ವಿಧಾನ ಪರಿಷತ್ ಚುನಾವಣೆ: ದೆಹಲಿ ತಲುಪಿದ ಕಾಂಗ್ರೆಸ್ ಆಕಾಂಕ್ಷಿಗಳ ವಿವರ, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

Karnataka MLC Election: ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆಯ ಕಾವು ಜೋರಾಗುತ್ತಿದ್ದು, ಅಭ್ಯರ್ಥಿಗಳ ಆಯ್ಕೆಯೇ ಆಡಳಿತಾರೂಢ ಕಾಂಗ್ರೆಸ್​​ಗೆ ಬಲು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಹೀಗಾಗಿ ಸಂಭಾವ್ಯರ ಪಟ್ಟಿಯೊಂದಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ.

ವಿಧಾನ ಪರಿಷತ್ ಚುನಾವಣೆ: ದೆಹಲಿ ತಲುಪಿದ ಕಾಂಗ್ರೆಸ್ ಆಕಾಂಕ್ಷಿಗಳ ವಿವರ, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್
Follow us
Anil Kalkere
| Updated By: Ganapathi Sharma

Updated on: May 29, 2024 | 7:14 AM

ಬೆಂಗಳೂರು, ಮೇ 29: ಕಾಂಗ್ರೆಸ್​ನಲ್ಲಿ (Congress) ವಿಧಾನ ಪರಿಷತ್ ಚುನಾವಣೆ (MLC Election) ಟಿಕೆಟ್​​ಗಾಗಿ ಪೈಪೋಟಿ ಜೋರಾಗಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಭೇಟಿ ನೀಡುವುದಕ್ಕೂ ಮುನ್ನ ಮಂಗಳವಾರ ಲಾಬಿ ದೊಡ್ಡದಾಗಿಯೇ ನಡೆದಿತ್ತು. ಪರಿಷತ್ ಟಿಕೆಟ್ ಆಕಾಂಕ್ಷಿಗಳು ಸಿಎಂ ಹಾಗೂ ಡಿಸಿಎಂ ಬಳಿ ಟಿಕೆಟ್ ಕೇಳಲು ದುಂಬಾಲು ಬಿದ್ದಿದ್ದರು. ಇದೆಲ್ಲರ ಬೆಳವಣಿಗೆಳ ನಡುವೆಯೇ ಕೈ ನಾಯಕರು ಪರಿಷತ್ ಅಭ್ಯರ್ಥಿಗಳ ಸಂಭಾವ್ಯರ ಪಟ್ಟಿಯನ್ನು ಹೈಕಮಾಂಡ್ ಮುಂದೆ ಇಟ್ಟಿದ್ದಾರೆ.

ಸೀಮಿತ ಸ್ಥಾನಗಳಿಗೆ ದೊಡ್ಡ ಆಕಾಂಕ್ಷಿಗಳ ಲಿಸ್ಟ್

ಪರಿಷತ್ ಚುನಾವಣೆಗೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಲೋಕಸಭೆ ಚುನಾವಣೆ ಮತ್ತು ನಿಗಮ ಮಂಡಳಿ ನೇಮಕ ಬಳಿಕ ಪರಿಷತ್ ಚುನಾವಣೆಗಾಗಿ ಎದುರು ನೋಡುತ್ತಿದ್ದಾರೆ. ಸಚಿವರು ತಮ್ಮ ಆಪ್ತರಿಗೆ ಟಿಕೆಟ್ ನೀಡುವಂತೆ ಒತ್ತಡ ಹಾಕುತ್ತಿದ್ದು, ಸಮುದಾಯವಾರು ಹಾಗೂ ಪ್ರಾದೇಶಿಕವಾರು ಟಿಕೆಟ್ ನೀಡುವಂತೆ ಬಿಗಿಪಟ್ಟು ಹಿಡಿದಿದ್ದಾರೆ. ಸದ್ಯ ಗೊಂದಲ ಹೆಚ್ಚಾದ ಹಿನ್ನೆಲೆ ಸಿಎಂ ಹಾಗೂ ಡಿಸಿಎಂ ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಮಂಗಳವಾರ ರಾತ್ರಿ ದೆಹಲಿಯಲ್ಲೇ ದೆಹಲಿಯಲ್ಲೇ ವಾಸ್ತವ್ಯ ಹೂಡಿದ್ದು, ಇಂದು ಬೆಂಗಳೂರಿಗೆ ವಾಪಾಸ್ ಆಗಲಿದ್ದಾರೆ. ದೆಹಲಿ ಪ್ರವಾಸಕ್ಕೂ ಮುನ್ನ ಸಿಎಂ ಹಾಗೂ ಡಿಸಿಎಂ ನಿವಾಸದ ಬಳಿ ಆಕಾಂಕ್ಷಿಗಳು‌ ಸಾಲು‌ ಸಾಲು ಭೇಟಿ ಕೊಟ್ಟು, ಕೊನೆ ಹಂತದ ಕಸರತ್ತು ನಡೆಸಿದ್ದರು.

ಸಿಎಂ-ಡಿಸಿಎಂ ಕ್ಲೋಸ್ ಡೋರ್ ಮೀಟಿಂಗ್

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸೋವಾರ ತಡರಾತ್ರಿಯವರೆಗೂ ಮಾತುಕತೆ ನಡೆಸಿದ್ದರು. ರಹಸ್ಯ ಸ್ಥಳದಲ್ಲಿ ಉಭಯ ನಾಯಕರು ಮೀಟಿಂಗ್ ಮಾಡಿದ್ದರು. 7 ಸ್ಥಾನಗಳಿಗೆ 70ಕ್ಕೂ ಹೆಚ್ಚು ಆಕಾಂಕ್ಷಿಗಳಿರುವ ಕಾರಣ ಸಿಎಂ,‌ ಡಿಸಿಎಂ ಪರಸ್ಪರ ಚರ್ಚಿಸಿದ್ದರು. ಹೈಕಮಾಂಡ್ ನಾಯಕರ ಜೊತೆಗಿನ ಸಭೆಗೂ ಮೊದಲು ಚರ್ಚೆ ಮಾಡಿದ್ದು, ಪರಿಷತ್ ಟಿಕೆಟ್ ಹಂಚಿಕೆಯ ಸಹಮತದ ತೀರ್ಮಾನಕ್ಕೆ ಬಂದಿದ್ದಾರೆ. ತಮ್ಮ ಬೆಂಬಲಿಗರಿಗೆ ಪರಿಷತ್ ಸ್ಥಾನ ಕಲ್ಪಿಸುವ ಸಂಬಂಧ ಉಭಯ ನಾಯಕರು ಸಹಮತಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಪರಿಷತ್ ಸ್ಥಾನ ಹಂಚಿಕೆ ವಿಚಾರವಾಗಿ 40 ಮಂದಿಯ ಹೆಸರನ್ನು ಕಾಂಗ್ರೆಸ್ ಶಾರ್ಟ್ ಲಿಸ್ಟ್ ಮಾಡಿದೆ. ಆ ಪಟ್ಟಿಯೊಂದಿಗೆ ಸಿಎಂ ಹಾಗೂ ಡಿಸಿಎಂ ದೆಹಲಿಗೆ ತೆರಳಿದ್ದಾರೆ. 70 ಕ್ಕೂ ಹೆಚ್ಚು ಆಕಾಂಕ್ಷಿಗಳ ಪಟ್ಟಿ ಮೊದಲು ಸಿದ್ಧವಾಗಿತ್ತು. ಬರಬರುತ್ತಾ ನೂರಕ್ಕೂ ಹೆಚ್ಚು ಆಕಾಂಕ್ಷಿಗಳ ಪಟ್ಟಿ ರೆಡಿಯಾಗಿ ತಲೆನೋವು ಹೆಚ್ಚಾಯ್ತು. ಇದನ್ನು 40ಕ್ಕೆ ಇಳಿಕೆ ಮಾಡಿ ಸಿಎಂ ಡಿಸಿಎಂ ಶಾರ್ಟ್ ಲಿಸ್ಟ್ ಮಾಡಿಕೊಂಡಿದ್ದಾರೆ. ಆ ಪಟ್ಟಿಯನ್ನ ಹೈಕಮಾಂಡ್ ನಾಯಕರ ಮುಂದಿಟ್ಟು ಸಮಾಲೋಚನೆ ನಡೆಸಲಿದ್ದಾರೆ. ಸರಿಸುಮಾರು ಒಂದು ಸ್ಥಾನಕ್ಕೆ 4-5 ಮಂದಿಯ ಸರಾಸರಿಯೊಂದಿಗೆ ಪಟ್ಟಿ ಮಾಡಲಾಗಿದೆ ಎನ್ನಲಾಗುತ್ತಿದೆ.

ಸಂಭಾವ್ಯರ ಪಟ್ಟಿ ಹೀಗಿದೆ

  • ಎನ್ ಎಸ್ ಬೋಸರಾಜು, ಸಚಿವ
  • ಡಾ.ಕೆ ಗೋವಿಂದರಾಜು, ಸಿಎಂ ರಾಜಕೀಯ ಕಾರ್ಯದರ್ಶಿ
  • ಯತೀಂದ್ರ ಸಿದ್ದರಾಮಯ್ಯ
  • ವಿನಯ್ ಕಾರ್ತಿಕ್, ಕೆಪಿಸಿಸಿ ಖಜಾಂಚಿ
  • ವಸಂತ್ ಕುಮಾರ್, ಕಾರ್ಯಾಧ್ಯಕ್ಷ
  • ಆಘಾ ಸುಲ್ತಾನ್, ಪ್ರಧಾನ ಕಾರ್ಯದರ್ಶಿ
  • ವಿ ಆರ್ ಸುದರ್ಶನ್, ಉಪಾಧ್ಯಕ್ಷ ಕೆಪಿಸಿಸಿ
  • ವಿನಯ ಕುಮಾರ್ ಸೊರಕೆ, ಪ್ರಚಾರ ಸಮಿತಿ ಅಧ್ಯಕ್ಷ
  • ವಿಜಯ ಮುಳಗುಂದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
  • ಬಿವಿ ಶ್ರೀನಿವಾಸ್, ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ
  • ಸಂದೀಪ್ ಕುಮಾರ್ ಎಐಸಿಸಿ ಕಾರ್ಯದರ್ಶಿ
  • ಎಲ್ ನಾರಾಯಣ್, ಕಚೇರಿ ಕಾರ್ಯದರ್ಶಿ (೩೦ ವರ್ಷದ ಸೇವೆ)
  • ಬಿ ಆರ್ ನಾಯ್ಡು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
  • ಡಾ.ಆನಂದ ಕುಮಾರ್ ಕಿಸಾನ್ ಕಾಂಗ್ರೆಸ್
  • ಕೃಷ್ಣಂ ರಾಜು, ಕೆಪಿಸಿಸಿ ಉಪಾಧ್ಯಕ್ಷರು
  • ರಮೇಶ್ ಬಾಬು, ಮಾಜಿ ಎಂಎಲ್ಸಿ
  • ಒಬೆದುಲ್ಲಾ ಶರೀಫ್, ಉಪಾಧ್ಯಕ್ಷರು ಕೆಪಿಸಿಸಿ
  • ಎಸ್ ಎ ಹುಸೇನ್, ಉಪಾಧ್ಯಕ್ಷರು ಕೆಪಿಸಿಸಿ
  • ವಿ ಶಂಕರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
  • ಮುರುಳಿಧರ ಹಾಲಪ್ಪ, ಉಪಾಧ್ಯಕ್ಷ, ಕೆಪಿಸಿಸಿ
  • ಮುದ್ದು ಗಂಗಾಧರ್, ಕೆಪಿಸಿಸಿ ಜನರಲ್ ಸೆಕ್ರೆಟರಿ
  • ಭವ್ಯ ನರಸಿಂಹ ಮೂರ್ತಿ, ಕೆಪಿಸಿಸಿ ಜನರಲ್ ಸೆಕ್ರೆಟರಿ
  • ಸುಷ್ಮಾ ರಾಜಗೋಪಾಲ ರೆಡ್ಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
  • ಕಮಲಾಕ್ಷಿ ರಾಜಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
  • ಪುಷ್ಪಾ ಅಮರನಾಥ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ
  • ವೀಣಾ ಕಾಶಪ್ಪನವರ್, ಪ್ರಧಾನ ಕಾರ್ಯದರ್ಶಿ ಕೆಪಿಸಿಸಿ
  • ಸಿ ಎಸ್ ದ್ವಾರಕಾನಾಥ್, ಅಧ್ಯಕ್ಷರು, ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗ
  • ಆರತಿ ಕೃಷ್ಣ, ಎಐಸಿಸಿ ಕಾರ್ಯದರ್ಶಿ
  • ಕಾಂತ ನಾಯಕ್, ಕೌಶಲ್ಯಾಭಿವೃದ್ದಿ ಮಂಡಳಿ ಅಧ್ಯಕ್ಷರು
  • ಅರವಿಂದ ಕುಮಾರ್ ಅರಳಿ, ಹಾಲಿ ಎಂಎಲ್ಸಿ
  • ಹರೀಶ್ ಕುಮಾರ್, ಮಂಗಳೂರು, ಹಾಲಿ ಎಂಎಲ್ಸಿ

ಮೆರಿಟ್ ಇರುವ ಸಾಮಾನ್ಯ ನಿಷ್ಠಾವಂತ ಕಾರ್ಯಕರ್ತರಿಗೆ ಸ್ಥಾನ ನೀಡುವಂತೆ ಕಾಂಗ್ರೆಸ್​​ನಲ್ಲಿ ಒತ್ತಡ ಶುರುವಾಗಿದೆ. ಸಿಎಂ ಡಿಸಿಎಂ ಭೇಟಿ ಮಾಡಿ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಅಧ್ಯಕ್ಷರು, ನಿಗಮ ಮಂಡಳಿ ಅಧ್ಯಕ್ಷರು ಒತ್ತಾಯಿಸಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ ಆರ್ ನಾಯ್ಡು ನೇತೃತ್ವದಲ್ಲಿ ಸಿಎಂ ಭೇಟಿ ಮಾಡಿ ಒತ್ತಡ ಹಾಕಿದ್ದಾರೆ. ಪಕ್ಷಕೆ ಕೆಲಸ ಮಾಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಮನ್ನಣೆ ನೀಡುವಂತೆ ಸಿಎಂಗೆ ಪಿಟಿಷನ್ ಹಾಕಿದ್ದಾರೆ. ಎಂಟು ಮಂದಿಯ ಸಹಿ ಹಾಕಿ ಸಿಎಂ ಡಿಸಿಎಂಗೆ ಅರ್ಜಿ ಸಲ್ಲಿಸಿ ಒತ್ತಾಯ ಮಾಡಿದ್ದಾರೆ. ಸಮುದಾಯವಾರು ನಾಯಕರ ಹೆಸರು ಉಲ್ಲೇಖ ಮಾಡಲಾಗಿದ್ದು, ಪದೇ ಪದೇ ಹಿಂದೆ ಸಚಿವರಾದವರಿಗೆ ಮತ್ತೆ ಸ್ಥಾನ ನೀಡಿದರೆ ಏನೂ ಪ್ರಯೋಜನವಿಲ್ಲ. ಸಾಮಾನ್ಯ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೇಟ್ ನೀಡಿದರೆ ಗಟ್ಟಿ ಸಂದೇಶ ರವಾನೆಯಾಗಲಿದೆ.‌ ಹೀಗಾಗಿ ಕಾರ್ಯಕರ್ತರಿಗೆ ಸ್ಥಾನ ನೀಡಿ ಎಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.

ಸಚಿವ ಪರಮೇಶ್ವರ್ ಅಸಮಾಧಾನ

ವಿಧಾನ ಪರಿಷತ್ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ನಿನ್ನೆ ರಹಸ್ಯ ಸ್ಥಳದಲ್ಲಿ‌ ಸಿಎಂ ಹಾಗೂ ಡಿಸಿಎಂ ಸಭೆ ನಡೆಸಿರುವುದು ‌ಸೂಕ್ತವಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಬೇಸರ ಹೊರ ಹಾಕಿದ್ದಾರೆ. ಪಕ್ಷದ ಹಿರಿಯ ನಾಯಕರ ಸಲಹೆ, ಅಭಿಪ್ರಾಯಗಳನ್ನೂ ಕೇಳಬೇಕು. ಯಾರು ಹಿರಿಯರು ಅನುಭವಿ ನಾಯಕರು ಇದ್ದಾರೆ ಅವರ ಜೊತೆ ಚರ್ಚೆ ಒಳ್ಳೆಯದು. ಪಕ್ಷದಲ್ಲಿ ಅನೇಕ ವರ್ಷ ದುಡಿದ ನಾಯಕರ ಸಲಹೆ ಪಡೆಯಬೇಕು. ಜಾತಿವಾರು, ಪ್ರಾದೇಶಿಕವಾರು, ಪಕ್ಷಕ್ಕೆ ದುಡಿದವರಿಗೆ ಸ್ಥಾನ ಕೊಡಬೇಕು ಅಂತ ಅಸಮಾಧನ ಹೊರಹಾಕಿದ್ದಾರೆ.

ಇದನ್ನೂ ಓದಿ: ಕೆಡೆರ್​ ಬೇಸ್​ ಪಾರ್ಟಿ ಮಾಡಲು ನಿರ್ಧಾರ, ಇದು ಕಾಂಗ್ರೆಸ್​ ಕುಟುಂಬ: ಡಿಕೆ ಶಿವಕುಮಾರ್​ ಘರ್ಜನೆ

ಒಟ್ಟಾರೆ, ಸಿಎಂ ಹಾಗೂ‌ ಡಿಸಿಎಂ ಪರಿಷತ್ ಪಟ್ಟಿಯನ್ನು ಹೈಕಮಾಂಡ್ ಮುಂದೆ ಇಟ್ಟಿದ್ದಾರೆ. ಗೊಂದಲ ಹೆಚ್ಚಾದಲ್ಲಿ ಮೊದಲಿಗೆ ಒಂದು ಪಟ್ಟಿ ಬಿಡುಗಡೆ ಮಾಡಿ, ನಂತರ ಮತ್ತೊಂದು ಪಟ್ಟಿ ಬಿಡುಗಡೆಗೆ ಕಾಂಗ್ರೆಸ್ ಪ್ಲಾನ್ ಮಾಡ್ತಿದೆ. ಎಲ್ಲ ಅಂದುಕೊಂಡಂತೆ ಆದರೆ ಇನ್ನೆರಡು ದಿನಗಳಲ್ಲಿ‌ ಕಾಂಗ್ರೆಸ್ ಪರಿಷತ್ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ