ಚಿನ್ನ ಕಳ್ಳಸಾಗಾಣಿಕೆ ಪ್ರಕರಣದ ಆರೋಪಿ ನಿಮ್ಮ ಕಚೇರಿಯಲ್ಲಿ ಕೆಲಸ ಮಾಡ್ತಿದ್ರಾ ಪಿಣರಾಯಿ ವಿಜಯನ್? ಕೇರಳದಲ್ಲಿ ಅಮಿತ್ ಶಾ ಪ್ರಶ್ನೆ

ಎಡಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ಇಡೀ ಆಡಳಿತವನ್ನು ತಮ್ಮ ಪಡೆಯಾಗಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಕೇರಳದ ಜನರ ಜೀವದ ಬಗ್ಗೆ ಆಡಳಿತ ಕಾಳಜಿ ಹೊಂದಿಲ್ಲ ಎಂದು ಶಾ ತಿಳಿಸಿದ್ದಾರೆ.

ಚಿನ್ನ ಕಳ್ಳಸಾಗಾಣಿಕೆ ಪ್ರಕರಣದ ಆರೋಪಿ ನಿಮ್ಮ ಕಚೇರಿಯಲ್ಲಿ ಕೆಲಸ ಮಾಡ್ತಿದ್ರಾ ಪಿಣರಾಯಿ ವಿಜಯನ್? ಕೇರಳದಲ್ಲಿ ಅಮಿತ್ ಶಾ ಪ್ರಶ್ನೆ
ಕೇರಳ ಚುನಾವಣಾ ಪ್ರಚಾರದಲ್ಲಿ ಅಮಿತ್ ಶಾ ಭಾಗಿ
Follow us
TV9 Web
| Updated By: ganapathi bhat

Updated on:Apr 05, 2022 | 1:14 PM

ಕೊಚ್ಚಿ: ಕೇರಳ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದ ಪ್ರಮುಖ ಆರೋಪಿ ನಿಮ್ಮ ಕಚೇರಿಯಲ್ಲಿ ಕೆಲಸ ಮಾಡಿದ್ದಾರಾ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ಗೆ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್ ಶಾ ಕುಟುಕಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂದು (ಮಾರ್ಚ್ 24) ಕೇರಳ ಪ್ರವಾಸ ಕೈಗೊಂಡಿರುವ ಕೇಂದ್ರ ಸಚಿವ, ಚಿನ್ನ ಕಳ್ಳಸಾಗಾಣಿಕೆ ಪ್ರಕರಣ ಉಲ್ಲೇಖಿಸಿ, ಪಿಣರಾಯಿ ವಿಜಯನ್ ಗುರಿಯಾಗಿಸಿ ಟೀಕಾಪ್ರಹಾರ ಮಾಡಿದ್ದಾರೆ.

ಗೋಲ್ಡ್ ಸ್ಮಂಗ್ಲಿಂಗ್ ಕೇಸ್​ನ ಪ್ರಮುಖ ಆರೋಪಿಗೆ ಸಿಪಿಐ ನಾಯಕರ ಜೊತೆ ಸಂಬಂಧವಿದೆ ಎಂದು ಶಾ ಆರೋಪಿಸಿದ್ದಾರೆ. ‘ಈ ಪ್ರಶ್ನೆಗೆ ನೇರವಾಗಿ ಉತ್ತರ ನೀಡಬೇಕು ಎಂದು ನಾನು ಪಿಣರಾಯಿ ವಿಜಯನ್ ಕೇಳಿಕೊಳ್ಳುತ್ತೇನೆ. ಚಿನ್ನ ಕಳ್ಳಸಾಗಾಣಿಕೆ ಪ್ರಕರಣದ ಆರೋಪಿ ನಿಮ್ಮ ಕಚೇರಿಯಲ್ಲಿ ಕೆಲಸ ಮಾಡಿದ್ದಾರಾ? ಇಲ್ವಾ?’ ಎಂದು ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲದೆ, ಪಿಣರಾಯಿ ವಿಜಯನ್ ಪ್ರಿನ್ಸಿಪಲ್ ಸೆಕ್ರೆಟರಿ ಆರೋಪಿಯನ್ನು ಪಾರು ಮಾಡಲು ಫೋನ್ ಕರೆಗಳನ್ನು ಮಾಡಿದ್ದಾರಾ ಎಂದೂ ಕೇಳಿದ್ದಾರೆ.

ತಮ್ಮ ಭಾಷಣದಲ್ಲಿ ಆರೋಪಿ ಯಾರು ಎಂದು ಹೆಸರಿಸದೆ ಮಾತನಾಡಿದ ಅಮಿತ್ ಶಾ, ಪರೋಕ್ಷವಾಗಿ ಸ್ವಪ್ನಾ ಸುರೇಶ್ ಮತ್ತು ಎಮ್. ಶಿವಶಂಕರ್ ಅವರನ್ನು ಪ್ರಸ್ತಾಪಿಸಿದರು. ಈ ಆರೋಪಿ ಓರ್ವ ಮಹಿಳೆ, ರಾಜ್ಯ ಸರ್ಕಾರದ ನಿಧಿ ಬಳಸಿ ವಿದೇಶಿ ಪ್ರವಾಸ ಕೈಗೊಂಡಿದ್ದಾಳಾ? ಪ್ರಿನ್ಸಿಪಲ್ ಸೆಕ್ರೆಟರಿ ಅನುಮತಿ ಪಡೆದುಕೊಂಡೇ ವಿದೇಶಕ್ಕೆ ಹೋಗಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ. ಸ್ಮಂಗ್ಲಿಂಗ್ ಕೇಸ್ ಆರೋಪಿ ಮುಖ್ಯಮಂತ್ರಿ ನಿವಾಸಕ್ಕೆ ನಿಗದಿತವಾಗಿ ಯಾಕೆ ಬರುತ್ತಿದ್ದರು ಎಂದೂ ಕೇಳಿದ್ದಾರೆ.

ಎಡಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇಡೀ ಆಡಳಿತವನ್ನು ತಮ್ಮ ಪಡೆಯಾಗಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಕೇರಳದ ಜನರ ಜೀವದ ಬಗ್ಗೆ ಆಡಳಿತ ಕಾಳಜಿ ಹೊಂದಿಲ್ಲ ಎಂದು ಶಾ ತಿಳಿಸಿದ್ದಾರೆ.

ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಅಮಿತ್ ಶಾ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೇರಳದಲ್ಲಿ ತಂದಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆಯೂ ಅಮಿತ್ ಶಾ ಮಾತನಾಡಿದ್ದಾರೆ. ಕಾಸರಗೋಡಿನಲ್ಲಿ ಜಾರಿಯಾಗಲಿರುವ 50 ಮೆಗಾ ವ್ಯಾಟ್​ಗಳ ಸೋಲಾರ್ ಯೋಜನೆ, AMRUT ಯೋಜನೆ ಮೂಲಕ 11,000 ಕೋಟಿ ರೂಪಾಯಿಯಲ್ಲಿ ನಗರಗಳನ್ನು ಉನ್ನತೀಕರಿಸುವುದು, ಕೇರಳ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ನೀಡಿರುವ 65 ಸಾವಿರ ಕೋಟಿ ರೂಪಾಯಿ ಮುಂತಾದ ಯೋಜನೆಗಳನ್ನು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Kerala Assembly Elections 2021: ಕೇರಳದ ಮಹಿಳಾ ಕಾಲೇಜು ವಿದ್ಯಾರ್ಥಿಗಳಿಗೆ ಜಪಾನ್​ನ ಸಮರ ಕಲೆ ಕಲಿಸಿದ ರಾಹುಲ್ ಗಾಂಧಿ

ಕೇರಳ ಚಿನ್ನ ಕಳ್ಳಸಾಗಾಣಿಕೆ ಪ್ರಕರಣ: ಸ್ವಪ್ನಾ ಸುರೇಶ್ ಜಾಮೀನು ತಿರಸ್ಕರಿಸಿದ ಎನ್​ಐಎ ನ್ಯಾಯಾಲಯ

Published On - 8:59 pm, Wed, 24 March 21