ರಾಷ್ಟ್ರೀಯ ಹಿತಾಸಕ್ತಿಗೆ ಅಗತ್ಯ ಕ್ರಮ; ಗಡಿಯಲ್ಲಿ ಚೀನಿ ಫಿರಂಗಿ ನಿಯೋಜಿಸಿದ ಪಾಕಿಸ್ತಾನಕ್ಕೆ ಭಾರತ ಎಚ್ಚರಿಕೆ

ಭಾರತದ ಗಡಿಯ ಬಳಿ ಪಾಕಿಸ್ತಾನವು ಚೀನಾ ನಿರ್ಮಿತ SH-15 ಮಾದರಿಯ ಬೃಹತ್ ಪ್ರಮಾಣದ ಸ್ವಯಂಚಾಲಿತ ಹಾಫಿಟ್ಜರ್ ಪಿರಂಗಿಗಳನ್ನು ನಿಯೋಜಿಸಿದೆ ಎಂಬ ವರದಿಗಳ ಬೆನ್ನಲ್ಲೇ, ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಏನು ಅಗತ್ಯವೋ ಅದನ್ನು ಮಾಡಲಾಗುವುದು ಎಂದು ಭಾರತ ಇಂದು ಸ್ಪಷ್ಟಪಡಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಗಡಿಯ ಭಯೋತ್ಪಾದನೆಯ ಕುರಿತು ಭಾರತದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಹೇಳಿದರು.

ರಾಷ್ಟ್ರೀಯ ಹಿತಾಸಕ್ತಿಗೆ ಅಗತ್ಯ ಕ್ರಮ; ಗಡಿಯಲ್ಲಿ ಚೀನಿ ಫಿರಂಗಿ ನಿಯೋಜಿಸಿದ ಪಾಕಿಸ್ತಾನಕ್ಕೆ ಭಾರತ ಎಚ್ಚರಿಕೆ
Randhir Jaiswal

Updated on: Aug 04, 2026 | 9:59 PM

ನವದೆಹಲಿ, ಆಗಸ್ಟ್ 4: ಪಾಕಿಸ್ತಾನವು (Pakistan) ಭಾರತದ ಗಡಿಯ ಬಳಿ ಚೀನಾ ನಿರ್ಮಿತ ಸುಮಾರು 250 SH-15 ಸ್ವಯಂಚಾಲಿತ ಹಾಫಿಟ್ಜರ್ ಪಿರಂಗಿಗಳನ್ನು ನಿಯೋಜಿಸಿದೆ. ಈ ವರದಿಗಳಿಗೆ ಭಾರತ ಪ್ರತಿಕ್ರಿಯೆ ನೀಡಿದ್ದು, “ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿ ಮತ್ತು ಸುರಕ್ಷತೆಯ ರಕ್ಷಣೆಗೆ ಅಗತ್ಯವಿರುವ ಯಾವುದೇ ಕ್ರಮ ಕೈಗೊಳ್ಳಲು ಸಿದ್ಧ” ಎಂದು ತಿಳಿಸಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗಡಿಯ ಭಯೋತ್ಪಾದನೆ ಮತ್ತು ದೇಶದ ಭದ್ರತೆಯ ವಿಷಯದಲ್ಲಿ ಭಾರತದ ನಿಲುವು ಸ್ಪಷ್ಟವಾಗಿದೆ. ಭಾರತೀಯ ಸೇನೆಯು ಯಾವಾಗಲೂ ಎಚ್ಚರಿಕೆಯಿಂದ ಇರುತ್ತದೆ ಎಂದು ಹೇಳಿದರು.

ಪಾಕಿಸ್ತಾನ ತನ್ನ ಸಶಸ್ತ್ರ ಪಡೆಗಳ ಆಧುನಿಕೀಕರಣದ ಭಾಗವಾಗಿ ಚೀನಾದ ನೋರಿಂಕೋ ಕಂಪನಿಯಿಂದ ಪಡೆದ 155mm ಕ್ಯಾಲಿಬರ್ SH-15 ಟ್ರಕ್ ಆಧಾರಿತ ಹಾಫಿಟ್ಜರ್‌ಗಳನ್ನು ಗಡಿ ಭಾಗಗಳಲ್ಲಿ ನಿಯೋಜಿಸಿದೆ. ಇವುಗಳನ್ನು ಪ್ರಮುಖವಾಗಿ ಭಾರತದ ಗಡಿಯ ಬಳಿ ಇರುವ ಗುಜರಾನ್‌ವಾಲಾ, ಸಿಯಾಲ್‌ಕೋಟ್ ಮತ್ತು ಜಲಾಲ್‌ಪುರ್ ಜಟ್ಟಾಂ ವಲಯಗಳಲ್ಲಿ ನಿಯೋಜಿಸಲಾಗಿದೆ. ಈ ಪಿರಂಗಿಗಳು ರಾಕೆಟ್-ಸಹಾಯದ ಶೆಲ್‌ಗಳನ್ನು ಬಳಸಿದರೆ 50 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದ ಗುರಿಗಳನ್ನು ತಲುಪುವ ಸಾಮರ್ಥ್ಯ ಹೊಂದಿವೆ.

ಇದನ್ನೂ ಓದಿ: ಪಿಒಕೆಯ ದೌರ್ಜನ್ಯಗಳಿಗೆ ಪಾಕಿಸ್ತಾನವನ್ನು ಹೊಣೆಗಾರರನ್ನಾಗಿ ಮಾಡಿ’: ಅಂತಾರಾಷ್ಟ್ರೀಯ ಸಮುದಾಯಕ್ಕೆ ಭಾರತ ಆಗ್ರಹ

ಭಾರತದ ಪ್ರತಿಕ್ರಿಯೆ:

“ಗಡಿಯಲ್ಲಿನ ಭಯೋತ್ಪಾದನೆ ತಕ್ಷಣ ನಿಲ್ಲಬೇಕು. ನಮ್ಮ ರಾಷ್ಟ್ರೀಯ ಹಿತಾಸಕ್ತಿಯ ರಕ್ಷಣೆಗೆ ಏನು ಅಗತ್ಯವೋ ಅದನ್ನು ಭಾರತ ಮಾಡಲಿದೆ. ಅದಕ್ಕಾಗಿ ನಮ್ಮ ಪಡೆಗಳು ಸದಾ ಸಿದ್ಧವಾಗಿವೆ” ಎಂದು ರಣಧೀರ್ ಜೈಸ್ವಾಲ್ ಸ್ಪಷ್ಟಪಡಿಸಿದ್ದಾರೆ. ಹಿಂದಿನ ಕಾರ್ಯಾಚರಣೆಗಳಲ್ಲಿ ಪಾಕಿಸ್ತಾನದ ಪ್ರಚೋದನೆಗೆ ಭಾರತೀಯ ಪಡೆಗಳು ಸೂಕ್ತ ಪ್ರತ್ಯುತ್ತರ ನೀಡಿದ್ದನ್ನು ಅವರು ನೆನಪಿಸಿದರು.


ಪಾಕಿಸ್ತಾನದಿಂದ ದೌರ್ಜನ್ಯ:

ಜೂನ್‌ನಿಂದ ಇದುವರೆಗೆ ಪಿಒಕೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಅಡಗಿಸಲು ಪಾಕಿಸ್ತಾನಿ ಪಡೆಗಳು ಕನಿಷ್ಠ 90 ನಾಗರಿಕನ್ನು ಹತ್ಯೆ ಮಾಡಿವೆ ಎಂದು ರಣಧೀರ್ ಜೈಸ್ವಾಲ್ ಆರೋಪಿಸಿದರು. ಪಾಕಿಸ್ತಾನವು ತನ್ನ ಮಣ್ಣಿನಲ್ಲಿ ಬೆಳೆಯುತ್ತಿರುವ ಭಯೋತ್ಪಾದಕ ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಬೇಕು ಎಂದು ಭಾರತ ಪುನರುಚ್ಚರಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us