AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನ್ ದಿಗ್ಬಂಧನದ ನಡುವೆಯೂ ಹಾರ್ಮುಜ್ ಜಲಸಂಧಿಯನ್ನು ದಾಟಿದ 8 ಭಾರತೀಯ ಹಡಗು

ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ಯುದ್ಧ ಸಾರಿದಾಗಿನಿಂದ ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ನಿರ್ಬಂಧ ಹೇರಿದೆ. ಇರಾನ್‌ನ ನಿರ್ಬಂಧದ ನಡುವೆಯೂ ಭಾರತದ 8 ಹಡಗುಗಳು ಹಾರ್ಮುಜ್ ದಾಟಿ ಬಂದಿವೆ. ಬೇರೆ ದೇಶಗಳಿಗೆ ಹೋಲಿಸಿದರೆ ಈ ಮಾರ್ಗದಲ್ಲಿ ಅತಿ ಹೆಚ್ಚು ಹಡಗುಗಳನ್ನು ದಾಟಿಸಿದ ಹೆಗ್ಗಳಿಕೆ ಭಾರತದ್ದಾಗಿದೆ. ಭಾರತ ಹಾರ್ಮುಜ್ ಜಲಸಂಧಿಯ ಪ್ರಮುಖ ಬಳಕೆದಾರರಲ್ಲಿ ಒಂದಾಗಿದೆ. ಭಾರತ ಸೇರಿದಂತೆ 5 ದೇಶಗಳ ತೈಲ ಟ್ಯಾಂಕರ್​ಗಳ ಸಂಚಾರಕ್ಕೆ ಇರಾನ್ ಅನುಮತಿ ನೀಡಿದೆ.

ಇರಾನ್ ದಿಗ್ಬಂಧನದ ನಡುವೆಯೂ ಹಾರ್ಮುಜ್ ಜಲಸಂಧಿಯನ್ನು ದಾಟಿದ 8 ಭಾರತೀಯ ಹಡಗು
Indian Oil Tanker Image Credit source: PTI
ಸುಷ್ಮಾ ಚಕ್ರೆ
|

Updated on: Apr 04, 2026 | 3:32 PM

Share

ನವದೆಹಲಿ, ಏಪ್ರಿಲ್ 4: ಫೆಬ್ರವರಿ 28ರಂದು ಇರಾನ್ (Iran War) ಮೇಲೆ ಯುಎಸ್-ಇಸ್ರೇಲ್ ದಾಳಿಗಳು ಪೂರ್ಣ ಪ್ರಮಾಣದ ಯುದ್ಧವನ್ನು ಪ್ರಚೋದಿಸಿದ ದಿನದಿಂದ ಈ ಪ್ರದೇಶದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ಹೊರತಾಗಿಯೂ ಭಾರತವು ಹಾರ್ಮುಜ್ ಜಲಸಂಧಿಯ ಮೂಲಕ ಸ್ಥಿರವಾದ ಸಮುದ್ರ ಸಂಚಾರವನ್ನು ಕಾಯ್ದುಕೊಂಡಿದೆ. ಭಾರತಕ್ಕೆ ಸಂಬಂಧಿಸಿದ 8 ಹಡಗುಗಳು ನಿರ್ಣಾಯಕ ಚಾಕ್‌ಪಾಯಿಂಟ್ ಅನ್ನು ದಾಟಿವೆ. ಬೇರೆಲ್ಲ ದೇಶಗಳಿಗೆ ಹೋಲಿಸಿದರೆ ಭಾರತದ ಅತಿ ಹೆಚ್ಚು ಹಡಗುಗಳು ಈ ಮಾರ್ಗವನ್ನು ದಾಟಿವೆ.

ಜಾಗತಿಕ ತೈಲ ಮತ್ತು ಅನಿಲ ವ್ಯಾಪಾರದ ಸುಮಾರು 5ನೇ 1 ಭಾಗದಷ್ಟು ಇರುವ ಪ್ರಮುಖ ಕಡಲ ಚಾಕ್‌ಪಾಯಿಂಟ್ ಆಗಿರುವ ಹಾರ್ಮುಜ್ ಜಲಸಂಧಿಯ ಮೇಲೆ ಯುಎಸ್-ಇಸ್ರೇಲಿ ದಾಳಿಯ ನಂತರ ಇರಾನ್ ನಿರ್ಬಂಧ ಹೇರಿತು. ಆದರೆ, ಭಾರತ, ರಷ್ಯಾ, ಚೀನಾ ಮತ್ತು ಪಾಕಿಸ್ತಾನ ಸೇರಿದಂತೆ 5 ತನ್ನ ಮಿತ್ರ ರಾಷ್ಟ್ರಗಳಿಗೆ ಈ ಜಲಮಾರ್ಗವು ಮುಕ್ತವಾಗಿತ್ತು. ಇಂದು ಮುಂಜಾನೆ ಎಲ್‌ಪಿಜಿ ಟ್ಯಾಂಕರ್ ‘ಗ್ರೀನ್ ಸಾನ್ವಿ’ ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿ ಭಾರತದ ಕಡೆಗೆ ಸಾಗುತ್ತಿದೆ. ಇದು ಹಾರ್ಮುಜ್ ಜಲಸಂಧಿ ಮಾರ್ಗದ ಮೂಲಕ ಹಾದುಹೋಗುವ 8ನೇ ಹಡಗು ಎನಿಸಿಕೊಂಡಿದೆ.

ಇದನ್ನೂ ಓದಿ: ಭಾರತಕ್ಕೆ ಬರುತ್ತಿದ್ದ ಇರಾನ್​ನ ತೈಲ ತುಂಬಿದ ಹಡಗು ಇದ್ದಕ್ಕಿದ್ದಂತೆ ಚೀನಾದ ಕಡೆ ತಿರುಗಿದ್ದೇಕೆ?

ಈ ಮೂಲಕ ಯುದ್ಧಪೀಡಿತ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋದ ಅತಿ ಹೆಚ್ಚು ಹಡಗುಗಳನ್ನು ಹೊಂದಿರುವ ದೇಶಗಳಲ್ಲಿ ಭಾರತ ಒಂದಾಗಿದೆ. ಇದುವರೆಗೂ ಭಾರತದ ಶಿವಾಲಿಕ್, ನಂದಾ ದೇವಿ, ಜಗ್ ಲಾಡ್ಕಿ, ಪೈನ್ ಗ್ಯಾಸ್, ಜಗ್ ವಸಂತ, BW ಟೈರ್, BW ಎಲ್ಮ್, ಗ್ರೀನ್ ಸಾನ್ವಿ ಹಾರ್ಮುಜ್ ಜಲಸಂಧಿಯನ್ನು ದಾಟಿವೆ.

ಸುಮಾರು 485 ಭಾರತೀಯ ನಾವಿಕರನ್ನು ಹೊತ್ತ 15ಕ್ಕೂ ಹೆಚ್ಚು ಭಾರತೀಯ ಧ್ವಜ ಹೊಂದಿರುವ ಹಡಗುಗಳು ಗಲ್ಫ್‌ನಲ್ಲಿ ಉಳಿದಿವೆ. ಏಕೆಂದರೆ ಯುದ್ಧವು ಅಂತ್ಯವಿಲ್ಲದೆ ಮುಂದುವರಿಯುತ್ತದೆ. ಭಾರತೀಯ ಮತ್ತು ಇತರ ಹಡಗುಗಳಿಗೆ ಸಮುದ್ರ ಮಾರ್ಗಗಳನ್ನು ಸುರಕ್ಷಿತಗೊಳಿಸಲು ಭಾರತೀಯ ನೌಕಾಪಡೆಯು ಓಮನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದಲ್ಲಿ ವರ್ಷಗಳಿಂದ ಇದೆ ಎಂದು ವಿದೇಶಾಂಗ ಸಚಿವಾಲಯ ದೃಢಪಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us