AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಗ ಧಗನೆ ಉರಿಯುತ್ತಿದ್ದ ಬೆಂಕಿಯಿಂದ ರಕ್ಷಣೆ, ಹಿಜಾಬ್​ ತರಲೆಂದು ಮತ್ತೆ ಮನೆಯೊಳಗೆ ಹೋಗಿ ಪ್ರಾಣಬಿಟ್ಟ ಯುವತಿ

ಸಾವು ಯಾವಾಗ, ಹೇಗೆ ಬೇಕಾದರೂ ಬರಬಹುದು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಸಿಲಿಂಡರ್ ಸ್ಫೋಟ(Cylinder Blast)ಗೊಂಡಿತ್ತು, ಇಡೀ ಮನೆ ಧಗ ಧಗನೆ ಹೊತ್ತಿ ಉರಿದಿತ್ತು. ಆಕೆಯನ್ನು ಎಲ್ಲರೂ ಸೇರಿ ಹೇಗೋ ರಕ್ಷಿಸಿದ್ದರು. ಆದರೆ ಮನೆಯಲ್ಲಿರುವ ಹಿಜಾಬ್ ತೆಗೆದುಕೊಂಡು ಬರುತ್ತೇನೆ ಎಂದು ಮತ್ತೆ ಓಡಿ ಹೋಗಿ ಬೆಂಕಿಯ ಜ್ವಾಲೆಗೆ ಸಿಲುಕಿ ಸಾವನ್ನಪ್ಪಿದ್ದಾಳೆ.

ಧಗ ಧಗನೆ ಉರಿಯುತ್ತಿದ್ದ ಬೆಂಕಿಯಿಂದ ರಕ್ಷಣೆ, ಹಿಜಾಬ್​ ತರಲೆಂದು ಮತ್ತೆ ಮನೆಯೊಳಗೆ ಹೋಗಿ ಪ್ರಾಣಬಿಟ್ಟ ಯುವತಿ
ರಾಜಸ್ಥಾನ
Follow us
ನಯನಾ ರಾಜೀವ್
|

Updated on: Apr 10, 2025 | 12:01 PM

ಜೋಧ್​ಪುರ್, ಏಪ್ರಿಲ್ 10: ಸಾವು ಯಾವಾಗ, ಹೇಗೆ ಬೇಕಾದರೂ ಬರಬಹುದು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಸಿಲಿಂಡರ್ ಸ್ಫೋಟ(Cylinder Blast)ಗೊಂಡಿತ್ತು, ಇಡೀ ಮನೆ ಧಗ ಧಗನೆ ಹೊತ್ತಿ ಉರಿದಿತ್ತು. ಆಕೆಯನ್ನು ಎಲ್ಲರೂ ಸೇರಿ ಹೇಗೋ ರಕ್ಷಿಸಿದ್ದರು. ಆದರೆ ಮನೆಯಲ್ಲಿರುವ ಹಿಜಾಬ್ ತೆಗೆದುಕೊಂಡು ಬರುತ್ತೇನೆ ಎಂದು ಮತ್ತೆ ಓಡಿ ಹೋಗಿ ಬೆಂಕಿಯ ಜ್ವಾಲೆಗೆ ಸಿಲುಕಿ ಸಾವನ್ನಪ್ಪಿದ್ದಾಳೆ.

14 ತಿಂಗಳ ಮಗು ಸೇರಿ ಇಬ್ಬರು ಈ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಗುಲಾಬ್‌ಸಾಗರ್ ಪ್ರದೇಶದ ಮಿಯಾನ್ ಕಿ ಮಸೀದಿ ಬಳಿಯ ಮನೆಯಲ್ಲಿ ಈ ದುರದೃಷ್ಟಕರ ಅಪಘಾತ ಸಂಭವಿಸಿದೆ. ಆಹಾರ ತಯಾರಿಸುವಾಗ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿದೆ ಎಂದು ವರದಿಗಳು ಹೇಳಿವೆ.

ಇದನ್ನೂ ಓದಿ
Image
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
Image
ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯ ಹೆರಿಗೆ ವಾರ್ಡ್​ನಲ್ಲಿ ಅಗ್ನಿ ಅವಘಡ
Image
Video: ಮಹಾರಾಷ್ಟ್ರದ ಸೆಂಟ್ರಲ್​ ಬ್ಯಾಂಕ್​ನಲ್ಲಿ ಭಾರಿ ಅಗ್ನಿ ಅವಘಡ
Image
ನಿರ್ಮಾಣ ಹಂತದ ಕಟ್ಟಡದಲ್ಲಿ ಬೆಂಕಿ ಅವಘಡ: ಇಬ್ಬರು ಕಾರ್ಮಿಕರು ದುರ್ಮರಣ

ಬೆಂಕಿ ಅಡುಗೆಮನೆ ಮತ್ತು ಪಕ್ಕದ ಕೋಣೆಗೆ ಬೇಗನೆ ಹರಡಿತು, ಹೊಗೆ ಮೂರು ಅಂತಸ್ತಿನ ಮನೆಯಲ್ಲಿ ತುಂಬಿತು. 19 ವರ್ಷದ ಯುವತಿ ಮತ್ತು 14 ತಿಂಗಳ ಮಗು ಪ್ರಾಣ ಕಳೆದುಕೊಂಡರು. ಬಲಿಯಾದವರಲ್ಲಿ ಒಬ್ಬರಾದ ಸಾದಿಯಾ ಕಟ್ಟಡದ ಎರಡನೇ ಮಹಡಿಯ ಕೋಣೆಯಲ್ಲಿ ನಮಾಜ್ ಓದುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿತು.

ಕುಟುಂಬ ಸದಸ್ಯರು ಎರಡು ಗಂಟೆಗಳ ಕಾಲ ಆಕೆಗಾಗಿ ಹುಡುಕಾಡಿದ್ದರು ಹೊಗೆ ಉಸಿರಾಡಿದ್ದರಿಂದ ಆಕೆಯ ಸ್ಥಿತಿ ಹದಗೆಟ್ಟಿತ್ತು. ಆಕೆ ತನ್ನ ಚಿಕ್ಕಪ್ಪನಿಗೆ ಕರೆ ಮಾಡಿ ತಾನು ಎಲ್ಲಿದ್ದೇನೆಂದು ತಿಳಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಆಕೆಯ ಚಿಕ್ಕಪ್ಪ, ಅಗ್ನಿಶಾಮಕ ದಳದವರೊಂದಿಗೆ ಆಕೆಯನ್ನು ಉಳಿಸಲು ಧಾವಿಸಿದರು.

ಮತ್ತಷ್ಟು ಓದಿ: ಶಾಲೆಯಲ್ಲಿ ಬೆಂಕಿ ಅವಘಡ, ಪವನ್ ಕಲ್ಯಾಣ್ ಪುತ್ರನಿಗೆ ತೀವ್ರ ಗಾಯ

ಆರಂಭದಲ್ಲಿ, ಆಕೆ ಕೋಣೆಯಿಂದ ಹೊರಗೆ ನಡೆದಳು ಆದರೆ ತನ್ನ ಹಿಜಾಬ್ ಅನ್ನು ಮರೆತಿದ್ದಾಳೆಂದು ಅರಿತು ಅದನ್ನು ಮರಳಿ ಪಡೆಯಲು ಹಿಂತಿರುಗಿದ್ದಳು. ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಬಾಗಿಲು ಆಕೆಯ ಮೇಲೆ ಬಿದ್ದು ಆಕೆ ಸಾವನ್ನಪ್ಪಿದ್ದಾಳೆ. ರಕ್ಷಣಾ ತಂಡವು ಆಕೆಯನ್ನು ಹೊರತೆಗೆದರೂ, ತೀವ್ರ ಸುಟ್ಟ ಗಾಯಗಳಿಂದಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆಕೆ ಸಾವನ್ನಪ್ಪಿದ್ದಾಳೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ