ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸಿಗುತ್ತಿದ್ದ ಖಾಯಂ ಸದಸ್ಯತ್ವವನ್ನ ನೆಹರು ಬಿಟ್ಟುಕೊಟ್ಟಿದ್ದರಿಂದ ಚೀನಾಗೆ ಲಭಿಸಿತು : ಪ್ರಲ್ಹಾದ್ ಜೋಶಿ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಪಡೆಯಲು ಚೀನಾಗೆ ನೆಹರು ನೆರವಾಗಿದ್ದರು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸಿಗುತ್ತಿದ್ದ ಖಾಯಂ ಸದಸ್ಯತ್ವವನ್ನ ನೆಹರು ಬಿಟ್ಟುಕೊಟ್ಟಿದ್ದರಿಂದ ಚೀನಾಗೆ ಲಭಿಸಿತು : ಪ್ರಲ್ಹಾದ್ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿImage Credit source: The Financial Express
Follow us
| Updated By: ವಿವೇಕ ಬಿರಾದಾರ

Updated on:Dec 16, 2022 | 11:04 PM

ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಪಡೆಯಲು (Nations Security Council permanent membership) ಚೀನಾಗೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು (Jawaharlal Nehru) ನೆರವಾಗಿದ್ದರು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ.

ಚೀನಾ-ಭಾರತ ಗಡಿ ಸಂಘರ್ಷ ಕುರಿತಂತೆ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ ಅವರು ಚೀನಾ ಭಾರತ ಯುದ್ಧದ ಸಂದರ್ಭದಲ್ಲಿ ನೆಹರು ಹೇಗೆ ದಡ್ಡತನದಿಂದ ನಡೆದುಕೊಂಡರು ಎಂಬುದು ಜನರ ಮುಂದಿದೆ. ಅಲ್ಲದೇ ಅಂದು ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸಿಗಬೇಕಾಗಿದ್ದ ಕಾಯಂ ಸದಸ್ಯತ್ವವನ್ನ ನೆಹರು ಬಿಟ್ಟುಕೊಟ್ಟಿದ್ದರಿಂದ ಚೀನಾಗೆ ಲಾಭವಾಯ್ತು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಚೀನಾ ಯುದ್ಧಕ್ಕೆ ಅಣಿಯಾಗುತ್ತಿದೆ, ಇಲ್ಲಿ ಕೇಂದ್ರ ಸರ್ಕಾರ ನಿದ್ದೆ ಮಾಡುತ್ತಿದೆ: ರಾಹುಲ್ ಗಾಂಧಿ

ಇನ್ನು, ರಾಹುಲ್ ಗಾಂಧಿಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ, ಏಕೆಂದರೆ ರಾಹುಲ್ ಗಾಂಧಿ ಅವರಿಗೆ ಬರವಣಿಗೆಯಲ್ಲಿ ಕೊಟ್ಟದ್ದನ್ನು ಮಾತ್ರ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದರು.

ರಾಜೀವ್ ಗಾಂಧಿ ಫೌಂಡೇಶನ್ ಚೀನಾದಿಂದ ಹಣವನ್ನು ತೆಗೆದುಕೊಂಡಿದೆ. ಇದು ಒಂದು ರೀತಿಯ ಭ್ರಷ್ಟಾಚಾರ. ನೆಹರು ಮತ್ತು ಕಾಂಗ್ರೆಸ್ ಆಡಳಿತದಲ್ಲಿ ನಮ್ಮ ಭೂಮಿ ಚೀನಾಕ್ಕೆ ಹೋಯಿತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಗಡಿಯಲ್ಲಿ ಚೀನಾ ದೇಶವನ್ನ ನಮ್ಮ ಭಾರತ ಸಮರ್ಥವಾಗಿ ಎದುರಿಸಿದೆ. ಚೀನಾ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವ ರಾಹುಲ್ ಗಾಂಧಿ ಹಾಗು ಕಾಂಗ್ರೆಸ್ ಭಾರತದ ಪರ ಇದ್ದಾರೋ ಅಥವಾ ಚೀನಾ ಪರವೋ ಎಂದು ಪ್ರಶ್ನಿಸಿದರು.

ಇಂಥಹ ಸಂದರ್ಭದಲ್ಲಿ ವಿಪಕ್ಷವಾಗಿ ಕಾಂಗ್ರೆಸ್ ದೇಶದ ಪರ ನಿಲ್ಲಬೇಕು. ಆದರೆ ರಾಹುಲ್ ಗಾಂಧಿ ಅವರಿಗೆ ಇದೆಲ್ಲ ಅರ್ಥವಾಗಲ್ಲ. ಅವರನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:52 pm, Fri, 16 December 22