
ನವದೆಹಲಿ, ಅಕ್ಟೋಬರ್ 9: ಲೋಕಸಭೆ ಮತ್ತು ವಿಧಾನಸಭಾ ಉಪಚುನಾವಣೆಗಳಲ್ಲಿ ಬಿಜೆಪಿ ಸಾಧಿಸಿದ ಭರ್ಜರಿ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಇಂದು (ಶುಕ್ರವಾರ) ಮತದಾರರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅಸ್ಸಾಂನ ನಗಾಂವ್ ಲೋಕಸಭಾ ಕ್ಷೇತ್ರ ಹಾಗೂ ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೇಜಿನಗರ ವಿಧಾನಸಭಾ ಕ್ಷೇತ್ರಗಳ ಫಲಿತಾಂಶಗಳು ಜನರು ಬಿಜೆಪಿ- ಎನ್‌ಡಿಎ ಸರ್ಕಾರದ ಉತ್ತಮ ಆಡಳಿತದೊಂದಿಗೆ ದೀರ್ಘವಾದ ಸಂಪರ್ಕ ಹೊಂದಿದ್ದಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿವೆ ಎಂದು ಅವರು ಹೇಳಿದ್ದಾರೆ.
“ಜನರ ನಿರಂತರ ಆಶೀರ್ವಾದಕ್ಕೆ ನನ್ನ ಕೃತಜ್ಞತೆಗಳು! ಅಸ್ಸಾಂನ ನಗಾಂವ್ ಲೋಕಸಭಾ ಕ್ಷೇತ್ರ ಹಾಗೂ ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೇಜಿನಗರ ವಿಧಾನಸಭಾ ಕ್ಷೇತ್ರಗಳ ಫಲಿತಾಂಶಗಳು ಜನರು ಬಿಜೆಪಿ-ಎನ್‌ಡಿಎ ಮೈತ್ರಿಕೂಟದ ಉತ್ತಮ ಆಡಳಿತದೊಂದಿಗೆ ದೀರ್ಘವಾದ ಸಂಪರ್ಕವನ್ನು ಹೊಂದಿದ್ದಾರೆ ಎಂಬುದನ್ನು ಮತ್ತೊಮ್ಮೆ ತೋರಿಸುತ್ತವೆ. ವಿಜೇತ ಬಿಜೆಪಿ ಅಭ್ಯರ್ಥಿಗಳನ್ನು ನಾನು ಅಭಿನಂದಿಸುತ್ತೇನೆ ಮತ್ತು ನಮ್ಮ ಪಕ್ಷದ ಕಾರ್ಯಕರ್ತರ ಶ್ರಮವನ್ನು ಶ್ಲಾಘಿಸುತ್ತೇನೆ. ಪುದುಚೇರಿಯ ತಟ್ಟಂಚಾವಡಿಯಲ್ಲಿ ಗೆಲುವು ಸಾಧಿಸಿದ ನಮ್ಮ ಮೌಲ್ಯಯುತ ಎನ್‌ಡಿಎ ಪಾಲುದಾರ ಪಕ್ಷವಾದ ಎಐಎನ್‌ಆರ್‌ಸಿ ಅನ್ನು ಕೂಡ ನಾನು ಅಭಿನಂದಿಸುತ್ತೇನೆ. ಜನರ ಕಲ್ಯಾಣಕ್ಕಾಗಿ ಮತ್ತು ಉಜ್ವಲ ಹಾಗೂ ಸಮೃದ್ಧ ಭವಿಷ್ಯಕ್ಕಾಗಿ ಅವರ ಆಕಾಂಕ್ಷೆಗಳನ್ನು ಈಡೇರಿಸಲು ನಾವು ನಿರಂತರವಾಗಿ ಶ್ರಮಿಸುತ್ತಿದ್ದು, ಈ ಜನಾದೇಶವು ನಮಗೆ ಹೆಚ್ಚಿನ ಬಲವನ್ನು ನೀಡುತ್ತದೆ” ಎಂದು ಅವರು ತಿಳಿಸಿದ್ದಾರೆ.
Gratitude to the people for their continuous blessings!
The Lok Sabha result of Nagaon (Assam) and Assembly results of Nandigram as well as Rejinagar (West Bengal) show yet again that the people have a deep-rooted connect with the good governance agenda of BJP-NDA.
I congratulate the victorious BJP candidates and also applaud the hardwork of our Party Karyakartas.
I also congratulate our valued NDA ally, the AINRC, for their win in Thattanchavady in Puducherry.
This mandate will give us added strength as we work tirelessly for the welfare of the people and to fulfil their aspirations for a brighter and more prosperous future.
@BJP4Assam
@BJP4Bengal
— Narendra Modi (@narendramodi) October 9, 2026
ಇದನ್ನೂ ಓದಿ: ನಂದಿಗ್ರಾಮ ಉಪಚುನಾವಣೆಯಲ್ಲಿ ಮತ್ತೆ ಬಿಜೆಪಿಗೆ ಐತಿಹಾಸಿಕ ಜಯ; ಫಲಿಸದ ಕಾಂಗ್ರೆಸ್-ಟಿಎಂಸಿ ತಂತ್ರಗಾರಿಕೆ
ರೇಜಿನಗರ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ:
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ರೇಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಬಿಜೆಪಿ 75,816 ಮತಗಳ ಅಂತರದಿಂದ ಜಯ ಗಳಿಸುವ ಮೂಲಕ ಮುಸ್ಲಿಂ ಪ್ರಾಬಲ್ಯದ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಚುನಾವಣಾ ಆಯೋಗ ಪ್ರಕಟಿಸಿದ ಫಲಿತಾಂಶಗಳ ಪ್ರಕಾರ, ಬಿಜೆಪಿ ಅಭ್ಯರ್ಥಿ ಶಂಖರವ್ ಸರ್ಕಾರ್ ಅವರು 1,29,914 ಮತಗಳನ್ನು ಪಡೆದು, ತಮ್ಮ ಹತ್ತಿರದ ಎದುರಾಳಿ ಆಮ್ ಜನತಾ ಉನ್ನಯನ್ ಪಾರ್ಟಿಯ (AJUP) ಅಭ್ಯರ್ಥಿ ಗೋಲಂ ನಬಿ ಆಜಾದ್ ಅವರನ್ನು ಸೋಲಿಸಿದ್ದಾರೆ. ಬಿಜೆಪಿಯು ಶೇ. 63.14 ಮತಗಳನ್ನು ಪಡೆದುಕೊಂಡರೆ, ಆಜಾದ್ ಅವರು ಶೇ. 26.29 ಮತಗಳನ್ನು ಗಳಿಸಿದರು.
ಇದನ್ನೂ ಓದಿ: ಉಪಚುನಾವಣೆ ಫಲಿತಾಂಶ: ಬಂಗಾಳ ಹಾಗೂ ಅಸ್ಸಾಂನಲ್ಲಿ ಬಿಜೆಪಿ, ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆ ಮುನ್ನಡೆ
ನಂದಿಗ್ರಾಮ ಉಪಚುನಾವಣೆಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್:
ಈ ವಾರದ ಆರಂಭದಲ್ಲಿ ಉಪಚುನಾವಣೆ ನಡೆದ ನಂದಿಗ್ರಾಮ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ಭಾರಿ ವಿಜಯ ದಾಖಲಿಸಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಮಾಜಿ ಸಹಾಯಕ ಚಂದ್ರನಾಥ್ ರಥ್ ಅವರ ತಾಯಿಯಾದ ಬಿಜೆಪಿಯ ಹಾಸಿ ರಾಣಿ ರಥ್ ಅವರು ತಮ್ಮ ಹತ್ತಿರದ ಎದುರಾಳಿ ಕಾಂಗ್ರೆಸ್ ನಾಯಕ ಮಿಲನ್ ಪ್ರಧಾನ್ ಅವರನ್ನು 1,22,753 ಮತಗಳ ಅಂತರದಿಂದ ಸೋಲಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ