AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಮೊರಾದಾಬಾದ್‌ನಲ್ಲಿ ಮುಸ್ಲಿಂ ಯುವಕರು ಹಿಂದೂ ಮಹಿಳಾ ಕಾನ್‌ಸ್ಟೆಬಲ್‌ಗೆ ಥಳಿಸಿದ್ದು ನಿಜವೇ?, ಸತ್ಯಾಂಶ ಇಲ್ಲಿದೆ

ಕೆಲ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೋವನ್ನು ಕೋಮುವಾದಿ ಹೇಳಿಕೆಗಳೊಂದಿಗೆ ವೈರಲ್ ಮಾಡುತ್ತಿದ್ದಾರೆ. ಸಂತ್ರಸ್ತ ಬಾಲಕಿ ಹಿಂದೂ ಎಂದು ಹೇಳಲಾಗುತ್ತಿದೆ. ನಿರ್ದಿಷ್ಟ ಸಮುದಾಯದ ಯುವಕನೊಬ್ಬ ಹಿಂದೂ ಮಹಿಳಾ ಕಾನ್‌ಸ್ಟೆಬಲ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಬರೆದು ಶೇರ್ ಮಾಡುತ್ತಿದ್ದಾರೆ.

Fact Check: ಮೊರಾದಾಬಾದ್‌ನಲ್ಲಿ ಮುಸ್ಲಿಂ ಯುವಕರು ಹಿಂದೂ ಮಹಿಳಾ ಕಾನ್‌ಸ್ಟೆಬಲ್‌ಗೆ ಥಳಿಸಿದ್ದು ನಿಜವೇ?, ಸತ್ಯಾಂಶ ಇಲ್ಲಿದೆ
ವೈರಲ್​​​ ಫೋಸ್ಟ್​​
ಪ್ರೀತಿ ಭಟ್​, ಗುಣವಂತೆ
| Edited By: |

Updated on: Dec 05, 2024 | 2:38 PM

Share

ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಯುವಕನೊಬ್ಬ ಬಾಲಕಿಯ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದು. 2:32 ನಿಮಿಷದ ಈ ವಿಡಿಯೋದಲ್ಲಿ ಇನ್ನೂ ಕೆಲವರು ಬಾಲಕಿಯ ಮೇಲೆ ಅಸಭ್ಯವಾಗಿ ಹಲ್ಲೆ ಮಾಡಿರುವುದನ್ನು ತೋರಿಸಲಾಗಿದೆ. ಕೆಲ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೋವನ್ನು ಕೋಮುವಾದಿ ಹೇಳಿಕೆಗಳೊಂದಿಗೆ ವೈರಲ್ ಮಾಡುತ್ತಿದ್ದಾರೆ.

ಸಂತ್ರಸ್ತ ಬಾಲಕಿ ಹಿಂದೂ ಎಂದು ಹೇಳಲಾಗುತ್ತಿದೆ. ನಿರ್ದಿಷ್ಟ ಸಮುದಾಯದ ಯುವಕನೊಬ್ಬ ಹಿಂದೂ ಮಹಿಳಾ ಕಾನ್‌ಸ್ಟೆಬಲ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಬರೆದು ಶೇರ್ ಮಾಡುತ್ತಿದ್ದಾರೆ. ಫೇಸ್​ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಹಿಂದೂ ಮಹಿಳೆಗೆ ಇರ್ಫಾನ್ ಎಂಬ ಮುಸ್ಲಿಂ ಹುಡುಗ ಕ್ರೂರವಾಗಿ ಕಿರುಕುಳ ನೀಡಿ ಹಲ್ಲೆ ಮಾಡಿ ಥಳಿಸಿದ್ದಾನೆ. ಸಮವಸ್ತ್ರದಲ್ಲಿರುವ ಹುಡುಗಿಯನ್ನು ಆಕ್ರಮಣ ಮಾಡಲು ಧೈರ್ಯಮಾಡುತ್ತಿದ್ದಾರೆ, ಇನ್ನೂ ಅವರು ನಿಮಗೆ ಏನು ಮಾಡಬಹುದೆಂದು ಊಹಿಸಿ! ಇಂತಹ ಉ_ಗ್ರರ ವಿರುದ್ಧ ಕಠಿಣ ಕ್ರಮದ ಅಗತ್ಯವಿದೆ’’ ಎಂದು ಬರೆದುಕೊಂಡಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಘಟನೆಯಲ್ಲಿ ಯಾವುದೇ ಕೋಮುವಾದಿ ಕೋನ ಇಲ್ಲ. ಈ ಘಟನೆಯಲ್ಲಿದ್ದ ಎಲ್ಲರೂ ಒಂದೇ ಸಮುದಾಯಕ್ಕೆ ಸೇರಿದವರು. ವೈರಲ್ ಪೋಸ್ಟ್‌ನ ಸತ್ಯವನ್ನು ತಿಳಿಯಲು, ನಾವು ಮೊದಲು ಗೂಗಲ್‌ನಲ್ಲಿ ಸಂಬಂಧಿತ ಕೀವರ್ಡ್‌ಗಳೊಂದಿಗೆ ಓಪನ್ ಸರ್ಚ್ ಮಾಡಿದ್ದೇವೆ. ಆಗ ಡಿಸೆಂಬರ್ 2 ರಂದು ಟಿವಿ9 ಭಾರತ್ ವರ್ಷ್ ನಲ್ಲಿ ಪ್ರಕಟವಾದ ಸುದ್ದಿಯಲ್ಲಿ ನಾವು ಇದನ್ನು ಕಂಡುಕೊಂಡಿದ್ದೇವೆ. ಯುಪಿಯ ಮೊರಾದಾಬಾದ್‌ನಲ್ಲಿ ಮಹಿಳಾ ಕಾನ್‌ಸ್ಟೆಬಲ್ ಮೇಲೆ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ. ‘ಅಮ್ರೀನ್’ ಎಂಬ ಮಹಿಳಾ ಪೇದೆ ಮೇಲೆ ಬೈಕ್ ಸವಾರ ಸೇರಿದಂತೆ ಕೆಲ ಯುವಕರು ಹಲ್ಲೆ ನಡೆಸಿದ್ದಾರೆ. ಸಂತ್ರಸ್ತೆ ದೂರು ದಾಖಲಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂಬ ಮಾಹಿತಿ ಇದರಲ್ಲಿದೆ.

मुरादाबाद: सिर दीवार में पटका-पेट में लात मारी, छेड़छाड़ का विरोध करने पर महिला सिपाही को बेरहमी से पीटा

ಅಮ್ರೀನ್ ಸಿವಿಲ್ ಡ್ರೆಸ್‌ನಲ್ಲಿ ತನ್ನ ಜಮೀನುದಾರನ ಮನೆಗೆ ಹೋಗುತ್ತಿದ್ದಳು. ಅಷ್ಟರಲ್ಲಿ ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ಬೈಕ್ ಸ್ಟಾರ್ಟ್ ಮಾಡುವಂತೆ ಕೇಳಿದ್ದಾನೆ. ಈ ವಿಚಾರವಾಗಿ ಮಾತಿನ ಚಕಮಕಿ ನಡೆದಿದ್ದು, ಬಳಿಕ ಬೈಕ್ ಚಲಾಯಿಸುತ್ತಿದ್ದ ಯುವಕ ಹಾಗೂ ಆತನ ಸಹಚರರು ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿ ಥಳಿಸಿದ್ದಾರೆ. ಈ ವೇಳೆ ಮಹಿಳೆಯ ತಲೆ ಮತ್ತು ಮೊಣಕಾಲಿಗೆ ಗಂಭೀರ ಗಾಯಗಳಾಗಿವೆ ಎಂಬ ಮಾಹಿತಿ ಇದರಲ್ಲಿದೆ.

ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಗಾಯಾಳು ಮಹಿಳಾ ಪೇದೆಯ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಮ್ಮ ಪೊಲೀಸ್ ತಂಡ ತನಿಖೆಯಲ್ಲಿ ನಿರತವಾಗಿದೆ. ಆರೋಪಿಗಳನ್ನು ಶೀಘ್ರ ಬಂಧಿಸಿ ವಿಚಾರಣೆ ನಡೆಸಿ ಕಾನೂನು ಕ್ರಮ ಜರುಗಿಸಲಾಗುವುದು. ಪೊಲೀಸರು 5-6 ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಹಿಳಾ ಕಾನ್‌ಸ್ಟೆಬಲ್‌ಗೆ ಕಿರುಕುಳ ನೀಡಿದ ಪ್ರಮುಖ ಆರೋಪಿ ಅಫ್ಸರ್ ಅಲಿ ಅವರ ಪುತ್ರ ನಯೀಮ್ ಅಲಿ ಮತ್ತು ಅಫ್ಸರ್ ಅಲಿ ಅವರ ಕಿರಿಯ ಸಹೋದರ ಸಲೀಂ ಅಲಿ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಸಿಒ ಸಿವಿಲ್ ಲೈನ್ಸ್ ತಿಳಿಸಿದೆ ಎಂದು ಅನೇಕ ವರದಿಯಲ್ಲಿದೆ.

ಟಿವಿ9 ಕನ್ನಡ ಮಾಡಿದ ತನಿಖೆಯಲ್ಲಿ, ಕೋಮುವಾದಿ ಹೇಳಿಕೆಗಳೊಂದಿಗೆ ವೈರಲ್ ಆಗುತ್ತಿರುವ ಪೋಸ್ಟ್ ನಕಲಿ ಎಂದು ಸಾಬೀತಾಗಿದೆ. ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ಒಂದೇ ಸಮುದಾಯದವರು. ನವೆಂಬರ್ 30 ರಂದು ನಡೆದ ಈ ಘಟನೆಯಲ್ಲಿ ಥಳಿತಕ್ಕೊಳಗಾದ ಮಹಿಳಾ ಕಾನ್‌ಸ್ಟೆಬಲ್ ಹಿಂದೂ ಅಲ್ಲ, ಆಕೆ ಮುಸ್ಲಿಂ. ಇದರಲ್ಲಿ ಯಾವುದೇ ಕೋಮುವಾದದ ಕೋನವಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.

ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ