ಮಗಳನ್ನು ಕೊಲ್ಲೋ ಮನ್ಸಿಲ್ಲ ನಾನೇ ಹೋಗ್ತೀನಿ, ತಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಕ್ಕೆ ತಂದೆ ಆತ್ಮಹತ್ಯೆ

ಮಗಳನ್ನು ಕೊಲ್ಲುವ ಮನಸ್ಸಿಲ್ಲ ನಾನೇ ಹೋಗುತ್ತೇನೆಂದು ತಂದೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ವಾಲಿಯರ್​ನಲ್ಲಿ ನಡೆದಿದೆ. ತಮ್ಮ ಇಚ್ಛೆಗೆ ವಿರುದ್ಧವಾಗಿ ಬೇರೆ ಸಮುದಾಯದವನನ್ನು ಮಗಳು ಮದುವೆಯಾಗಿದ್ದಕ್ಕೆ ಬೇಸರಗೊಂಡು ವ್ಯಕ್ತಿ ಆತ್ಮಹತ್ಯೆಗೆ ಶಾರಣಾಗಿದ್ದಾರೆ. ಗುಂಡಿನ ಸದ್ದು ಕೇಳಿ ಮಲಗುವ ಕೋಣೆಗೆ ಓಡಿ ಬಂದಾಗ ಅವರು ಶವವಾಗಿದ್ದರು. ಮೃತರ ಮಗಳು ಸುಮಾರು 15 ದಿನಗಳ ಹಿಂದೆ ಬೇರೆ ಸಮುದಾಯಕ್ಕೆ ಸೇರಿದ ಯುವಕನೊಂದಿಗೆ ಮನೆ ಬಿಟ್ಟು ಹೋಗಿದ್ದಳು. ನಂತರ ಆಕೆಯನ್ನು ಇಂದೋರ್‌ಗೆ ಪತ್ತೆಹಚ್ಚಿ ಕರೆತರಲಾಯಿತು.

ಮಗಳನ್ನು ಕೊಲ್ಲೋ ಮನ್ಸಿಲ್ಲ ನಾನೇ ಹೋಗ್ತೀನಿ, ತಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಕ್ಕೆ ತಂದೆ ಆತ್ಮಹತ್ಯೆ
ಮದುವೆ
Image Credit source: 1to1 Help

Updated on: Apr 13, 2025 | 10:21 AM

ಗ್ವಾಲಿಯರ್, ಏಪ್ರಿಲ್ 13: ತಮ್ಮ ಇಚ್ಛೆಗೆ ವಿರುದ್ಧವಾಗಿ ಮಗಳು ಮದುವೆ(Marriage)ಯಾಗಿದ್ದಕ್ಕೆ ತಂದೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನಡೆದಿದೆ. 49 ವರ್ಷದ ಮೆಡಿಕಲ್ ಮಾಲೀಕರೊಬ್ಬರು ಮಗಳು ತಮ್ಮ ಮಾತನ್ನು ಮೀರಿ ಬೇರೆ ಯುವಕನನ್ನು ಮದುವೆಯಾಗಿದ್ದ ಬೇಸರಗೊಂಡು ಆತ್ಮಹತ್ಯೆಯ ದಾರಿ ತುಳಿದಿದ್ದಾರೆ.

ಎನ್​ಡಿಟಿವಿ ವರದಿ ಪ್ರಕಾರ, ಗುಂಡಿನ ಸದ್ದು ಕೇಳಿ ಮಲಗುವ ಕೋಣೆಗೆ ಓಡಿ ಬಂದಾಗ ಅವರು ಶವವಾಗಿದ್ದರು. ಮೃತರ ಮಗಳು ಸುಮಾರು 15 ದಿನಗಳ ಹಿಂದೆ ಬೇರೆ ಸಮುದಾಯಕ್ಕೆ ಸೇರಿದ ಯುವಕನೊಂದಿಗೆ ಮನೆ ಬಿಟ್ಟು ಹೋಗಿದ್ದಳು. ನಂತರ ಆಕೆಯನ್ನು ಇಂದೋರ್‌ಗೆ ಪತ್ತೆಹಚ್ಚಿ ಕರೆತರಲಾಯಿತು. ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ, ತಾನು ಕಾನೂನುಬದ್ಧವಾಗಿ ಮದುವೆಯಾಗಿರುವುದಾಗಿ ಮತ್ತು ತನ್ನ ಪತಿಯೊಂದಿಗೆ ಹೋಗಲು ನಿರ್ಧರಿಸಿರುವುದಾಗಿ ಅವಳು ಹೇಳಿದ್ದಳು.

ಮೆಡಿಕಲ್ ಸ್ಟೋರ್ ಮಾಲೀಕರು ತಮ್ಮ ಮಗಳ ಆಧಾರ್ ಕಾರ್ಡ್‌ನ ಪ್ರಿಂಟ್‌ಔಟ್‌ನಲ್ಲಿ ತಮ್ಮ ಮನಸ್ಸಿಗಾದ ಬೇಸರದ ಬಗ್ಗೆ ಬರೆದಿದ್ದಾರೆ. ‘‘ನೀನು ತಪ್ಪು ಮಾಡಿದ್ದೀಯಾ, ನಾನು ಹೋಗುತ್ತಿದ್ದೇನೆ, ನಿಮ್ಮಿಬ್ಬರನ್ನು ನಾನು ಕೊಲ್ಲಬಹುದಿತ್ತು, ಆದರೆ ಮಗಳನ್ನು ಹೇಗೆ ಕೊಲ್ಲಲಿ, ಹೀಗಾಗಿ ನಾನೇ ಹೋಗುತ್ತಿದ್ದೇನೆ ’’ ಎಂದು ಬರೆದಿದ್ದರು.

ಇದನ್ನೂ ಓದಿ
WITT: ಟಿವಿ9 ಶೃಂಗಸಭೆಯಲ್ಲಿ ಕೇಂದ್ರ ಸಚಿವರ ಸಂದರ್ಶನ, ಲೈವ್ ನೋಡಿ
WITT 2025: ಪ್ರಧಾನಿಯನ್ನು ಶ್ಲಾಘಿಸಿದ ಟಿವಿ9 ನೆಟ್ವರ್ಕ್ ಸಿಇಒ
WITT 2025: ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’: ಮೋದಿ ಭಾಷಣ
ಟಿವಿ9 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ದೇಶಕ್ಕೆ ನೀಡಿದ ಸಂದೇಶ ಏನು?

ಮತ್ತಷ್ಟು ಓದಿ: ಹೆಂಡತಿಯನ್ನು ಕೊಂದು ಚರಂಡಿಗೆ ಎಸೆದ ಗಂಡ; ಮೂಗುತಿಯಿಂದ ಬಯಲಾಯ್ತು ಕೊಲೆಯ ರಹಸ್ಯ

ಮಗಳೇ ನೀನು ಮಾಡಿದ್ದು ಅರಿಯಲ್ಲ, ಅವನಿಗೆ ತಂದೆ ನೋವು ಅರ್ಥವಾಗಲಿಲ್ಲವೇ, ನಮ್ಮ ಇಡೀ ಕುಟುಂಬ ನಾಶವಾಗಿದೆ ಮತ್ತು ಸಮಾಜದಲ್ಲಿ ಮುಖ ತೋರಿಸುವ ಪರಿಸ್ಥಿತಿಯು ನನಗಿಲ್ಲ ಎಂದು ಬರೆದಿದ್ದರು.

ಮೆಡಿಕಲ್ ಶಾಪ್ ಮಾಲೀಕರ ಸಂಬಂಧಿಕರು ಮೃತ ವ್ಯಕ್ತಿ ಮಗಳನ್ನು ಮದುವೆಯಾದ ವ್ಯಕ್ತಿಯ ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಆ ವ್ಯಕ್ತಿಯ ತಂದೆಯನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೋಗಿ ಪ್ರಜ್ಞೆ ತಪ್ಪುವವರೆಗೂ ಥಳಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸ್ಥಳದಲ್ಲಿದ್ದವರು ಮಧ್ಯಪ್ರವೇಶಿಸಿ ಗಾಯಾಳುವನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us