AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂತರಿಕ ಕಚ್ಚಾಟದಲ್ಲಿ ತೊಡಗಿರುವ ಎಲ್​ಜೆಪಿಗೆ ಬಿಗ್​ ಶಾಕ್​ ಕೊಟ್ಟ ಚುನಾವಣಾ ಆಯೋಗ; ಪಕ್ಷದ ಗುರುತು ನಿಷ್ಕ್ರಿಯ

ಲೋಕ ಜನಶಕ್ತಿ ಪಕ್ಷದ ಗುರುತನ್ನು ರದ್ದುಗೊಳಿಸಿದ್ದೇವೆ. ಅದರ ಎರಡೂ ಬಣಗಳು ಪಕ್ಷದ ಹೆಸರನ್ನು ಬೇಷರತ್ತಾಗಿ ಬಳಸಲೂ ಅನುಮತಿ ಕೊಡುವುದಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

ಆಂತರಿಕ ಕಚ್ಚಾಟದಲ್ಲಿ ತೊಡಗಿರುವ ಎಲ್​ಜೆಪಿಗೆ ಬಿಗ್​ ಶಾಕ್​ ಕೊಟ್ಟ ಚುನಾವಣಾ ಆಯೋಗ; ಪಕ್ಷದ ಗುರುತು ನಿಷ್ಕ್ರಿಯ
ಪಶುಪತಿ ಪಾರಸ್​ ಮತ್ತು ಚಿರಾಗ್ ಪಾಸ್ವಾನ್​
TV9 Web
| Edited By: |

Updated on: Oct 02, 2021 | 5:23 PM

Share

ಬಿಹಾರದ ಲೋಕ ಜನಶಕ್ತಿ ಪಕ್ಷದ ಗುರುತನ್ನು (Lok Janshakti Party Symbol) ಚುನಾವಣಾ ಆಯೋಗ ಇಂದು ನಿಷ್ಕ್ರಿಯ (freezed)ಗೊಳಿಸಿದೆ. ಲೋಕ ಜನಶಕ್ತಿ ಪಕ್ಷದಲ್ಲೀಗ ಎರಡು ಬಣಗಳಾಗಿದ್ದು ಗೊತ್ತಾ ಇದೆ. ಒಂದು ಬಣ ಚಿರಾಗ್​ ಪಾಸ್ವಾನ್​​ರದ್ದಾದರೆ ಇನ್ನೊಂದು ಕೇಂದ್ರ ಸಚಿವ ಪಶುಪತಿ ಕುಮಾರ್ ಪಾರಸ್​ ಅವರದ್ದು. ಈ ಎರಡೂ ಬಣಗಳ ನಡುವೆ ಕಿತ್ತಾಟ ನಡೆಯುತ್ತಿರುವ ಬೆನ್ನಲ್ಲೇ ಚುನಾವಣಾ ಆಯೋಗ ಇಂಥದ್ದೊಂದು ಮಹತ್ವದ ಆದೇಶ ಹೊರಡಿಸಿದೆ. ಇಷ್ಟು ದಿನ ಲೋಕ ಜನಶಕ್ತಿ ಪಕ್ಷದ ಗುರುತಾಗಿದ್ದ ಬಂಗಲೆಯ ಚಿತ್ರವನ್ನು ಇನ್ನು ಮುಂದೆ ಚಿರಾಗ್​ ಪಾಸ್ವಾನ್ ಬಣವೂ ಬಳಸಿಕೊಳ್ಳುವಂತಿಲ್ಲ, ಪಶುಪತಿಯವರ ಬಣವೂ ಬಳಸುವಂತಿಲ್ಲ ಎಂದು ಸೂಚನೆ ನೀಡಿದೆ.   

ಲೋಕ ಜನಶಕ್ತಿ ಪಕ್ಷವನ್ನು 2000ರಲ್ಲಿ ರಾಮ್​ ವಿಲಾಸ್​ ಪಾಸ್ವಾನ್​ ಸ್ಥಾಪನೆ ಮಾಡಿದ್ದಾರೆ. ಇದು ಎನ್​ಡಿಎ ಮತ್ರಿಕೂಟದ ಪಕ್ಷಗಳಲ್ಲಿ ಒಂದು. ರಾಮ್​ ವಿಲಾಸ್ ಪಾಸ್ವಾನ್​ ಪುತ್ರ ಚಿರಾಗ್ ಪಾಸ್ವಾನ್​ಗೆ ಪಶುಪತಿ ಕುಮಾರ್​ ಪಾರಸ್​ ಚಿಕ್ಕಪ್ಪನೇ ಆಗಬೇಕು. ರಾಮ್​ ವಿಲಾಸ್​ ಪಾಸ್ವಾನ್​ ನಿಧನದ ಬಳಿಕ ಎಲ್​ಜೆಪಿಯಲ್ಲಿ ಆಂತರಿಕ ಕಲಹ ಶುರುವಾಯಿತು. ವೈಷಮ್ಯ ತಾರಕಕ್ಕೆ ಏರಿದ ನಂತರ ಪಕ್ಷದ ಹೊಣೆ ಹೊತ್ತಿದ್ದ ಪಶುಪತಿ ಕುಮಾರ್​, ಚಿರಾಗ್​​ ಪಾಸ್ವಾನ್​​ರನ್ನು ಉಚ್ಚಾಟಿಸಿದರು. ಅಲ್ಲಿಂದ ಪಕ್ಷವು ಎರಡು ಬಣಗಳಾಗಿ ಬದಲಾಯಿತು. ಈ ಎರಡೂ ಗುಂಪುಗಳು ಎಲ್​ಜೆಪಿ ಪಕ್ಷ, ಅದರ ಗುರುತು ತಮ್ಮದು ಎಂದು ಕಿತ್ತಾಟದಲ್ಲಿ ತೊಡಗಿಕೊಂಡಿದ್ದವು. ಹಾಗೇ, ಕೆಲವು ದಿನಗಳ ಹಿಂದೆ ಚಿರಾಗ್​ ಪಾಸ್ವಾನ್ ಚುನಾವಣಾ ಆಯೋಗಕ್ಕೆ ಪತ್ರ ಬರೆದು ದೂರು ನೀಡಿದ್ದರು. ಪಕ್ಷದ ಗುರುತನ್ನು ನಾವು ಬಳಸಿಕೊಳ್ಳಲು ಅನುಮತಿ ನೀಡಬೇಕು ಎಂದು ಹೇಳಿದ್ದರು.

ಉಪಚುನಾವಣೆ ಹೊತ್ತಲ್ಲಿ ಮಹತ್ವದ ನಿರ್ಧಾರ ಬಿಹಾರದಲ್ಲಿ ಮುಂಗೇರದ ತಾರಾಪುರ ಮತ್ತು ದರ್ಭಾಂಗದ ಕುಶೇಶ್ವರಸ್ಥಾನ ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್​ 30ರಂದು ಉಪಚುನಾವಣೆ ನಡೆಯಲಿದೆ. ಈ ಹೊತ್ತಲ್ಲೇ ಚುನಾವಣಾ ಆಯೋಗ ಲೋಕ ಜನಶಕ್ತಿ ಪಾರ್ಟಿಗೆ ಶಾಕ್​ ನೀಡಿದೆ. ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೂ ಶುರುವಾಗಿದ್ದು, ಎಲ್​ಜೆಪಿ ಆದಷ್ಟು ಬೇಗ ತನ್ನ ಆಂತರಿಕ ಕಲಹವನ್ನು ಕೊನೆಗೊಳ್ಳಿಸಬೇಕಿದೆ.

ಚುನಾವಣಾ ಆಯೋಗ ಹೇಳಿದ್ದೇನು? ಇಂದು ಚುನಾವಣಾ ಆಯೋಗ ಎಲ್​ಜೆಪಿಯ ಗುರುತನ್ನು ನಿಷ್ಕ್ರಿಯಗೊಳಿಸಿದೆ. ಲೋಕ ಜನಶಕ್ತಿ ಪಕ್ಷದ ಗುರುತನ್ನು ರದ್ದುಗೊಳಿಸಿದ್ದೇವೆ. ಅದರ ಎರಡೂ ಬಣಗಳು ಪಕ್ಷದ ಹೆಸರನ್ನು ಬೇಷರತ್ತಾಗಿ ಬಳಸಲು ಅನುಮತಿ ಕೊಡುವುದಿಲ್ಲ. ಹಾಗೇ, ಪಕ್ಷದ ಸಂಕೇತವಾಗಿದ್ದ ಬಂಗಲೆಯ ಚಿತ್ರವನ್ನೂ ಯಾರೊಬ್ಬರೂ ಬಳಸುವಂತಿಲ್ಲ ಎಂದು ಹೇಳಿದೆ. ಹೀಗಾಗಿ ಎಲ್​ಜೆಪಿ ತನ್ನ ಆಂತರಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳದೆ ಇಬ್ಭಾಗವಾಗಿಯೇ ಮುಂದಿನ ಚುನಾವಣೆಗಳಲ್ಲಿ ಭಾಗವಹಿಸುತ್ತದೆ ಎಂದರೆ, ಎರಡೂ ಬಣಗಳು ಪಕ್ಷದ ಹೆಸರು ಮತ್ತು ಗುರುತನ್ನು ಬೇರೆಬೇರೆಯೇ ಸೃಷ್ಟಿಸಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: ಮದುವೆಯಲ್ಲಿ ಒಂದು ಪೀಸ್ ಜಾಸ್ತಿ ಕೇಕ್ ತಿಂದ ವ್ಯಕ್ತಿಯ ಬಳಿ ಹಣ ಕೇಳಿದ ಜೋಡಿ; ಏನಿದು ಪ್ರಕರಣ?

ನಾಲ್ಕು ವ್ಯಕ್ತಿಗಳು, 20 ಜಾನುವಾರುಗಳನ್ನು ಕೊಂದ ನರಭಕ್ಷಕ ಹುಲಿಯ ಬೇಟೆಗೆ ಅರಣ್ಯ ಇಲಾಖೆ ಆದೇಶ

ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
Siddaramaiah Press Conference: ಸಿದ್ದರಾಮಯ್ಯ ಸುದ್ದಿಗೋಷ್ಠಿ ಲೈವ್​
Siddaramaiah Press Conference: ಸಿದ್ದರಾಮಯ್ಯ ಸುದ್ದಿಗೋಷ್ಠಿ ಲೈವ್​