AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಲೆ ಕೂದಲು ದಟ್ಟವಾಗಿ ಬೆಳೆಯಬೇಕೆಂದು ಕಂಡ ಕಂಡ ಔಷಧಿ, ಎಣ್ಣೆಗಳನ್ನು ಬಳಸುವ ಮುನ್ನ ಎಚ್ಚರ

ಇತ್ತೀಚಿನ ದಿನಗಳಲ್ಲಿ ನಮ್ಮ ಆಹಾರ ಪದ್ಧತಿಯಿಂದಲೋ ಅಥವಾ ನೈಸರ್ಗಿಕವಾಗಿಯೋ ತಲೆ ಕೂದಲು ಉದುರುವಿಕೆ(Hairfall) ಸಮಸ್ಯೆಯನ್ನು ಸಾಕಷ್ಟು ಮಂದಿ ಎದುರಿಸುತ್ತಿದ್ದಾರೆ. ಈ ಸಮಯದಲ್ಲಿ ಕೂದಲು ಬಂದು ಚೆಂದವಾಗಿ ಕಾಣಬೇಕೆಂದು ಯಾರು ಏನೇ ಔಷಧಿ, ಎಣ್ಣೆಗಳ ಬಗ್ಗೆ ಹೇಳಿದರೂ ಅದನ್ನು ಕೊಂಡುಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ.

ತಲೆ ಕೂದಲು ದಟ್ಟವಾಗಿ ಬೆಳೆಯಬೇಕೆಂದು ಕಂಡ ಕಂಡ ಔಷಧಿ, ಎಣ್ಣೆಗಳನ್ನು ಬಳಸುವ ಮುನ್ನ ಎಚ್ಚರ
ಕೂದಲು ಉದುರುವಿಕೆ Image Credit source: Cleveland Clinic
ನಯನಾ ರಾಜೀವ್
|

Updated on: Mar 18, 2025 | 10:04 AM

Share

ಪಂಜಾಬ್, ಮಾರ್ಚ್​ 18: ಇತ್ತೀಚಿನ ದಿನಗಳಲ್ಲಿ ನಮ್ಮ ಆಹಾರ ಪದ್ಧತಿಯಿಂದಲೋ ಅಥವಾ ನೈಸರ್ಗಿಕವಾಗಿಯೋ ತಲೆ ಕೂದಲು ಉದುರುವಿಕೆ(Hair Loss) ಸಮಸ್ಯೆಯನ್ನು ಸಾಕಷ್ಟು ಮಂದಿ ಎದುರಿಸುತ್ತಿದ್ದಾರೆ. ಈ ಸಮಯದಲ್ಲಿ ಕೂದಲು ಬಂದು ಚೆಂದವಾಗಿ ಕಾಣಬೇಕೆಂದು ಯಾರು ಏನೇ ಔಷಧಿ, ಎಣ್ಣೆಗಳ ಬಗ್ಗೆ ಹೇಳಿದರೂ ಅದನ್ನು ಕೊಂಡುಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ. ಅದರಿಂದ ಯಾವ ಬಗೆಯ ಅಡ್ಡಪರಿಣಾಮಗಳಾಗಬಹುದು ಎನ್ನುವ ಆಲೋಚನೆಯನ್ನು ಕೂಡ ಮಾಡುತ್ತಿಲ್ಲ. ಅಂಥದ್ದೇ ಘಟನೆ ಪಂಜಾಬ್​ನಲ್ಲಿ ನಡೆದಿದೆ. ಆಜ್​ತಕ್ ಈ ಸುದ್ದಿಯನ್ನು ವರದಿ ಮಾಡಿದೆ.

ಕೂದಲು ದಟ್ಟವಾಗಿ ಬೆಳೆಯಲು ನೀಡಿದ್ದ ಔಷಧಿಯಿಂದ ಸಾಕಷ್ಟು ಮಂದಿ ತಮ್ಮ ದೃಷ್ಟಿಯನ್ನೇ ಕಳೆದುಕೊಂಡಿದ್ದಾರೆ. ಪಂಜಾಬ್​ನ ಸಂಗ್ರೂರ್​ನಲ್ಲಿ ಈ ಘಟನೆ ನಡೆದಿದೆ. ಬೋಳು ತಲೆ ಇರುವವರು ಹಾಗೂ ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿರುವವರಿಗಾಗಿ ಒಂದು ಶಿಬಿರವನ್ನು ಆಯೋಜಿಸಲಾಗಿತ್ತು. ಅಲ್ಲಿ ಸಾಕಷ್ಟು ಮಂದಿ ಬಂದು ಔಷಧವನ್ನು ಖರೀದಿಸಿದ್ದರು.

ಆದರೆ ಕೂದಲು ಬರುವುದು ಹಾಗಿರಲಿ, ಜನರು ದೃಷ್ಟಿಯನ್ನೇ ಕಳೆದುಕೊಂಡು ಕುರುಡರಾಗಿದ್ದಾರೆ. ಇದು ಮೀರತ್​ನಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದನ್ನು ನೆನಪಿಸಿದೆ. ಈ ಶಿಬಿರವನ್ನು ಸಂಗ್ರೂರಿನ ಕಾಳಿ ದೇವಿ ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು. ಇಲ್ಲಿ ನೂರಾರು ಜನರು ಭಾಗವಹಿಸಿದ್ದರು.

ಇದನ್ನೂ ಓದಿ
Image
ದಟ್ಟವಾದ ಹೊಳಪುಳ್ಳ ಕೂದಲು ನಿಮ್ಮದಾಗಬೇಕೇ, ಮೆಂತ್ಯೆ ಕಾಳನ್ನು ಹೀಗೆ ಬಳಸಿ!
Image
ಮರದ ಬಾಚಣಿಗೆ ಬಳಸಿದರೆ ಕೂದಲು ಉದ್ದವಾಗಿ ಬೆಳೆಯುತ್ತಾ?
Image
ಈರುಳ್ಳಿ ರಸ ತಲೆಗೆ ಹಚ್ಚುವುದರಿಂದ ಕೂದಲು ಉದುರುವಿಕೆ ನಿಲ್ಲುತ್ತದೆ? ಇದರ ಕುರಿತ ಸತ್ಯ ಮತ್ತು ಮಿಥ್ಯಗಳೇನು?
Image
green tea benefits: ಕೂದಲಿನ ಹಲವು ಸಮಸ್ಯೆಗಳಿಗೆ ಗ್ರೀನ್​ ಟೀ ರಾಮಬಾಣ! ಹೇಗೆ ಬಳಸಬೇಕು ಗೊತ್ತಾ?

ಈ ಪವಾಡ ಔಷಧವು ಕೂದಲು ಉದುರುವುದನ್ನು ನಿಲ್ಲಿಸಿ ಹೊಸ ಕೂದಲ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಪ್ರಚಾರ ಮಾಡಲಾಗಿತ್ತು. ಆದರೆ ಈ ಔಷಧಿಯನ್ನು ಕೂದಲಿಗೆ ಹಚ್ಚಿದ ಬಳಿಕ ಜನರ ಕಣ್ಣಲ್ಲಿ ಉರಿ ಶುರುವಾಗಿತ್ತು. ಪರಿಸ್ಥಿತಿ ಹದಗೆಟ್ಟು 65ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಯಿತು. ಕೆಲವು ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆದರು.

ಈಗ ಪೊಲೀಸರು ಈ ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಸಂಗ್ರೂರ್ ಪೊಲೀಸ್ ಠಾಣೆಯಲ್ಲಿ ಡಾ.ಅಮನ್‌ದೀಪ್ ಸಿಂಗ್ ಮತ್ತು ತಜಿಂದರ್ ಪಾಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪ್ರಕರಣ ದಾಖಲಾದ ನಂತರ, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ ಮತ್ತು ಆಡಳಿತವು ಶಿಬಿರಗಳನ್ನು ಸ್ಥಾಪಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಹ ಸಿದ್ಧವಾಗಿದೆ.

ಮತ್ತಷ್ಟು ಓದಿ: Hair Loss: ಕೂದಲು ಉದುರಲು ಕಾರಣವೇನು? ತಡೆಗಟ್ಟಲು ಏನು ಮಾಡಬೇಕು?

ಸಿವಿಲ್ ಆಸ್ಪತ್ರೆಯ ವೈದ್ಯರು ಹೇಳುವಂತೆ ಇದುವರೆಗೆ 65 ಕ್ಕೂ ಹೆಚ್ಚು ಜನರ ಕಣ್ಣುಗಳಲ್ಲಿ ಸುಡುವ ಸಂವೇದನೆ ಮತ್ತು ಊತದ ಸಮಸ್ಸಯೆಯುಂಟಾಗಿತ್ತು ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು  ವೈದ್ಯರು ಹೇಳಿದ್ದಾರೆ.

2024ರ ಡಿಸೆಂಬರ್ ತಿಂಗಳಲ್ಲಿ ಉತ್ತರ ಪ್ರದೇಶದ ಮೀರತ್​ನಲ್ಲಿ 20ರೂ,ಗೆ ತಲೆ ಕೂದಲು ಬೆಳವಣಿಗೆಗೆ ಔಷಧ ಕೊಡುತ್ತೇವೆ ಎಂದು ಹೇಳಿ ಒಂದು ಕ್ಯಾಂಪ್ ಮಾಡಲಾಗಿತ್ತು. 20ರೂ. ಬೆಲೆ ಬಾಳುವ ಔಷಧ ಹಚ್ಚಿ 300 ರೂ. ಬೆಲೆ ಬಾಳುವ ಔಷಧ ಕೊಟ್ಟು ಕಳುಹಿಸುತ್ತಿದ್ದರು. ಯಾವುದೇ ಮಾಹಿತಿ ಪೂರ್ವ ಅನುಮತಿ ಇಲ್ಲದೆ ಜನರನ್ನು ಒಟ್ಟುಗೂಡಿಸಿದ್ದಕ್ಕಾಗಿ ಪೊಲೀಸರು ಔಷಧ ವಿತರಿಸುವುದನ್ನು ತಡೆದಿದ್ದರು.

ಸೂಚನೆ: ನಿಮಗೆ ತಲೆ ಕೂದಲು ಉದುರುವ ಸಮಸ್ಯೆ ಇದ್ದರೆ ಅದಕ್ಕೆ ಸಂಬಂಧಪಟ್ಟ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯಿರಿ, ಕಡಿಮೆ ಬೆಲೆಗೆ ಕೊಡುವ ಔಷಧ, ಎಣ್ಣೆಯಿಂದ ಕೂದಲು ಬರುತ್ತೆ ಎಂದು ನಂಬಿ ಇರುವ ಕೂದಲುಗಳನ್ನು ಕಳೆದುಕೊಳ್ಳಬೇಡಿ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ