Fact Check: ಭಾರತದ 553 ಡ್ರೋನ್‌ಗಳನ್ನು ಹೊಡೆದುರುಳಿಸಿದೆಯೇ ಪಾಕಿಸ್ತಾನ?: ವೈರಲ್ ಪಟ್ಟಿಯ ಸತ್ಯಾಂಶ ಏನು?
Operation Sindoor Fact Check: ಅಂತರರಾಷ್ಟ್ರೀಯ ಸುದ್ದಿ ವಾಹಿನಿ ಸಿಎನ್‌ಎನ್‌ನ ಲೋಗೋ ಹೊಂದಿರುವ ಇನ್ಫೋಗ್ರಾಫಿಕ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದನ್ನು ಭಾರತ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋ (PIB) ಸತ್ಯ ಪರಿಶೀಲಿಸಿದೆ. ಪಿಐಬಿಯ ಫ್ಯಾಕ್ಟ್ ಚೆಕ್‌ನಲ್ಲಿ, ಈ ಇನ್ಫೋಗ್ರಾಫಿಕ್ ನಕಲಿ ಎಂದು ಖಚಿತವಾಗಿ ಕಂಡುಬಂದಿದೆ.

ಬೆಂಗಳೂರು (ಮೇ. 13): ಭಾರತ ಮತ್ತು ಪಾಕಿಸ್ತಾನ (India Pakistan) ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಾರತವು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸುವ ಮೂಲಕ ಪಾಕಿಸ್ತಾನದಲ್ಲಿನ ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಡ್ರೋನ್‌ಗಳನ್ನು ಕಳುಹಿಸಿ ಭಾರತದ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಆದರೆ, ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನದ ಡ್ರೋನ್‌ಗಳು ಮತ್ತು ಕೆಲವು ಕ್ಷಿಪಣಿಗಳು ಕೆಳಕ್ಕೆ ಅಪ್ಪಳಿಸುವ ಮೊದಲೇ ಅವುಗಳನ್ನು ಮಧ್ಯದಲ್ಲೇ ತಡೆಹಿಡಿಯಿತು ತಕ್ಕ ಉತ್ತರ ನೀಡುತ್ತಿದೆ. ಏತನ್ಮಧ್ಯೆ, ಸಾಮಾಜಿಕ ಮಾಧ್ಯಮ ವೇದಿಕೆಗಳು ನಕಲಿ ಸುದ್ದಿಗಳಿಂದ ತುಂಬಿ ತುಳುಕುತ್ತಿವೆ. ವಿವಿಧ ರೀತಿಯ ನಕಲಿ ಹಕ್ಕುಗಳನ್ನು ವೈರಲ್ ಆಗುತ್ತಿದೆ.
ವೈರಲ್ ಆಗುತ್ತಿದೆ ಇನ್ಫೋಗ್ರಾಫಿಕ್:
ಅಂತರರಾಷ್ಟ್ರೀಯ ಸುದ್ದಿ ವಾಹಿನಿ ಸಿಎನ್‌ಎನ್‌ನ ಲೋಗೋ ಹೊಂದಿರುವ ಇನ್ಫೋಗ್ರಾಫಿಕ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದನ್ನು ಭಾರತ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋ (PIB) ಸತ್ಯ ಪರಿಶೀಲಿಸಿದೆ. ಪಿಐಬಿಯ ಫ್ಯಾಕ್ಟ್ ಚೆಕ್‌ನಲ್ಲಿ, ಈ ಇನ್ಫೋಗ್ರಾಫಿಕ್ ನಕಲಿ ಎಂದು ಖಚಿತವಾಗಿ ಕಂಡುಬಂದಿದೆ.
ಈ ಇನ್ಫೋಗ್ರಾಫಿಕ್ CNN ಹಂಚಿಕೊಂಡಿಲ್ಲ:
ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಕಲಿ ಸುದ್ದಿಗಳನ್ನು ಹರಡುವುದು ಪ್ರಚಾರ ಮಾಡುವುದರ ಭಾಗವಾಗಿದೆ ಎಂದು ಪಿಐಬಿ ಹೇಳಿದೆ. ಅಂತರರಾಷ್ಟ್ರೀಯ ಸುದ್ದಿ ವಾಹಿನಿ ಸಿಎನ್ಎನ್ ಈ ರೀತಿಯ ಯಾವುದೇ ಸ್ಟೋರಿ ಅಥವಾ ಇನ್ಫೋಗ್ರಾಫಿಕ್ ಅನ್ನು ಎಂದಿಗೂ ಪ್ರಸಾರ ಮಾಡಿಲ್ಲ. ಇದರೊಂದಿಗೆ, ಪಿಐಬಿ ಫ್ಯಾಕ್ಟ್ ಚೆಕ್ ಇಂಡಿಯಾ ಫೈಟ್ಸ್ ಪ್ರೊಪಗಂಡಾ ಎಂಬ ಹ್ಯಾಶ್‌ಟ್ಯಾಗ್ ಅನ್ನು ಸಹ ಬಳಸಿದೆ.
ಈ ವೈರಲ್ ಅಂಕಿಅಂಶಗಳು ನಕಲಿ:
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಸಿಎನ್‌ಎನ್ ಅನ್ನು ಉಲ್ಲೇಖಿಸುವ ಇನ್ಫೋಗ್ರಾಫಿಕ್ ಭಾರತ-ಪಾಕಿಸ್ತಾನ ಸಂಘರ್ಷದ ಕೆಲವು ಅಂಕಿಅಂಶಗಳನ್ನು ತೋರಿಸುತ್ತದೆ. ಈ ಅಂಕಿಅಂಶಗಳು ಸಂಪೂರ್ಣವಾಗಿ ನಕಲಿ ಆಗಿದೆ.
Fact Check: ಭಟಿಂಡಾ ವಾಯುನೆಲೆಯನ್ನು ಪಾಕಿಸ್ತಾನ ನಾಶಪಡಿಸಿದೆಯೇ?: ಇಲ್ಲಿದೆ ನೋಡಿ ನಿಜಾಂಶ
- ಈ ನಕಲಿ ಅಂಕಿಅಂಶಗಳಲ್ಲಿ ಪಾಕಿಸ್ತಾನದ 0 ಜೆಟ್‌ಗಳು ಹಾನಿಗೊಳಗಾಗಿವೆ ಎಂದು ಹೇಳಲಾಗಿತ್ತು. ಭಾರತದ 6 ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆಯಂತೆ.
- ಹಾಗೆಯೆ ಪಾಕಿಸ್ತಾನದ ಮೂರು ವಾಯುನೆಲೆಗಳು ಹಾನಿಗೊಳಗಾಗಿವೆ. ಭಾರತದ 11 ವಾಯುನೆಲೆಗಳು ನೆಲಸಮಗೊಂಡಿವೆ.
- ಪಾಕಿಸ್ತಾನದ 78 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಭಾರತದ 553 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ.
- ಪಾಕಿಸ್ತಾನದ ಒಬ್ಬ ಸೈನಿಕನನ್ನು ಕೊಲ್ಲಲಾಗಿದೆ. ಭಾರತದ 21 ಸೈನಿಕರು ಹುತಾತ್ಮರಾಗಿದ್ದಾರೆ.
- ಪಾಕಿಸ್ತಾನದ 13 ನಾಗರಿಕರು ಸಾವನ್ನಪ್ಪಿದ್ದಾರೆ. 19 ಭಾರತೀಯ ನಾಗರಿಕರು ಸಾವನ್ನಪ್ಪಿದ್ದಾರೆ.
- 0 ಪಾಕಿಸ್ತಾನಿ ಟ್ಯಾಂಕ್‌ಗಳು ಹಾನಿಗೊಳಗಾದವು. ಭಾರತದ 0 ಟ್ಯಾಂಕ್‌ಗಳು ಹಾನಿಗೊಳಗಾಗಿವೆ.
- ಪಾಕಿಸ್ತಾನದ ಒಂದೇ ಒಂದು ವಾಯು ರಕ್ಷಣಾ ವ್ಯವಸ್ಥೆಗೂ ಹಾನಿಯಾಗಿಲ್ಲ. ಭಾರತದ ವಾಯು ರಕ್ಷಣಾ ವ್ಯವಸ್ಥೆಗಳಲ್ಲಿ ಒಂದು ಹಾನಿಗೊಳಗಾಗಿದೆ ಎಂದು ವೈರಲ್ ಪೋಸ್ಟ್ನಲ್ಲಿದೆ.
ಹೀಗಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ಇನ್ಫೋಗ್ರಾಫಿಕ್ ಸಂಪೂರ್ಣವಾಗಿ ನಕಲಿ. ಇದನ್ನು ಅಂತರರಾಷ್ಟ್ರೀಯ ಸುದ್ದಿ ವಾಹಿನಿ ಸಿಎನ್ಎನ್ ಪ್ರಸಾರ ಮಾಡಿಲ್ಲ. ಇದನ್ನು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ರಚಿಸಿದ್ದಾರೆ. ಅದರಲ್ಲಿ ಉಲ್ಲೇಖಿಸಲಾದ ಎಲ್ಲಾ ಅಂಕಿಅಂಶಗಳು ಸಂಪೂರ್ಣ ನಕಲಿ ಎಂದು ಖಚಿತವಾಗಿ ಹೇಳಬಹುದು.
ದೇಶದ ಹೆಣ್ಣುಮಕ್ಕಳಿಗೆ ಆಪರೇಷನ್ ಸಿಂಧೂರ ಅರ್ಪಿಸಿದ ಪ್ರಧಾನಿ ಮೋದಿ:
ಆಪರೇಷನ್ ಸಿಂಧೂರ್ ಯಶಸ್ವಿ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮೇ 12 ರಂದು ಮೊದಲ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದ್ದು, ಆಪರೇಷನ್ ಸಿಂಧೂರ ದೇಶದ ಹೆಣ್ಣುಮಕ್ಕಳಿಗೆ ಸಮರ್ಪಣೆ ಮಾಡಿದ್ದಾರೆ. ಭಾರತ ಶೌರ್ಯ ಮತ್ತು ಸಂಯಮ ಎರಡನ್ನೂ ನೋಡಿದೆ. ಗುಪ್ತಚರ, ವೀರ ಸೈನಿಕರು, ವಿಜ್ಞಾನಿಗಳಿಗೆ ಸೆಲ್ಯೂಟ್. ಪರಾಕ್ರಮಿ ಸೇನೆಗೆ ನನ್ನ ಸಲಾಂ. ಆಪರೇಷನ್ ಸಿಂಧೂರ ದೇಶದ ಹೆಣ್ಣುಮಕ್ಕಳಿಗೆ ಸಮರ್ಪಣೆ. ಪಹಲ್ಗಾಮ್ ದಾಳಿ ಕ್ರೂರತೆ ಮತ್ತು ಬರ್ಬರವಾಗಿ ನಡೆದಿತ್ತು. ಕುಟುಂಬಸ್ಥರ ಮುಂದೆಯೇ ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ಹೆಣ್ಣುಮಕ್ಕಳ ಸಿಂಧೂರ್ ಅಳಿಸಿದ ಉಗ್ರರಿಗೆ ಈಗ ಗೊತ್ತಾಗಿದೆ. ಆಪರೇಷನ್ ಸಿಂಧೂರ ನ್ಯಾಯದ ಅಖಂಡ ಪ್ರತಿಜ್ನೆಯಾಗಿದೆ ಎಂದು ಹೇಳಿದರು.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








