ಆಧಾರ್ ಡೇಟಾಬೇಸ್, ಟೈಮ್ಸ್ ಗ್ರೂಪ್ ಅನ್ನು ಗುರಿಯಾಗಿಸಿಕೊಂಡಿದ್ದಾರೆ ಚೀನಾದ ಹ್ಯಾಕರ್‌ಗಳು: ವರದಿ

ಸರ್ಕಾರಿ ಸಂಸ್ಥೆಯು ಅಂತಹ ಉಲ್ಲಂಘನೆಯ ಬಗ್ಗೆ ಯಾವುದೇ ಮಾಹಿತಿ ಹೊಂದಿಲ್ಲ ಮತ್ತು ಅದರ ಡೇಟಾಬೇಸ್ ಅನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ ಮತ್ತು ಮಲ್ಟಿಫ್ಯಾಕ್ಟರ್ ದೃಢೀಕರಣ ಹೊಂದಿರುವ ಬಳಕೆದಾರರಿಗೆ ಮಾತ್ರ ಲಭ್ಯವಿದೆ ಎಂದು ಹೇಳಿದೆ

ಆಧಾರ್ ಡೇಟಾಬೇಸ್, ಟೈಮ್ಸ್ ಗ್ರೂಪ್ ಅನ್ನು ಗುರಿಯಾಗಿಸಿಕೊಂಡಿದ್ದಾರೆ ಚೀನಾದ ಹ್ಯಾಕರ್‌ಗಳು: ವರದಿ
ಪ್ರಾತಿನಿಧಿಕ ಚಿತ್ರ

ದೆಹಲಿ: ಚೀನಾದ ಸರ್ಕಾರಿ ಪ್ರಾಯೋಜಿತ ಹ್ಯಾಕರ್‌ಗಳು ಜವಾಬ್ದಾರಿಯುತ ಭಾರತೀಯ ಸರ್ಕಾರಿ ಏಜೆನ್ಸಿಯಿಂದ ರಾಷ್ಟ್ರೀಯ ಗುರುತಿನ ಡೇಟಾಬೇಸ್‌ನ ಮತ್ತು ದೇಶದ ಅತಿದೊಡ್ಡ ಮಾಧ್ಯಮ ಸಮೂಹಗಳಲ್ಲಿ ಒಂದಾದ ಟೈಮ್ಸ್ ಗ್ರೂಪ್​​ನಿಂದ ಮಾಹಿತಿ ಕದ್ದಿದ್ದಾರೆ ಎಂದು ಸೈಬರ್‌ ಭದ್ರತಾ ಸಂಸ್ಥೆ ರೆಕಾರ್ಡ್ಡ್ ಫ್ಯೂಚರ್ ಇಂಕ್ (Recorded Future Inc) ವರದಿ ಮಾಡಿದೆ. ಆದಾಗ್ಯೂ ಸರ್ಕಾರಿ ಏಜೆನ್ಸಿ ಮತ್ತು ಮಾಧ್ಯಮ ಕಂಪನಿ ಈ ವಾದಗಳನ್ನು ತಳ್ಳಿ ಹಾಕಿದೆ. ಯುಐಡಿಎಐ(UIDAI) ಎಂದೂ ಕರೆಯಲ್ಪಡುವ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು 1 ಶತಕೋಟಿಗೂ ಹೆಚ್ಚು ಭಾರತೀಯ ನಾಗರಿಕರ ಖಾಸಗಿ ಬಯೋಮೆಟ್ರಿಕ್ ಮಾಹಿತಿಯನ್ನು ಒಳಗೊಂಡಿದೆ. ಈ ವರ್ಷದ ಜೂನ್ ಮತ್ತು ಜುಲೈ ನಡುವೆ ಟ್ರ್ಯಾಕ್ ಮಾಡಿದ ಒಳನುಸುಳುವಿಕೆಯ ಸಮಯದಲ್ಲಿ ಪ್ರಾಧಿಕಾರದ ನೆಟ್ವರ್ಕ್  ಮುರಿದುಹೋಗಿವೆ ಎಂದು ನಂಬಲಾಗಿದೆ. ಆದರೂ ರೆಕಾರ್ಡ್ಡ್ ಫ್ಯೂಚರ್ ಪ್ರಕಾರ ಯಾವ ಡೇಟಾವನ್ನು ತೆಗೆದುಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.

ಸರ್ಕಾರಿ ಸಂಸ್ಥೆಯು ಅಂತಹ ಉಲ್ಲಂಘನೆಯ ಬಗ್ಗೆ ಯಾವುದೇ ಮಾಹಿತಿ ಹೊಂದಿಲ್ಲ ಮತ್ತು ಅದರ ಡೇಟಾಬೇಸ್ ಅನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ ಮತ್ತು ಮಲ್ಟಿಫ್ಯಾಕ್ಟರ್ ದೃಢೀಕರಣ ಹೊಂದಿರುವ ಬಳಕೆದಾರರಿಗೆ ಮಾತ್ರ ಲಭ್ಯವಿದೆ ಎಂದು ಹೇಳಿದೆ. ಏಜೆನ್ಸಿಯು “ದೃಢವಾದ ಭದ್ರತಾ ವ್ಯವಸ್ಥೆ” ಯನ್ನು ಹೊಂದಿದ್ದು, ಇದನ್ನು “ಉನ್ನತ ಮಟ್ಟದ ಡೇಟಾ ಭದ್ರತೆ ಮತ್ತು ಸಮಗ್ರತೆಯನ್ನು” ನಿರ್ವಹಿಸಲು ನಿರಂತರವಾಗಿ ಅಪ್‌ಗ್ರೇಡ್ ಮಾಡಲಾಗಿದೆ ಎಂದು ಏಜೆನ್ಸಿಯ ಇಮೇಲ್ ತಿಳಿಸಿದೆ.

ರೆಕಾರ್ಡ್ಡ್ ಫ್ಯೂಚರ್ ಪ್ರಕಾರ ಟೈಮ್ಸ್ ಆಫ್ ಇಂಡಿಯಾ ಎಂದು ಪ್ರಕಟಿಸುವ ಟೈಮ್ಸ್ ಗ್ರೂಪ್ ಎಂದೂ ಕರೆಯಲ್ಪಡುವ ಬೆನೆಟ್ ಕೋಲ್ಮನ್ ಮತ್ತು ಕಂಪನಿ (Bennett Coleman & Co ), ಚೀನಾದ ಹ್ಯಾಕರ್‌ಗಳಿಂದ ಗುರಿಯಾದಂತೆ ಕಾಣುತ್ತದೆ. ಫೆಬ್ರವರಿ ಮತ್ತು ಆಗಸ್ಟ್ ನಡುವೆ ಡೇಟಾವನ್ನು ಕಂಪನಿಯಿಂದ ಹೊರತೆಗೆಯಲಾಯಿತು ಆದರೆ ಡೇಟಾವನ್ನು ಕದಿಯಾಗಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ರೆಕಾರ್ಡ್ಡ್ ಫ್ಯೂಚರ್ ಹೇಳಿದೆ. “ಮಾಹಿತಿ ಕದಿಯಲು ಒಳನುಸುಳಲಾಗಿದೆ” ಎಂಬ ವಾದವನ್ನು ಕಂಪನಿ ತಿರಸ್ಕರಿಸಿದೆ.

ಕಂಪನಿಯ ಆಂತರಿಕ ಭದ್ರತಾ ವರದಿಯು ಒಳನುಸುಳುವಿಕೆಗಳನ್ನು “ಗಂಭೀರವಲ್ಲದ ಎಚ್ಚರಿಕೆಗಳು ಮತ್ತು ಸುಳ್ಳು ಎಚ್ಚರಿಕೆಗಳು” ಎಂದು ವಿವರಿಸಿದೆ ಎಂದು ಟೈಮ್ಸ್ ಗ್ರೂಪ್‌ನ ಮುಖ್ಯ ಮಾಹಿತಿ ಅಧಿಕಾರಿ ರಾಜೀವ್ ಬಾತ್ರಾ ಹೇಳಿರುವುದಾಗಿ ಎನ್​ಡಿಟಿವಿ ವರದಿ ಮಾಡಿದೆ.

ಚೀನಾದ ವಿದೇಶಾಂಗ ಸಚಿವಾಲಯವು ದೇಶದಲ್ಲಿ ರಜಾದಿನವಾಗಿದ್ದರಿಂದ ಪ್ರತಿಕ್ರಿಯೆ ನೀಡುವ ಕೋರಿಕೆಗೆ ತಕ್ಷಣ ಪ್ರತಿಕ್ರಿಯಿಸಲಿಲ್ಲ.

ಬೋಸ್ಟನ್ ಸಮೀಪದ ಸೈಬರ್ ಸೆಕ್ಯುರಿಟಿ ಸಂಸ್ಥೆಯಾದ ರೆಕಾರ್ಡ್ಡ್ ಫ್ಯೂಚರ್, ಸರ್ಕಾರಿ ಸಂಸ್ಥೆ ಮತ್ತು ಮಾಧ್ಯಮ ಕಂಪನಿ ಬಳಸುವ ಸರ್ವರ್‌ಗಳು ಮತ್ತು ಹ್ಯಾಕರ್‌ಗಳ ಮಾಲ್‌ವೇರ್ ಅನ್ನು ನಿರ್ವಹಿಸಲು ಮತ್ತು ನಿಯಂತ್ರಿಸಲು ಬಳಸುವ ಸರ್ವರ್‌ಗಳ ನಡುವೆ ಅನುಮಾನಾಸ್ಪದ ನೆಟ್‌ವರ್ಕ್ ಟ್ರಾಫಿಕ್ ಮಾದರಿಗಳನ್ನು ಗುರುತಿಸಲು ಪತ್ತೆ ತಂತ್ರಗಳು ಮತ್ತು ಟ್ರಾಫಿಕ್ ವಿಶ್ಲೇಷಣೆ ದತ್ತಾಂಶಗಳ ಸಂಯೋಜನೆಯನ್ನು ಬಳಸಿದೆ ಎಂದು ಹೇಳಿದೆ.

ಡೇಟಾವನ್ನು ಸೋರಿಕೆ ಮಾಡಲಾಗಿದೆ ಎಂದು ಹೇಳಲಾಗುವ ಜೊತೆಗೆ ರೆಕಾರ್ಡ್ಡ್ ಫ್ಯೂಚರ್ ಹೇಳುವಂತೆ, ದುರುದ್ದೇಶಪೂರಿತ ಸಾಫ್ಟ್‌ವೇರ್ ಅನ್ನು ಏಜೆನ್ಸಿ ಮತ್ತು ಮಾಧ್ಯಮ ಕಂಪನಿಗಳ ಕಂಪ್ಯೂಟರ್ ನೆಟ್‌ವರ್ಕ್‌ಗಳಲ್ಲಿ ಎಂಬೆಡ್ ಮಾಡಬಹುದಾಗಿಗದೆ ಇದು ಹ್ಯಾಕರ್‌ಗಳು ಬೇಡಿಕೆಯ ಮೇಲೆ ಡೇಟಾವನ್ನು ತೆಗೆದುಹಾಕಲು ಅನುವು ಮಾಡಿಕೊಡುತ್ತದೆ ಎಂದಿದೆ.

ಟೈಮ್ಸ್ ಗ್ರೂಪ್‌ನ ಟೀಕೆಗಳಿಗೆ ಪ್ರತಿಕ್ರಿಯಿಸಿದ, ರೆಕಾರ್ಡ್ಡ್ ಫ್ಯೂಚರ್ ವರದಿಯ ಪ್ರಮುಖ ವಿಶ್ಲೇಷಕ ಜೊನಾಥನ್ ಕಾಂಡ್ರಾ ಅವರು, ಮಾಧ್ಯಮ ಕಂಪನಿಯ ನೆಟ್‌ವರ್ಕ್‌ಗಳಿಂದ “ಐದು ದಿನಗಳ ಕಾಲ ನಡೆಯುವ ಏಕೈಕ ಅಧಿವೇಶನದಲ್ಲಿ ನಿರಂತರ ಸಂವಹನಗಳನ್ನು” ಗಮನಿಸಲು ಸಾಧ್ಯವಾಯಿತು ಎಂದು ಹೇಳಿದರು. ಟೈಮ್ಸ್ ಕಂಪ್ಯೂಟರ್ ನೆಟ್‌ವರ್ಕ್‌ಗಳಿಂದ ಸಂವಹನಗಳು ಬರುತ್ತಿವೆ ಮತ್ತು ದುರುದ್ದೇಶಪೂರಿತ ಸರ್ವರ್‌ಗಳಿಗೆ ಹೋಗುತ್ತಿವೆ ಎಂಬ “ಬಲವಾದ ಸೂಚನೆಗಳು” ಇವೆ ಎಂದು ಅವರು ಹೇಳಿದರು. ಇದು “ಯಶಸ್ವಿ ಇಂಪ್ಲಾಂಟ್ ಅನ್ನು ಹೊರಗಡೆ ಸಂಪರ್ಕಿಸಲು ಸೂಚಿಸುತ್ತದೆ ಎಂದಿದ್ದಾರೆ.

ಹ್ಯಾಕರ್‌ಗಳು ವಿಂಟಿ (Winnti) ಎಂಬ ಮಾಲ್‌ವೇರ್ ಅನ್ನು ಬಳಸಿದರು. ಇದು ಬಹಳ ಹಳೆಯದಾದ ಟೂಲ್ ಎಂದು ಕರೆಯಲಾಗಿದ್ದು, ಇದು ಹಲವು ವರ್ಷಗಳಿಂದ ಚೀನಾದ ಎಪಿಟಿ ಗುಂಪುಗಳಲ್ಲಿ ಹಂಚಿಕೆಯಾಗಿದೆ ಎಂದಿದೆ ಕಾಂಡ್ರಾ. ಎಪಿಟಿ ಎಂದರೆ ಮುಂದುವರಿದ ನಿರಂತರ ಬೆದರಿಕೆ (advanced persistent threat), ಈ ಪದವನ್ನು ರಾಜ್ಯ ಪ್ರಾಯೋಜಿತ ಹ್ಯಾಕಿಂಗ್ ಗುಂಪುಗಳನ್ನು ವಿವರಿಸಲು ಸಾಮಾನ್ಯವಾಗಿ ಬಳಸಲಾಗುತ್ತದೆ.

ನಿಯೋಜಿಸಲಾದ ಇತರ ಸಾಧನವೆಂದರೆ ಕೋಬಾಲ್ಟ್ ಸ್ಟ್ರೈಕ್ (Cobalt Strike), ಇದು ಸಾಮಾನ್ಯವಾಗಿ ನೆಟ್‌ವರ್ಕ್ ರಕ್ಷಣೆಗೆ ಬಳಸಲಾಗುವ ಒಂದು ಸಾಫ್ಟ್‌ವೇರ್ ತುಣುಕು, ಆದರೆ ಅದನ್ನು “ಬೆದರಿಕಗೆ ಅಳವಡಿಸಿಕೊಂಡಿದ್ದಾರೆ, ಚೀನಾದಲ್ಲಿ ಮಾತ್ರವಲ್ಲ ಬೇರೆಡೆಯೂ ಬಳಸಿದ್ದಾರೆ ಎಂದು ಕಾಂಡ್ರಾ ಹೇಳಿದರು. “ಇದುವಾಣಿಜ್ಯವಾಗಿ ಲಭ್ಯವಿರುವ ಸಾಧನವಾಗಿದ್ದರೆ ಅದನ್ನು ನಿರ್ದಿಷ್ಟ ರಾಷ್ಟ್ರಗಳಿಗೆ ಜೋಡಿಸಲಾಗಿದೆ ಎಂದು ಹೇಳುವುದು ತುಂಬಾ ಕಷ್ಟ ಎಂದಿದ್ದಾರೆ. ಕೋಬಾಲ್ಟ್ ಸ್ಟ್ರೈಕ್‌ನ ಪ್ರತಿನಿಧಿಯು ಪ್ರತಿಕ್ರಿಯೆಯ ಕೋರಿಕೆಗೆ ತಕ್ಷಣ ಪ್ರತಿಕ್ರಿಯಿಸಲಿಲ್ಲ.

ಕಳೆದ ವರ್ಷದಲ್ಲಿ ಭಾರತೀಯ ನೆಟ್‌ವರ್ಕ್‌ಗಳಿಗೆ ಒಳನುಸುಳುವಿಕೆ ಹೆಚ್ಚಾಗಿದೆ ಎಂದು ರೆಕಾರ್ಡ್ಡ್ ಫ್ಯೂಚರ್ ತನ್ನ ವರದಿಯಲ್ಲಿ ಹೇಳಿದೆ. ಆಪಾದಿತ ಚೀನೀ ಹ್ಯಾಕ್‌ಗಳು ಎರಡು ದೇಶಗಳ ನಡುವಿನ ಸಂಬಂಧಗಳಲ್ಲಿ ಕ್ಷಿಪ್ರ ಅಧೋಗತಿ ಅನುಸರಿಸುತ್ತವೆ. ಅದರ ಮಾಹಿತಿಯ ಪ್ರಕಾರ, ರೆಕಾರ್ಡ್ಡ್ ಫ್ಯೂಚರ್ ಹೇಳುವಂತೆ, ಈ ವರ್ಷ ಆಗಸ್ಟ್‌ನಲ್ಲಿ ಭಾರತೀಯ ಘಟಕಗಳನ್ನು ಗುರಿಯಾಗಿಸಿಕೊಂಡು ಶಂಕಿತ ಸರ್ಕಾರಿ ಪ್ರಾಯೋಜಿತ ಚೀನಾದ ಸೈಬರ್ ಕಾರ್ಯಾಚರಣೆಗಳ ಸಂಖ್ಯೆಯಲ್ಲಿ 2020 ಕ್ಕೆ ಹೋಲಿಸಿದರೆ ಶೇ261 ಹೆಚ್ಚಳವಾಗಿದೆ. ಶಂಕಿತ ಒಳನುಸುಳುವಿಕೆಗಳು ಹಿಮಾಲಯದ ಗಡಿ ಪೋಸ್ಟ್‌ನಲ್ಲಿ ಭಾರತೀಯ ಮತ್ತು ಚೀನೀ ಸೈನಿಕರ ನಡುವೆ ರಕ್ತಸಿಕ್ತ ಕಾದಾಟಕ್ಕೆ  ಕಾರಣವಾಗಿತ್ತು ಎಂದು ಕಾಂಡ್ರಾ ಹೇಳಿದರು.

“ಇದು 2019 ಮತ್ತು 2020 ರ ನಡುವೆ ಶೇ 120ನಷ್ಟು ಹೆಚ್ಚಳವನ್ನು ಸೂಚಿಸುತ್ತದೆ. ಇದು ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಚೀನಾ ಬೆಳೆಯುತ್ತಿರುವ ಕಾರ್ಯತಂತ್ರದ ಆಸಕ್ತಿಯನ್ನು ಪ್ರದರ್ಶಿಸುತ್ತದೆ  ಎಂದು ವರದಿ ಹೇಳಿದೆ.

ಯುಐಡಿಎಐ ತನ್ನ ಬಯೋಮೆಟ್ರಿಕ್ ಮಾಹಿತಿಯ ಡೇಟಾಬೇಸ್ ನಿಂದಾಗಿ ಗುರಿಯಾಗಿದೆ ಎಂದು ರೆಕಾರ್ಡೆಡ್ ಫ್ಯೂಚರ್ ಹೇಳುತ್ತದೆ. ಆದರೆ ಡೇಟಾಬೇಸ್ ಉಲ್ಲಂಘನೆಯಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಅಂತಹ ಬೃಹತ್ ವೈಯಕ್ತಿಕ ಗುರುತಿನ ದತ್ತಾಂಶದ ಮೌಲ್ಯವು ಸರ್ಕಾರಿ ಅಧಿಕಾರಿಗಳನ್ನು ಸಮರ್ಥವಾಗಿ ಗುರುತಿಸುವ ಸಾಮರ್ಥ್ಯ, ಸಾಮಾಜಿಕ ಎಂಜಿನಿಯರಿಂಗ್ ದಾಳಿಗಳನ್ನು ಸಕ್ರಿಯಗೊಳಿಸುವುದು ಅಥವಾ ಸಂಭಾವ್ಯ ಗುರಿಗಳಲ್ಲಿ ಈಗಾಗಲೇ ಸಂಗ್ರಹಿಸಿದ ಡೇಟಾವನ್ನು ಸೇರಿಸುವ ಸಾಮರ್ಥ್ಯವಾಗಿದೆ ಎಂದು ಕಾಂಡ್ರಾ ಹೇಳಿದರು.

ಟೈಮ್ಸ್ ಗ್ರೂಪ್ ಭಾರತೀಯ-ಚೀನೀ ಉದ್ವಿಗ್ನತೆಗಳ ಕುರಿತು ವರದಿ ಮಾಡುವುದರಿಂದ ಗುರಿಯಾಗು ಸಾಧ್ಯತೆ ಇದೆ. “ಪತ್ರಕರ್ತರು ಮತ್ತು ಅವರ ಮೂಲಗಳಿಗೆ ಪ್ರವೇಶವನ್ನು ಬಯಸುವುದು ಇದರ ಉದ್ದೇಶವಾಗಿರಬಹುದು ಎಂದು ವರದಿ ಹೇಳಿದೆ.

ಇದನ್ನೂ ಓದಿ: Havana Syndrome ಹವಾನಾ ಸಿಂಡ್ರೋಮ್ ಲಕ್ಷಣ ಕಾಣಿಸಿಕೊಂಡ ಅಧಿಕಾರಿಗಳಿಗೆ ಪರಿಹಾರ ನೀಡಲಿದೆ ಅಮೆರಿಕ; ಏನಿದು ಹವಾನಾ ಸಿಂಡ್ರೋಮ್ ?

 

Read Full Article

Click on your DTH Provider to Add TV9 Kannada