ಜ್ಞಾನವಾಪಿ ಮಸೀದಿ ವಿವಾದ: ಮಸೀದಿಗೂ ಮುನ್ನ ದೊಡ್ಡ ದೇಗುಲ, ಭಾರತೀಯ ಪುರಾತತ್ವ ಇಲಾಖೆ ವರದಿ ಬಹಿರಂಗ
ವಾರಾಣಸಿಯ ಜ್ಞಾನವಾಪಿ ಮಸೀದಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಪುರಾತತ್ವ ಇಲಾಖೆ ನಡೆಸಿದ್ದ ಸರ್ವೆ ವರದಿ ಬಹಿರಂಗವಾಗಿದೆ. ಮಸೀದಿ ನಿರ್ಮಾಣಕ್ಕೂ ಮುನ್ನ ದೊಡ್ಡ ದೇಗುಲ ಇತ್ತೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಾರಾಣಸಿಯ ಜ್ಞಾನವಾಪಿ ಮಸೀದಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಪುರಾತತ್ವ ಇಲಾಖೆ ನಡೆಸಿದ್ದ 839 ಪುಟಗಳ ಸರ್ವೆ ವರದಿ ಬಹಿರಂಗವಾಗಿದೆ. ಮಸೀದಿ ನಿರ್ಮಾಣಕ್ಕೂ ಮುನ್ನ ದೊಡ್ಡ ದೇಗುಲ ಇತ್ತೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತಾಗಿ ವಾರಾಣಸಿಯಲ್ಲಿ ಹಿಂದೂಗಳ ಪರ ವಕೀಲ ವಿಷ್ಣುಶಂಕರ್ ಜೈನ್ ಹೇಳಿಕೆ ನೀಡಿದ್ದು, ಇದು ಎಎಸ್ಐನ ನಿರ್ಣಾಯಕ ಸಂಶೋಧನೆಯಾಗಿದೆ. 17ನೇ ಶತಮಾನದಲ್ಲಿ ದೊಡ್ಡ ದೇವಾಲಯವನ್ನು ಧ್ವಂಸಗೊಳಿಸಲಾಗಿದೆ. ದೇವನಾಗರ ಲಿಪಿ, ತೆಲುಗು, ಕನ್ನಡ ಶಾಸನಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ.
ಸಮೀಕ್ಷೆಯಲ್ಲಿ 32 ಸ್ಥಳಗಳಲ್ಲಿ ಪುರಾವೆಗಳು ಸಿಕ್ಕಿವೆ. ಮಸೀದಿ ಹಿಂದೆ ಹಿಂದೂ ದೇವಾಲಯವಿತ್ತು ಎಂದು ತೋರಿಸುತ್ತದೆ. 2 ಸೆಪ್ಟೆಂಬರ್ 1669 ರಂದು ದೇವಾಲಯವನ್ನು ಕೆಡವಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಜನಾರ್ದನ, ರುದ್ರ ಮತ್ತು ವಿಶ್ವೇಶ್ವರನ ಬಗ್ಗೆ ಶಾಸನಗಳು ಕಂಡುಬಂದಿವೆ.
#WATCH | Varanasi, Uttar Pradesh | Advocate Vishnu Shankar Jain, representing the Hindu side, gives details on the Gyanvapi case.
He says, “The ASI has said that the pillars and plasters used in the existing structure were studied systematically and scientifically for the… pic.twitter.com/KANG7l3B0r
— ANI (@ANI) January 25, 2024
ದೇವಾಲಯವನ್ನು ಕೆಡವಿದ ನಂತರ, ಅದರ ಕಂಬಗಳನ್ನು ಮಸೀದಿಯನ್ನು ನಿರ್ಮಿಸಲು ಬಳಸಲಾಗಿದೆ. ಹಿಂದೂ ದೇವರು ಮತ್ತು ದೇವತೆಗಳ ಪ್ರತಿಮೆಗಳನ್ನು ಒಳಗೊಂಡಿದೆ. ಜ್ಞಾನವಾಪಿಯ ಪಶ್ಚಿಮ ಗೋಡೆಯು ಹಿಂದೂ ದೇವಾಲಯದ ಭಾಗವಾಗಿತ್ತು. ಅದನ್ನು ಸುಲಭವಾಗಿ ಗುರುತಿಸಬಹುದಾಗಿದೆ.
ಮತ್ತಷ್ಟು ಮಾಹಿತಿ ಅಪ್ಡೇಟ್ ಆಗಲಿದೆ.
Published On - 9:47 pm, Thu, 25 January 24