
ನವದೆಹಲಿ, ಏಪ್ರಿಲ್ 4: ನಮೆಲ್ಲರಿಗೂ ಗೊತ್ತಿರುವಂತೆ ಇರಾನ್ (Iran War) ಮೇಲೆ ಇಸ್ರೇಲ್ ಮತ್ತು ಅಮೆರಿಕ ಯುದ್ಧ ಸಾರಿ ತಿಂಗಳೇ ಕಳೆದಿದೆ. ಆದರೂ ಅಲ್ಲಿನ ಪರಿಸ್ಥಿತಿ ಶಾಂತವಾಗುವ ಲಕ್ಷಣಗಳು ಕಾಣುತ್ತಿಲ್ಲ. ಈ ಯುದ್ಧದಲ್ಲಿ ಭಾರತ ತಟಸ್ಥ ನೀತಿಯನ್ನು ತಳೆದಿದ್ದು, ಬಹಿರಂಗವಾಗಿ ಯಾವ ದೇಶಕ್ಕೂ ಬೆಂಬಲ ಘೋಷಿಸಿಲ್ಲ. ಆದರೂ ಯುದ್ಧಪೀಡಿತ ದೇಶಗಳಿಗೆ ವೈದ್ಯಕೀಯ ಕಿಟ್ ಕಳುಹಿಸುವ ಮಾನವೀಯ ಕಾರ್ಯವನ್ನು ಮಾಡಿರುವ ಭಾರತ ಶಾಂತಿಯುತ ಮಾತುಕತೆಯ ಮೂಲಕ ಯುದ್ಧ ನಿಲ್ಲಿಸುವುದರ ಅಗತ್ಯವನ್ನು ಒತ್ತಿ ಹೇಳುತ್ತಲೇ ಇದೆ. ಈ ಯುದ್ಧದ ಬಗ್ಗೆ ಭಾರತೀಯರ ಅಭಿಪ್ರಾಯವೇನು? ಭಾರತದ ಜನರು ಯಾವ ದೇಶದ ಪರವಾಗಿ ನಿಲುವು ತಳೆದಿದ್ದಾರೆ ಎಂಬ ಕುರಿತು ಸಮೀಕ್ಷೆಯೊಂದನ್ನು ನಡೆಸಲಾಗಿದೆ. ಆ ಕುರಿತು ಪೂರ್ತಿ ವಿವರ ಇಲ್ಲಿದೆ.
ಯುದ್ಧ ಆರಂಭವಾದ ಮೊದಲ ವಾರದಿಂದ 4ನೇ ವಾರದ ವೇಳೆಗೆ ಭಾರತೀಯರ ಅಭಿಪ್ರಾಯವೂ ಬದಲಾಗಿರುವುದನ್ನು ಈ ಸಮೀಕ್ಷೆಯಲ್ಲಿ ಗಮನಿಸಬಹುದು. ದೇಶಾದ್ಯಂತ 18 ವರ್ಷದ ಮೇಲಿನವರಲ್ಲಿ ನಡೆಸಿದ ಸಿವೋಟರ್ ಸ್ನ್ಯಾಪ್ ಪೋಲ್ CATI ಸಂದರ್ಶನಗಳು (ಕಂಪ್ಯೂಟರ್ ಅಸಿಸ್ಟೆಡ್ ಟೆಲಿಫೋನ್ ಇಂಟರ್ವ್ಯೂಯಿಂಗ್) ಅನ್ನು ಆಧರಿಸಿವೆ (BARC-ALL INDIA). ದೇಶಾದ್ಯಂತ ಸಿವೋಟರ್ ನಡೆಸಿದ ಈ ಸಮೀಕ್ಷೆಯಲ್ಲಿ ಒಟ್ಟು 10,854 ಜನರು ಭಾಗವಹಿಸಿದ್ದರು. ಮಾರ್ಚ್ ಎರಡನೇ ವಾರದಿಂದ ನಾಲ್ಕನೇ ವಾರದವರೆಗೆ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಫೋನ್ ಮೂಲಕ ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಸಮೀಕ್ಷೆಯಲ್ಲಿ ಕೇಳಲಾಗಿದ್ದ ಪ್ರಮುಖ ಪ್ರಶ್ನೆಗಳು ಇಲ್ಲಿವೆ.
1. ಬಿಕ್ಕಟ್ಟಿನ ಸಮಯದಲ್ಲಿ ಭಾರತ ಯಾರನ್ನು ನಂಬಬೇಕು?
ಮಾರ್ಚ್ ಎರಡನೇ ವಾರ:
ಅಮೆರಿಕ – 26%
ಇರಾನ್ – 27%
ಹೇಳಲು ಸಾಧ್ಯವಿಲ್ಲ – 47%
ಮಾರ್ಚ್ ಮೂರನೇ ವಾರ:
ಅಮೆರಿಕ – 26%
ಇರಾನ್ – 38%
ಹೇಳಲು ಸಾಧ್ಯವಿಲ್ಲ – 36%
ಮಾರ್ಚ್ ನಾಲ್ಕನೇ ವಾರ:
ಅಮೆರಿಕ – 15%
ಇರಾನ್ – 58%
ಹೇಳಲು ಸಾಧ್ಯವಿಲ್ಲ – 27%
ಸಮೀಕ್ಷೆ ಪ್ರಕಾರ 3 ವಾರಗಳಲ್ಲಿ ಭಾರತೀಯರ ಅಭಿಪ್ರಾಯದಲ್ಲಿ ಸ್ಪಷ್ಟ ಬದಲಾವಣೆ ಕಂಡುಬಂದಿತು. ಇರಾನ್ ಮೇಲಿನ ನಂಬಿಕೆ ವೇಗವಾಗಿ ಬೆಳೆಯಿತು.
2. ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತ ತಟಸ್ಥವಾಗಿರಬೇಕೇ?
ಎರಡನೇ ವಾರ – 58% ಹೌದು
ಮೂರನೇ ವಾರ – 61% ಹೌದು
ನಾಲ್ಕನೇ ವಾರ – 60% ಹೌದು
ಭಾರತ ಯುದ್ಧದಿಂದ ದೂರವಿರಬೇಕು ಎಂದು ಭಾರತದ ಬಹುಪಾಲು ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
3. ಭಾರತವು ಒಂದು ನಿಲುವು ತೆಗೆದುಕೊಳ್ಳಬೇಕಾದರೆ ಯಾವ ದೇಶದ ಪರವಾಗಿರಬೇಕು?
ಎರಡನೇ ವಾರ – ಇರಾನ್ 56%, ಅಮೆರಿಕ 44%
ಮೂರನೇ ವಾರ – ಇರಾನ್ 62%, ಅಮೆರಿಕ 38%
ನಾಲ್ಕನೇ ವಾರ – ಇರಾನ್ 74%, ಅಮೆರಿಕ 26%
ಪ್ರತಿ ವಾರ ಇರಾನ್‌ಗೆ ಭಾರತೀಯರ ಬೆಂಬಲ ಹೆಚ್ಚುತ್ತಿರುವುದನ್ನು ನೋಡಬಹುದು.
4. ಅಂತಾರಾಷ್ಟ್ರೀಯವಾಗಿ ಯಾವ ದೇಶವನ್ನು ನಂಬಬೇಕು?
ಎರಡನೇ ವಾರ – ರಷ್ಯಾ 67%, ಅಮೆರಿಕ 10%
ಮೂರನೇ ವಾರ – ರಷ್ಯಾ 73%, ಅಮೆರಿಕ 11%
ನಾಲ್ಕನೇ ವಾರ – ರಷ್ಯಾ 70%, ಅಮೆರಿಕ 14%
ಮೂರು ವಾರಗಳಲ್ಲಿಯೂ ಭಾರತೀಯರಿಗೆ ರಷ್ಯಾದ ಬಗ್ಗೆ ಹೆಚ್ಚು ಅಗಾಧವಾದ ವಿಶ್ವಾಸವಿದೆ.
5. ಭಾರತಕ್ಕೆ ಯಾವ ದೇಶ ಬೆದರಿಕೆಯಾಗಿದೆ?
ಎರಡನೇ ವಾರ – ಚೀನಾ 41%, ಪಾಕಿಸ್ತಾನ 30%
ಮೂರನೇ ವಾರ – ಚೀನಾ 44%, ಪಾಕಿಸ್ತಾನ 31%
ನಾಲ್ಕನೇ ವಾರ – ಚೀನಾ 44%, ಪಾಕಿಸ್ತಾನ 34%
ಜನರು ಪಾಕಿಸ್ತಾನಕ್ಕಿಂತಲೂ ಚೀನಾವನ್ನು ದೇಶಕ್ಕೆ ಪ್ರಮುಖ ಬೆದರಿಕೆಯಾಗಿ ನೋಡುತ್ತಿದ್ದಾರೆ ಎಂಬುದು ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.
6. ಭಾರತದ ವಿದೇಶಾಂಗ ನೀತಿ ಹೇಗಿದೆ?
ಹೆಚ್ಚಾಗಿ ತೃಪ್ತಿಕರವಾಗಿದೆ – 32%
ಸ್ವಲ್ಪ ಮಟ್ಟಿಗೆ ತೃಪ್ತಿಕರ – 21%
ಅತೃಪ್ತಿ – ಸುಮಾರು 42%
ಒಟ್ಟಾರೆಯಾಗಿ ಮಿಶ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಯಿತು.
7. ನಮ್ಮ ದೇಶದ ಯಾವ ವಲಯಗಳು ಯುದ್ಧದಿಂದ ಹೆಚ್ಚು ಪರಿಣಾಮ ಬೀರಿವೆ?
ಆರ್ಥಿಕತೆ – 45% ರಿಂದ 50%
ವಿದೇಶಾಂಗ ನೀತಿ – 13% ರಿಂದ 16%
ರಾಜಕೀಯ – 11% ರಿಂದ 13%
ಜನರ ಕಾಳಜಿ ಹೆಚ್ಚಾಗಿ ಆರ್ಥಿಕತೆಯ ಬಗ್ಗೆ ಇದೆ ಎಂದು ಈ ವರದಿ ಸ್ಪಷ್ಟಪಡಿಸುತ್ತದೆ.
8. ಗ್ಯಾಸ್ ಸಮಸ್ಯೆ: ಇದು ಇನ್ನೂ ಪರಿಣಾಮ ಬೀರುತ್ತಿದೆಯೇ?
ಎರಡನೇ ವಾರ – 64% ತೊಂದರೆ ನೀಡುತ್ತಿದೆ
ಮೂರನೇ ವಾರ – 65% ತೊಂದರೆ ನೀಡುತ್ತಿದೆ
ನಾಲ್ಕನೇ ವಾರ – 65% ತೊಂದರೆ ನೀಡುತ್ತಿದೆ
ಮೂರು ವಾರಗಳಲ್ಲಿಯೂ ಪರಿಸ್ಥಿತಿ ಬದಲಾಗಿಲ್ಲ ಎಂಬುದು ಸ್ಪಷ್ಟವಾಗಿದೆ.
9. ಇಂಧನ ಬೆಲೆ ಏರಿಕೆಯ ಬಗ್ಗೆ ನೀವು ಚಿಂತಿತರಾಗಿದ್ದೀರಾ?
82% ಜನರು ಬೆಲೆಗಳು ಹೆಚ್ಚಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹೆಚ್ಚಿನವರು 10%ರಿಂದ 50%ರಷ್ಟು ಹೆಚ್ಚಳವನ್ನು ಊಹಿಸಿದ್ದಾರೆ.
ಇಂಧನ ಕೊರತೆಯ ಸಂದರ್ಭದಲ್ಲಿ 66% ಜನರು ಸೌದೆ ಒಲೆಗಳತ್ತ ಮುಖ ಮಾಡಿದ್ದಾರೆ. 16% ಜನ ವಿದ್ಯುತ್ ಉಪಕರಣಗಳನ್ನು ಬಳಸುತ್ತಿದ್ದಾರೆ. 8% ಜನ ಅಡುಗೆ ಮಾಡುವುದನ್ನೇ ನಿಲ್ಲಿಸಿದ್ದಾರೆ.
10. ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿಶ್ವ ವ್ಯವಸ್ಥೆಯು ಬದಲಾಗುತ್ತದೆಯೇ?
ಸುಮಾರು 52%ರಷ್ಟು ಜನರು ಬದಲಾವಣೆಯನ್ನು ನಿರೀಕ್ಷಿಸುತ್ತಿದ್ದಾರೆ. ಈ ಸಮೀಕ್ಷೆಯು ಸ್ಪಷ್ಟ ಸಂದೇಶವನ್ನು ನೀಡುತ್ತದೆ. ಭಾರತದ ಜನರು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ದೂರವಿರಲು ಬಯಸುತ್ತಾರೆ. ಆದರೆ ನಿಲುವು ತೆಗೆದುಕೊಳ್ಳುವ ಅನಿವಾರ್ಯತೆ ಬಂದರೆ ಅವರು ಇರಾನ್ ಕಡೆಗೆ ಹೆಚ್ಚು ವಾಲುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಸಮೀಕ್ಷೆಯು ಇರಾನ್-ಅಮೆರಿಕ-ಇಸ್ರೇಲ್ ನಡುವಿನ ಯುದ್ಧದ ಪರಿಣಾಮವು ಈಗಾಗಲೇ ಭಾರತದ ಜನರ ಜೀವನವನ್ನು ತಲುಪಿದೆ ಎಂದು ಸ್ಪಷ್ಟಪಡಿಸುತ್ತದೆ. ಈ ಸಮೀಕ್ಷೆಯನ್ನು ದೂರವಾಣಿ ಮೂಲಕ ನಡೆಸಲಾಗಿತ್ತು. ಈ ಸಮೀಕ್ಷೆ ಜಾಗತಿಕ ಯುದ್ಧವನ್ನು ಭಾರತೀಯರು ಯಾವ ದೃಷ್ಟಿಕೋನದಿಂದ ನೋಡುತ್ತಿದ್ದಾರೆ ಎಂಬುದರ ಪ್ರತಿಬಿಂಬವಾಗಿದೆ ಎನ್ನಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:23 pm, Sat, 4 April 26