AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದೇ ಮೊದಲ ಬಾರಿ ವಿವಿಐಪಿ ಭದ್ರತೆಗಾಗಿ ಮಹಿಳಾ ಸಿಆರ್‌ಪಿಎಫ್ ಸಿಬ್ಬಂದಿ ನೇಮಕ

“ಗೃಹ ವ್ಯವಹಾರಗಳ ಸಚಿವಾಲಯದಿಂದ ಅನುಮೋದನೆ ಪಡೆದ ನಂತರ, ಈ ಮಹಿಳಾ ಸಿಬ್ಬಂದಿಯನ್ನು ಸೇರಿಸುವ ಪ್ರಕ್ರಿಯೆ ಆರಂಭವಾಗಿದೆ. ಇದನ್ನು ಹಂತ-ಹಂತದ ರೀತಿಯಲ್ಲಿ ಮಾಡಲಾಗುತ್ತದೆ. ಆಯ್ದ ಮಹಿಳೆಯರಿಗೆ ಸಾಕಷ್ಟು ತರಬೇತಿ ನೀಡಲಾಗುತ್ತದೆ ಎಂದು ಹೆಸರು ಹೇಳಲು ಬಯಸದ ಹಿರಿಯ ಸಿಆರ್​​ಪಿಎಫ್ ಆಧಿಕಾರಿಯೊಬ್ಬರು ಹೇಳಿದ್ದಾರೆ

ಇದೇ ಮೊದಲ ಬಾರಿ ವಿವಿಐಪಿ ಭದ್ರತೆಗಾಗಿ ಮಹಿಳಾ ಸಿಆರ್‌ಪಿಎಫ್ ಸಿಬ್ಬಂದಿ ನೇಮಕ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Sep 17, 2021 | 12:13 PM

Share

ದೆಹಲಿ: ಇದೇ ಮೊದಲ ಬಾರಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ದೇಶದ ವಿವಿಧ ವಿವಿಐಪಿಗಳನ್ನು ರಕ್ಷಿಸಲು ಮಹಿಳಾ ಸಿಬ್ಬಂದಿಗಳನ್ನೂ ನೇಮಕಮಾಡಲಿದೆ. 33 ಮಹಿಳಾ ಸಿಬ್ಬಂದಿಗಳ ಮೊದಲ ಬ್ಯಾಚ್‌ನ 10 ವಾರಗಳ ತರಬೇತಿ ಶೀಘ್ರದಲ್ಲೇ ಆರಂಭವಾಗಲಿದೆ. ಗೃಹ ಸಚಿವಾಲಯದಿಂದ ಅನುಮೋದನೆ ಪಡೆದ ನಂತರ ಅವರ ಆಯ್ಕೆಯನ್ನು ಕೆಲವು ದಿನಗಳ ಹಿಂದೆ ಮಾಡಲಾಗಿದೆ. ಸಿಆರ್‌ಪಿಎಫ್‌ನಿಂದ ಮಹಿಳಾ ಸಿಬ್ಬಂದಿಯ ಬಲವನ್ನು ಹೆಚ್ಚಿಸುವ ಕ್ರಿಯಾ ಯೋಜನೆಯನ್ನು ಸಲ್ಲಿಸಲಾಗಿದೆ ಎಂದು ನ್ಯೂಸ್ 18 ವರದಿ ಮಾಡಿದೆ. . “ಆರಂಭದಲ್ಲಿ 6 ಪ್ಲಟೂನ್ ಮಹಿಳಾ ಸಿಬ್ಬಂದಿಯನ್ನು ಇದಕ್ಕಾಗಿ ಸಿದ್ಧತೆ ಮಾಡಿಸಲಾಗುವುದು ” ಎಂದು ಮೂಲಗಳು ತಿಳಿಸಿವೆ. ನಿಯೋಜನೆಯನ್ನು ‘ಅಗತ್ಯದ ಆಧಾರದ ಮೇಲೆ’ ಮಾಡಲಾಗುವುದು. ಆದರೆ ಕೆಲವು ಗಣ್ಯರು ಮೊದಲ ಬ್ಯಾಚ್‌ನಿಂದ ಮಹಿಳಾ ಭದ್ರತಾ ಸಿಬ್ಬಂದಿಯನ್ನು ಪಡೆಯುತ್ತಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಮುಂಬರುವ ಚುನಾವಣಾ ಋತುವಿನ ದೃಷ್ಟಿಯಿಂದ ಮಹಿಳಾ ವಿವಿಐಪಿಗಳು ಕೂಡ ಆದ್ಯತೆಯ ಮೇಲೆ ಇರುತ್ತವೆ. ಈ ಮಹಿಳಾ ಸಿಆರ್‌ಪಿಎಫ್ ಸಿಬ್ಬಂದಿಗಳು ಎಕೆ -47 ಗಳಂತಹ ದಾಳಿ ರೈಫಲ್‌ಗಳಿಗೆ ಫೈರಿಂಗ್ ತರಬೇತಿ ಪಡೆಯುತ್ತಾರೆ.

ಸಿಆರ್‌ಪಿಎಫ್ ಗೃಹ ಸಚಿವ ಅಮಿತ್ ಶಾ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರಂತಹ ಉನ್ನತ ಮಟ್ಟದ ಗಣ್ಯರಿಗೆ ಭದ್ರತೆ ಒದಗಿಸುತ್ತದೆ.

ಈ ನಿರ್ಧಾರಕ್ಕೆ ಪ್ರೇರಣೆ ಏನು? ಪಶ್ಚಿಮ ಬಂಗಾಳ ಚುನಾವಣೆಯ ಸಮಯದಲ್ಲಿ ನಡೆದ ಹಿಂಸಾಚಾರ ನೋಡಿ , “ಮುಂಬರುವ ಉತ್ತರ ಪ್ರದೇಶ ಚುನಾವಣೆಗೆ ಮುಂಚಿತವಾಗಿ ವಿವಿಐಪಿಗಳನ್ನು ರಕ್ಷಿಸಲು ಮಹಿಳೆಯರನ್ನು ಸೇರಿಸಿಕೊಳ್ಳುವ ಕೆಲಸಕ್ಕೆ ಆದ್ಯತೆ ನೀಡಲಾಗಿದೆ” ಎಂದು ಮೂಲಗಳು ಹೇಳಿವೆ. ಪಶ್ಚಿಮ ಬಂಗಾಳ ಚುನಾವಣೆಯ ಸಮಯದಲ್ಲಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಕೆಲವು ನಾಯಕರು ತಮ್ಮ ರ್ಯಾಲಿಗಳು ಮತ್ತು ರೋಡ್‌ಶೋಗಳಲ್ಲಿ ಹಲ್ಲೆಗೆ ಒಳಗಾಗಿದ್ದರು.

ಚುನಾವಣೆಯ ವೇಳೆ ಗಣ್ಯ ವ್ಯಕ್ತಿಗಳ ಮೇಲೆ ಇಂತಹ ದಾಳಿಗಳ ಭಯ ಇದೆ. ಐದು ರಾಜ್ಯಗಳಲ್ಲಿ ಮುಂದಿನ ವರ್ಷ ಫೆಬ್ರವರಿ-ಮಾರ್ಚ್ ನಲ್ಲಿ ಚುನಾವಣೆಗಳಿಗೆ ನಿಗದಿಯಾಗಿದೆ.

ಪ್ರಸ್ತುತ ದೇಶದಲ್ಲಿ ಅತಿ ಹೆಚ್ಚು ಗಣ್ಯರಿಗೆ ರಕ್ಷಣೆ ನೀಡುವ ಸಿಆರ್‌ಪಿಎಫ್‌ನಿಂದ ಯೋಜನೆಯನ್ನು ಕೋರಲಾಗಿದೆ ಎಂದು ಹೆಸರು ಹೇಳಿಚ್ಛಿದ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

“ಗೃಹ ವ್ಯವಹಾರಗಳ ಸಚಿವಾಲಯದಿಂದ ಅನುಮೋದನೆ ಪಡೆದ ನಂತರ, ಈ ಮಹಿಳಾ ಸಿಬ್ಬಂದಿಯನ್ನು ಸೇರಿಸುವ ಪ್ರಕ್ರಿಯೆ ಆರಂಭವಾಗಿದೆ. ಇದನ್ನು ಹಂತ-ಹಂತದ ರೀತಿಯಲ್ಲಿ ಮಾಡಲಾಗುತ್ತದೆ. ಆಯ್ದ ಮಹಿಳೆಯರಿಗೆ ಸಾಕಷ್ಟು ತರಬೇತಿ ನೀಡಲಾಗುತ್ತದೆ ಎಂದು ಹೆಸರು ಹೇಳಲು ಬಯಸದ ಹಿರಿಯ ಸಿಆರ್​​ಪಿಎಫ್ ಆಧಿಕಾರಿಯೊಬ್ಬರು ಹೇಳಿದ್ದಾರೆ.

“ಸಿಆರ್‌ಪಿಎಫ್ ಮತ್ತು ತಕ್ಷಣದ ಭವಿಷ್ಯದ ಯೋಜನೆಗಳ ವಿವರಗಳನ್ನು ಪ್ರಸ್ತುತಪಡಿಸುತ್ತಿರುವಾಗ ಇತ್ತೀಚಿನ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರಿಗೆ ಡೈರೆಕ್ಟರ್ ಜನರಲ್ ಸಿಆರ್‌ಪಿಎಫ್ ಕುಲದೀಪ್ ಸಿಂಗ್ ಅವರು ಈ ಪ್ರಸ್ತಾಪವನ್ನು ನೀಡಿದ್ದಾರೆ. ಸೂಕ್ತ ಅನುಮೋದನೆ ಪಡೆದ ನಂತರ, ವಿವಿಐಪಿಗಳ ರಕ್ಷಣೆಗೆ ಮಹಿಳೆಯರನ್ನು ನೇಮಿಸಲು ನಿರ್ಧರಿಸಲಾಗಿದೆ ”ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಪ್ರಧಾನಿ ಮೋದಿ 71ನೇ ಹುಟ್ಟು ಹಬ್ಬಕ್ಕೆ 2035 ಸಮುದ್ರ ಚಿಪ್ಪುಗಳನ್ನು ಬಳಸಿ ಮರಳು ಶಿಲ್ಪ ರಚಿಸಿದ ಕಲಾವಿದ ಸುದರ್ಶನ್ ಪಟ್ನಾಯಕ್

ಇದನ್ನೂ ಓದಿ: ಪ್ರಧಾನಿ ಮೋದಿಗೆ ಒಂದೇ ವಾಕ್ಯದಲ್ಲಿ ವಿಶ್​​ ಮಾಡಿದ ರಾಹುಲ್​ ಗಾಂಧಿ; ಇದು ಅವಮಾನ ಎಂದ ನೆಟ್ಟಿಗರು

(CRPF will introduce women personnel to guard various VVIPs of the country)

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು