ಭುಜಕ್ಕೆ ಭುಜಕೊಟ್ಟು ನಿಂತು ಫೋಟೋಕ್ಕೆ ಪೋಸ್ ​ಕೊಟ್ಟ ರಾಹುಲ್​ ಗಾಂಧಿ, ನವಜೋತ್​ ಸಿಂಗ್​ ಸಿಧು; ಸಹೋದರನೊಂದಿಗೆ ಎಂದು ಕ್ಯಾಪ್ಷನ್​ ಕೊಟ್ಟ ಸಿಧು

ಹಿಂದಿನ ವಾರ ಕೂಡ ನವಜೋತ್​ ಸಿಂಗ್​ ಸಿಧು, ಪಂಜಾಬ್​ ಸಿಎಂ ಚರಣಜಿತ್​ ಸಿಂಘ್​ ಛನ್ನಿ ಮತ್ತು ಹಿರಿಯ ಕಾಂಗ್ರೆಸ್​ ನಾಯಕ ಸುನಿ ಜಾಖರ್​, ರಾಹುಲ್​ ಗಾಂಧಿಯವರನ್ನು ಭೇಟಿ ಮಾಡಿದ್ದರು.

ಭುಜಕ್ಕೆ ಭುಜಕೊಟ್ಟು ನಿಂತು ಫೋಟೋಕ್ಕೆ ಪೋಸ್ ​ಕೊಟ್ಟ ರಾಹುಲ್​ ಗಾಂಧಿ, ನವಜೋತ್​ ಸಿಂಗ್​ ಸಿಧು; ಸಹೋದರನೊಂದಿಗೆ ಎಂದು ಕ್ಯಾಪ್ಷನ್​ ಕೊಟ್ಟ ಸಿಧು
ರಾಹುಲ್​ ಗಾಂಧಿ ಮತ್ತು ನವಜೋತ್​ ಸಿಂಗ್​ ಸಿಧು

ಪಂಜಾಬ್​ ಕಾಂಗ್ರೆಸ್​ ಮುಖ್ಯಸ್ಥ ನವಜೋತ್​ ಸಿಂಗ್​ ಸಿಧು ನಿನ್ನೆ ದೆಹಲಿಯಲ್ಲಿ ರಾಹುಲ್​ ಗಾಂಧಿಯನ್ನು ಭೇಟಿಯಾಗಿದ್ದಾರೆ.  ಎಐಸಿಸಿ ಉಸ್ತುವಾರಿ ಹರೀಶ್​ ಚೌಧರಿ, ಅಲ್ಲಿನ ಸಾರಿಗೆ ಸಚಿವ ಅಮರಿಂದರ್​ ಸಿಂಗ್​ ಅಮರಿಂದರ್ ಸಿಂಗ್​ ರಾಜಾ ವಾರಿಂಗ್ ಮತ್ತು ನಿನ್ನೆ ಕಾಂಗ್ರೆಸ್​ಗೆ ಹೊಸದಾಗಿ ಸೇರ್ಪಡೆಯಾದ ಪಂಜಾಬಿ ಖ್ಯಾತ ಗಾಯಕ ಸಿಧು ಮೂಸೆವಾಲಾ ಕೂಡ ಇದ್ದರು.

ಸಿಧು ಮೂಸೆವಾಲಾ ನಿನ್ನೆ ಚಂಡಿಗಢ್​​ನಲ್ಲಿ, ಪಂಜಾಬ್​ ಸಿಎಂ ಚರಣಜಿತ್​ ಸಿಂಗ್​ ಛನ್ನಿ ಮತ್ತು ಪಂಜಾಬ್​ ಪ್ರದೇಶ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ನವಜೋತ್​ ಸಿಂಗ್ ಸಿಧು ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅದಾದ ಬಳಿಕ ದೆಹಲಿಗೆ ತೆರಳಿ ರಾಹುಲ  ಗಾಂಧಿಯವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಹಾಜರಿದ್ದ ನವಜೋತ್​ ಸಿಂಗ್​ ಸಿಧು, ರಾಹುಲ್ ಗಾಂಧಿಯವರೊಂದಿಗೆ ಇರುವ ಫೋಟೋ ಶೇರ್ ಮಾಡಿಕೊಂಡು ವಿತ್​ ಭಾಯ್​ (ಸಹೋದರನೊಂದಿಗೆ) ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ.

ಹಿಂದಿನ ವಾರ ಕೂಡ ನವಜೋತ್​ ಸಿಂಗ್​ ಸಿಧು, ಪಂಜಾಬ್​ ಸಿಎಂ ಚರಣಜಿತ್​ ಸಿಂಘ್​ ಛನ್ನಿ ಮತ್ತು ಹಿರಿಯ ಕಾಂಗ್ರೆಸ್​ ನಾಯಕ ಸುನಿ ಜಾಖರ್​, ರಾಹುಲ್​ ಗಾಂಧಿಯವರನ್ನು ಭೇಟಿ ಮಾಡಿದ್ದರು. ಪಂಜಾಬ್​​ನಲ್ಲಿ ಕಾಂಗ್ರೆಸ್​ ಸರ್ಕಾರವೇ ಇದೆ. ಆದರೆ ಅಲ್ಲಿ ಆಂತರಿಕ ಸಮಸ್ಯೆಗಳು ನೂರೆಂಟಿವೆ. ಇತ್ತೀಚೆಗಷ್ಟೇ ಕ್ಯಾಪ್ಟನ್​ ಅಮರಿಂದರ್ ಸಿಂಗ್​​ರನ್ನು ಬದಲಿಸಿ ಚರಣಜಿತ್​ ಸಿಂಗ್​ ಛನ್ನಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ.

ನವಜೋತ್​ ಸಿಂಗ್​ ಸಿಧು ಕಾಂಗ್ರೆಸ್​ನವರೇ ಆದರೂ, 2015ರಲ್ಲಿ ಫರೀದ್​ಕೋಟ್​​ನಲ್ಲಿ ಸಿಖ್ಖರ ಗುರುನಾನಕ ಗ್ರಂಥವನ್ನು ಅಪವಿತ್ರಗೊಳಿಸಿದ ಮತ್ತು ಅದನ್ನು ಪ್ರತಿಭಟಿಸಿದವರ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಸಂತ್ರಸ್ತರಾದವರಿಗೆ ನ್ಯಾಯ ಬೇಕೆಂದು ಪಂಜಾಭ್​ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಹಾಗೇ, ಮಾದಕ ದ್ರವ್ಯ ಸಾಗಣೆ ಕುರಿತಾದ ವರದಿಯನ್ನು ಸ್ಪೆಶಲ್​ ಟಾಸ್ಕ್​ ಫೋರ್ಸ್​ ಬಹಿರಂಗ ಗೊಳಿಸದೆ ಇದ್ದರೆ ಆಮರಣಾಂತ ಉಪವಾಸ ಮಾಡುವುದಾಗಿಯೂ ಕಾಂಗ್ರೆಸ್​ಗೆ ಬೆದರಿಸಿದ್ದಾರೆ.

ಇದನ್ನೂ ಓದಿ: Karnataka Dam Water Level: ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

Published On - 7:44 am, Sat, 4 December 21

Click on your DTH Provider to Add TV9 Kannada