ಟಿಎಂಸಿಗೆ ಸೇರಿದ ಗೋವಾದ ಮಾಜಿ ಸಿಎಂ ಫಲೆರೊ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿವದಾಸ್ ನಾಯಕ್
Luizinho Faleiro: ಟಿಎಂಸಿ ಪಕ್ಷದ ಅಧ್ಯಕ್ಷೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು "ಕುಟುಂಬಕ್ಕೆ" ಹೊಸದಾಗಿ ಸೇರ್ಪಡೆಗೊಂಡವರನ್ನು ಸ್ವಾಗತಿಸಿದರು ಮತ್ತು ಗೋವಾಕ್ಕೆ ಹೊಸ ಉತ್ಸಾಹದಿಂದ ಕೆಲಸ ಮಾಡಲು ಹೇಳಿದರು.
ಕೊಲ್ಕತ್ತಾ: ಗೋವಾದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಲುಯಿಝಿನೊ ಫಲೆರೊ (Luizinho Faleiro), ಸಾಹಿತ್ಯ ಅಕಾಡೆಮಿ ಪುರಸ್ಕೃತ ಶಿವದಾಸ್ ಸೋನು ನಾಯಕ್(Shivdas Sonu Naik )ಬುಧವಾರ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸಮ್ಮುಖದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಪಕ್ಷದ ಅಧ್ಯಕ್ಷೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು “ಕುಟುಂಬಕ್ಕೆ” ಹೊಸದಾಗಿ ಸೇರ್ಪಡೆಗೊಂಡವರನ್ನು ಸ್ವಾಗತಿಸಿದರು ಮತ್ತು ಗೋವಾಕ್ಕೆ ಹೊಸ ಉತ್ಸಾಹದಿಂದ ಕೆಲಸ ಮಾಡಲು ಹೇಳಿದರು.
ನಾಳೆಯೊಳಗೆ ಹೆಚ್ಚಿನ ಜನರು ಪಕ್ಷವನ್ನು ಸೇರಲಿದ್ದಾರೆ ಎಂದು ಟಿಎಂಸಿ ನಾಯಕ ಸೌಗತ ರಾಯ್ ಹೇಳಿದ್ದಾರೆ. “ನನಗೆ ಡೆರೆಕ್ ಒ’ಬ್ರೇನ್ ಅವರಿಂದ ಮಾಹಿತಿ ಸಿಕ್ಕಿದೆ” ಎಂದು ಅವರು ಹೇಳಿದರು.
I am also pleased to welcome Former MLA from MGP Shri Lavoo Mamledar, Congress General Secretaries Yatish Naik & Vijay Poi and Congress Secretaries Mario Pinto De Santana & Anand Naik to the party. (2/3)
— Mamata Banerjee (@MamataOfficial) September 29, 2021
ಸರಣಿ ಟ್ವೀಟ್ ಮಾಡಿದ ಮಮತಾ ಬ್ಯಾನರ್ಜಿ, “ತೃಣಮೂಲ ಕಾಂಗ್ರೆಸ್ ಕುಟುಂಬಕ್ಕೆ ಮಾಜಿ ಗೋವಾ ಸಿಎಂ, 7 ಬಾರಿ ಶಾಸಕರಾದ ಮತ್ತು ಗೋವಾ ನಾಯಕ ಲುಯಿಝಿನೊ ಫಲೆರೊ ಅವರನ್ನು ಸ್ವಾಗತಿಸುವುದು ನನಗೆ ಹೆಮ್ಮೆಯ ವಿಷಯವಾಗಿದೆ. ಒಟ್ಟಾಗಿ ನಾವು ಪ್ರತಿ ಗೋವಾ ಪರವಾಗಿ ನಿಲ್ಲುತ್ತೇವೆ, ವಿಭಜಕ ಶಕ್ತಿಗಳ ವಿರುದ್ಧ ಹೋರಾಡುತ್ತೇವೆ ಮತ್ತು ಗೋವಾಕ್ಕಾಗಿ ಹೊಸ ದಿನವನ್ನು ಆರಂಭಿಸುವ ಕೆಲಸ ಮಾಡುತ್ತೇವೆ.
ಟಿಎಂಸಿಗೆ ಸೇರಿದ ನಂತರ, ಫಲೆರೊ ಗೋವಾ ಜನರನ್ನು “ವಿಭಜಿಸುವ ಮತ್ತು ಫ್ಯಾಸಿಸ್ಟ್ ಶಕ್ತಿಗಳ” ವಿರುದ್ಧ ರಕ್ಷಿಸಲು ಪ್ರತಿಜ್ಞೆ ಮಾಡಿದರು, “ಬಿಜೆಪಿಯನ್ನು ಎದುರಿಸಿದ ಮತ್ತು ಅವರ ಅಜೆಂಡಾವನ್ನು ನಾಶಪಡಿಸಿದ ಏಕೈಕ ನಾಯಕ ದೀದಿ (ಮಮತಾ ಬ್ಯಾನರ್ಜಿ). ಅವರು ಬೀದಿ ಹೋರಾಟಗಾರರು ಮತ್ತು ನಮ್ಮ ದೇಶದಲ್ಲಿ ಇಂತಹ ಹೋರಾಟಗಾರರು ಬೇಕು. ಎಲ್ಲರೂ ಸೇರಿಕೊಳ್ಳುವ ಕ್ಷಣ ಬಂದಿದೆ ಎಂದು ಫಲೆರೊ ಹೇಳಿದ್ದಾರೆ.
ಇಂದು ಟಿಎಂಸಿಗೆ ಸೇರಿದವರ ಸಂಪೂರ್ಣ ಪಟ್ಟಿ ಇಲ್ಲಿದೆ:
1. ಲುಯಿಝಿನೊ ಫಲೆರೊ: ಗೋವಾದ ಮಾಜಿ ಮುಖ್ಯಮಂತ್ರಿ ಮತ್ತು ನವೇಲಿಂ ಕ್ಷೇತ್ರದಿಂದ ಏಳು ಬಾರಿ ಕಾಂಗ್ರೆಸ್ ಶಾಸಕರು. 2. ಲಾವೂ ಮಾಮ್ಲೆದಾರ: ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ಮಾಜಿ ಶಾಸಕ ಮತ್ತು ಗೋವಾ ಪೊಲೀಸ್ ಸೇವೆಗಳಲ್ಲಿ ಉಪ ಎಸ್ಪಿ. 3. ಯತೀಶ್ ನಾಯಕ್: ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಗೋವಾ ವಿಶ್ವವಿದ್ಯಾಲಯದಿಂದ ಕಾನೂನಿನಲ್ಲಿ ಚಿನ್ನದ ಪದಕ ವಿಜೇತ. 4. ವಿಜಯ್ ವಾಸುದೇವ್ ಪೋಯಿ: ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. 5. ಮಾರಿಯೋ ಪಿಂಟೊ ಡಿ ಸಂತಾನ: ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು 25 ವರ್ಷಗಳಿಂದ ಸರ್ಪಂಚ್ ಆಗಿದ್ದಾರೆ ಮತ್ತು ಕ್ರೀಡಾ ಪ್ರಾಧಿಕಾರ ಗೋವಾ ಮತ್ತು ಭಾರತೀಯ ರೆಡ್ ಕ್ರಾಸ್ (ಗೋವಾ) ದಲ್ಲಿ ಖಜಾಂಚಿಯಾಗಿದ್ದರು. 6. ಆನಂದ್ ನಾಯಕ್: ಅವರು ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಕಾರ್ಯದರ್ಶಿಯಾಗಿದ್ದರು. ಅವರು ಮಾಯೆಮ್‌ನಿಂದ ನಾಲ್ಕು ಬಾರಿ ಚುನಾಯಿತ ಸದಸ್ಯ ಮತ್ತು ಎರಡು ಬಾರಿ ಸರ್ಪಂಚ್ ಆಗಿ ಆಯ್ಕೆಯಾದರು.
7. ರವೀಂದ್ರನಾಥ ಫಲೆರೊ: ಮಾಜಿ ಕಾಂಗ್ರೆಸ್ ರಾಜ್ಯ ಯುವ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರು ಹಿಂದುಳಿದ ಸಮುದಾಯಕ್ಕಾಗಿ ಹೆಚ್ಚು ಕೆಲಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. 8. ಶಿವದಾಸ್ ಸೋನು ನಾಯಕ್ (ಎನ್ ಶಿವದಾಸ್): ಅವರು ಲೇಖಕ, ಕವಿ ಮತ್ತು ನಾಟಕಕಾರ. ಅವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು. 9. ರಾಜೇಂದ್ರ ಶಿವಾಜಿ ಕಾಕೋಡ್ಕರ್: ಅವರು ಗೋವಾದ ಆರ್ಥಿಕತೆ ಮತ್ತು ಪರಿಸರ ಸಮಸ್ಯೆಗಳ ಕುರಿತು ಪ್ರಮುಖ ಧ್ವನಿಯಾಗಿದ್ದಾರೆ. 10. ಆಂಟೋನಿಯೊ ಮೊಂಟೇರೊ ಕ್ಲೋವಿಸ್ ಡಾ ಕೋಸ್ಟಾ: ಅವರು ದಕ್ಷಿಣ ಗೋವಾ ವಕೀಲರ ಸಂಘದ ಅಧ್ಯಕ್ಷರಾಗಿದ್ದಾರೆ ಮತ್ತು ಕೊವಿಡ್ -19 ಸಾಂಕ್ರಾಮಿಕದ ನಡುವೆ ಗೋವಾದಲ್ಲಿ ಆಮ್ಲಜನಕದ ಅಸಮರ್ಪಕ ನಿರ್ವಹಣೆಯನ್ನು ಬಹಿರಂಗಪಡಿಸಿದ್ದರು.
ಇದನ್ನೂ ಓದಿ: Amarinder Singh ದೆಹಲಿಯಲ್ಲಿ ಅಮಿತ್ ಶಾ ಭೇಟಿ ಮಾಡಿದ ಕ್ಯಾಪ್ಟನ್ ಅಮರಿಂದರ್ ಸಿಂಗ್
Published On - 7:02 pm, Wed, 29 September 21