ಕುಡಿದ ಮತ್ತಿನಲ್ಲಿ ಪ್ರೇಯಸಿಯನ್ನು ಕೊಂದು, ಆಕೆಯ ಶವವನ್ನು ಕಾರಲ್ಲೇ ಬಿಟ್ಟು ಮಲಗಿದ ಆಸಾಮಿ!
ನೈಋತ್ಯ ದೆಹಲಿಯಲ್ಲಿರುವ ತಮ್ಮ ಮನೆಯಲ್ಲಿ ವ್ಯಕ್ತಿಯೊಬ್ಬ ತನ್ನ ಲಿವ್-ಇನ್ ಸಂಗಾತಿಯನ್ನು ಉಸಿರುಗಟ್ಟಿಸಿ ಕೊಂದು, ಅದನ್ನು ವಿಲೇವಾರಿ ಮಾಡುವ ಉದ್ದೇಶದಿಂದ ಆಕೆಯ ಶವವನ್ನು ತನ್ನ ಕಾರಿನಲ್ಲಿ ಇರಿಸಿದನು. ಆದರೆ ಕುಡಿದ ಮತ್ತಿನಲ್ಲಿ ಶವವನ್ನು ಕಾರಲ್ಲೇ ಬಿಟ್ಟು ಮನೆಗೆ ತೆರಳಿ ನಿದ್ರೆ ಮಾಡಿದನು. ಮರುದಿನ ಬೆಳಿಗ್ಗೆ ಆ ಮನೆಯ ಹೊರಗೆ ನಿಲ್ಲಿಸಿದ್ದ ಕಾರಿನಲ್ಲಿ ಮಹಿಳೆಯ ಶವ ಬಿದ್ದಿರುವುದನ್ನು ನೆರೆಹೊರೆಯವರು ಗಮನಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ನವದೆಹಲಿ, ನವೆಂಬರ್ 27: ದೆಹಲಿಯಲ್ಲಿ (Delhi) ಕುಡಿದ ಮತ್ತಿನಲ್ಲಿ 44 ವರ್ಷದ ಮಹಿಳೆಯನ್ನು ಆಕೆಯ ಲಿವ್-ಇನ್ ಸಂಗಾತಿ ಕೊಲೆ ಮಾಡಿರುವ ಘಟನೆ ನಡೆದಿದೆ. ಆತ ಆಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ, ಕುಡಿದ ಅಮಲಿನಲ್ಲಿ ಆಕೆಯ ಶವವನ್ನು ಕಾರಿನ ಡಿಕ್ಕಿಯಲ್ಲಿಟ್ಟಿದ್ದಾನೆ. ಆದರೆ, ಕುಡಿದಿದ್ದು ಜಾಸ್ತಿಯಾಗಿದ್ದರಿಂದ ಕಾರು ಚಲಾಯಿಸಲು ಸಾಧ್ಯವಾಗದ ಕಾರಣದಿಂದ ಆಕೆಯ ಶವವನ್ನು ಅಲ್ಲೇ ಬಿಟ್ಟು ಮನೆಗೆ ಹೋಗಿ ಮಲಗಿದ್ದಾನೆ.
35 ವರ್ಷದ ವೀರೇಂದ್ರ ಎಂಬ ಆರೋಪಿಯು ಕುಡಿದ ಅಮಲಿನಲ್ಲಿದ್ದ. ಆತ ಆ ಮಹಿಳೆಯ ಶವವನ್ನು ವಿಲೇವಾರಿ ಮಾಡುವ ಉದ್ದೇಶದಿಂದ ತನ್ನ ಕಾರಿನ ಡಿಕ್ಕಿಗೆ ತುಂಬಿದ್ದ. ಆದರೆ, ಅಮಲಿನಲ್ಲಿದ್ದುದರಿಂದ ಕಾರು ಚಲಾಯಿಸಲು ಸಾಧ್ಯವಾಗದೆ ಮನೆಗೆ ಮರಳಿದ್ದಾನೆ. ನವೆಂಬರ್ 26ರ ಬೆಳಿಗ್ಗೆ ಪಕ್ಕದ ಮನೆಯವರು ಆ ಕಾರಿನಲ್ಲಿ ಯುವತಿಯ ದೇಹ ಇರುವುದನ್ನು ನೋಡಿದ್ದಾರೆ. ಈ ವೇಳೆ ಅವರು ಪೊಲೀಸರಿಗೆ ಫೋನ್ ಮಾಡಿದ್ದಾರೆ.
ಇದನ್ನು ಓದಿ: ಮಲಗಿದ್ದ ಒಂದೂವರೆ ತಿಂಗಳ ಮಗು ಮೇಲೆ ಬಾಲಕ ಬಿದ್ದು ಹಸುಗೂಸು ಸಾವು
ಆಗ ಆ ಆರೋಪಿ ಮನೆಯಲ್ಲಿಯೇ ಮಲಗಿದ್ದ. “ವಿವಾಹಿತನಾಗಿರುವ ಮತ್ತು ಮಕ್ಕಳಿರುವ ವೀರೇಂದ್ರ ಎಂಬಾತ ಕಳೆದ ಎರಡು ವರ್ಷಗಳಿಂದ ಲಿವ್-ಇನ್ ರಿಲೇಷನ್ಶಿಪ್ನಲ್ಲಿದ್ದ ಮಹಿಳೆಯ ಜೊತೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಆ ಮಹಿಳೆ ಮೊದಲು ಪಾಲಂನಲ್ಲಿ ಒಂದು ಮನೆಯನ್ನು ಹೊಂದಿದ್ದರು. ಅದನ್ನು ಅವರು ಮಾರಾಟ ಮಾಡಿದರು. ಆ ಹಣವನ್ನು ಬಳಸಿಕೊಂಡು ವೀರೇಂದ್ರ ಆಗಸ್ಟ್‌ನಲ್ಲಿ ಚಾವ್ಲಾದಲ್ಲಿ ತನ್ನ ಹೆಸರಿನಲ್ಲಿ 3 ಅಂತಸ್ತಿನ ಮನೆಯನ್ನು ಖರೀದಿಸಿದರು” ಎಂದು ಅಧಿಕಾರಿ ಹೇಳಿದ್ದಾರೆ.
ಮಾರಾಟದಿಂದ ಬಂದ ಹೆಚ್ಚುವರಿ 21 ಲಕ್ಷ ರೂ. ವೀರೇಂದ್ರ ಅವರ ಬಳಿಯೇ ಉಳಿದಿತ್ತು. ಇದು ಆಗಾಗ ಇಬ್ಬರ ನಡುವೆ ಜಗಳಕ್ಕೆ ಕಾರಣವಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ನವೆಂಬರ್ 25 ಮತ್ತು 26ರ ಮಧ್ಯರಾತ್ರಿ ಇಬ್ಬರೂ ಮದ್ಯಪಾನ ಮಾಡಿದ್ದರು. ಆಗ ಜಗಳವಾಯಿತು. ಜಗಳವಾಡುವ ಸಮಯದಲ್ಲಿ ಬಸ್ ಕಂಪನಿಯಲ್ಲಿ ಕೆಲಸ ಮಾಡುವ ವೀರೇಂದ್ರ ಆ ಮಹಿಳೆಯನ್ನು ಹಾಸಿಗೆಗೆ ಒತ್ತಿ ಹಿಡಿದು ಕತ್ತು ಹಿಸುಕಿದನು. ಅವಳನ್ನು ಕೊಂದ ನಂತರ, ಅವನು ಇಬ್ಬರು ಸ್ನೇಹಿತರನ್ನು ಕರೆದನು. ಅವರು ಶವವನ್ನು ಕಾರಿಗೆ ಸಾಗಿಸಲು ಸಹಾಯ ಮಾಡಿದರು.
ಇದನ್ನು ಓದಿ: ನೀರು ಎಂದುಕೊಂಡು ಆ್ಯಸಿಡ್ ಹಾಕಿ ಅಡುಗೆ ಮಾಡಿದ ಮಹಿಳೆ; ಉಂಡವರ ಸ್ಥಿತಿ ಗಂಭೀರ!
ಅವರ ಸ್ನೇಹಿತರು ಸ್ವಲ್ಪ ಸಮಯದ ನಂತರ ಹೊರಟುಹೋದರು. ಆ ಶವವನ್ನು ವಿಲೇವಾರಿ ಮಾಡಲು ವೀರೇಂದ್ರ ಕಾರು ಚಲಾಯಿಸಲು ಪ್ರಯತ್ನಿಸಿದ. ಆದರೆ, ಅವನ ಅತಿಯಾದ ಕುಡಿತದಿಂದಾಗಿ, ಅವನು ಸುಮಾರು 100 ಮೀಟರ್‌ಗಿಂತ ಹೆಚ್ಚು ದೂರ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ, ಮೃತದೇಹವನ್ನು ಕಾರಲ್ಲೇ ಬಿಟ್ಟು ಮನೆಗೆ ವಾಪಾಸ್ ತೆರಳಿ ಮಲಗಿದನು. ಕಾರಿನಲ್ಲಿ ಶವವನ್ನು ಬಿಟ್ಟು, ಅವನು ಮತ್ತೆ ಮೇಲಕ್ಕೆ ಹೋಗಿ, ಮದ್ಯಪಾನ ಮಾಡಲು ಪ್ರಾರಂಭಿಸಿ ಕೊನೆಗೆ ನಿದ್ರೆಗೆ ಜಾರಿದನು.
ಬುಧವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ನೆರೆಹೊರೆಯವರು ಕಾರಿನಲ್ಲಿ ಮಹಿಳೆಯ ಶವವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




