ಸತತ 3ನೇ ಅವಧಿಗೆ ಸಿಪಿಐಎಂ ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಮ್ ಯೆಚೂರಿ ಆಯ್ಕೆ
ಪಶ್ಚಿಮ ಬಂಗಾಳದ ಹಿರಿಯ ನಾಯಕ ರಾಮ್ ಚಂದ್ರ ಡೋಮ್ ಅವರು ಸಿಪಿಐ(ಎಂ) ನ ಅತ್ಯುನ್ನತ ಸಮಿತಿಯಲ್ಲಿ ಮೊದಲ ದಲಿತ ಮುಖ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕಣ್ಣೂರ್(ಕೇರಳ): ಕೇರಳದ ಕಣ್ಣೂರಿನಲ್ಲಿ ನಡೆದ 23ನೇ ಸಿಪಿಐ(ಎಂ) ಪಾರ್ಟಿ ಕಾಂಗ್ರೆಸ್‌ನ (CPI(M) 23rd party congress) ಅಂತಿಮ ದಿನವಾದ ಭಾನುವಾರದಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸೀತಾರಾಮ್ ಯೆಚೂರಿ (Sitaram Yechury)ಅವರನ್ನು ಸತತ ಮೂರನೇ ಅವಧಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಮರು ಆಯ್ಕೆ ಮಾಡಿದೆ. ಪಶ್ಚಿಮ ಬಂಗಾಳದ ಹಿರಿಯ ನಾಯಕ ರಾಮ್ ಚಂದ್ರ ಡೋಮ್ (Ram Chandra Dome)ಅವರು ಸಿಪಿಐ(ಎಂ) ನ ಅತ್ಯುನ್ನತ ಸಮಿತಿಯಲ್ಲಿ ಮೊದಲ ದಲಿತ ಮುಖ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಕ್ಷವು ಕೇಂದ್ರ ಸಮಿತಿ ಮತ್ತು ಪೊಲಿಟ್‌ಬ್ಯುರೊ ಸದಸ್ಯರಿಗೆ 75ರ ವಯೋಮಿತಿಯನ್ನು ನಿಗದಿಪಡಿಸಿದ್ದರಿಂದ, ಅದಕ್ಕಿಂತ ಹೆಚ್ಚಿನ ವಯಸ್ಸಿನ ನಾಯಕರು ಮತ್ತು ಅದಕ್ಕೆ ಹತ್ತಿರವಾಗಿರುವ ಕೆಲವರನ್ನು ಎರಡೂ ಸಮಿತಿಗಳಿಂದ ಕೈಬಿಡಲಾಯಿತು. ಅದೇ ವೇಳೆ ಹೊಸ ಮುಖಗಳನ್ನು ಪಕ್ಷದ ನಾಯಕತ್ವಕ್ಕೆ ತಂದಿದ್ದಾರೆ. ಮತ್ತೊಂದು ನಿರ್ಧಾರದಲ್ಲಿ ಪಕ್ಷವು ಕೇಂದ್ರ ಸಮಿತಿಯ ಗಾತ್ರವನ್ನು 95 ರಿಂದ 85 ಕ್ಕೆ ಕಡಿತಗೊಳಿಸಿದೆ. ಹೊಸದಾಗಿ ಸ್ಥಾಪಿತವಾದ 17 ಸದಸ್ಯರ ಪಾಲಿಟ್‌ಬ್ಯುರೊದಲ್ಲಿ ದಲಿತ ಮುಖ ಡೋಮ್ ಹೊರತುಪಡಿಸಿ ಇತರ ಸೇರ್ಪಡೆಗಳು ಎಂದರೆ ಕೇರಳದ ಎಡ ಪ್ರಜಾಸತ್ತಾತ್ಮಕ ಫ್ರಂಟ್ (ಎಲ್‌ಡಿಎಫ್) ಸಂಚಾಲಕ ಎ ವಿಜಯರಾಘವನ್ ಮತ್ತು ಅಖಿಲ ಭಾರತ ಕಿಸಾನ್ ಸಭಾದ ಅಧ್ಯಕ್ಷ ಅಶೋಕ್ ಧಾವಲೆ. ವಯಸ್ಸಿನ ಆಧಾರದ ಮೇಲೆ ಪಿಬಿಯಿಂದ ಕೈಬಿಡಲ್ಪಟ್ಟವರು ಎಸ್ ರಾಮಚಂದ್ರನ್ ಪಿಳ್ಳೈ, ಹನ್ನನ್ ಮೊಲ್ಲಾ ಮತ್ತು ಬಿಮನ್ ಬಸು. 85 ಸದಸ್ಯರ ಕೇಂದ್ರ ಸಮಿತಿಯಲ್ಲಿ 17 ಮಂದಿ ಹೊಸ ಮುಖಗಳಿವೆ. ಮೂವರು ಹೊಸ ಮುಖಗಳ ಸೇರ್ಪಡೆಯಿಂದ ಕೇಂದ್ರ ಸಮಿತಿಯಲ್ಲಿ ಮಹಿಳಾ ಪ್ರಾತಿನಿಧ್ಯ 15ಕ್ಕೆ ಏರಿದೆ.
17 member PolitBuro elected:@SitaramYechury Prakash Karat@vijayanpinarayi @b_kodiyeri Brinda Karat Manik Sarkar@salimdotcomrade@mishra_surjya BV Raghavulu Tapan Sen Nilotpal Basu@MABABYCPIM @grcpim @SubhashiniAli Ramchandra Dome@DrAshokDhawale A Vijayaraghavan
— CPI (M) (@cpimspeak) April 10, 2022
New Central Committee & Central Control Commission Elected at the 23rd Congresshttps://t.co/o6YENQiWIz
— CPI (M) (@cpimspeak) April 10, 2022
ಕೇರಳದಿಂದ ಕೇಂದ್ರ ಸಮಿತಿಗೆ ಹಣಕಾಸು ಸಚಿವ ಕೆ ಎನ್ ಬಾಲಗೋಪಾಲ್, ಕೈಗಾರಿಕಾ ಸಚಿವ ಪಿ ರಾಜೀವ್, ಮಾಜಿ ಲೋಕಸಭಾ ಸದಸ್ಯರಾದ ಪಿ ಸತಿದೇವಿ ಮತ್ತು ಸಿ ಎಸ್ ಸುಜಾತಾ ಅವರನ್ನು ಆಯ್ಕೆ ಮಾಡಲಾಗಿದೆ. 2018 ರ ಪಾರ್ಟಿ ಕಾಂಗ್ರೆಸ್ ನಂತರದ ನಾಲ್ಕು ವರ್ಷಗಳಲ್ಲಿ ಕೇರಳವನ್ನು ಹೊರತುಪಡಿಸಿ, ಪಕ್ಷದ ಸದಸ್ಯತ್ವದಲ್ಲಿ ಕುಸಿತವನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಕರೆ ನೀಡಿರುವ ಸಾಂಸ್ಥಿಕ ವರದಿಯನ್ನು ಭಾನುವಾರ ಪಾರ್ಟಿ ಕಾಂಗ್ರೆಸ್ ಅಂಗೀಕರಿಸಿತು.
ಇದನ್ನೂ ಓದಿ: 10ನೇ ತರಗತಿವರೆಗೆ ಹಿಂದಿ ಕಡ್ಡಾಯ ಎಂಬುದು ಹೇರಿಕೆ; ಕೇಂದ್ರದ ನಡೆಗೆ ಈಶಾನ್ಯ ರಾಜ್ಯಗಳ ಸಂಘಟನೆಗಳಿಂದ ವಿರೋಧ