ದೆಹಲಿಯಲ್ಲಿ ಜಿ20 ಶೃಂಗಸಭೆಗಾಗಿ ಸಿದ್ಧತೆ: ಧೌಲಾ ಕುವಾನ್‌ನಲ್ಲಿ ಶಿವಲಿಂಗ ಆಕಾರದ ಕಾರಂಜಿ ಸ್ಥಾಪಿಸಿದ್ದಕ್ಕೆ ಬಿಜೆಪಿ-ಎಎಪಿ ನಡುವೆ ವಾಕ್ಸಮರ
ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಭಾರತ್ ರಾಷ್ಟ್ರ ಸಮಿತಿ (BRS) ನಾಯಕ ವೈ ಸತೀಶ್ ರೆಡ್ಡಿ ಮೋದಿ ಸರ್ಕಾರ ಶಿವಲಿಂಗವನ್ನು ಜಿ20 ಶೃಂಗಸಭೆಗಾಗಿ ಕಾರಂಜಿಯಾಗಿ ಬಳಸುತ್ತಿರುವುದು ಹಿಂದೂ ಧರ್ಮದ ಅಪಹಾಸ್ಯ. ಶಿವಲಿಂಗದ ಪವಿತ್ರತೆಯನ್ನು ವಿನೋದಕ್ಕಾಗಿ ಕ್ಷುಲ್ಲಕಗೊಳಿಸಲಾಗುತ್ತಿದೆಯೇ? ಇದು ನಾಚಿಕೆಗೇಡಿನ ಸಂಗತಿಯಾಗಿದೆ.ಇದನ್ನು ಬೇಗನೆ ತೆಗೆದುಹಾಕಬೇಕು ಎಂದಿದ್ದಾರೆ.
ದೆಹಲಿ ಸೆಪ್ಟೆಂಬರ್ 01: ದೆಹಲಿ ಜಿ20 ಶೃಂಗಸಭೆಗಾಗಿ (G20 Summit) ಸಿದ್ಧವಾಗಿದೆ. ಇದಕ್ಕಾಗಿ ನಡೆಯುತ್ತಿರುವ ಸೌಂದರ್ಯೀಕರಣದ ಭಾಗವಾಗಿ, ರಾಷ್ಟ್ರ ರಾಜಧಾನಿಯ ಧೌಲಾ ಕುವಾನ್‌ನಲ್ಲಿ (Dhaula Kuan) ಸ್ಥಾಪಿಸಲಾದ ಶಿವಲಿಂಗ (Shivling) ಆಕಾರದ ಕಾರಂಜಿಗಳು ವಿವಾದವನ್ನು ಹುಟ್ಟುಹಾಕಿದೆ. ‘ಶಿವಲಿಂಗ’ಕ್ಕೆ ಅಗೌರವ ತೋರಿದ ಮತ್ತು ಅದನ್ನು ಅಲಂಕಾರಿಕ ಉದ್ದೇಶಕ್ಕಾಗಿ ಬಳಸಿದ್ದಕ್ಕಾಗಿ ಎಎಪಿ (AAP) ಸರ್ಕಾರವನ್ನು ಬಿಜೆಪಿ (BJP) ತರಾಟೆಗೆ ತೆಗೆದುಕೊಂಡಿದೆ. ಈ ಬಗ್ಗೆ ಟ್ವೀಟ್ ಮಾಡಿದ ಬಿಜೆಪಿಯ ರಾಷ್ಟ್ರೀಯ ಮಾಧ್ಯಮ ಸಮಿತಿಯ ಚಾರು ಪ್ರಗ್ಯಾ, ಶಿವಲಿಂಗವು ಅಲಂಕಾರಕ್ಕಾಗಿ ಅಲ್ಲ. ಧೌಲಾ ಕುವಾನ್ ಜ್ಞಾನವಾಪಿ ಅಲ್ಲ. ದೆಹಲಿಯ ಎಎಪಿ ಸರ್ಕಾರವು ಧೌಲಾ ಕುವಾನ್‌ನಲ್ಲಿ ಶಿವಲಿಂಗ ಆಕಾರದ ಕಾರಂಜಿಗಳನ್ನು ಸ್ಥಾಪಿಸಿದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಎಎಪಿ ಸಂಸದ ಸಂಜಯ್ ಸಿಂಗ್ ಅವರು ದೆಹಲಿ ಲೆಫ್ಟಿನೆಂಟ್ ಗವರ್ನರ್ (ಎಲ್-ಜಿ) ವಿಕೆ ಸಕ್ಸೇನಾ ಶಿವಲಿಂಗಗಳನ್ನು ಅಗೌರವಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಕ್ಷಮೆಯಾಚಿಸಬೇಕು ಮತ್ತು ದೆಹಲಿ ಎಲ್‌ಜಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಂಗ್ ಒತ್ತಾಯಿಸಿದ್ದಾರೆ.
A Shivling is not for decoration. And Dhaula Kuan is not Gyanvapi.
AAP Govt in Delhi has installed Shivling shaped fountains at Dhaula Kuan. pic.twitter.com/A4J0SMspl7
— Charu Pragya🇮🇳 (@CharuPragya) August 30, 2023
ಮೋದಿ ಜಿ ನಾಯಕತ್ವದಲ್ಲಿ ಶಿವಲಿಂಗವನ್ನು ಅವಮಾನಿಸಲಾಗಿದೆ ಮತ್ತು ನಾಚಿಕೆಯಿಲ್ಲದ ಬಿಜೆಪಿ ಜನರು ಮೋದಿಯನ್ನು ಹೊಗಳುತ್ತಿದ್ದಾರೆ. ದೆಹಲಿಯ ಎಲ್ ಜಿ ಶಿವಲಿಂಗಕ್ಕೆ ಅಗೌರವ ತೋರುವ ಮೂಲಕ ಹೆಮ್ಮೆ ಪಡುತ್ತಿದ್ದಾರೆ. ಬಿಜೆಪಿ ದೇಶದ ಕ್ಷಮೆ ಯಾಚಿಸಬೇಕು, ಎಲ್‌ಜಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಎಪಿ ನಾಯಕ ಹೇಳಿದ್ದಾರೆ.
मोदी जी के नेतृत्व में शिवलिंग का अपमान किया गया और बेशर्म भाजपाई मोदी की तारीफ़ कर रहे हैं। दिल्ली के LG शिवलिंग का अनादर करके वाहवाही लूट रहे हैं। BJP को देश से माफ़ी माँगनी चाहिये LG पर कार्यवाही करो। pic.twitter.com/72mjQ2cmz9
— Sanjay Singh AAP (@SanjayAzadSln) August 31, 2023
ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಭಾರತ್ ರಾಷ್ಟ್ರ ಸಮಿತಿ (BRS) ನಾಯಕ ವೈ ಸತೀಶ್ ರೆಡ್ಡಿ ಮೋದಿ ಸರ್ಕಾರ ಶಿವಲಿಂಗವನ್ನು ಜಿ20 ಶೃಂಗಸಭೆಗಾಗಿ ಕಾರಂಜಿಯಾಗಿ ಬಳಸುತ್ತಿರುವುದು ಹಿಂದೂ ಧರ್ಮದ ಅಪಹಾಸ್ಯ. ಶಿವಲಿಂಗದ ಪವಿತ್ರತೆಯನ್ನು ವಿನೋದಕ್ಕಾಗಿ ಕ್ಷುಲ್ಲಕಗೊಳಿಸಲಾಗುತ್ತಿದೆಯೇ? ಇದು ನಾಚಿಕೆಗೇಡಿನ ಸಂಗತಿಯಾಗಿದೆ.ಇದನ್ನು ಬೇಗನೆ ತೆಗೆದುಹಾಕಬೇಕು ಎಂದಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ನಡೆಯಲಿರುವ ಜಿ 20 ಶೃಂಗಸಭೆಗಾಗಿ ದೆಹಲಿಯಲ್ಲಿ ಸೌಂದರ್ಯೀಕರಣ ಯೋಜನೆಗಳಿಗೆ ಹಣ ನೀಡುವ ಬಗ್ಗೆ ಬಿಜೆಪಿ ಮತ್ತು ಎಎಪಿ ನಡುವೆ ಮಾತಿನ ಸಮರ ನಡೆಯುತ್ತಿದೆ.
ಸೋಮವಾರ, ದೆಹಲಿ ಸಚಿವ ಸೌರಭ್ ಭಾರದ್ವಾಜ್ ಅವರು ದೆಹಲಿಯಲ್ಲಿನ ಯೋಜನೆಗಳಿಗೆ ಹಣ ಮಂಜೂರು ಮಾಡಲು ಲೆಫ್ಟಿನೆಂಟ್ ಜನರಲ್ ವಿಕೆ ಸಕ್ಸೇನಾ ಅವರಿಗೆ ಸಂವಿಧಾನವು ಅಧಿಕಾರವನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ. ಪಿಡಬ್ಲ್ಯೂಡಿ ಮತ್ತು ಎಂಸಿಡಿ ಮಾಡುವ ಯಾವುದೇ ಕೆಲಸವನ್ನು ತೆರಿಗೆದಾರರ ಹಣವನ್ನು ಬಳಸಿ ಮಾಡಲಾಗುತ್ತದೆ. ಪಿಡಬ್ಲ್ಯುಡಿಗೆ ಕೇಂದ್ರದಿಂದ ಒಂದು ಪೈಸೆಯೂ ಬಂದಿಲ್ಲ. ಪಿಡಬ್ಲ್ಯುಡಿಯಿಂದ ಒಟ್ಟು 89 ರಸ್ತೆಗಳನ್ನು ಸುಂದರಗೊಳಿಸಲಾಗಿದೆ. ಸ್ವಚ್ಛತೆ, ಮರಗಳನ್ನು ನೆಡುವುದು ಮತ್ತು ಅವುಗಳನ್ನು ಪುನರುಜ್ಜೀವನಗೊಳಿಸುವ ಕಾರ್ಯವನ್ನು ಇದು ಒಳಗೊಂಡಿದೆ ಎಂದು ಎಎಪಿ ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: 7 ಲಕ್ಷ ಅಲಂಕಾರಿಕ ಸಸ್ಯಗಳು, ರಸ್ತೆ ಬದಿಯಲ್ಲಿ ಲಂಗೂರ್ ಕಟೌಟ್: ಜಿ20 ಶೃಂಗಸಭೆಗೆ ದೆಹಲಿ ಹೇಗೆ ಸಿದ್ಧತೆ ನಡೆಸುತ್ತಿದೆ?
ಅವರಿಗೆ ಪ್ರತಿಕ್ರಿಯಿಸಿದ ಎಲ್‌ಜಿ ಸಕ್ಸೇನಾ, ಮಾಡಿದ ಕೆಲಸಕ್ಕೆ ಯಾರಾದರೂ ಕ್ರೆಡಿಟ್ ತೆಗೆದುಕೊಳ್ಳಲು ಬಯಸಿದರೆ, ಅವರು ಮಾಡಬಹುದು, ಆದರೆ ಇಲ್ಲಿರುವ ಸನ್ನಿವೇಶ ನೋಡಿದರ ಕೇಂದ್ರವು ಉತ್ತಮ ಕೆಲಸ ಮಾಡುತ್ತಿದೆ ಎಂದು ಅರ್ಥ. “ನಾನು ಅದರ ಬಗ್ಗೆ ಹೆಚ್ಚು ಕಾಮೆಂಟ್ ಮಾಡಲು ಬಯಸುವುದಿಲ್ಲ. ಆದರೆ ನಾವು ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ ಎಂದು ಮಾತ್ರ ಹೇಳಲು ಬಯಸುತ್ತೇನೆ. ಯಾರಾದರೂ ಅದರ ಕ್ರೆಡಿಟ್ ತೆಗೆದುಕೊಳ್ಳಲು ಬಯಸಿದರೆ, ಅವರು ಮಾಡಬಹುದು. ನಾನು ಈ ವಿಷಯದಿಂದ ತೃಪ್ತನಾಗಿದ್ದೇನೆ, ನಾನು ಕೆಲವು ಕೆಲಸಗಳನ್ನು ಮಾಡುತ್ತಿದ್ದೇನೆ. ಯಾರಾದರೂ ಅದರ ಕ್ರೆಡಿಟ್ ಪಡೆಯಲು ಬಯಸಿದರೆ, ನಾವು ಒಳ್ಳೆಯದನ್ನು ಮಾಡುತ್ತಿದ್ದೇವೆ ಎಂದು ಅರ್ಥ ಎಂದ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ದೆಹಲಿಯಲ್ಲಿ G20 ಶೃಂಗಸಭೆಯು ಸೆಪ್ಟೆಂಬರ್ 9 ರಂದು ಪ್ರಾರಂಭವಾಗದ್ದು, ಸದಸ್ಯ ರಾಷ್ಟ್ರಗಳು ಮತ್ತು ಅತಿಥಿ ರಾಷ್ಟ್ರಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:21 pm, Fri, 1 September 23