ಮಗಳನ್ನು ಕೊಲ್ಲೋ ಮನ್ಸಿಲ್ಲ ನಾನೇ ಹೋಗ್ತೀನಿ, ತಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಕ್ಕೆ ತಂದೆ ಆತ್ಮಹತ್ಯೆ
ಮಗಳನ್ನು ಕೊಲ್ಲುವ ಮನಸ್ಸಿಲ್ಲ ನಾನೇ ಹೋಗುತ್ತೇನೆಂದು ತಂದೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ವಾಲಿಯರ್ನಲ್ಲಿ ನಡೆದಿದೆ. ತಮ್ಮ ಇಚ್ಛೆಗೆ ವಿರುದ್ಧವಾಗಿ ಬೇರೆ ಸಮುದಾಯದವನನ್ನು ಮಗಳು ಮದುವೆಯಾಗಿದ್ದಕ್ಕೆ ಬೇಸರಗೊಂಡು ವ್ಯಕ್ತಿ ಆತ್ಮಹತ್ಯೆಗೆ ಶಾರಣಾಗಿದ್ದಾರೆ. ಗುಂಡಿನ ಸದ್ದು ಕೇಳಿ ಮಲಗುವ ಕೋಣೆಗೆ ಓಡಿ ಬಂದಾಗ ಅವರು ಶವವಾಗಿದ್ದರು. ಮೃತರ ಮಗಳು ಸುಮಾರು 15 ದಿನಗಳ ಹಿಂದೆ ಬೇರೆ ಸಮುದಾಯಕ್ಕೆ ಸೇರಿದ ಯುವಕನೊಂದಿಗೆ ಮನೆ ಬಿಟ್ಟು ಹೋಗಿದ್ದಳು. ನಂತರ ಆಕೆಯನ್ನು ಇಂದೋರ್‌ಗೆ ಪತ್ತೆಹಚ್ಚಿ ಕರೆತರಲಾಯಿತು.

ಗ್ವಾಲಿಯರ್, ಏಪ್ರಿಲ್ 13: ತಮ್ಮ ಇಚ್ಛೆಗೆ ವಿರುದ್ಧವಾಗಿ ಮಗಳು ಮದುವೆ(Marriage)ಯಾಗಿದ್ದಕ್ಕೆ ತಂದೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದಿದೆ. 49 ವರ್ಷದ ಮೆಡಿಕಲ್ ಮಾಲೀಕರೊಬ್ಬರು ಮಗಳು ತಮ್ಮ ಮಾತನ್ನು ಮೀರಿ ಬೇರೆ ಯುವಕನನ್ನು ಮದುವೆಯಾಗಿದ್ದ ಬೇಸರಗೊಂಡು ಆತ್ಮಹತ್ಯೆಯ ದಾರಿ ತುಳಿದಿದ್ದಾರೆ.
ಎನ್ಡಿಟಿವಿ ವರದಿ ಪ್ರಕಾರ, ಗುಂಡಿನ ಸದ್ದು ಕೇಳಿ ಮಲಗುವ ಕೋಣೆಗೆ ಓಡಿ ಬಂದಾಗ ಅವರು ಶವವಾಗಿದ್ದರು. ಮೃತರ ಮಗಳು ಸುಮಾರು 15 ದಿನಗಳ ಹಿಂದೆ ಬೇರೆ ಸಮುದಾಯಕ್ಕೆ ಸೇರಿದ ಯುವಕನೊಂದಿಗೆ ಮನೆ ಬಿಟ್ಟು ಹೋಗಿದ್ದಳು. ನಂತರ ಆಕೆಯನ್ನು ಇಂದೋರ್‌ಗೆ ಪತ್ತೆಹಚ್ಚಿ ಕರೆತರಲಾಯಿತು. ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ, ತಾನು ಕಾನೂನುಬದ್ಧವಾಗಿ ಮದುವೆಯಾಗಿರುವುದಾಗಿ ಮತ್ತು ತನ್ನ ಪತಿಯೊಂದಿಗೆ ಹೋಗಲು ನಿರ್ಧರಿಸಿರುವುದಾಗಿ ಅವಳು ಹೇಳಿದ್ದಳು.
ಮೆಡಿಕಲ್ ಸ್ಟೋರ್ ಮಾಲೀಕರು ತಮ್ಮ ಮಗಳ ಆಧಾರ್ ಕಾರ್ಡ್‌ನ ಪ್ರಿಂಟ್‌ಔಟ್‌ನಲ್ಲಿ ತಮ್ಮ ಮನಸ್ಸಿಗಾದ ಬೇಸರದ ಬಗ್ಗೆ ಬರೆದಿದ್ದಾರೆ. ‘‘ನೀನು ತಪ್ಪು ಮಾಡಿದ್ದೀಯಾ, ನಾನು ಹೋಗುತ್ತಿದ್ದೇನೆ, ನಿಮ್ಮಿಬ್ಬರನ್ನು ನಾನು ಕೊಲ್ಲಬಹುದಿತ್ತು, ಆದರೆ ಮಗಳನ್ನು ಹೇಗೆ ಕೊಲ್ಲಲಿ, ಹೀಗಾಗಿ ನಾನೇ ಹೋಗುತ್ತಿದ್ದೇನೆ ’’ ಎಂದು ಬರೆದಿದ್ದರು.
ಮತ್ತಷ್ಟು ಓದಿ: ಹೆಂಡತಿಯನ್ನು ಕೊಂದು ಚರಂಡಿಗೆ ಎಸೆದ ಗಂಡ; ಮೂಗುತಿಯಿಂದ ಬಯಲಾಯ್ತು ಕೊಲೆಯ ರಹಸ್ಯ
ಮಗಳೇ ನೀನು ಮಾಡಿದ್ದು ಅರಿಯಲ್ಲ, ಅವನಿಗೆ ತಂದೆ ನೋವು ಅರ್ಥವಾಗಲಿಲ್ಲವೇ, ನಮ್ಮ ಇಡೀ ಕುಟುಂಬ ನಾಶವಾಗಿದೆ ಮತ್ತು ಸಮಾಜದಲ್ಲಿ ಮುಖ ತೋರಿಸುವ ಪರಿಸ್ಥಿತಿಯು ನನಗಿಲ್ಲ ಎಂದು ಬರೆದಿದ್ದರು.
ಮೆಡಿಕಲ್ ಶಾಪ್ ಮಾಲೀಕರ ಸಂಬಂಧಿಕರು ಮೃತ ವ್ಯಕ್ತಿ ಮಗಳನ್ನು ಮದುವೆಯಾದ ವ್ಯಕ್ತಿಯ ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಆ ವ್ಯಕ್ತಿಯ ತಂದೆಯನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೋಗಿ ಪ್ರಜ್ಞೆ ತಪ್ಪುವವರೆಗೂ ಥಳಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸ್ಥಳದಲ್ಲಿದ್ದವರು ಮಧ್ಯಪ್ರವೇಶಿಸಿ ಗಾಯಾಳುವನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ