ಮದುವೆಗೆ ಒಲ್ಲೆ ಎಂದ ನಲ್ಲೆ; ನಡುರಾತ್ರಿ ಮನೆಗೆ ಬೆಂಕಿ, 2 ಮಕ್ಕಳು ಸಜೀವದಹನ, ಎಲ್ಲಿ?
ಹೈದರಾಬಾದ್: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ದುಳ್ಲ ಎಂಬಲ್ಲಿ ದಾರುಣ ಘಟನೆಯೊಂದು ನಡೆದಿದೆ. ಪ್ರೀತಿಯ ಹೆಸರಲ್ಲಿ ಪಾಗಲ್ ಪ್ರೇಮಿಯೊಬ್ಬ ಪ್ರೇಯಸಿಯ ಮನೆಯ ಮೇಲೆ ನಡುರಾತ್ರಿ ಪೆಟ್ರೋಲ್ ಸುರಿದು ಬೆಂಕಿ,ಹಚ್ಚಿದ್ದಾನೆ. ಇದರಿಂದ ಎರಡು ಮಕ್ಕಳು ಸಜೀವವಾಗಿ ದಹಿಸಿದ್ದಾರೆ, ನಾಲ್ಕು ಮಂದಿಗೆ ಗಾಯಗಳಾಗಿವೆ. ತಾನು ಇಷ್ಟ ಪಟ್ಟ ಹುಡುಗಿಯನ್ನು ತನಗೆ ಮದುವೆಯಾಗಲು ಒಪ್ಪದೆ ಬೇರೆಯವರಿಗೆ ಮದುವೆ ಮಾಡಿದ ಹಿನ್ನೆಲೆ ಬೆಂಕಿ ಹಾಕಿದ ಪ್ರೇಮೋನ್ಮಾದಿ ಹುಡುಗಿಯ ಮನೆ ಮೇಲೆ ಪೆಟ್ರೋಲ್ ಸುರಿದಿದ್ದಾನೆ ಈ ಪಾಗಲ್ ಪ್ರೇಮಿ. ಆರೋಪಿ ಪ್ರಿಯಕರ ರಾತ್ರಿ ಒಂದು […]
ಹೈದರಾಬಾದ್: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ದುಳ್ಲ ಎಂಬಲ್ಲಿ ದಾರುಣ ಘಟನೆಯೊಂದು ನಡೆದಿದೆ. ಪ್ರೀತಿಯ ಹೆಸರಲ್ಲಿ ಪಾಗಲ್ ಪ್ರೇಮಿಯೊಬ್ಬ ಪ್ರೇಯಸಿಯ ಮನೆಯ ಮೇಲೆ ನಡುರಾತ್ರಿ ಪೆಟ್ರೋಲ್ ಸುರಿದು ಬೆಂಕಿ,ಹಚ್ಚಿದ್ದಾನೆ. ಇದರಿಂದ ಎರಡು ಮಕ್ಕಳು ಸಜೀವವಾಗಿ ದಹಿಸಿದ್ದಾರೆ, ನಾಲ್ಕು ಮಂದಿಗೆ ಗಾಯಗಳಾಗಿವೆ.
ತಾನು ಇಷ್ಟ ಪಟ್ಟ ಹುಡುಗಿಯನ್ನು ತನಗೆ ಮದುವೆಯಾಗಲು ಒಪ್ಪದೆ ಬೇರೆಯವರಿಗೆ ಮದುವೆ ಮಾಡಿದ ಹಿನ್ನೆಲೆ ಬೆಂಕಿ ಹಾಕಿದ ಪ್ರೇಮೋನ್ಮಾದಿ ಹುಡುಗಿಯ ಮನೆ ಮೇಲೆ ಪೆಟ್ರೋಲ್ ಸುರಿದಿದ್ದಾನೆ ಈ ಪಾಗಲ್ ಪ್ರೇಮಿ. ಆರೋಪಿ ಪ್ರಿಯಕರ ರಾತ್ರಿ ಒಂದು ಗಂಟೆಯ ವೇಳೆಗೆ ಪೆಟ್ರೋಲ್ ಬಂಕೊಂದರಲ್ಲಿ ಕ್ಯಾನೊಂದರಲ್ಲಿ ಪೆಟ್ರೋಲ್ ತೆಗೆದುಕೊಂಡು ಬಂದಿದ್ದರ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.
Published On - 10:36 am, Wed, 22 January 20