜೆಪಿ ನಾಯಕ ಧೀರಜ್ ಸಿಂಗ್ ದೇವ್ ಅವರ 6 ವರ್ಷದ ಮಗ ಮಂಗಳವಾರ ರಾತ್ರಿ ಅಂಬಿಕಾಪುರದಲ್ಲಿರುವ ತನ್ನ ಚಿಕ್ಕಮ್ಮನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಕಾರಿನಡಿ ಸಿಲುಕಿ ಸಾವನ್ನಪ್ಪಿದ್ದಾನೆ. ಈ ಘಟನೆಯ ನಂತರ, ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆ ಮಗು ಚಿಕಿತ್ಸೆ ವೇಳೆ ಸಾವನ್ನಪ್ಪಿದೆ.

ಈ ಘಟನೆ ಮನೆಯ ಸಮೀಪದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 6 ವರ್ಷದ ಹುಡುಗ ಬೇರೆ ಮಕ್ಕಳು ಮತ್ತು ಮಹಿಳೆಯೊಂದಿಗೆ ಬ್ಯಾಡ್ಮಿಂಟನ್ ಆಡುತ್ತಿರುವುದನ್ನು ಕಾಣಬಹುದು. ಆಗ ಆ ಬಾಲಕ ರಸ್ತೆಯ ಮಧ್ಯ ಕುಳಿತು ಏನೋ ಮಾಡುತ್ತಿದ್ದ. ಆಗ ಹಿಂದಿನಿಂದ ಬಂದ ಒಂದು ಕಾರು ತಿರುವಿನಲ್ಲಿ ಕುಳಿತಿದ್ದ ಮಗುವಿನ ಮೇಲೆ ಹರಿದಿದೆ. ಇದರಿಂದ ಆ ಬಾಲಕ ಕಾರಿನಡಿ ಸಿಲುಕಿ ಗಾಯಗೊಂಡಿದ್ದಾನೆ.

ಇದನ್ನೂ ಓದಿ: ಓವರ್‌ಟೇಕ್ ಮಾಡಿದ್ದಕ್ಕೆ ಯುವಕನಿಗೆ ಹೊಡೆದು ಕೊಲೆ; ಮಗನ ಮೇಲೆ ಮಲಗಿ ಬೇಡಿಕೊಂಡ ಅಮ್ಮ!

ವರದಿಗಳ ಪ್ರಕಾರ, ಈ ಘಟನೆಯ ನಂತರ ಕಾಲೋನಿಯ ಜನರು ಮತ್ತು ಬಿಜೆಪಿ ನಾಯಕನ ಸೋದರ ಮಾವ ಅಭಿಷೇಕ್ ಸಿಂಗ್ ಆರೋಪಿ ಚಾಲಕನನ್ನು ಹಿಡಿದು ಕೆಟ್ಟದಾಗಿ ಥಳಿಸಿದ್ದಾರೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಲಾಯಿತು. ಈ ನಡುವೆ ಸಂತ್ರಸ್ತೆಯ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ