AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚಿದ ಬಿಸಿಲ ಬೇಗೆ; ಗರಿಷ್ಠ ತಾಪಮಾನ 52.3 ಡಿಗ್ರಿ ಸೆಲ್ಸಿಯಸ್ ದಾಖಲಿಸಿದ ದೆಹಲಿ

ಐಎಂಡಿಯ ಮುನ್ಸೂಚನೆಯು ಮುಂಬರುವ ದಿನಗಳಲ್ಲಿ ಇಲ್ಲಿ ಬಿಸಿಲ ಕಾವು ಏರಬಹುದು ಎಂಬುದನ್ನು ಸೂಚಿಸುತ್ತದೆ. "ಪಂಜಾಬ್, ಹರ್ಯಾಣ ಮತ್ತು ಚಂಡೀಗಢದ ಹೆಚ್ಚಿನ ಸ್ಥಳಗಳಲ್ಲಿ, ದೆಹಲಿ, ಉತ್ತರ ಪ್ರದೇಶ, ಮತ್ತು ರಾಜಸ್ಥಾನದ ಮೇಲೆ ಮತ್ತು ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಬಿಸಿಲು ಹೆಚ್ಚಾಗಬಹುದು. 

ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚಿದ ಬಿಸಿಲ ಬೇಗೆ; ಗರಿಷ್ಠ ತಾಪಮಾನ 52.3 ಡಿಗ್ರಿ ಸೆಲ್ಸಿಯಸ್ ದಾಖಲಿಸಿದ ದೆಹಲಿ
ಪ್ರಾತಿನಿಧಿಕ ಚಿತ್ರ
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on:May 29, 2024 | 5:51 PM

Share

ದೆಹಲಿ ಮೇ 29: ಭಾರತದ ಹವಾಮಾನ ಇಲಾಖೆ (IMD) ಪ್ರಕಾರ, ದೆಹಲಿಯಲ್ಲಿ (Delhi) ತಾಪಮಾನವು (Temperature) 52.3 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ. ಇದು ದಾಖಲೆ ಆಗಿದ್ದು ದೆಹಲಿಯ ಉಪನಗರವಾದ ಮುಂಗೇಶ್‌ಪುರದಲ್ಲಿ ಇಷ್ಟೊಂದು ಬಿಸಿಲು ದಾಖಲಾಗಿದೆ. ನಗರದ ಇತಿಹಾಸದಲ್ಲಿ ಮೊದಲ ಬಾರಿಗೆ ತಾಪಮಾನವು 50 ಡಿಗ್ರಿ ಸೆಲ್ಸಿಯಸ್ ದಾಟಿದೆ. ಮುಂಗೇಶಪುರದ ಹವಾಮಾನ ಕೇಂದ್ರವು 52.3 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಿದರೆ, ನರೇಲಾದಲ್ಲಿ ಮಧ್ಯಾಹ್ನ 2.30 ಕ್ಕೆ 47.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮಂಗಳವಾರ, ವಾಯುವ್ಯ ದೆಹಲಿ ಪ್ರದೇಶದ ಹವಾಮಾನ ಕೇಂದ್ರವು 49.9 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದೆ. ಇದು ದೆಹಲಿಯಲ್ಲಿ ಇದುವರೆಗೆ ದಾಖಲಾದ ಗರಿಷ್ಠ ತಾಪಮಾನವಾಗಿದೆ ಎಂದು ಐಎಂಡಿ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಐಎಂಡಿಯ ಮುನ್ಸೂಚನೆಯು ಮುಂಬರುವ ದಿನಗಳಲ್ಲಿ ಇಲ್ಲಿ ಬಿಸಿಲ ಕಾವು ಏರಬಹುದು ಎಂಬುದನ್ನು ಸೂಚಿಸುತ್ತದೆ. “ಪಂಜಾಬ್, ಹರ್ಯಾಣ ಮತ್ತು ಚಂಡೀಗಢದ ಹೆಚ್ಚಿನ ಸ್ಥಳಗಳಲ್ಲಿ, ದೆಹಲಿ, ಉತ್ತರ ಪ್ರದೇಶ, ಮತ್ತು ರಾಜಸ್ಥಾನದ ಮೇಲೆ ಮತ್ತು ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಬಿಸಿಲು ಹೆಚ್ಚಾಗಬಹುದು.  ಪಂಜಾಬ್, ಹರ್ಯಾಣ, ಚಂಡೀಗಢ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ರಾತ್ರಿ ಹೊತ್ತು ಸೆಖೆ ಸ್ವಲ್ಪ ಕಡಿಮೆಯಾಗುವ ನಿರೀಕ್ಷೆಯಿದೆ. ಎಲ್ಲಾ ವಯಸ್ಸಿನವರಿಗೂ ಶಾಖದ ಕಾಯಿಲೆ ಮತ್ತು ಹೀಟ್ ಸ್ಟ್ರೋಕ್ ಆಗುವ ಸಾಧ್ಯತೆ ಇದೆ. ದುರ್ಬಲ ಜನರು ತೀವ್ರ ಕಾಳಜಿ ವಹಿಸಬೇಕು ಎಂದು ಐಎಂಡಿ ಹೇಳಿದೆ.

ಬಿಸಿಲ ಧಗೆ ಏರಿದ್ದು , ಕೆಲವು ಪ್ರದೇಶಗಳಿಗೆ ಸರಬರಾಜನ್ನು ಕಡಿತಗೊಳಿಸುವುದರಿಂದ ನವದೆಹಲಿ ಅಧಿಕಾರಿಗಳು ನೀರಿನ ಕೊರತೆಯ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ನೀರನ್ನು ವ್ಯರ್ಥ ಮಾಡದೇ ಇರುವುದು “ಸಾಮೂಹಿಕ ಜವಾಬ್ದಾರಿ” ಎಂದು ದೆಹಲಿ ಜಲ ಸಚಿವೆ ಅತಿಶಿ ಕರೆ ನೀಡಿದ್ದಾರೆ.

ಇದನ್ನೂ ಓದಿ: ‘ಮೋದಿಯನ್ನು ಸೋಲಿಸಿ’ ಎಂದು ಬಹಿರಂಗ ಕರೆ ನೀಡಿದ ಪಾಕಿಸ್ತಾನದ ಮಾಜಿ ಸಚಿವ

ಮೇ 30 ರಿಂದ ಚಾಲ್ತಿಯಲ್ಲಿರುವ ಶಾಖದ ಅಲೆಯ ಪರಿಸ್ಥಿತಿಗಳು ಕ್ರಮೇಣ ಕಡಿಮೆಯಾಗುವ ಮುನ್ಸೂಚನೆಯಿರುವುದರಿಂದ ವಾಯುವ್ಯ ಮತ್ತು ಮಧ್ಯ ಭಾರತದ ನಿವಾಸಿಗಳು ಸ್ವಲ್ಪ ಬಿಡುವು ನಿರೀಕ್ಷಿಸಬಹುದು. ಈ ಪ್ರದೇಶಗಳಲ್ಲಿ ಮುಂದಿನ 3-4 ದಿನಗಳಲ್ಲಿ ಗರಿಷ್ಠ ತಾಪಮಾನವು 3-4 ಡಿಗ್ರಿ ಸೆಲ್ಸಿಯಸ್ ನಷ್ಟು ಕಡಿಮೆ ಆಗಲಿದೆ.

ನಾಳೆಯಿಂದ ಪಂಜಾಬ್, ಹರ್ಯಾಣ-ಚಂಡೀಗಢ-ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಬಿಸಿಗಾಳಿಯ ತೀವ್ರತೆ ಕಡಿಮೆಯಾಗುವ ನಿರೀಕ್ಷೆಯಿದೆ. ಪರಿಸ್ಥಿತಿ ಸ್ವಲ್ಪ ಸುಧಾರಿಸಿದರೂ ಜೂನ್ 1 ರವರೆಗೆ ಪ್ರತ್ಯೇಕ ಪ್ರದೇಶಗಳಲ್ಲಿ ಶಾಖದ ಅಲೆ ಇದ್ದೇ ಇರುತ್ತದೆ ಎಂದು ಐಎಂಡಿ ಹೇಳಿದೆ.

ದೆಹಲಿ ನಗರ ಹಾಗೂ ಎನ್‌ಸಿಆರ್ ಸುತ್ತಮುತ್ತ ತುಂತುರು ಮಳೆ

ದಾಖಲೆ ತಾಪಮಾನದಿಂದ ತತ್ತರಿಸಿದ್ದ ದೆಹಲಿಯಲ್ಲಿ ಬುಧವಾರ ಸಂಜೆ ಹೊತ್ತಿಗೆ ತುಂತುರು ಮಳೆಯಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:49 pm, Wed, 29 May 24

Follow Us
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು