AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Kannada News Live Updates: ಇಲಾಖಾವಾರು ರಿಪೋರ್ಟ್ ಪರಿಶೀಲಿಸಲಿರುವ ಸಿಎಂ ಡಿಕೆಶಿ

Karnataka News Today Live Updates: ಎಸ್​ಐಆರ್​​ ವಿಚಾರವಾಗಿ ಕಾಂಗ್ರೆಸ್​​-ಬಿಜೆಪಿ ನಡುವೆ ಸಂಘರ್ಷ, ಫ್ಲೈದುಬೈ ವಿಮಾನದಲ್ಲಿ ನಡೆದ ದಾಳಿ ಘಟನೆ ಸೇರಿದಂತೆ ಇಂದಿನ ರಾಜ್ಯ, ದೇಶ, ಅಂತಾರಾಷ್ಟ್ರೀಯ, ಸಿನಿಮಾ ಮತ್ತು ಕ್ರೀಡೆ ಸಂಬಂಧಿತ ಪ್ರಮುಖ ಸುದ್ದಿಗಳ ಕ್ಷಣ ಕ್ಷಣದ ಅಪ್ಡೇಟ್ಸ್​​ ಇಲ್ಲಿದೆ.

TV9 Kannada News Live Updates:  ಇಲಾಖಾವಾರು ರಿಪೋರ್ಟ್ ಪರಿಶೀಲಿಸಲಿರುವ ಸಿಎಂ ಡಿಕೆಶಿ
ಡಿಕೆ ಶಿವಕುಮಾರ್​​Image Credit source: PTI
ಪ್ರಸನ್ನ ಹೆಗಡೆ
|

Updated on:Oct 05, 2026 | 7:16 AM

Share

LIVE NEWS & UPDATES

  • 05 Oct 2026 07:16 AM (IST)

    ಹಿಂದಿ ಬರದಿದ್ರೆ ಕೆಲಸ ಬಿಟ್ಟು ಹೋಗಿ: ಕನ್ನಡಿಗರಿಗೇ ಆವಾಜ್​​

    ಬೆಂಗಳೂರಿನ ಹುಸ್ಕೂರು‌ ಕೋಡಿಪಾಳ್ಯ ಬಳಿಯ ಕಂಪನಿಯಲ್ಲಿ ಹಿಂದಿ ಭಾಷಿಗ ಮೇಲ್ವಿಚಾರಕನೊಬ್ಬ ಕನ್ನಡಿಗರಿಗೆ ಆವಾಜ್​​ ಹಾಕಿರುವ ಘಟನೆ ನಡೆದಿದೆ. ಕೆಲಸಕ್ಕೆ ಬರಬೇಕು ಅಂದ್ರೆ ಹಿಂದಿ ಕಲಿತು ಬನ್ನಿ. ಇದು ಕರ್ನಾಟಕ ಆದರೇನು? ನಮ್ಗೆ ಹಿಂದಿ ಭಾಷೆ ನಡೆಯುತ್ತದೆ. ನಿಮಗೂ ಅದೇ ಭಾಷೆ ಬರಬೇಕು ತಾಕೀತು ಮಾಡಿದ್ದಾನೆ. ಘಟನೆಯ ವಿಡಿಯೋ ವೈರಲ್​​ ಆಗಿದೆ.

  • 05 Oct 2026 06:37 AM (IST)

    ಚುನಾವಣಾ ಆಯುಕ್ತರಿಗೆ ದೂರು ನೀಡಲಿರುವ ಬಿಜೆಪಿ – ಜೆಡಿಎಸ್​​

    ಚುನಾವಣಾ ಆಯೋಗದ ಕಚೇರಿ ಮುಂದೆ ಸಿಎಂ ಮತ್ತು ಸಚಿವರ ಧರಣಿ ವಿಚಾರ ಸಂಬಂಧ ಇಂದು ಚುನಾವಣಾ ಆಯೋಗಕ್ಕೆ ಬಿಜೆಪಿ – ಜೆಡಿಎಸ್​ನಿಂದ ದೂರು ಸಲ್ಲಿಕೆಯಾಗಲಿದೆ. ಸಾಂವಿಧಾನಿಕ ಸಂಸ್ಥೆಯ ಮೇಲೆ ಒತ್ತಡ ಹೇರಲಾಗಿದೆ ಎಂದು ಆರೋಪಿಸಿ ಕುಮಾರಸ್ವಾಮಿ, ಆರ್.ಅಶೋಕ್ ನೇತೃತ್ವದಲ್ಲಿ ಸಿಎಂ, ಸಚಿವರು, ‘ಕೈ’ ನಾಯಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮೈತ್ರಿ ಪಡೆ ದೂರು ನೀಡಲಿದೆ. ಚುನಾವಣಾ ಆಯೋಗದ ಮುಂದೆ ಧರಣಿ ನಡೆಸಿದರೂ ಕ್ರಮವಾಗಿಲ್ಲ. ಹೀಗಾಗಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯುಕ್ತರಿಗೆ ಆ ಮೂಲಕ ಆಗ್ರಹಿಸಲಿವೆ.

  • 05 Oct 2026 06:34 AM (IST)

    ಇಂದು ಮೈಸೂರು ಅರಮನೆಗೆ ಬರಲಿರುವ ಅಭಿಮನ್ಯು

    ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಇಂದು ಕಾಡಿನಿಂದ ನಾಡಿಗೆ ನಿಶಾನೆ ಆನೆ ಅಭಿಮನ್ಯು ಆಗಮಿಸಲಿದೆ. ಬೆಳಗ್ಗೆ 9 ಗಂಟೆಗೆ ಅರಮನೆಗೆ ಅಭಿಮನ್ಯು ಬರಲಿದ್ದು, ಚಿನ್ನದ ಅಂಬಾರಿ ಹೊರುವ ಕಾಯಕದಿಂದ ನಿವೃತ್ತಿ ಹೊಂದಿರುವ ಅಭಿಮನ್ಯು ಈ ಬಾರಿ ಮತ್ತೊಂದು ಮಹತ್ವದ ಜವಾಬ್ದಾರಿ ಹೊರಲಿದ್ದಾನೆ. ದಸರಾ ಮಹೋತ್ಸವದಲ್ಲೇ ಅಭಿಮನ್ಯುವಿಗೆ ಬೀಳ್ಕೊಡುಗೆ ನೀಡಬೇಕೆಂದು ಅಭಿಮನ್ಯು ಅಭಿಮಾನಿಗಳು ಒತ್ತಾಯಿಸಿದ್ದ ಹಿನ್ನೆಲೆ, ಅವರ ಆಸೆಯಂತೆ ಈ ಬಾರಿಯ ದಸರಾದಲ್ಲಿ ಅಭಿಮನ್ಯು ಭಾಗಿಯಾಗುತ್ತಿದ್ದಾನೆ.

  • 05 Oct 2026 06:32 AM (IST)

    ಬಾಗಲಕೋಟೆಗೆ ಭೇಟಿ ನೀಡಲಿರುವ ಬರ ಅಧ್ಯಯನ ತಂಡ

    ಬಾಗಲಕೋಟೆ ಜಿಲ್ಲೆಗೆ ಇಂದು ಡಾ.ಮಾನ್‌ಸಿಂಗ್ ನೇತೃತ್ವದ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಲಿದೆ. ಬೆಳಗ್ಗೆ 8.30ಕ್ಕೆ ಗುಳೇದಗುಡ್ಡ ತಾಲೂಕಿನ ಹಳದೂರಿಗೆ ಭೇಟಿ ನೀಡಿ, ಹುಸೇನಬಿ ಡಾಲಾಯತ್ ಹೊಲದಲ್ಲಿ ತಂಡ ಮೆಕ್ಕೆಜೋಳ ವೀಕ್ಷಿಸಲಿದೆ. ಬಳಿಕ ಬಾಗಲಕೋಟೆ ತಾಲೂಕಿನ ಶಿರೂರಿಗೆ ಭೇಟಿ ನೀಡುವ ತಂಡ, ರುದ್ರಪ್ಪರ ಕಬ್ಬು ಬೆಳೆ, ಬಸಯ್ಯ ಹೊಲದಲ್ಲಿ ಮೆಕ್ಕೆಜೋಳ ಬೆಳೆ ವೀಕ್ಷಣೆ ಮಾಡಲಿದೆ. ನಂತರ ಮಹಾಂತೇಶ್ ಗುಳೇದ ಹೊಲದಲ್ಲಿ ಈರುಳ್ಳಿ ಬೆಳೆ ವೀಕ್ಷಿಸಿ, ಭಗವತಿ ಕ್ರಾಸ್‌ನಲ್ಲಿ ಸೂರ್ಯಕಾಂತಿ, ತೊಗರಿ ಬೆಳೆಯ ಪರಿಶೀಲನೆ ನಡೆಸಲಿದೆ.  ಹುನಗುಂದ ತಾಲೂಕಿನ ಅಮರಾವತಿ, ಇಳಕಲ್ ತಾಲೂಕಿನ ಚಿಕ್ಕಕೊಡಗಲಿ, ಗುಗ್ಗಲಮರಿ‌ ಕ್ರಾಸ್‌ನಲ್ಲಿಯೂ ಬೆಳೆ ಹಾನಿ ಬಗ್ಗೆ ತಂಡ ಮಾಹಿತಿ ಕಲೆಹಾಕಲಿದೆ.

  • 05 Oct 2026 06:27 AM (IST)

    ಡಿಕೆಶಿ ನೇತೃತ್ವದಲ್ಲಿ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆ

    ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನೂರು ದಿನ ಪೂರೈಸಿರುವ ಹಿನ್ನೆಲೆಯಲ್ಲಿ ಇಲಾಖಾವಾರು ನೂರು ದಿನಗಳ ರಿಪೋರ್ಟ್ ಪರಿಶೀಲನೆಗೆ ಸಿಎಂ ಮುಂದಾಗಿದ್ದಾರೆ. ಇಂದು ಗೃಹ ಕಚೇರಿ ಕೃಷ್ಣದಲ್ಲಿ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆ ನಡೆಯಲಿದ್ದು, ಕೃಷಿ, ಜವಳಿ, ಸಕ್ಕರೆ, ತೋಟಗಾರಿಕೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಪಶುಸಂಗೋಪನೆ ಇಲಾಖೆ ಜೊತೆ ಮೀಟಿಂಗ್​​ ನಡೆಯಲಿದೆ. ಗಣಿ ಮತ್ತು ಭೂವಿಜ್ಞಾನ, ಸಣ್ಣ ಕೈಗಾರಿಕೆ ವಾಣಿಜ್ಯ ಮತ್ತು ಕೈಗಾರಿಕೆ , ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಿಂದಲೂ ಮುಖ್ಯಮಂತ್ರಿಗಳು ಮಾಹಿತಿ ಪಡೆಯಲಿದ್ದಾರೆ.

ಎಸ್​ಐಆರ್​​ ವಿಚಾರವಾಗಿ ಕಾಂಗ್ರೆಸ್​​-ಬಿಜೆಪಿ ನಡುವೆ ಸಂಘರ್ಷ ಮುಂದುರಿದಿದೆ. ಫಾರ್ಮ್​​ -7 ವಿಚಾರವಾಗಿ ರಾಜಕೀಯ ಬೆಳವಣಿಗೆಗಳು ತೀವ್ರಗೊಂಡಿದ್ದು, ದೂರು-ಪ್ರತಿದೂರುಗಳು ದಾಖಲಾಗುತ್ತಿವೆ. ಫ್ಲೈದುಬೈ ವಿಮಾನದಲ್ಲಿ ಮುಖ್ಯ ಪೈಲಟ್ ಮೇಲೆ ಸಹ ಪೈಲಟ್​​ನಿಂದ ದಾಳಿ ಘಟನೆ ಸಂಬಂಧವೂ ಮಹತ್ವದ ಅಪ್ಡೇಟ್ಸ್​​ಗಳು ಸಿಕ್ಕಿವೆ. ಮತ್ತೊಂದೆಡೆ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ತಯಾರಿಯೂ ಭರ್ಜರಿಯಿಂದ ನಡೆಯುತ್ತಿದೆ. ಇದರೊಂದಿಗೆ ಕರ್ನಾಟಕದ ಇತರ ವಿದ್ಯಮಾನಗಳು, ಬಿಗ್​ ಬಾಸ್ ಹಾಗೂ ಸಿನಿಮಾ ಸಂಬಂಧಿತ ಸುದ್ದಿಗಳು, ರಾಷ್ಟ್ರ-ಅಂತರರಾಷ್ಟ್ರೀಯ ಮಾಹಿತಿ, ಕ್ರೀಡಾ ವಿಷಯಗಳಿಗೆ ಸಂಬಂಧಿಸಿದ ತಾಜಾ ಮಾಹಿತಿ ಇಲ್ಲಿ ಲಭ್ಯ. ಅದಕ್ಕಾಗಿ ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Published On - Oct 05,2026 6:25 AM

Follow Us
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!