ಭಾರತಕ್ಕೀಗ ಡೆಲ್ಟಾ ಪ್ಲಸ್ ರೂಪಾಂತರಿಯ ಅಪಾಯ: ಇದು ಅಪಾಯಕಾರಿ ಎಂದು ಘೋಷಿಸಿದ ಕೇಂದ್ರ

ಈವರೆಗೆ ಈ ಪ್ರಭೇದವನ್ನು ಆಸಕ್ತಿಕರ ಎಂದು ಘೋಷಿಸಿದ್ದ ಕೇಂದ್ರ ಸರ್ಕಾರ, ಇದೀಗ ಈ ರೂಪಾಂತರಿ ಕಳವಳಕಾರಿ ಎಂದು ಘೋಷಿಸಿದೆ. ಮಹಾರಾಷ್ಟ್ರದ 22 ಸೋಂಕಿತರಲ್ಲಿ ಈ ವೈರಾಣು ಕಾಣಿಸಿದೆ.

ಭಾರತಕ್ಕೀಗ ಡೆಲ್ಟಾ ಪ್ಲಸ್ ರೂಪಾಂತರಿಯ ಅಪಾಯ: ಇದು ಅಪಾಯಕಾರಿ ಎಂದು ಘೋಷಿಸಿದ ಕೇಂದ್ರ
ಡೆಲ್ಟಾ ಪ್ಲಸ್ ರೂಪಾಂತರಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 22, 2021 | 10:51 PM

ಕೊರೊನಾ ವೈರಾಣುಗಳ ಮತ್ತೊಂದು ರೂಪವಾದ ಡೆಲ್ಟಾದ ಹೊಸ ರೂಪ ಡೆಲ್ಟಾ ಪ್ಲಸ್ ರೂಪಾಂತರಿ ವೈರಾಣುಗಳು ಇದೀಗ ಭಾರತದಲ್ಲಿ ದೊಡ್ಡ ತಲೆನೋವಾಗಿ ಪರಿಗಣಮಿಸಿವೆ. ಈವರೆಗೆ ಈ ಪ್ರಭೇದವನ್ನು ಆಸಕ್ತಿಕರ ಎಂದು ಘೋಷಿಸಿದ್ದ ಕೇಂದ್ರ ಸರ್ಕಾರ, ಇದೀಗ ಈ ರೂಪಾಂತರಿ ಕಳವಳಕಾರಿ ಎಂದು ಘೋಷಿಸಿದೆ. ಮಹಾರಾಷ್ಟ್ರದ 22 ಸೋಂಕಿತರಲ್ಲಿ ಈ ವೈರಾಣು ಕಾಣಿಸಿದೆ. ಕೇರಳ ಮತ್ತು ಮಧ್ಯಪ್ರದೇಶದಲ್ಲಿ ಪತ್ತೆಯಾದ ಕೆಲ ಸೋಂಕಿತರಲ್ಲಿಯೂ ಈ ಪ್ರಭೇದದ ವೈರಾಣು ಇಂದು ಸಂಜೆ ಪತ್ತೆಯಾಗಿದೆ.

ಭಾರತವು ಇದೀಗ ತಾನೆ ಕೊರೊನಾ 2ನೇ ಅಲೆಯ ಪ್ರಭಾವದಿಂದ ಬಿಡಿಸಿಕೊಳ್ಳುತ್ತಿದೆ. ಆದರೆ ಈ ಹಂತದಲ್ಲಿ ಕಾಣಿಸಿಕೊಳ್ಳುತ್ತಿರುವ ಡೆಲ್ಟಾ ಪ್ಲಸ್​ ರೂಪಾಂತರಿಯು ಹೊಸ ತಲೆಬಿಸಿ ತಂದೊಡ್ಡಿದೆ. ಮಹಾರಾಷ್ಟ್ರದ ರತ್ನಗಿರಿ ಮತ್ತು ಜಲಗಾವ್​, ಕೇರಳದ ಪಾಲಕ್ಕಾಡ್ ಮತ್ತು ಪತ್ತನಂತಿಟ್ಟ, ಮಧ್ಯ ಪ್ರದೇಶದ ಭೋಪಾಲ್ ಮತ್ತು ಶಿವಪುರಿ ಜಿಲ್ಲೆಗಳಲ್ಲಿ ಡೆಲ್ಟಾ ಪ್ಲಸ್​ ವೈರಾಣು ಸೋಂಕು ಕಾಣಿಸಿಕೊಂಡಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಜಿಲ್ಲೆಗಳಲ್ಲಿ ಕಂಟೇನ್​ಮೆಂಟ್ ವಲಯಗಳನ್ನು ರೂಪಿಸಲು ಮುಖ್ಯ ಕಾರ್ಯದರ್ಶಿಗಳು ತಕ್ಷಣ ಕ್ರಮಕೈಗೊಳ್ಳಬೇಕು. ಜನರು ಗುಂಪು ಸೇರದಂತೆ ಗಮನ ಕೊಡಬೇಕು. ಟೆಸ್ಟಿಂಗ್​ ಪ್ರಮಾಣ ಹೆಚ್ಚಿಸಬೇಕು. ಸೋಂಕಿತರ ಸಂಪರ್ಕಿರನ್ನು ಪತ್ತೆಹಚ್ಚಲು ಗಮನ ಕೊಡಬೇಕು. ಈ ಪ್ರದೇಶದಲ್ಲಿ ಲಸಿಕಾಕರಣಕ್ಕೆ ಆದ್ಯತೆ ಸಿಗಬೇಕು ಎಂದು ಕೇಂದ್ರ ಸರ್ಕಾರದ ಪ್ರಕಟಣೆ ತಿಳಿಸಿದೆ.

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸಜ್ಜುಗೊಳಿಸುವ ಕುರಿತು, ವಿಸ್ತೃತ ಮಾಹಿತಿ ನೀಡಲಾಗಿದೆ. ಈ ಹಿಂದೆ ನೀಡಿದ್ದ ಸೂಚನೆಗಳಿಗೆ ಅನುಗುಣವಾಗಿಯೇ ಮುಂದಿನ ಚಿಕಿತ್ಸಾ ಕ್ರಮವೂ ನಡೆಯಬೇಕು. ಸಣ್ಣ ಸಂಖ್ಯೆಯಲ್ಲಿ ಶುರುವಾಗಿರುವ ಈ ಅಪಾಯ ದೊಡ್ಡಮಟ್ಟದಲ್ಲಿ ಬೆಳೆಯುವುದು ನಮಗೆ ಬೇಕಿಲ್ಲ ಎಂದು ಲಸಿಕಾಕರಣ ನಿರ್ವಹಣೆಗಾಗಿ ರೂಪಿಸಿರುವ ರಾಷ್ಟ್ರೀಯ ತಜ್ಞರ ಸಮಿತಿ ಮುಖ್ಯಸ್ಥ ವಿ.ಕೆ.ಪೌಲ್ ತಿಳಿಸಿದ್ದಾರೆ.

ಕೆಲವೇ ಕೆಲ ಸಂಖ್ಯೆಗಳಲ್ಲಿ ವರದಿಯಾಗುತ್ತಿರುವ ಸೋಂಕು ಮುಂದಿನ ದಿನಗಳಲ್ಲಿ ಬೃಹತ್ ಪ್ರಮಾಣದಲ್ಲಿ ವಿಸ್ತರಿಸುವ ಅಪಾಯವಿದೆ ಎಂದು ಮಹಾರಾಷ್ಟ್ರದ ತಜ್ಞರು ಹೇಳಿದ್ದಾರೆ. ಈಗಲೇ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಕೊರೊನಾ ಸೋಂಕಿನ 3ನೇ ಅಲೆಯು ಅಂದುಕೊಂಡಿದ್ದಕ್ಕಿಂತಲೂ ಬೇಗ ಅಪ್ಪಳಿಸಬಹುದು ಎಂದು ಎಚ್ಚರಿಸಿದ್ದಾರೆ.

ವೈರಾಣುವಿನ ಈ ರೂಪಾಂತರದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಭಾರತದ ಹೊರತಾಗಿ ಅಮೆರಿಕ, ಬ್ರಿಟನ್, ಪೋರ್ಚುಗಲ್, ಸ್ವಿಟ್ಜರ್​ಲೆಂಡ್, ಜಪಾನ್, ಪೊಲೆಂಡ್, ರಷ್ಯಾ ಮತ್ತು ಚೀನಾ ದೇಶಗಳಲ್ಲಿ ಈ ರೂಪಾಂತರಿ ವೈರಾಣು ಪತ್ತೆಯಾಗಿದೆ. ಈ ರೂಪಾಂತರಿ ವೈರಾಣು ಇಲ್ಲಿಂದಾಚೆಗೆ ಹೇಗೆ ವರ್ತಿಸಬಹುದು ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ. ನಾವು ಈಗಾಗಲೇ ಗಮನಿಸಿರುವ ಕೆಲ ರೂಪಾಂತರಿಗಳು ಮೂಲ ವೈರಾಣುಗಳಿಗಿಂತಲೂ ವಿಭಿನ್ನವಾದ ರೀತಿಯಲ್ಲಿ ವರ್ತಿಸಿರುವುದನ್ನು ಗಮನಿಸಿದ್ದೇವೆ ಎಂದು ಕೊವಿಡ್​ ನಿರ್ವಹಣೆಗಾಗಿ ರಚಿಸಿರುವ ಮಹಾರಾಷ್ಟ್ರ ಕಾರ್ಯಪಡೆಯ ಸದಸ್ಯ ಓಂ ಶ್ರೀವಾತ್ಸವ ಹೇಳಿದ್ದಾರೆ.

ವಿಶ್ವದ ಇತರ ದೇಶಗಳಲ್ಲಿ ಡೆಲ್ಟಾ ಅಲೆಯು ಅತ್ಯಂತ ಅಪಾಯಕಾರಿಯಾಗಿ ವರ್ತಿಸಿದೆ. ವೇಗವಾಗಿ ಸೋಂಕು ಹರಡುವ ಜೊತೆಗೆ ಹೆಚ್ಚಿನ ಸಂಖ್ಯೆಯ ಜನರನ್ನು ವೇಗವಾಗಿ ಬಾಧಿಸಿದೆ ಎಂದು ಹೇಳಿದರು. ಪ್ರತಿ ಜಿಲ್ಲೆಯಲ್ಲಿಯೂ ತಲಾ 100 ಮಾದರಿಗಳ ಜಿನೋವ್ ಸೀಕ್ವೆನ್ಸ್​ ಮಾಡಲಾಗಿದೆ. ಮೇ 15ರಿಂದ ಈವರೆಗೆ 7,500 ಮಾದರಿಗಳನ್ನು ಪರಿಶೀಲಿಸಲಾಗಿದೆ. ಈ ಪೈಕಿ 21 ಮಾದರಿಗಳಲ್ಲಿ ಡೆಲ್ಟಾ ಪ್ಲಸ್ ಸೋಂಕು ಪತ್ತೆಯಾಗಿದೆ ಎಂದು ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ತೊಪಿ ಹೇಳಿದ್ದಾರೆ.

ವಿಶ್ವದ 80 ದೇಶಗಳಲ್ಲಿ ಡೆಲ್ಟಾ ರೂಪಾಂತರಿ ಪತ್ತೆಯಾಗಿದೆ. ಇದರಂತೆಯೇ ಡೆಲ್ಟಾ ಪ್ಲಸ್ ಸಹ ವೇಗವಾಗಿ ಹರಡುವ ಮತ್ತು ತೀವ್ರ ಸೋಂಕು ಉಂಟು ಮಾಡುವ ರೂಪಾಂತರಿ ಎನಿಸಿದೆ. ಸೋಂಕಿತರ ಶ್ವಾಸಕೋಶದ ಜೀವಕೋಶಗಳನ್ನು ತೀವ್ರವಾಗಿ ಬಾಧಿಸುವ ಈ ವೈರಾಣು, ಪ್ರತಿಕಾಯಗಳ ವ್ಯವಸ್ಥೆಯನ್ನೂ ಹಾಳುಗೆಡವುತ್ತದೆ. ಪ್ರಸ್ತುತ ಚಾಲ್ತಿಯಲ್ಲಿರುವ ಕೊವಿಡ್ ಚಿಕಿತ್ಸಾ ಕ್ರಮಗಳು ಡೆಲ್ಟಾ ರೂಪಾಂತರಿಯ ವಿರುದ್ಧವೂ ಪರಿಣಾಮಕಾರಿಯಾಗಬಲ್ಲುದೆ ಎಂಬ ಬಗ್ಗೆ ಅನುಮಾನಗಳಿವೆ. ಲಸಿಕೆಗಳಿಂದ ಎಷ್ಟರಮಟ್ಟಿಗೆ ಪ್ರಯೋಜನವಾದೀತು ಎಂಬ ಬಗ್ಗೆಯೂ ಪ್ರಶ್ನೆಗಳಿವೆ.

ಭಾರತದಲ್ಲಿ ಉತ್ಪಾದನೆಯಾಗುತ್ತಿರುವ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳು ಡೆಲ್ಟಾ ರೂಪಾಂತರದ ವಿರುದ್ಧವೂ ಪರಿಣಾಮಕಾರಿ ಎಂದು ಸರ್ಕಾರವು ಹೇಳಿದೆ. ಜಿನೋಮ್ ತಪಾಸಣೆ ನಡೆಸುತ್ತಿರುವ ಇನ್​ಸಾಕೊಗ್​ ಡೆಲ್ಟಾ ಪ್ಲಸ್ ರೂಪಾಂತರಿಯನ್ನು ಕೊರೊನಾ ವೈರಾಣುವಿನ ಅಪಾಯಕಾರಿ ರೂಪಾಂತರಿ ಎಂದು ಘೋಷಿಸಿದೆ.

(Delta Plus Infections Found in Maharashtra India to face new Danger in its fight against coronavirus)

ಇದನ್ನೂ ಓದಿ: Delta Plus Variant: ಡೆಲ್ಟಾ ಪ್ಲಸ್ ಕೊರೊನಾ ವೈರಸ್ ಎಂದರೇನು? ರೂಪಾಂತರಿ ವೈರಾಣು ಎಷ್ಟು ಅಪಾಯಕಾರಿ, ಇದರಿಂದ ರಕ್ಷಣೆ ಹೇಗೆ?

ಇದನ್ನೂ ಓದಿ: ಭಾರತದ ಮೂರು ರಾಜ್ಯಗಳಲ್ಲಿ ಕೊರೋನಾವೈರಸ್​ನ ಡೆಲ್ಟಾ ಪ್ಲಸ್ ರೂಪಾಂತರಿ ಪತ್ತೆಯಾಗಿದೆ; ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಪ್ರಕರಣಗಳು

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ