AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಂಡತಿಯನ್ನು ಕೊಂದು ಚರಂಡಿಗೆ ಎಸೆದ ಗಂಡ; ಮೂಗುತಿಯಿಂದ ಬಯಲಾಯ್ತು ಕೊಲೆಯ ರಹಸ್ಯ

ದೆಹಲಿಯ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೊಂದು, ಆಕೆಯ ಶವವನ್ನು ಚರಂಡಿಗೆ ಎಸೆದಿದ್ದ. 1 ತಿಂಗಳ ಹಿಂದೆಯೇ ಈ ಕೊಲೆ ನಡೆದಿತ್ತು. 47 ವರ್ಷದ ಮಹಿಳೆಯನ್ನು ಆಕೆಯ ಪತಿ ಕೊಂದು ಚರಂಡಿಗೆ ಎಸೆದಿದ್ದ. ಆದರೆ, ಆತ ಮಾಡಿದ ಸಣ್ಣದೊಂದು ತಪ್ಪಿನಿಂದ 1 ತಿಂಗಳ ನಂತರ ಇದೀಗ ಸಿಕ್ಕಿಬಿದ್ದಿದ್ದಾನೆ. ಹಾಗಾದರೆ, ಪೊಲೀಸರು ಈ ಕೊಲೆ ರಹಸ್ಯವನ್ನು ಹೇಗೆ ಭೇದಿಸಿದರೆಂದು ತಿಳಿಯಲು ಈ ಸುದ್ದಿ ಓದಿ.

ಹೆಂಡತಿಯನ್ನು ಕೊಂದು ಚರಂಡಿಗೆ ಎಸೆದ ಗಂಡ; ಮೂಗುತಿಯಿಂದ ಬಯಲಾಯ್ತು ಕೊಲೆಯ ರಹಸ್ಯ
Crime
Follow us
ಸುಷ್ಮಾ ಚಕ್ರೆ
|

Updated on: Apr 11, 2025 | 9:37 PM

ನವದೆಹಲಿ, ಏಪ್ರಿಲ್ 11: ಕೆಲವೊಮ್ಮೆ ನಾವು ಮಾಡುವ ಸಣ್ಣ ತಪ್ಪೇ ನಮ್ಮನ್ನು ಸಿಕ್ಕಿಹಾಕಿಸುತ್ತದೆ. ದೆಹಲಿಯ ಉದ್ಯಮಿಯೊಬ್ಬ ಬಹಳ ಪ್ಲಾನ್ ಮಾಡಿ ತನ್ನ ಹೆಂಡತಿಯನ್ನು ಕೊಂದಿದ್ದ. ಯಾರಿಗೂ ಗೊತ್ತಾಗಬಾರದೆಂದು ಮುನ್ನೆಚ್ಚರಿಕಾ ಕ್ರಮವನ್ನು ಕೂಡ ತೆಗೆದುಕೊಂಡಿದ್ದ. ಎಲ್ಲವೂ ಆತನ ಪ್ಲಾನ್ ಪ್ರಕಾರವೇ ಆಗಿತ್ತು. ತಾನು ಸಿಕ್ಕಿಬೀಳುವುದಿಲ್ಲ ಎಂಬ ಹುಂಬ ಧೈರ್ಯದಲ್ಲಿದ್ದ ಆತ ಇದೀಗ ಜೈಲು ಕಂಬಿ ಎಣಿಸುತ್ತಿದ್ದಾನೆ. ಆತನ ಹೆಂಡತಿಯ ಮೂಗುತಿಯಿಂದಾಗಿ ಆತ ಕೊಲೆ ಕೇಸಿನಲ್ಲಿ ಸಿಕ್ಕಿಬಿದ್ದಿದ್ದಾನೆ. ಏನಿದು ಪ್ರಕರಣ?

ದೆಹಲಿಯ ಉದ್ಯಮಿಯಾದ ಅನಿಲ್ ಕುಮಾರ್ ತನ್ನ ಪತ್ನಿಯ ಕುಟುಂಬಕ್ಕೆ ತಾನು ಯಾರೊಂದಿಗೂ ಮಾತನಾಡುವ ಮನಸ್ಥಿತಿಯಲ್ಲಿಲ್ಲ ಎಂದು ಹೇಳುತ್ತಲೇ ಇದ್ದ. ಸುಮಾರು ಒಂದು ತಿಂಗಳ ಹಿಂದೆಯೇ ಆತ ತನ್ನ ಹೆಂಡತಿಯನ್ನು ಕೊಂದಿದ್ದ. ತಮ್ಮ ಮಗಳೆಲ್ಲಿ ಎಂದು ಆಕೆಯ ಪೋಷಕರು ಕೇಳಿದಾಗ ಮಾತು ಮರೆಸುತ್ತಿದ್ದ. ಇದರಿಂದ ಅವರಿಗೆ ಅನುಮಾನ ಮೂಡಿತ್ತು. ಪೊಲೀಸರು ಅವರನ್ನು ಸಂಪರ್ಕಿಸಿ ನಿಮ್ಮ ಮಗಳ ಶವ ಪತ್ತೆಯಾಗಿದೆ ಎಂದು ಹೇಳುವವರೆಗೂ ಆ ಕುಟುಂಬಕ್ಕೆ ತಮ್ಮ ಮಗಳು ಬದುಕಿಲ್ಲವೆಂಬ ವಿಷಯವೇ ಗೊತ್ತಿರಲಿಲ್ಲ. ಏಪ್ರಿಲ್ 1ರಂದು ಆ ಮಹಿಳೆಯ ಶವವನ್ನು ಆಕೆಯ ಕುಟುಂಬ ಗುರುತಿಸಿದೆ.

ಸೀಮಾ ಸಿಂಗ್ ಎಂಬ ಮಹಿಳೆ ದೆಹಲಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಅನಿಲ್ ಕುಮಾರ್ ಅವರೊಂದಿಗೆ 20 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆಕೆಯ ಶವ ಮಾರ್ಚ್ 15ರಂದು ದೆಹಲಿಯ ಚರಂಡಿಯಲ್ಲಿ ಪತ್ತೆಯಾಗಿತ್ತು. ಆಕೆಯ ಶವವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ಕಲ್ಲು ಮತ್ತು ಸಿಮೆಂಟ್ ಚೀಲಕ್ಕೆ ಕಟ್ಟಲಾಗಿತ್ತು. ಆಕೆಯ ಕೊಳೆತ ಶವ ಪತ್ತೆಯಾದ ನಂತರ, ಪೊಲೀಸರು ತನಿಖೆ ಆರಂಭಿಸಿದರು. ಅದು ಅವರನ್ನು ದಕ್ಷಿಣ ದೆಹಲಿಯಲ್ಲಿರುವ ಆಭರಣ ಅಂಗಡಿಗೆ ಕರೆದೊಯ್ಯಿತು.

ಇದನ್ನೂ ಓದಿ
Image
WITT: ಟಿವಿ9 ಶೃಂಗಸಭೆಯಲ್ಲಿ ಕೇಂದ್ರ ಸಚಿವರ ಸಂದರ್ಶನ, ಲೈವ್ ನೋಡಿ
Image
WITT 2025: ಪ್ರಧಾನಿಯನ್ನು ಶ್ಲಾಘಿಸಿದ ಟಿವಿ9 ನೆಟ್ವರ್ಕ್ ಸಿಇಒ
Image
WITT 2025: ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’: ಮೋದಿ ಭಾಷಣ
Image
ಟಿವಿ9 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ದೇಶಕ್ಕೆ ನೀಡಿದ ಸಂದೇಶ ಏನು?

ಇದನ್ನೂ ಓದಿ: ಮಾಜಿ ಶಾಸಕರ ಸಂಬಂಧಿ, ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು: ಕಾರಣ ನಿಗೂಢ

ಮೃತ ಮಹಿಳೆಯ ದೇಹದ ಮೇಲೆ ಮೂಗುತಿಯನ್ನು ನೋಡಿದ ಪೊಲೀಸರು ಸುತ್ತಮುತ್ತಲಿನ ಆಭರಣದ ಅಂಗಡಿಯ ದಾಖಲೆಗಳನ್ನು ಪರಿಶೀಲಿಸಿದರು. ಅಲ್ಲಿ ಅನಿಲ್ ಕುಮಾರ್ ಅವರ ಹೆಸರಿನಲ್ಲಿ ಬಿಲ್ ಇದ್ದ ಕಾರಣ ಅವರನ್ನು ಪತ್ತೆಹಚ್ಚಲು ಕಾರಣವಾಯಿತು. ಅನಿಲ್ ಕುಮಾರ್ ದೆಹಲಿಯಲ್ಲಿ ಆಸ್ತಿ ವ್ಯಾಪಾರಿಯಾಗಿದ್ದು, ಅವರು ಗುರುಗ್ರಾಮ್‌ನ ತೋಟದ ಮನೆಯಲ್ಲಿ ವಾಸಿಸುತ್ತಿದ್ದರು.

ದಾಖಲೆಗಳಲ್ಲಿ ಉಲ್ಲೇಖಿಸಲಾದ ವಿಳಾಸವನ್ನು ಪರಿಶೀಲಿಸಿ ಅನಿಲ್ ಕುಮಾರ್ ಅವರ ಮನೆಗೆ ಹೋದಾಗ ಸೀಮಾ ಸಿಂಗ್ ಅವರ ಪತ್ನಿ ಎಂದು ಕಂಡುಬಂದಿತು. ಪೊಲೀಸರು ಸೀಮಾ ಸಿಂಗ್ ಜೊತೆ ಮಾತನಾಡಬೇಕೆಂದು ಹೇಳಿದಾಗ ಅನಿಲ್ ಕುಮಾರ್ ಆಕೆ ಮೊಬೈಲನ್ನು ಮನೆಯಲ್ಲೇ ಬಿಟ್ಟು ಬೃಂದಾವನಕ್ಕೆ ಹೋಗಿದ್ದಾಳೆ ಎಂದು ಹೇಳಿದ್ದರು. ಇದರಿಂದ ಪೊಲೀಸರು ಅನುಮಾನಗೊಂಡು ಅನಿಲ್ ಕುಮಾರ್ ಅವರ ದೆಹಲಿ ಮೂಲದ ಕಚೇರಿಗೆ ಹೋದರು.

ಇದನ್ನೂ ಓದಿ: ರಾಮನಗರ: ಜಮೀನು ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ ಕೇಸ್​, 12 ಮಂದಿಗೆ ಜೀವಾವಧಿ ಶಿಕ್ಷೆ

ಅಲ್ಲಿ ಅವರಿಗೆ ಸೀಮಾಳ ತಾಯಿಯ ಫೋನ್ ನಂಬರ್ ಸಿಕ್ಕಿತು. ಅವರನ್ನು ವಿಚಾರಿಸಿದಾಗ ತಾವು ತಮ್ಮ ಮಗಳೊಂದಿಗೆ ಒಂದು ತಿಂಗಳಿನಿಂದ ಮಾತನಾಡಿಲ್ಲ. ಆಕೆ ಹೇಗಿದ್ದಾಳೋ ಗೊತ್ತಿಲ್ಲ ಎಂದರು. ಅಳಿಯ ಅನಿಲ್ ಕುಮಾರ್ ಆಕೆ ಜೈಪುರಕ್ಕೆ ಹೋಗಿದ್ದಾಳೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು. ಇದರಿಂದ ಪೊಲೀಸರು ಅನುಮಾನ ಬಲವಾಗಿ, ಅನಿಲ್ ಕುಮಾರ್​​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ವೇಳೆ ತಾನೇ ಹೆಂಡತಿಯ ಕತ್ತು ಹಿಸುಕಿ ಕೊಂದಿದ್ದಾಗಿ ಅನಿಲ್ ಒಪ್ಪಿಕೊಂಡಿದ್ದಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ