Tank Accident in Ladakh: ಲಡಾಖ್‌ನ ಎಲ್‌ಎಸಿ ಬಳಿ ಟಿ -72 ಟ್ಯಾಂಕ್‌ನಲ್ಲಿ ನದಿ ದಾಟುತ್ತಿದ್ದ ವೇಳೆ 5 ಯೋಧರು ಸಾವು
ಜೂನ್ 28, 2024 ರಂದು ರಾತ್ರಿ, ಮಿಲಿಟರಿ ತರಬೇತಿ ಚಟುವಟಿಕೆ ನಡೆಸುತ್ತಿದ್ದಂತ ನೀರಿನ ಮಟ್ಟದಲ್ಲಿ ಹಠಾತ್ ಹೆಚ್ಚಳದಿಂದಾಗಿ ಪೂರ್ವ ಲಡಾಖ್‌ನ ಸಾಸರ್ ಬ್ರಂಗ್ಸಾ ಬಳಿಯ ಶ್ಯೋಕ್ ನದಿಯಲ್ಲಿ ಸೇನಾ ಟ್ಯಾಂಕ್ ಸಿಲುಕಿಕೊಂಡಿದೆ. ಅಲ್ಲಿಗೆ ರಕ್ಷಣಾ ತಂಡಗಳು ಧಾವಿಸಿದ್ದವು, ಆದಾಗ್ಯೂ, ಹೆಚ್ಚಿನ ಪ್ರವಾಹ ಮತ್ತು ನೀರಿನ ಮಟ್ಟದಿಂದಾಗಿ, ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಲಿಲ್ಲ ಎಂದು ಸೇನಾಪಡೆ ಎಕ್ಸ್‌ನಲ್ಲಿ ಹೇಳಿದೆ.
ದೆಹಲಿ ಜೂನ್ 29: ಶನಿವಾರ ಮುಂಜಾನೆ ಲಡಾಖ್‌ನ (Ladakh) ನ್ಯೋಮಾ-ಚುಶುಲ್ ಪ್ರದೇಶದ ನೈಜ ನಿಯಂತ್ರಣ ರೇಖೆ (LAC) ಬಳಿ ಟಿ -72 ಟ್ಯಾಂಕ್‌ನಲ್ಲಿ ನದಿಯನ್ನು ದಾಟುತ್ತಿದ್ದಾಗ ಸೇನೆಯ ಐವರು ಯೋಧರು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ. “ಜೂನ್ 28, 2024 ರಂದು ರಾತ್ರಿ, ಮಿಲಿಟರಿ ತರಬೇತಿ ಚಟುವಟಿಕೆ ನಡೆಸುತ್ತಿದ್ದಂತೆ ನೀರಿನ ಮಟ್ಟದಲ್ಲಿ ಹಠಾತ್ ಹೆಚ್ಚಳದಿಂದಾಗಿ ಪೂರ್ವ ಲಡಾಖ್‌ನ ಸಾಸರ್ ಬ್ರಂಗ್ಸಾ ಬಳಿಯ ಶ್ಯೋಕ್ ನದಿಯಲ್ಲಿ ಸೇನಾ ಟ್ಯಾಂಕ್ ಸಿಲುಕಿಕೊಂಡಿದೆ. ಅಲ್ಲಿಗೆ ರಕ್ಷಣಾ ತಂಡಗಳು ಧಾವಿಸಿದ್ದವು, ಆದಾಗ್ಯೂ, ಹೆಚ್ಚಿನ ಪ್ರವಾಹ ಮತ್ತು ನೀರಿನ ಮಟ್ಟದಿಂದಾಗಿ, ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಲಿಲ್ಲ. ಟ್ಯಾಂಕ್ ನಲ್ಲಿದ್ದ ಸಿಬ್ಬಂದಿ ಪ್ರಾಣ ಕಳೆದುಕೊಂಡರು. ಪೂರ್ವ ಲಡಾಖ್‌ನಲ್ಲಿ ಕಾರ್ಯಾಚರಣೆಯಲ್ಲಿ ನಿಯೋಜನೆಗೊಂಡಾಗ ಐವರು ಕೆಚ್ಚೆದೆಯ ಸಿಬ್ಬಂದಿಯನ್ನು ಕಳೆದುಕೊಂಡಿದ್ದಕ್ಕೆ ಭಾರತೀಯ ಸೇನೆ ವಿಷಾದ ವ್ಯಕ್ತಪಡಿಸಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ” ಎಂದು ಭಾರತೀಯ ಸೇನೆಯು ಎಕ್ಸ್‌ನಲ್ಲಿ ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ವರ್ಷ, ಲೇಹ್ ಜಿಲ್ಲೆಯ ಕಿಯಾರಿ ಬಳಿ ಅವರು ಪ್ರಯಾಣಿಸುತ್ತಿದ್ದ ಸೇನಾ ಟ್ರಕ್ ಆಳವಾದ ಕಮರಿಗೆ ಬಿದ್ದು ಜೆಸಿಒ ಸೇರಿದಂತೆ ಒಂಬತ್ತು ಸೈನಿಕರು ಪ್ರಾಣ ಕಳೆದುಕೊಂಡಿದ್ದರು.
On 28 Jun 2024 night, while deinducting from a military training activity, an army tank got stuck in the Shyok River, near Saser Brangsa, Eastern Ladakh due to sudden increase in the water level. Rescue teams rushed to the location, however, due to high current and water levels,…
— @firefurycorps_IA (@firefurycorps) June 29, 2024
ಒಬ್ಬ ಜೆಸಿಒ ಮತ್ತು ನಾಲ್ವರು ಯೋಧರ ಸಿಬ್ಬಂದಿಯ ಮೃತದೇಹಗಳು ಸಿಕ್ಕಿವೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: NEET-UG ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಜಾರ್ಖಂಡ್‌ನಲ್ಲಿ ಪತ್ರಕರ್ತನ ಬಂಧನ, ಗುಜರಾತಿನಲ್ಲಿ ಸಿಬಿಐ ಶೋಧ
ಲೇಹ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸೇನೆಯ 14 ಕಾರ್ಪ್ಸ್ ಐವರು ಸಿಬ್ಬಂದಿ ಪ್ರಾಣ ಕಳೆದುಕೊಂಡಿರುವುದಕ್ಕೆ ಸಂತಾಪ ಸೂಚಿಸಿದೆ. “ಜೂನ್ 28, 2024 ರಂದು ರಾತ್ರಿ, ಮಿಲಿಟರಿ ತರಬೇತಿ ಚಟುವಟಿಕೆಯಿಂದ ಡಿ-ಇಂಡಕ್ಟ್ ಮಾಡುವಾಗ, ನೀರಿನ ಮಟ್ಟದಲ್ಲಿ ಹಠಾತ್ ಹೆಚ್ಚಳದಿಂದಾಗಿ ಪೂರ್ವ ಲಡಾಖ್‌ನ ಸಾಸರ್ ಬ್ರಂಗ್ಸಾ ಬಳಿಯ ಶ್ಯೋಕ್ ನದಿಯಲ್ಲಿ ಸೇನಾ ಟ್ಯಾಂಕ್ ಸಿಲುಕಿಕೊಂಡಿತು. ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ, ಆದರೆ ಹೆಚ್ಚಿನ ಪ್ರವಾಹ ಮತ್ತು ನೀರಿನ ಮಟ್ಟದಿಂದಾಗಿ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಲಿಲ್ಲ ಮತ್ತು ಟ್ಯಾಂಕ್ ಸಿಬ್ಬಂದಿ ಪ್ರಾಣ ಕಳೆದುಕೊಂಡರು, ”ಎಂದು ಅವರು ಹೇಳಿದರು.
ಸಂತಾಪ
“ದೇಶಕ್ಕೆ ನಮ್ಮ ಧೀರ ಸೈನಿಕರ ಆದರ್ಶಪ್ರಾಯ ಸೇವೆಯನ್ನು ನಾವು ಎಂದಿಗೂ ಮರೆಯುವುದಿಲ್ಲ. ಅಗಲಿದ ಕುಟುಂಬಗಳಿಗೆ ನನ್ನ ಸಂತಾಪ. ಈ ದುಃಖದ ಸಮಯದಲ್ಲಿ ರಾಷ್ಟ್ರವು ಅವರೊಂದಿಗೆ ದೃಢವಾಗಿ ನಿಂತಿದೆ, ”ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಲಡಾಖ್‌ನಲ್ಲಿ ನದಿಯನ್ನು T-72 ಟ್ಯಾಂಕ್ ನಲ್ಲಿ ದಾಟುತ್ತಿದ್ದಾಗ ಭಾರತೀಯ ಸೇನೆಯ JCO ಸೇರಿದಂತೆ 5 ಯೋಧರು ಪ್ರಾಣ ಕಳೆದುಕೊಂಡಿರುವುದು ಕೇಳಿ ದುಃಖವಾಗಿದೆ. ಈ ನೋವಿನ ದುರಂತಕ್ಕೆ ಬಲಿಯಾದ ಸೇನಾ ಸಿಬ್ಬಂದಿಯ ಕುಟುಂಬಗಳಿಗೆ ತೀವ್ರ ಸಂತಾಪಗಳು. ಈ ದುಃಖದ ಸಮಯದಲ್ಲಿ, ನಮ್ಮ ವೀರ ಸೈನಿಕರ ಅನುಕರಣೀಯ ಸೇವೆಗೆ ದೇಶವು ಒಟ್ಟಾಗಿ ನಿಂತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:11 pm, Sat, 29 June 24