ಅಯೋಧ್ಯೆ To ಬೆಂಗಳೂರು ವಿಮಾನ ಆರಂಭ, ಟಿಕೆಟ್ ದರ ಎಷ್ಟು? ಇಲ್ಲಿದೆ ವಿವರ

Ayodhya - Bengaluru Flight : ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೂ ಮೊದಲೇ, ಅಯೋಧ್ಯೆ ಟು ಬೆಂಗಳೂರು ಸಂಪರ್ಕಿಸುವ ವಿಮಾನ ಯಾನಕ್ಕೆ ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಚಾಲನೆ ನೀಡಿದ್ದಾರೆ. ಹಾಗಾದ್ರೆ, ಬೆಂಗಳೂರುದಿಂದ ಅಯೋಧ್ಯೆಗೆ ಹೋಗುವುದಕ್ಕೆ ವಿಮಾನದ ಟಿಕೆಟ್ ದರ ಎಷ್ಟು? ವಿವರ ಈ ಕೆಳಗಿನಂತಿದೆ.

ಅಯೋಧ್ಯೆ To ಬೆಂಗಳೂರು ವಿಮಾನ ಆರಂಭ, ಟಿಕೆಟ್ ದರ ಎಷ್ಟು? ಇಲ್ಲಿದೆ ವಿವರ
ಅಯೋಧ್ಯೆ To ಬೆಂಗಳೂರು ವಿಮಾನಯಾನಕ್ಕೆ ಚಾಲನೆ
Follow us
ರಮೇಶ್ ಬಿ. ಜವಳಗೇರಾ
|

Updated on: Jan 17, 2024 | 5:19 PM

ಬೆಂಗಳೂರು, (ಜನವರಿ 17): ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ (Ayodhya) ಇದೇ ಜನವರಿ 22ರಂದು ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಎಲ್ಲೆಡೆ ಈಗ ರಾಮನ ಜಪ ಶುರುವಾಗಿದೆ. ಇನ್ನು ಸಹಸ್ರಾರು ಜನ ಅಯೋಧ್ಯೆಯತ್ತ ಹೊರಟಿದ್ದಾರೆ. ಇದರ ಮಧ್ಯೆ ಇದೀಗ ಅಯೋಧ್ಯೆ To ಬೆಂಗಳೂರು (Ayodhya – Bengaluru Flight ) ವಿಮಾನಯಾನಕ್ಕೆ ಚಾಲನೆ ನೀಡಲಾಗಿದೆ. ಇಂದು (ಜ.17) ಅಯೋಧ್ಯೆ ಮತ್ತು ಬೆಂಗಳೂರು, ಅಯೋಧ್ಯೆ ಮತ್ತು ಕೋಲ್ಕತ ಸಂಪರ್ಕಿಸುವ ವಿಮಾನ ಯಾನಕ್ಕೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಚಾಲನೆ ನೀಡಿದರು.

ಅಯೋಧ್ಯೆ ಮತ್ತು ಬೆಂಗಳೂರು ನಡುವಿನ ಮೊದಲ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಹಾರಾಟಕ್ಕೆ ಅವರು ಹಸಿರು ನಿಶಾನೆ ತೋರಿದರು. ಇದೇ ಸಂದರ್ಭದಲ್ಲಿ ಅವರು, ಕೋಲ್ಕತ್ತಾ ಮತ್ತು ಅಯೋಧ್ಯೆ ನಡುವೆ ವಿಮಾನ ಹಾರಾಟಕ್ಕೂ ಸಹ ಚಾಲನೆ ಸಿಕ್ಕಿದ್ದು, ಆಯಾ ವಿಮಾನಗಳು ಸದ್ಯ ವಾರಕ್ಕೆ 3 ಬಾರಿ ಹಾರಾಟ ನಡೆಸಲಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಮಾಹಿತಿ ನೀಡಿರು.

ಇದನ್ನೂ ಓದಿ: ಅಯೋಧ್ಯೆ ರಾಮನ ಸಾರ್ವಜನಿಕ ದರ್ಶನ ಭಾಗ್ಯ ಯಾವಾಗಿನಿಂದ? ದಿನಾಂಕ ಘೋಷಿಸಿದ ಸಮಿತಿ

ಪ್ರಧಾನಿ ನರೇಂದ್ರ ಮೋದಿ ಮತ್ತು ಆದಿತ್ಯನಾಥ್ ಅವರ ನಾಯಕತ್ವದಲ್ಲಿ ಉತ್ತರ ಪ್ರದೇಶವು ಅಭಿವೃದ್ಧಿಯ ಹೊಸ ಎತ್ತರವನ್ನು ಮುಟ್ಟಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಲಕ್ನೋ ಮತ್ತು ವಾರಣಾಸಿಯಿಂದ ದೇಶ ಮತ್ತು ವಿದೇಶ ವಿಮಾನ ಸೇವೆಯನ್ನು ಒದಗಿಸಲಾಗುವುದು. ಇದೇ ಮಾರ್ಚ್​ 1 ರಿಂದ ಹೈದರಾಬಾದ್‌ ಟು ವಾರಣಾಸಿಗೆ ವಿಮಾನ ಸಂಪರ್ಕ ಕಲ್ಪಿಸುತ್ತೇವೆ ಎಂದು ಸಿಂಧಿಯಾ ಹೇಳಿದರು.

ಟಿಕೆಟ್ ದರ ಎಷ್ಟು?

ಇಂದು ಚಾಲನೆ ಸಿಕ್ಕಿರುವ ವಿಮಾನ ವಾರದಲ್ಲಿ ಮೂರು ಬಾರಿ ಅಯೋಧ್ಯೆ ಟು ಬೆಂಗಳೂರು ನಡುವೆ ಹಾರಾಡಲಿದೆ ಎಂದಷ್ಟೇ ಕೇಂದ್ರ ಸಚಿವರು ಹೇಳಿದ್ದಾರೆ. ಆದ್ರೆ,  ಟಿಕೆಟ್ ಹಾಗೂ ಸಮಯದ ಬಗ್ಗೆ ಇನ್ನೂ ಸಂಸ್ಥೆ ಅಧಿಕೃತ ಮಾಹಿತಿ ನೀಡಿಲ್ಲ.

ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಇಂದು (ಜ.17) ಬೆಂಗಳೂರು – ಅಯೋಧ್ಯೆ ವಿಮಾನ ಟಿಕೆಟ್ ದರ 10 ಸಾವಿರ ರೂಪಾಯಿಯಿಂದ 20,000 ರೂಪಾಯಿ ಇದೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ವಿಮಾನ ಟಿಕೆಟ್​ ದರಲ್ಲಿ ಭಾರೀ ಏರಿಕೆಯಾಗಿದೆ. ಜನವರಿ 20ಕ್ಕೂ ಮುನ್ನವೇ ಎಲ್ಲಾ ವಿಮಾನಗಳ ಟಿಕೆಟ್ ಈಗಾಗಲೇ ಬುಕ್ ಆಗಿವೆ. ಎಷ್ಟೇ ಪ್ರಯತ್ನಪಟ್ಟರೂ ವಿಮಾನಗಳ ಟಿಕೆಟ್ ಸಿಗದಂತಾಗಿದೆ. ಕೆಲವೇ ಟಿಕೆಟ್‌ಗಳು ಲಭ್ಯವಿದ್ದರೂ ಕೂಡಾ ಬೆಲೆ ಕೈಗೆಟುಕದಂತಾಗಿದೆ.

ರಾಮ ಮಂದಿರ ಉದ್ಘಾಟನೆ ದಿನ ಆಹ್ವಾನಿತರನ್ನು ಹೊರತುಪಡಿಸಿದರೆ ಬೇರೆ ಯಾರಿಗೂ ರಾಮ ಮಂದಿರ ಪ್ರವೇಶಕ್ಕೆ ಅವಕಾಶವೇ ಇಲ್ಲ. ಇಷ್ಟಾದರೂ ಕೂಡಾ ಜನ ಸಾಮಾನ್ಯರು ರಾಮ ಮಂದಿರ ಉದ್ಘಾಟನೆ ಹಾಗೂ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಅಯೋಧ್ಯೆಯಲ್ಲೇ ಇದ್ದು ಸಾಕ್ಷಿಯಾಗಲು ಬಯಸಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ