Delhi Chalo ರೈತರಿಗೆ ದಿಲ್ಜಿತ್ ದೊಸಾಂಜ್ ಸಹಾಯ: 1 ಕೋಟಿ ದಾನ ನೀಡಿದ್ರೂ ಪ್ರಚಾರ ಬಯಸದ ನಟ

ಗಾಯಕ ಮತ್ತು ಪಂಜಾಬಿ ನಟ ದಿಲ್ಜಿತ್ ದೊಸಾಂಜ್ ರೈತರ ನೆರವಿಗೆ ಮುಂದಾಗಿದ್ದಾರೆ. ದಿಲ್ಜಿತ್ ದೊಸಾಂಜ್ ರೈತರಿಗೆ ಬೆಚ್ಚನೆಯ ಉಡುಪುಗಳನ್ನು ಖರೀದಿಸಲೆಂದು 1 ಕೋಟಿ ರೂಪಾಯಿ ಹಣವನ್ನು ಮರುಯೋಚಿಸದೆ ದಾನ ಮಾಡಿದ್ದಾರೆ ಎಂದು ಪಂಜಾಬಿ ಗಾಯಕ ಸಿಂಗ್ಗಾ ತಿಳಿಸಿದ್ದಾರೆ.

Delhi Chalo ರೈತರಿಗೆ ದಿಲ್ಜಿತ್ ದೊಸಾಂಜ್ ಸಹಾಯ: 1 ಕೋಟಿ ದಾನ ನೀಡಿದ್ರೂ ಪ್ರಚಾರ ಬಯಸದ ನಟ
ನಟ,ಗಾಯಕ ದಿಲ್ಜಿತ್ ದೊಸಾಂಜ್ (ಸಾಂಕೇತಿಕ ಚಿತ್ರ)
Follow us
guruganesh bhat
| Updated By: KUSHAL V

Updated on: Dec 06, 2020 | 2:50 PM

ದೆಹಲಿ: ಬಲಗೈಲಿ ಕೊಟ್ಟಿದ್ದು ಎಡಗೈಗೂ ತಿಳಿಯಬಾರದು ಎನ್ನುತ್ತದೆ ಕನ್ನಡದ ನಾಣ್ಣುಡಿ. ದೆಹಲಿಯ ಕೊರೆವ ಚಳಿಯಲ್ಲೂ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್ ಕೃಷಿಕರಿಗೆ ಇದೀಗ ಇತರ ರಾಜ್ಯಗಳ ಲಕ್ಷಾಂತರ ಜನರು ಸಹನಾಭೂತಿ ತೋರುತ್ತಿದ್ದಾರೆ. ಆದರೆ, ಇಲ್ಲೋರ್ವರು ಕಾಳಜಿ ವ್ಯಕ್ತಪಡಿಸುವ ಜೊತೆಗೆ, ಅವರ ಹಿತರಕ್ಷಣೆಗೂ ಮುಂದಾಗಿದ್ದಾರೆ. ಅದೂ, ಯಾವುದೇ ಪ್ರಚಾರದ ಆಸೆಯಿಲ್ಲದೆ!

ಹೌದು, ಗಾಯಕ ಮತ್ತು ಪಂಜಾಬಿ ನಟ ದಿಲ್ಜಿತ್ ದೊಸಾಂಜ್ ರೈತರ ನೆರವಿಗೆ ಮುಂದಾಗಿದ್ದಾರೆ. ದಿಲ್ಜಿತ್ ದೊಸಾಂಜ್ ರೈತರಿಗೆ ಬೆಚ್ಚನೆಯ ಉಡುಪುಗಳನ್ನು ಖರೀದಿಸಲೆಂದು 1 ಕೋಟಿ ರೂಪಾಯಿ ಹಣವನ್ನು ಮರುಯೋಚಿಸದೆ ದಾನ ಮಾಡಿದ್ದಾರೆ ಎಂದು ಪಂಜಾಬಿ ಗಾಯಕ ಸಿಂಗ್ಗಾ ತಿಳಿಸಿದ್ದಾರೆ.

ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ದೊಸಾಂಜ್​ಗೆ ಧನ್ಯವಾದ ಅರ್ಪಿಸಿ ವಿಡಿಯೋ ಪೋಸ್ಟ್ ಮಾಡಿರುವ ಸಿಂಗ್ಗಾ ಯಾವುದೇ ಪ್ರಚಾರ ಬಯಸದೆ ದೊಸಾಂಜ್​ ರೈತರಿಗೆ ದಾನ ಮಾಡಿರುವುದನ್ನು ಕೊಂಡಾಡಿದ್ದಾರೆ. ನಮ್ಮಲ್ಲಿ ಕೇವಲ 10 ರೂ. ದಾನ ಮಾಡಿದರೂ ಪ್ರಚಾರ ಬಯಸುವವರ ಸಂಖ್ಯೆಯೇ ಹೆಚ್ಚು. ಅಂಥದ್ರಲ್ಲಿ, 1 ಕೋಟಿ ದಾನ ನೀಡಿದರೂ ದೊಸಾಂಜ್ ಎಲ್ಲೂ ಹೇಳಿಕೊಂಡಿಲ್ಲ ಎಂದು ನಟನ ಕಾರ್ಯವನ್ನು ಹಾಡಿಹೊಗಳಿದ್ದಾರೆ.

ದಿಲ್ಜಿತ್ ದೊಸಾಂಜ್

ಪ್ರತಿಭಟನೆಯ ಆರಂಭದಿಂದಲೂ ದಿಲ್ಜಿತ್ ದೊಸಾಂಜ್ ಪಂಜಾಬ್ ರೈತರ ಪರ ನಿಲುವು ತಳೆದಿದ್ದರು. ಟ್ವಿಟ್ಟರ್​ನಲ್ಲಿ ದೆಹಲಿ ಚಲೋವನ್ನು ಟೀಕಿಸಿದ್ದ ಬಾಲಿವುಡ್​ ನಟಿ ಕಂಗನಾ ರನೌತ್ ಮೇಲೂ ಮುಗಿಬಿದ್ದಿದ್ದ ದೊಸಾಂಜ್​ ನಡೆಗೆ ಭಾರಿ ಬೆಂಬಲ ವ್ಯಕ್ತವಾಗಿತ್ತು.

ಪಂಜಾಬ್ ರೈತರನ್ನುದ್ದೇಶಿಸಿ ಪ್ರತಿಕ್ರಿಯಿಸಿರುವ ದಿಲ್ಜಿತ್ ದೆಹಲಿ ಚಲೋ ಭವಿಷ್ಯದ ಪೀಳಿಗೆಗಳಿಗೂ ಸ್ಪೂರ್ತಿದಾಯಕವಾಗಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ರೈತರನ್ನು ಅವಮಾನಿಸಿದರೂ ಸತ್ಯ ಎಂದಿಗೂ ಬದಲಾಗದು. ಕೇಂದ್ರ ಸರ್ಕಾರ ತಕ್ಷಣವೇ ರೈತರ ಅಹವಾಲುಗಳನ್ನು ಸ್ವೀಕರಿಸಬೇಕು ಎಂದು ಆಗ್ರಹಿಸಿದ್ದರು.

ಟ್ವಿಟರ್​ನಲ್ಲಿ ದಿಲ್​​ಜಿತ್ ದೊಸಾಂಜ್-ಕಂಗನಾ ಫೈಟ್: ಪಂಜಾಬಿ ಅನುವಾದಕ್ಕೆ ಗೂಗಲ್ ಮೊರೆ ಹೋದ ನೆಟ್ಟಿಗರು

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್